ಬದಲಾದ ಕಾಲಮಾನ ಮತ್ತು ತಂತ್ರಜ್ಞಾನ ಯುಗ : ಚಂದವೋ ಮರುಚಿತ್ರೀಕರಣ ಚೆಂದವೋ?

ಬದಲಾದ ಕಾಲಮಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಮುನ್ನೆಲೆಗೆ ಬಂದಿರುವ ಪ್ರೇಕ್ಷಕನ ಅಭಿರುಚಿಯ ಹೊಸ ಜಿಜ್ಞಾಸೆ 

ಬಾ.ನ.ಸುಬ್ರಮಣ್ಯ

ದಶಕಗಳ ಹಿಂದೆ ಪರಭಾಷೆ ಚಿತ್ರಗಳ ನಿರ್ಮಾಪಕರು ತಮ್ಮ ಚಿತ್ರಗಳ ಗುಣಮಟ್ಟ ಮತ್ತು ಗಳಿಕೆಯ ಸಾಧ್ಯತೆಯ ಒರೆಗಲ್ಲಾಗಿ, ಬೆಂಗಳೂರು ಪ್ರೇಕ್ಷಕರ ಪ್ರತಿಕ್ರಿಯೆ ನಿರೀಕ್ಷಿಸುತ್ತಿದ್ದರು. ಬೆಂಗಳೂರು ಪ್ರೇಕ್ಷಕರು ಒಪ್ಪಿದರೆಂದರೆ, ಬೆಂಗಳೂರಿನಲ್ಲಿ ಅದು ಯಶಸ್ವಿ ಆಯಿತು ಎಂದರೆ, ಭಾರತದ ಎಲ್ಲ ಕಡೆ ಗೆಲ್ಲುತ್ತದೆ ಎನ್ನುವುದು ಸಾಬೀತಾಗಿತ್ತು. ಆಗಿನ್ನೂ ಒಮ್ಮೆಲೇ ನೂರಾರು ಕೇಂದ್ರಗಳಲ್ಲಿ ಬಿಡುಗಡೆ ಇರಲಿಲ್ಲ. ನೆಗೆಟಿವ್ನಿಂದ ಪ್ರಿಂಟ್ ಹಾಕಿ ಪ್ರದರ್ಶನ. ಮೊದಲು ಆಯಾ ಮಹಾನಗರ, ನಗರ, ಪಟ್ಟಣ, ಹೋಬ್ಲಿಗಳಿಗೆ ಅನುಗುಣವಾಗಿ ಎ, ಬಿ, ಸಿ, ಡಿ ಕೇಂದ್ರಗಳು. ಮೊದಲು ಎ ಕೇಂದ್ರದಲ್ಲಿ ಬಿಡುಗಡೆ. ಹಂತಹಂತವಾಗಿ ಇತರ ಕೇಂದ್ರಗಳಲ್ಲಿ. ಒಳ್ಳೆಯ ಚಿತ್ರಗಳು ಶತದಿನ, ರಜತೋತ್ಸವ ವಾರ, ವರ್ಷ, ಹೀಗೆ ಚಿತ್ರಗಳು ಪ್ರದರ್ಶನ ಆಗುತ್ತಿದ್ದವು.

ಈಗ ಹಾಗಿಲ್ಲ. ಒಮ್ಮೆಲೇ ಎ, ಬಿ, ಸಿ, ಡಿ ಕೇಂದ್ರಗಳಲ್ಲಿ ಬಿಡುಗಡೆ. ಮೊದಲ ವಾರದಲ್ಲೇ ಏನಿದ್ದರೂ ಗಳಿಕೆ ಎನ್ನುವುದು ಉದ್ಯಮದ ಹೊಸ ಲೆಕ್ಕ. ಚಿತ್ರ ತೆರೆಕಂಡು ಮೊದಲ ಪ್ರದರ್ಶನ ಆಗುತ್ತಲೇ ಸಾಮಾನ್ಯವಾಗಿ ಅದರ ಭವಿಷ್ಯ ನಿರ್ಧಾರವಾಗಿ ಬಿಡುತ್ತದೆ. ಒಂದೇ ಪ್ರದರ್ಶನಕ್ಕೆ ಕೊನೆಯಾದ ಚಿತ್ರಗಳೂ ಸಾಕಷ್ಟಿವೆ ಎನ್ನುತ್ತಾರೆ ವಿತರಕರು. ಚಿತ್ರಮಂದಿರಗಳ ಹೊರತಾಗಿ, ಆಡಿಯೋ, ಡಿಜಿಟಲ್, ಒಟಿಟಿ ಸೇರಿದಂತೆ ನಿರ್ಮಾಪಕರಿಗೆ ಆದಾಯ ತಂದುಕೊಡುವ ವಿಭಾಗಗಳಿವೆ.

ಅವು ಪರಭಾಷೆ ದಿನಗಳ ಪಾರಮ್ಯದ ದಿನಗಳೆನ್ನಿ. ಕನ್ನಡದಲ್ಲಿ ತಯಾರಾಗುತ್ತಿದ್ದ ಚಿತ್ರಗಳ ಸಂಖ್ಯೆಯೂ ಕಡಿಮೆ. ಕನ್ನಡ ಚಿತ್ರಗಳಿಗೆ ಚಿತ್ರಮಂದಿರ ದೊರಕಲೂ ನಿರ್ಮಾಪಕರು ಒದ್ದಾಡಬೇಕಾದ ದಿನಗಳು. ಕಮಲಹಾಸನ್ ಅವರಂತೂ, ತಮ್ಮ ಅಭಿನಯದ ಚಿತ್ರಗಳು ತೆರೆಕಂಡಾಗ, ಬೆಂಗಳೂರಿನ ಪ್ರೇಕ್ಷಕರ ಪ್ರತಿಕ್ರಿಯೆಗಾಗಿ ಕಾದಿರುತ್ತಿದ್ದುದನ್ನು ಹಲವು ಬಾರಿ ಹೇಳಿದ್ದಿದೆ.

ಮೊನ್ನೆ ತಮ್ಮ ಚಿತ್ರದ ಪ್ರಚಾರಕ್ಕಾಗಿ ಬಂದಿದ್ದಾಗಲೂ ಕಮಲಹಾಸನ್ ಅದನ್ನು ಪ್ರಸ್ತಾಪಿಸಿದರು. ಗುರು ಕೆ.ಬಾಲಚಂದರ್ ಅವರೊಂದಿಗೆ ಕನ್ನಡದಲ್ಲಿ ತಯಾರಾಗುತ್ತಿದ್ದ ಚಿತ್ರಗಳನ್ನು ನೋಡಲು ಬರುತ್ತಿದ್ದುದು, ಕಾರ್ನಾಡ್, ಕಾರಂತರ ಜೊತೆ ಚರ್ಚೆ, ಮಾತುಕತೆ, ರಾಜಕುಮಾರ್ ಅವರಿಂದ ತಾವು ಕಲಿತದ್ದು ಮುಂತಾಗಿ ಹೇಳಿದ್ದರು.

ಹೊಸ ಪೀಳಿಗೆಯ ಮಂದಿಗೆ ಇವು ನಂಬಲೂ ಆಗದ ವಿಷಯಗಳು. ಅಷ್ಟಕ್ಕೂ ಇವತ್ತು, ಚಿತ್ರಗಳ ಕುರಿತಂತೆ ಗಂಭೀರ ಚರ್ಚೆಗಳೋ, ವಿಚಾರಸಂಕಿರಣಗಳೋ ಎಲ್ಲಿವೆ?

 ವಿ ರವಿಚಂದ್ರನ್ ಅವರ ಶಾಂತಿ ಕ್ರಾಂತಿಭಿಯನ್ನು ಗಮನಿಸಿ. ಕನ್ನಡದಲ್ಲಿ ಅವರು ಮುಖ್ಯಪಾತ್ರಧಾರಿ. ತಮಿಳು ಮತ್ತು ಹಿಂದಿಯಲ್ಲಿ ರಜನಿಕಾಂತ್, ತೆಲುಗಿನಲ್ಲಿ ನಾಗಾರ್ಜುನ. ಬೇರೆಬೇರೆ ಚಿತ್ರೀಕರಣ. ಒಂದು ವೇಳೆ ಅದೇ ಕಲಾವಿದರೇ ನಟಿಸುವ ಸಂದರ್ಭದಲ್ಲಿ, ಬೇರೆ ಬೇರೆ ಭಾಷೆಗಳಿಗೆ ಪ್ರತ್ಯೇಕ ಚಿತ್ರೀಕರಣ ಮಾಡುತ್ತಿದ್ದರು. ಆಯಾ ಭಾಷೆಯ ನಿರ್ದೇಶನ ವಿಭಾಗ ಇರುತ್ತಿತ್ತು. ಇತ್ತೀಚಿನ ವರೆಗೂ ಹಾಗಿತ್ತು. ಪ್ರಕಾಶ್ ರೈ ಅವರು ಮಲಯಾಳದ ‘ಸಾಲ್ಟ್ ಎನ್ ಪೆಪ್ಪ ರ್’ ಚಿತ್ರವನ್ನು ‘ಒಗ್ಗರಣೆ’ಯಾಗಿ ಕನ್ನಡದಲ್ಲಿ ನಿರ್ಮಿಸಿ, ನಿರ್ದೇಶಿಸಿ, ನಟಿಸಿದರು. ತಮಿಳಿನಲ್ಲಿ ತೆಲುಗಿನಲ್ಲಿ ‘ಉನ್ ಸಮಯಲ್ ಅರಯಿಲ್’ ಮತ್ತು ತೆಲುಗಿನಲ್ಲಿ ‘ಉಲವಚ್ಚಾರು ಬಿರಿಯಾಣ’ ಆಗಿ ಮಾಡಿದರು. ಈ ಮೂರೂ ಚಿತ್ರಗಳಿಗೆ ಪ್ರತ್ಯೇಕ ನಿರ್ದೇಶನ ವಿಭಾಗವಿತ್ತು. ಮೂರು ಭಾಷೆಗಳಿಗೂ ಚಿತ್ರೀಕರಣ ಬೇರೆ ಬೇರೆ.

ಕೆ.ಬಾಲಚಂದರ್ ಅವರು ಪುಟ್ಟಣ್ಣ ಕಣಗಾಲರ ಚಿತ್ರಗಳನ್ನು ನೋಡಲೆಂದೇ ಮದರಾಸಿನಿಂದ (ಈಗ ಚೆನ್ನೈ) ಬೆಂಗಳೂರಿಗೆ ಬರುತ್ತಿದ್ದರು. ತಾವು ಕಣಗಾಲರ ಅಭಿಮಾನಿ ಎಂದು ಅವರು ಹೇಳುತ್ತಿದ್ದರು. ತಮಿಳು ಚಿತ್ರರಂಗದಲ್ಲಿ ಈಗ ಬಹುದೊಡ್ಡ ಹೆಸರಾಗಿರುವ ಪ್ರತಿಭಾವಂತ ಕನ್ನಡ ಕಲಾವಿದರಿಗೆ ಅವಕಾಶ ನೀಡಿದವರು ಅವರು. ರಜನಿಕಾಂತ್, ಪ್ರಕಾಶ್ ರೈ, ಸುಂದರ ರಾಜ್, ರಮೇಶ್ ಅರವಿಂದ್ ಹೀಗೆ ಹಲವರನ್ನು ಹೆಸರಿಸಬಹುದು.

ಮದರಾಸು ದಕ್ಷಿಣ ಭಾರತದ ಚಿತ್ರೋದ್ಯಮ ಕೇಂದ್ರ ಆಗಿದ್ದ ಸಂದರ್ಭದಲ್ಲಿ ಎಲ್ಲ ಭಾಷೆಯ ಕಲಾವಿದರಿಗೆ ಅಲ್ಲಿ ಅವಕಾಶವಿತ್ತು. ಕನ್ನಡದ ಸಾಕಷ್ಟು ಮಂದಿ ಕಲಾವಿದರು, ತಮಿಳು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ. ತಾರೆಯರಲ್ಲಿ ಬಿ.ಜಯಮ್ಮ, ಎಂ.ವಿ.ರಾಜಮ್ಮ, ಸರೋಜಾದೇವಿ, ಜಯಲಲಿತಾ ಮುಂತಾದವರು ಅಲ್ಲಿನ ಮನೆಮಾತಾದರು. ಜಯಲಲಿತಾ ಮುಂದೆ ಅಲ್ಲಿನ ಮುಖ್ಯಮಂತ್ರಿಯೂ ಆದರು.

ಒಂದು ಕಥಾವಸ್ತುವನ್ನು ಬೇರೆಬೇರೆ ಭಾಷೆಗಳಲ್ಲಿ ತಯಾರಿಸುವ ವೇಳೆ ಆಯಾ ಭಾಷೆಯ ಕಲಾವಿದರನ್ನು ಬಳಸಿಕೊಳ್ಳುತ್ತಿದ್ದರು. ಈಗಿನಂತೆ, ಒಂದು ಭಾಷೆಯಲ್ಲಿ ನಿರ್ಮಿಸಿ, ಬೇರೆಬೇರೆ ಭಾಷೆಗಳಿಗೆ ಡಬ್ ಮಾಡಿ ಪಾನ್ ಇಂಡಿಯಾ ಚಿತ್ರ ಎಂದು ಪ್ರಚಾರ ಮಾಡುತ್ತಿರಲಿಲ್ಲ. ವಿ ರವಿಚಂದ್ರನ್ ಅವರ ಶಾಂತಿ ಕ್ರಾಂತಿಭಿಯನ್ನು ಗಮನಿಸಿ. ಕನ್ನಡದಲ್ಲಿ ಅವರು ಮುಖ್ಯಪಾತ್ರಧಾರಿ. ತಮಿಳು ಮತ್ತು ಹಿಂದಿಯಲ್ಲಿ ರಜನಿಕಾಂತ್, ತೆಲುಗಿನಲ್ಲಿ ನಾಗಾರ್ಜುನ. ಬೇರೆಬೇರೆ ಚಿತ್ರೀಕರಣ. ಒಂದು ವೇಳೆ ಅದೇ ಕಲಾವಿದರೇ ನಟಿಸುವ ಸಂದರ್ಭದಲ್ಲಿ, ಬೇರೆ ಬೇರೆ ಭಾಷೆಗಳಿಗೆ ಪ್ರತ್ಯೇಕ ಚಿತ್ರೀಕರಣ ಮಾಡುತ್ತಿದ್ದರು. ಆಯಾ ಭಾಷೆಯ ನಿರ್ದೇಶನ ವಿಭಾಗ ಇರುತ್ತಿತ್ತು. ಇತ್ತೀಚಿನ ವರೆಗೂ ಹಾಗಿತ್ತು. ಪ್ರಕಾಶ್ ರೈ ಅವರು ಮಲಯಾಳದ ‘ಸಾಲ್ಟ್ ಎನ್ ಪೆಪ್ಪ ರ್’ ಚಿತ್ರವನ್ನು ‘ಒಗ್ಗರಣೆ’ಯಾಗಿ ಕನ್ನಡದಲ್ಲಿ ನಿರ್ಮಿಸಿ, ನಿರ್ದೇಶಿಸಿ, ನಟಿಸಿದರು. ತಮಿಳಿನಲ್ಲಿ ತೆಲುಗಿನಲ್ಲಿ ‘ಉನ್ ಸಮಯಲ್ ಅರಯಿಲ್’ ಮತ್ತು ತೆಲುಗಿನಲ್ಲಿ ‘ಉಲವಚ್ಚಾರು ಬಿರಿಯಾಣ’ ಆಗಿ ಮಾಡಿದರು. ಈ ಮೂರೂ ಚಿತ್ರಗಳಿಗೆ ಪ್ರತ್ಯೇಕ ನಿರ್ದೇಶನ ವಿಭಾಗವಿತ್ತು. ಮೂರು ಭಾಷೆಗಳಿಗೂ ಚಿತ್ರೀಕರಣ ಬೇರೆ ಬೇರೆ. ಈಗೇನಿದ್ದರೂ ಡಿಜಿಟಲ್ ಯುಗ. ‘ಜೇಮ್ಸ್’ ಚಿತ್ರಕ್ಕೆ ಪುನೀತ್ ರಾಜಕುಮಾರ್ ದನಿಯನ್ನು ಜೋಡಿಸಿ ಯಶಸ್ವಿಯಾದರು. ನಟನಟಿಯರ ಬಿಂಬಗಳನ್ನೂ ಅವರಿಲ್ಲದೆ ಚಿತ್ರಿಸುವ ತಂತ್ರಜ್ಞಾನ ಈಗ ಶೈಶವದಲ್ಲಿದೆ. ಮುಂದೊಂದು ದಿನ, ರಾಜಕುರ್ಮಾ, ಎನ್ಟಿಆರ್, ಎಂಜಿಆರ್, ನಾಗೇಶ್ವರ ರಾವ್, ಪ್ರೇಮ ನಸೀರ್ ಎಲ್ಲರೂ ಜೊತೆಯಲ್ಲಿ ನಟಿಸಿದ ಚಿತ್ರ ಈ ತಂತ್ರಜ್ಞಾನದ ಮೂಲಕ ಬಂದರೆ ಆಶ್ಚರ್ಯವೇನೂ ಇಲ್ಲ.

ಕನ್ನಡದಲ್ಲೀಗ ಡಬ್ಬಿಂಗ್ ಸುನಾಮಿ ಆಗುತ್ತಿದೆ. ಬೇರೆಭಾಷೆಯ ಜನಪ್ರಿಯ ನಟರ ಚಿತ್ರಗಳು ಡಬ್ ಆದರೂ ತೆರೆಕಂಡು ಅವು ಯಶಸ್ವಿಯಾದ ಉದಾಹರಣೆ ಇಲ್ಲ. ಹಾಗಾಗಿಯೇ ಕೆಲವರು ಕನ್ನಡಕ್ಕೆ ಡಬ್ ಮಾಡದೆ, ಮೂಲ ಭಾಷೆಯಲ್ಲೇ ಅದನ್ನು ಬಿಡುಗಡೆ ಮಾಡುತ್ತಿದ್ದಾರೆ. ಡಬ್ಬಿಂಗ್ ಪ್ರಿಯರು ಇದನ್ನು ವಿರೋಧಿಸುವುದೂ ಇದೆ. ರಾಜಕುಮಾರ್ ಅವರ ಹೆಜ್ಜೆಯಲ್ಲಿ ಸಾಗುತ್ತಿರುವ ರಜನಿಕಾಂತ್, ತಮ್ಮ ಅಭಿನಯದ ಚಿತ್ರಗಳಿಗೆ ಕನ್ನಡದಲ್ಲಿ ಡಬ್ ಮಾಡಲು ಸುತಾರಾಂ ಒಪ್ಪಿಲ್ಲವಂತೆ.

ಹ್ಞಾಂ, ರಜನೀಕಾಂತ್ ಮುಂದಿನ ಚಿತ್ರದಲ್ಲಿ ಅವರೊಂದಿಗೆ ಶಿವರಾಜಕುಮಾರ್ ನಟಿಸಲಿದ್ದಾರಂತೆ. ಸ್ವತಃ ಶಿವರಾಜಕುಮಾರ್ ಇದನ್ನು ಖಚಿತಪಡಿಸಿದ್ದಾಗಿ ವರದಿಯಾಗಿದೆ. ನೆಲ್ಸನ್ ನಿರ್ದೇಶನದ ಈ ಚಿತ್ರ ತಮಿಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ತಯಾರಾಗಲಿದೆಯೇ, ಇಲ್ಲವೇ ತಮಿಳಲ್ಲಿ ತಯಾರಾಗಿ ಕನ್ನಡ ಮತ್ತು ಇತರ ಭಾಷೆಗಳಿಗೆ ಡಬ್ ಆಗಲಿದೆಯೇ ನೋಡಬೇಕು. ಹಾಗೊಂದು ವೇಳೆ ರಜನಿಕಾಂತ್ ಎರಡೂ ಭಾಷೆಗಳಲ್ಲಿ ಚಿತ್ರಿಸಿದ್ದೇ ಆದರೆ, ನಾಲ್ಕು ದಶಕಗಳ ನಂತರ ಕನ್ನಡ ಚಿತ್ರದಲ್ಲಿ ನಟಿಸಿದಂತಾಗುತ್ತದೆ.

andolana

Recent Posts

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

32 mins ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

37 mins ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

46 mins ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

1 hour ago

ಮುಡಾ ಮೇಲೆ ಇ.ಡಿ.ದಾಳಿ: ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ: ಡಿಸಿಎಂ ʼಡಿಕೆಶಿʼ

ಬೆಂಗಳೂರು: ಮುಡಾ ಕಚೇರಿ ಮೇಲೆ ಇ.ಡಿ. ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲಿಸಿದ್ದಾರೆ. ಕಚೇರಿಯಲ್ಲಿಯೇ ದಾಖಲೆಗಳನ್ನು ತಿದ್ದಲು ಯಾರಿಂದಲೂ ಸಾಧ್ಯವಿಲ್ಲ…

2 hours ago

ಮುಡಾ ಕಚೇರಿ ಮೇಲೆ ಇ.ಡಿ.ದಾಳಿ: ಸಿಎಂ ಸಿದ್ದರಾಮಯ್ಯ ಫಸ್ಟ್‌ ರಿಯಾಕ್ಷನ್‌

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿ ಮೇಲೆ ಶುಕ್ರವಾರ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈ ಬಗ್ಗೆ…

2 hours ago