ನಟರಾಕ್ಷಸ ಡಾಲಿ ಧನಂಜಯ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಡಾಲಿ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾಗಳ ಪೋಸ್ಟರ್, ಟೀಸರ್ ಉಡುಗೊರೆಯಾಗಿ ಸಿಕ್ಕಿದೆ. ಅದರಂತೆ ಬಡವ ರಾಸ್ಕಲ್ ಚಿತ್ರತಂಡದಿಂದ ಡಾಲಿ ಬರ್ತ್ ಡೇ ಸ್ಪೆಷಲ್ ಗಿಫ್ಟ್ ಸಿಕ್ಕಿದೆ. ಮಧ್ಯರಾತ್ರಿ 12 ಗಂಟೆಗೆ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಅನೌನ್ಸ್ ಮಾಡಲಾಗಿದೆ. ಈ ಚಿತ್ರಕ್ಕೆ ’ಅಣ್ಣ From Mexico’ ಎಂಬ ಕ್ಯಾಚಿ ಟೈಟಲ್ ಇಡಲಾಗಿದೆ.
2021ರಲ್ಲಿ ತೆರೆಗೆ ಬಂದ ಬಡವ ರಾಸ್ಕಲ್ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಚಿತ್ರದ ಮೂಲಕ ಧನಂಜಯ್ ನಿರ್ಮಾಪಕರಾಗಿ ಬಡ್ತಿ ಪಡೆದಿದ್ದರು. ತಮ್ಮದೇ ಡಾಲಿ ಪಿಕ್ಚರ್ಸ್ ನಡಿ ನಿರ್ಮಿಸಿ ನಟಿಸಿದ್ದ ಬಡವ ರಾಸ್ಕಲ್ ಚಿತ್ರವನ್ನು ಶಂಕರ್ ಗುರು ನಿರ್ದೇಶಿಸಿದ್ದರು. ಮೊದಲ ಹೆಜ್ಜೆಯಲ್ಲಿಯೇ ಗೆದ್ದಿದ್ದ ಶಂಕರ್ ಗುರು ಈಗ ಮತ್ತೊಂದು ಚೆಂದದ ಕಥೆ ಮಾಡಿ ಡಾಲಿ ಫ್ಯಾನ್ಸ್ ರಂಜಿಸಲು ಅಣಿಯಾಗಿದ್ದಾರೆ. ಅದರ ಮೊದಲ ಭಾಗವೆಂಬಂತೆ ಇಂದು ’ಅಣ್ಣ From Mexico’ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಕೊರಳಿಗೆ ಕರ್ನಾಟಕ ಮ್ಯಾಪ್ ಇರುವ ಪೆಂಡೆಂಟ್ ಆಭರಣ ಧರಿಸಿ, ಸೂಟ್ ತೊಟ್ಟಿರುವ ಧನಂಜಯ್ ಲುಕ್ ರಿವೀಲ್ ಮಾಡದೇ ಚಿತ್ರತಂಡ ನಿರೀಕ್ಷೆ ಹೆಚ್ಚಿಸಿದೆ. ’ಅಣ್ಣ From Mexico’ ಶಂಕರ್ ಗುರು ನಿರ್ದೇಶನದ ಎರಡನೇ ಸಿನಿಮಾ. ಪಕ್ಕ ಆಕ್ಷನ್ ಎಂಟರ್ ಟೈನರ್ ಚಿತ್ರವಾಗಿದ್ದು, ಅಜ್ಜಿ ಮೊಮ್ಮಗನ ಬಾಂಧವ್ಯದ ಕಥೆಯೂ ಸಿನಿಮಾದಲ್ಲಿರಲಿದೆ.
ಸತ್ಯ ರಾಯಲ್ ನಿರ್ಮಾಣದಲ್ಲಿ ತಯಾರಾಗಲಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಲಿದ್ದು, ನವೆಂಬರ್ ತಿಂಗಳಿನಿಂದ ಶೂಟಿಂಗ್ ಶುರುವಾಗಲಿದ್ದು, ಮೆಕ್ಸಿಕೋ ಸೇರಿದಂತೆ ಹಲವೆಡೆ ಚಿತ್ರೀಕರಣ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಬಜೆಟ್ ಪೂರ್ವ ಸಭೆಯಲ್ಲಿ ಪ್ರಸ್ತಾಪಗೊಂಡ ಹಸಿರು ಗೋಡೆ ಯೋಜನೆ ರಾಜ್ಯದ ಪರಿಸರ ರಕ್ಷಣೆಗೆ ಆಪದ್ಬಾಂಧವನಂತಿದೆ. ಉತ್ತರ ಕರ್ನಾಟಕದಲ್ಲಿ ಮರುಭೂಮೀಕರಣ ತಡೆಗಟ್ಟಲು…
ದೇಶಕ್ಕೇ ಮಾದರಿಯಾಗಿರುವ ಮೈಸೂರನ್ನು ನಿರ್ಮಿಸಿದ ಮೈಸೂರು ಸಂಸ್ಥಾನದ ಮಹಾರಾಜರುಗಳು ಅನುಸರಿಸಿದ ಯೋಜನೆಗಳ ಮಾದರಿಯಲ್ಲೇ, ಗ್ರೇಟರ್ ಮೈಸೂರನ್ನು ನಿರ್ಮಾಣ ಮಾಡಬೇಕು ಎಂದು…
ಪ್ರತಿನಿತ್ಯ ನಗರದ ವಿವಿಧ ವೃತ್ತಗಳ ಸಿಗ್ನಲ್ ಬಳಿ ಕಾಯುವ ವಾಹನ ಸವಾರರು ೧೦೦ ಸೆಕೆಂಡಿಗಿಂತಲೂ ಹೆಚ್ಚು ಕಾಲ ನಿಂತರೆ ನಮ್ಮ…
ಮೈಸೂರು ನಗರದ ಸುತ್ತಮುತ್ತ ಇರುವ ವಿವಿಧ ದೇವಾಲಯಗಳನ್ನು ನಿರ್ವಹಿಸುತ್ತಿರುವ ಟ್ರಸ್ಟ್‌ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಹುಂಡಿಯ ಹಣ ಹಾಗೂ ಭಕ್ತರು ನೀಡುವ…
ಕೆಟ್ಟು ೨-೩ ತಿಂಗಳಾದರೂ ದುರಸ್ತಿ ಭಾಗ್ಯವಿಲ್ಲ; ಬೇಗ ರಿಪೇರಿ ಮಾಡಿಸಲು ನಾಗರಿಕರ ಆಗ್ರಹ ಚಾಮರಾಜನಗರ: ನಗರದಲ್ಲಿ ನೈರ್ಮಲ್ಯ ಕಾಪಾಡಲು ನಗರಸಭೆಯು…
ಚಿರಂಜೀವಿ ಸಿ. ಹುಲ್ಲಹಳ್ಳಿ ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗವು ಆಯೋಜಿಸಿರುವ ವಿಶೇಷ ರಿಯಾಯಿತಿ ಪುಸ್ತಕ ಮಾರಾಟಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…