ಚಿತ್ರ ಮಂಜರಿ

ಹಾಲಿವುಡ್‌ ಅಂಗಳದಲ್ಲಿ ಸಲಾರ್ : ಯಾವಾಗ ರಿಲೀಸ್‌ ಆಗ್ತಿದೆ ಗೊತ್ತಾ ?

ಒಂದರ ಹಿಂದೊಂದು ಸಿನಿಮಾ ಫ್ಲಾಪ್ ಆಗುತ್ತಿದ್ದರೂ ಪ್ರಭಾಸ್ ಹವಾ ಮಾತ್ರ ಕಮ್ಮಿಯಾಗಿಲ್ಲ. ನನ್ನ ಹಾದಿ ನನ್ನದು ಎನ್ನುತ್ತಾ ನುಗ್ಗುತ್ತಿದ್ದಾರೆ. ಇದೀಗ ಸಲಾರ್ ಬಿಡುಗಡೆಗೆ ಸಿದ್ಧವಾಗಿದ್ದು, ದಿನಾಂಕ ಕೂಡ ನಿಗದಿಯಾಗಿದೆ. ಆದರೆ ಇಂಗ್ಲಿಷ್ ವರ್ಶನ್ ಸಲಾರ್ ಯಾವಾಗ ಬರಲಿದೆ? ಅದಕ್ಕೆ ಬೇರೊಂದು ದಿನ ಯಾಕೆ ಫಿಕ್ಸ್ ಮಾಡಿದರು? ಎನ್ನುವುದರ ಬಗೆಗಿನ ಮಾಹಿತಿ ಇಲ್ಲಿದೆ.

ಸಾಹೋ, ರಾಧೇಶ್ಯಾಮ್ ಹಾಗೂ ಆದಿಪುರುಷ್. ಮೂರೂ ಸಿನಿಮಾಗಳು ಫ್ಲಾಪ್‌ ಆಗಿದ್ದರಿಂದ ಪ್ರಭಾಸ್ ಕತೆ ಮುಗಿಯಿತೆಂದು ಕಾದಿದ್ದವರಿಗೆ ಸಲಾರ್ ಹಾಗೂ ಕಲ್ಕಿ ಕೊಟ್ಟ ಕಿಕ್ ಹೇಗಿತ್ತೆಂದು ಎಲ್ಲರಿಗೂ ಗೊತ್ತಿದೆ. ಈ ಎರಡು ಸಿನಿಮಾಗಳ ಟೀಸರ್ ಹಬ್ಬ ಮಾಡಿದ್ದು ಇಡೀ ವಿಶ್ವವನ್ನೇ ಸೆಳೆದಿದ್ದವು. ಪ್ರಭಾಸ್ ಫ್ಯಾನ್ಸ್ ಮತ್ತೆ ಮೈ ಕೊಡವಿ ಎದ್ದು ನಿಂತರು. ಪ್ರಭಾಸ್ ಕೂಡ ಹೊಸ ಹುರುಪಿನಿಂದ ಅಖಾಡಕ್ಕೆ ಇಳಿದರು. ಸದ್ಯಕ್ಕೆ ಸಲಾರ್, ಕಲ್ಕಿ ಹಾಗೂ ರಾಜಾ ಡಿಲಕ್ಸ್ ಬಾಕಿ ಕೆಲಸ ಮುಗಿಸುತ್ತಿದ್ದಾರೆ. ಈಗಲೇ ಮತ್ತೊಂದು ಹಬ್ಬಕ್ಕೆ ಅಭಿಮಾನಿಗಳು ಸಜ್ಜಾಗಿದ್ದಾರೆ.

ಮೂರು ಸಿನಿಮಾ ಸೋತದ್ದನ್ನು ಫ್ಯಾನ್ಸ್ ಮರೆತಿದ್ದಾರೆ. ಸಲಾರ್ ಇನ್ನೆರಡು ತಿಂಗಳಿಗೆ ಮೆರವಣಿಗೆ ಹೊರಡಲಿದೆ. ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಲಿದೆ. ಅದರ ಇಂಗ್ಲಿಷ್ ವರ್ಶನ್ ಕೂಡ ನಿರ್ಮಾಣವಾಗುತ್ತಿದೆ. ಅದು ಯಾವಾಗ ಬರಲಿದೆ ಎನ್ನುವ ಪ್ರಶ್ನೆಗೆ ಪಕ್ಕಾ ದಿನಾಂಕ ಸಿಗದಿದ್ದರೂ. ಅಕ್ಟೋಬರ್ ಎರಡನೇ ವಾರದಲ್ಲಿ ಹಾಲಿವುಡ್‌ನಲ್ಲಿ ಪ್ರಭಾಸ್ ಅಬ್ಬರಿಸಲಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

lokesh

Recent Posts

ತಿರುಪತಿ ಲಡ್ಡು: ತುಪ್ಪದಲ್ಲಿ ಪ್ರಾಣಿ ಕೊಬ್ಬು ಬಳಕೆ

ಅಮರಾವತಿ: ಜಗತ್‌ ಪ್ರಸಿದ್ಧ ತಿರುಪತಿ ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಹಾಗೂ ಕಳಪೆ ಗುಣಮಟ್ಟದ ಪದಾರ್ಥಗಳು ಪತ್ತೆಯಾಗಿದೆ ಎಂದು ತೆಲುಗು…

15 mins ago

ಬುರ್ಖಾಧಾರಿ ಮಹಿಳೆಯಿಂದ ಸಲ್ಮಾನ್‌ ಖಾನ್‌ ತಂದೆಗೆ ಜೀವ ಬೆದರಿಕೆ: ಮಹಿಳೆ ಸೇರಿ ಇಬ್ಬರ ಬಂಧನ

ಮುಂಬೈ:‌ ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ಅವರ ತಂದೆಗೆ ಬುರ್ಖಾ ಧರಿಸಿದ್ದ ಮಹಿಳೆ ಹಾಗೂ ಇನ್ನೊರ್ವ ವ್ಯಕ್ತಿ ಜೀವ ಬೆದರಿಕೆ…

41 mins ago

ಶಾಸಕ ಮುನಿರತ್ನಗೆ ಜಾಮೀನು: ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಬಂಧನ ಸಾಧ್ಯತೆ

ಬೆಂಗಳೂರು: ಗುತ್ತಿಗೆದಾರರೊಬ್ಬರಿಗೆ ಜಾತಿನಿಂದನೆ ಹಾಗೂ ಪ್ರಾಣ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ…

2 hours ago

ನುಡಿ ಹಬ್ಬಕ್ಕೆ ಆಹ್ವಾನಿಸಲು ಸಿದ್ಧವಾಗಿದೆ ಕನ್ನಡ ರಥ

ಮಂಡ್ಯ: ಜಿಲ್ಲೆಯಲ್ಲಿ ಡಿಸೆಂಬರ್ 20, 21, 22 ರಂದು ನಡೆಯಲಿರುವ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ…

2 hours ago

ಬಸ್‌ನಲ್ಲಿ ಪ್ರಯಾಣ: ಮಹಿಳೆಯರಿಂದ ಶಕ್ತಿಯೋಜನೆಯ ಅಭಿಪ್ರಾಯ ಪಡೆದ ಪುಷ್ಪ ಅಮರನಾಥ್‌

ಮೈಸೂರು: ರಾಜ್ಯ ಸರ್ಕಾರದ ಮಹತ್ವಕಾಂಕ್ಷೆ ಯೋಜನೆಗಳಲ್ಲಿ ಒಂದಾದ ಶಕ್ತಿಯೋಜನೆ ಫಲಾನುಭವಿಗಳ ಅಭಿಪ್ರಾಯ ಸಂಗ್ರಹಿಸಲು ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷೆಯಾದ ಡಾ…

2 hours ago

ಕರ್ನಾಟಕ ಪಬ್ಲಿಕ್ ಶಾಲೆಗೆ ಮೇಲ್ದರ್ಜೇಗೇರಿಸಲು ಅಗತ್ಯ ಕ್ರಮ: ʻಜಿಟಿಡಿʼ

ಮೈಸೂರು: ಬಡವರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾಗಿ ವ್ಯಾಸಂಗ ಮಾಡುವ ಕಾರಣ ಶಾಲೆಗಳ ಅಭಿವೃದ್ಧಿ ಶಿಕ್ಷಕರ ಮೇಲಿದೆ. ಕ್ಷೇತ್ರದಲ್ಲಿ ಬರುವ…

3 hours ago