ಸಾಮಾನ್ಯವಾಗಿ ಸೆಲೆಬ್ರಿಟಿಗಳು ತಮ್ಮ ಫೋನ್ ನಂಬರ್‌ಗಳನ್ನು ಯಾರಿಗೂ ಸಿಗದ ಹಾಗೆ ಕಾಪಾಡಿಕೊಳ್ಳುತ್ತಾರೆ. ಫೋನ್ ನಂಬರ್ ವೈರಲ್ ಆದರೆ ಎಲ್ಲರೂ ಕರೆ ಮಾಡುತ್ತಿರುತ್ತಾರೆ, ಕೆಲಸದ ಸಮಯದಲ್ಲಿ ಫೋನ್ ಅಟೆಂಡ್ ಮಾಡಿ ಮಾತನಾಡಲು ಸಾಧ್ಯವಿಲ್ಲ ಎಂದು ಸಾಮಾನ್ಯವಾಗಿ ಫೋನ್ ನಂಬರ್ ರಿವೀಲ್ ಮಾಡೋದಿಲ್ಲ. ಆದರೆ ರಮೇಶ್ ಅರವಿಂದ್ ಅವರು ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಎಂದು ಫೋನ್ ನಂಬರ್ ಶೇರ್ ಮಾಡಿದ್ದಾರೆ. ಹೌದು, ನಟ, ನಿರ್ದೇಶಕ, ನಿರೂಪಕ ರಮೇಶ್ ಅರವಿಂದ್ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ರಮೇಶ್ ಅರವಿಂದ್ ಇಂದಿಗೂ ಅದೆ ಬೇಡಿಕೆಯ ನಟ. ಕನ್ನಡದ ಚಿತ್ರರಂಗದಲ್ಲಿ ಅವರು ಎವರ್ಗ್ರೀನ್ ಹೀರೋ ಆಗಿ ಮಿಂಚುತ್ತಿದ್ದಾರೆ. ಅಂದಹಾಗೆ ಸೆಪ್ಟೆಂಬರ್ 10ರಂದು ರಮೇಶ್ ಅರವಿಂದ್ ಅವರ ಜನ್ಮದಿನ. ಈ ವಿಶೇಷ ದಿನದಂದು ಅವರಿಗೆ ಶುಭಾಶಯ ತಿಳಿಸಬೇಕು ಎಂಬುದು ಅಭಿಮಾನಿಗಳ ಆಸೆ. ಆದರೆ ನೇರವಾಗಿ ವಿಶ್ ಮಾಡುವುದು ಕಷ್ಟ. ಅದಕ್ಕಾಗಿ ಸ್ವತಃ ರಮೇಶ್ ಅರವಿಂದ್ ಕಡೆಯಿಂದ ಒಂದು ದೊಡ್ಡ ಆಫರ್ ನೀಡಲಾಗಿದೆ.
ಅಭಿಮಾನಿಗಳಿಗಾಗಿ ರಮೇಶ್ ಅರವಿಂದ್ ಫೋನ್ ನಂಬರ್ ನೀಡಿದ್ದಾರೆ. ಆ ನಂಬರ್ಗೆ ವಾಟ್ಸಾಪ್ ಸಂದೇಶ ಕಳಿಸುವ ಮೂಲಕ ನೆಚ್ಚಿನ ನಟನಿಗೆ ನೀವು ವಿಶ್ ಮಾಡಬಹುದು. ರಮೇಶ್ ಅರವಿಂದ್ ಸದ್ಯ ಮೋಟಿವೇಶನ್ ವಿಡಿಯೋ ಮೂಲಕ ಯುವಕರನ್ನು ಸೆಳೆಯುತ್ತಿದ್ದಾರೆ. ಅನೇಕ ಶಾಲೆ ಮತ್ತು ಕಾಲೇಜುಗಳಲ್ಲಿ ಮೋಟಿವೇಶನ್ ಸ್ಪೀಚ್ ನೀಡಿದ್ದಾರೆ. ಅಪಾರ ಸಂಖ್ಯೆಯ ಯುವ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಅವರಿಗೆ ಶುಭಹಾರೈಸಲು ಅಭಿಮಾನಿಗಳಿಗೆ ಬಂಪರ್ ಆಫರ್ ನೀಡಿದ್ದಾರೆ. ನೇರವಾಗಿ ರಮೇಶ್ ಅವರವಿಂದ್ ಅವರಿಗೆ ಫೋನ್ ಮಾಡಿ ವಿಶ್ ಮಾಡಬಹುದು. ಹೌದು, ಅಭಿಮಾನಿಗಳು 8951599009 ಮತ್ತು 8951699009 ಮೊಬೈಲ್ ಸಂಖ್ಯೆಗೆ ವಾಟ್ಸಪ್ ಸಂದೇಶ ಕಳಿಸುವ ಮೂಲಕ ರಮೇಶ್ ಅರವಿಂದ್ ಹುಟ್ಟುಹಬ್ಬಕ್ಕೆ ಶುಭ ಹಾರೈಸಬಹುದು.
ಕೇವಲವಿಶ್ ಮಾಡುವುದು ಮಾತ್ರವಲ್ಲದೇ ರಮೇಶ್ ಅರವಿಂದ್ ಅವರಿಗೆ ಏನಾದರೂ ಪ್ರಶ್ನೆಗಳನ್ನೂ ಕೇಳಬಹುದು. ಹೀಗೆ ಮೆಸೇಜ್ ಮಾಡುವಾಗ ನಿಮ್ಮ ಹೆಸರು, ಊರು ಮತ್ತು ಜಿಲ್ಲೆಯನ್ನು ತಪ್ಪದೇ ನಮೂದಿಸಿರಬೇಕು. ಮೆಸೇಜ್ ಮಾಡಿದ ಪ್ರತಿಯೊಬ್ಬರಿಗೂ ರಮೇಶ್ ಅರವಿಂದ್ ಅವರೇ ಸ್ವತಃ ಪ್ರತಿಕ್ರಿಯೆ ನೀಡಲಿದ್ದಾರೆ. ಎಲ್ಲರಿಗಿಂತ ವಿಭಿನ್ನವಾಗಿ ಶುಭಾಶಯ ತಿಳಿಸಿದವರಿಗೆ ಖುದ್ದಾಗಿ ರಮೇಶ್ ಅರವಿಂದ್ ಕರೆ ಮಾಡಿ ಮಾತನಾಡಲಿದ್ದಾರೆ ಎನ್ನುವುದು ವಿಶೇಷ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ರಮೇಶ್ ಅರವಿಂದ್ ಕೊನೆಯದಾಗಿ ಶಿವಾಜಿ ಸೂರತ್ಕಲ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ 2020ರಲ್ಲಿ ರಿಲೀಸ್ ಆಗಿತ್ತು. ದೊಡ್ಡ ಮಟ್ಟದ ಯಶಸ್ಸು ಸಹ ಕಂಡಿತ್ತು. ಈಗ ಆ ಚಿತ್ರಕ್ಕೆ ಸೀಕ್ವೆಲ್ ಸಿದ್ಧವಾಗುತ್ತಿದೆ. ಮತ್ತೆ ಡಿಟೆಕ್ಟೀವ್ ಆಗಿ ಅಭಿಮಾನಿಗಳನ್ನು ಅವರು ರಂಜಿಸಲಿದ್ದಾರೆ. ಚಿತ್ರಕ್ಕೆ ಆಕಾಶ್ ಶ್ರೀವಸ್ತ ನಿರ್ದೇಶನ ಮಾಡುತ್ತಿದ್ದಾರೆ. ರೇಖಾ ಕೆಎನ್ ಮತ್ತು ಅನೂಪ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.
ಮಂಡ್ಯ: ನಾಗಮಂಗಲ ತಾಲೂಕು ಯರಗಟ್ಟಿ ಗೇಟ್ ಬಳಿ ಶುಕ್ರವಾರ ರಾತ್ರಿ ಅಪಘಾತಕ್ಕೊಳಗಾದ ಸ್ಕಾರ್ಪಿಯೋ ಕಾರಿನಲ್ಲಿ ಮೃತಪಟ್ಟಿರುವ ಹತ್ತಕ್ಕೂ ಹೆಚ್ಚು ಕರುಗಳು…
ಮದ್ದೂರು: ದುಷ್ಕರ್ಮಿಗಳು ದೇವಾಲಯಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ತಾಲ್ಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಅಡಗನಹಳ್ಳಿ…
ಮೈಸೂರು : ಎನ್‌ಸಿಬಿ ಪೊಲೀಸರು ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶದ ರಾಸಾಯನಿಕ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದ ನಂತರ…
ಚಿಕ್ಕಬಳ್ಳಾಪುರ : ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾ ಗೌಡ ಅವರಿಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ಆರೋಪಿ ರಾಜೀವ್ ಗೌಡಗೆ ಜಾಮೀನು…
ಬೆಂಗಳೂರು : ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಕಂಪನಿ ಕಾನ್ಫಿಡೆಂಟ್ ಗ್ರೂಪ್‌ನ ಸ್ಥಾಪಕ ಮತ್ತು ಚೇರ್ಮನ್ ಡಾ.ಸಿ.ಜೆ. ರಾಯ್…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು ‘ಮಾನಹಾನಿಕರ’ ಪೋಸ್ಟ್‌ನ್ನು ಬಿಜೆಪಿಯ ‘ಎಕ್ಸ್’ ಖಾತೆಯಲ್ಲಿ…