ಚಿತ್ರ ಮಂಜರಿ

ಹೊಸ ವರ್ಷ; ಹೊಸ ನಿರೀಕ್ಷೆ ೨೦೨೫ರ ಕೆಲವು ಪ್ರಮುಖ ಚಿತ್ರಗಳು

ಪ್ರತಿ ವರ್ಷ ನೂರಾರು ಚಿತ್ರಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ಆದರೆ, ಜನರಿಗೆ ಕೆಲವು ಚಿತ್ರಗಳ ಮೇಲೆ ಮಾತ್ರ ವಿಶೇಷ ಆಸಕ್ತಿ, ಕುತೂಹಲ ಮತ್ತು ನಿರೀಕ್ಷೆಗಳು ಹೆಚ್ಚಿರುತ್ತವೆ. ಅದಕ್ಕೆ ಚಿತ್ರದಲ್ಲಿ ನಟಿಸುತ್ತಿರುವ ಹೀರೋ ಇರಬಹುದು, ತಾರಾಗಣ ಇರಬಹುದು, ತಂತ್ರಜ್ಞರು, ಕಥಾವಸ್ತು… ಹೀಗೆ ಹಲವು ಕಾರಣಗಳಿರಬಹುದು. ಒಟ್ಟಾರೆ, ಬೇರೆ ಚಿತ್ರಗಳಿಗೆ ಹೋಲಿಸಿದರೆ, ಆ ಚಿತ್ರಗಳ ಮೇಲೆ ಜನರ ನಿರೀಕ್ಷೆ ಹೆಚ್ಚಿರುತ್ತವೆ. ಆ ಚಿತ್ರಗಳಿಗಾಗಿ ಅವರು ಕಾಯುತ್ತಿರುತ್ತಾರೆ. ಬೇರೆ ಎಷ್ಟೇ ಚಿತ್ರಗಳು ಬರಲಿ, ಗಮನ ಸೆಳೆಯಲಿ, ಈ ಚಿತ್ರಗಳಿಗೆ ಅವರ ಆದ್ಯತೆ ಜಾಸ್ತಿ ಇರುತ್ತದೆ. ೨೦೨೫ರಲ್ಲೂ ಅಂತಹ ಕೆಲವು ಚಿತ್ರಗಳಿವೆ. ಆ ಪಟ್ಟಿಯನ್ನೊಮ್ಮೆ ನೋಡಿ…

ದೇಶದ ನಿರೀಕ್ಷಿತ ಚಿತ್ರ: ಈ ವರ್ಷ ಘೋಷಣೆಯಾಗಿರುವ ಚಿತ್ರವೆಂದರೆ ಅದು ‘ಕಾಂತಾರ – ಅಧ್ಯಾಯ ೧’ ಮಾತ್ರ. ಈ ಚಿತ್ರವು ಅಕ್ಟೋಬರ್ ೨ರಂದು ಬಿಡುಗಡೆ ಆಗಲಿದೆ ಎಂದು ಕೆಲವು ತಿಂಗಳುಗಳ ಹಿಂದೆಯೇ ನಟ-ನಿರ್ದೇಶಕ ರಿಷಭ್ ಶೆಟ್ಟಿ ಘೋಷಣೆ ಮಾಡಿದ್ದಾರೆ. ಈ ಚಿತ್ರವು ಬರೀ ಕನ್ನಡ ಚಿತ್ರರಂಗದ ಅತೀ ನಿರೀಕ್ಷಿತ ಚಿತ್ರವಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲೂ ಇದೆ. ಅದಕ್ಕೆ ಕಾರಣ ‘ಕಾಂತಾರ’ ಚಿತ್ರದ ಯಶಸ್ಸು. ೨೦೨೨ರಲ್ಲಿ ಬಿಡುಗಡೆಯಾದ ಈ ಚಿತ್ರ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಯಶಸ್ಸು ಪಡೆದಿದ್ದಷ್ಟೇ ಅಲ್ಲ, ಒಳ್ಳೆಯ ಗಳಿಕೆಯನ್ನೂ ಮಾಡಿದೆ. ಬೇರೆ ಭಾಷೆಗಳಿಗೂ ಡಬ್ ಆಗಿ ಅಲ್ಲೂ ಜನಪ್ರಿಯವಾಗಿದೆ. ಹಾಗಾಗಿ, ‘ಕಾಂತಾರ’ದ ಪ್ರೀಕ್ವೆಲ್ ಆಗಿರುವ ‘ಕಾಂತಾರ – ಅಧ್ಯಾಯ ೧’ ಚಿತ್ರವು ದೇಶದ ನಿರೀಕ್ಷಿತ ಚಿತ್ರವಾಗಿದೆ.

ಹಬ್ಬ ಎಂದರೆ ಯಾವ ಹಬ್ಬ?: ಈ ವರ್ಷದ ಮೊದಲ ನಿರೀಕ್ಷಿತ ಚಿತ್ರವಾಗಿ ಧ್ರುವ ಸರ್ಜಾಅಭಿನಯದ ‘ಕೆಡಿ – ದಿ ಡೆವಿಲ್’ ಚಿತ್ರವು ಬಿಡುಗಡೆಯಾಗುತ್ತದೆ. ನಿರ್ದೇಶಕ ಪ್ರೇಮ್, ಹಬ್ಬದ ಸೀಸನ್‌ನಲ್ಲಿ ಬಿಡುಗಡೆ ಎಂದು ಘೋಷಿಸಿದ್ದಾರೆ. ಆದರೆ, ಅದು ಯುಗಾದಿಗೋ, ವರಮಹಾಲಕ್ಷಿ  ಹಬ್ಬಕ್ಕೋ ಗೊತ್ತಿಲ್ಲ. ಯುಗಾದಿಗಾದರೆ, ವರ್ಷದ ಮೊದಲ ನಿರೀಕ್ಷಿತ ಚಿತ್ರವಾಗುವ ಸಾಧ್ಯತೆ ಇದೆ. ‘ ಕೆಡಿ- ದಿ ಡೆವಿಲ್’ ಕಳೆದ ವರ್ಷವೇ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರೀಕರಣ ಮುಗಿದಿಲ್ಲವಾದ ಕಾರಣ, ಚಿತ್ರ ಈ ವರ್ಷ ಬಿಡುಗಡೆಯಾಗಲಿದೆ. ಒಂದು ಕಡೆ ಪ್ರೇಮ್, ಇನ್ನೊಂದು ಕಡೆ ಧ್ರುವ ಸರ್ಜಾ, ೭೦ರ ಹಿನ್ನೆಲೆಯ ರೌಡಿಸಂ ಕಥೆ. ಜೊತೆಗೆ ರವಿಚಂದ್ರನ್, ರಮೇಶ್ ಅರವಿಂದ್, ಸಂಜಯ್ ದತ್, ಶಿಲ್ಪಾ ಶೆಟ್ಟಿ ಮುಂತಾದವರ ಉಪಸ್ಥಿತಿಯಿಂದ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಪ್ರೇಮ್ ಮೂರು ವರ್ಷಗಳಿಂದ ಈ ಚಿತ್ರಕ್ಕೆ ಕೆಲಸ ಮಾಡುತ್ತಲೇ ಇದ್ದಾರೆ. ಅಂತಿಮವಾಗಿ ಏನು ಮಾಡು ತ್ತಾರೆ ಎಂದು ಬಿಡುಗಡೆಯಾದಾಗ ನೋಡಬೇಕು.

ತ್ರಿಮೂರ್ತಿಗಳಿಂದ ಹೆಚ್ಚಾದ ನಿರೀಕ್ಷೆ: ‘೪೫’ ಚಿತ್ರಕ್ಕೆ ಜನಕಾಯುತ್ತಿರುವುದಕ್ಕೂ ಕಾರಣವಿದೆ. ಪ್ರಮುಖವಾಗಿ, ಈ ಚಿತ್ರದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಜೊತೆಯಾಗಿ ನಟಿಸಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶಿಸುತ್ತಿದ್ದಾರೆ. ಹಾಗಾಗಿ, ಸಹಜವಾಗಿಯೇ ನಿರೀಕ್ಷೆ ಮತ್ತು ಕುತೂಹಲಗಳಿವೆ.

ಈಗಾಗಲೇ ಚಿತ್ರೀಕರಣ ಮುಗಿದಿದೆ. ಶಿವಣ್ಣ ತಮ್ಮ ಕ್ಯಾನ್ಸರ್ ಸಮಸ್ಯೆ ನಡುವೆಯೂ ಚಿತ್ರೀಕರಣ ಮುಗಿಸಿಕೊಟ್ಟಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರ ಸಂಪೂರ್ಣ ವಾಗಿದ್ದರೂ ಚಿತ್ರದ ಬಿಡುಗಡೆ ದಿನಾಂಕ ಮಾತ್ರ ಘೋಷಣೆಯಾಗಿಲ್ಲ. ಬಹುಶಃ ಏಪ್ರಿಲ್ ಅಥವಾ ಮೇನಲ್ಲಿ ಬಿಡುಗಡೆ ಎಂದು ಹೇಳಲಾಗುತ್ತಿದೆ.

ತುದಿಗಾಲಲ್ಲಿ ದರ್ಶನ್: ಕಳೆದ ವರ್ಷ ದರ್ಶನ್ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆ ಆಗಲಿಲ್ಲ. ‘ಡೆವಿಲ್’ ಚಿತ್ರವು ಕಳೆದ ವರ್ಷವೇ ಬಿಡುಗಡೆಯಾಗಬೇಕಿತ್ತು. ಆದರೆ, ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ದರ್ಶನ್ ಜೈಲು ಸೇರಿದ್ದರಿಂದ, ಅಂದುಕೊಂಡಂತೆ ಚಿತ್ರೀಕರಣ ನಡೆಯಲಿಲ್ಲ. ಇದೀಗ ದರ್ಶನ್ ಜಾಮೀನಿನ ಮೇಲೆ ಹೊರಬಂದಿದ್ದಾರೆ. ಆದರೆ, ಇನ್ನೂ ಚಿಕಿತ್ಸೆ ಪಡೆಯುತ್ತಿರುವುದರಿಂದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿಲ್ಲ. ಜನವರಿ ಒಂದರಂದು ಅವರು ಚಿತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಬಹುಶಃ ಫೆಬ್ರವರಿಯಿಂದ ಚಿತ್ರೀಕರಣದಲ್ಲಿ ಭಾಗಿಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಫೆಬ್ರವರಿಯಲ್ಲಿ ಅಂದುಕೊಂಡಂತೆ ಚಿತ್ರೀಕರಣ ಪ್ರಾರಂಭವಾಗಿ ಮುಗಿದರೆ, ಮೇ ನಂತರ ‘ಡೆವಿಲ್’ ಬಿಡುಗಡೆಯಾಲಿದೆ. ಅಂದುಕೊಂ ಡಂತೆ ಆಗದಿದ್ದರೆ, ಚಿತ್ರ ಮುಂದಕ್ಕೆ ಹೋದರೂ ಆಶ್ಚರ್ಯವಿಲ್ಲ.

‘ಟಾಕ್ಸಿಕ್’ ಸುದ್ದಿ: ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರವು ಏಪ್ರಿಲ್ ೧೦ರಂದುಬಿಡುಗಡೆ ಆಗಲಿದೆ ಎಂದು ಚಿತ್ರ ತಂಡ ಮೊದಲೇ ಘೋಷಣೆ  ಮಾಡಿತ್ತು. ಆದರೆ, ಚಿತ್ರದ ಚಿತ್ರೀಕರಣ ಇನ್ನೂ ಮುಗಿದಿಲ್ಲ. ಬಹುಶಃ ಇನ್ನಷ್ಟು ಸಮಯವಾಗುವ ಸಾಧ್ಯತೆ ಇದೆ. ಎಲ್ಲವನ್ನೂ ಮುಗಿಸಿ, ವರ್ಷದ ಕೊನೆಗಾದರೂ ಚಿತ್ರ ಬಿಡುಗಡೆಯಾಗಬಹುದು ಎಂದು ಯಶ್ ಅಭಿಮಾನಿಗಳು ಆಸೆಯಿಂದ ಕಾಯುತ್ತಿದ್ದಾರೆ. ಆದರೆ, ಚಿತ್ರ ತಂಡ ಇದುವರೆಗೂ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿಲ್ಲ. ಚಿತ್ರ ಇದೇ ವರ್ಷದ ಕೊನೆಗೆ ಬರುತ್ತದೋ? ಅಥವಾ ಮುಂದಿನ ವರ್ಷವೋ ಇನ್ನೂ ಸ್ಪಷ್ಟತೆ ಇಲ್ಲ.

ಇದಲ್ಲದೆ ಇನ್ನೊಂದಿಷ್ಟು ಚಿತ್ರಗಳ ಬಗ್ಗೆ ಸಹಜವಾಗಿಯೇ ನಿರೀಕ್ಷೆಗಳಿವೆ. ಪ್ರಮುಖವಾಗಿ ‘ದುನಿಯಾ’ ವಿಜಯ್ ಅಭಿನಯದ ‘ರಾಚಯ್ಯ’ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಪ್ರಾರಂಭವಾಗಿದ್ದು, ಚಿತ್ರೀಕರಣ ಮುಕ್ತಾಯದ ಹಂತಕ್ಕೆ ಬಂದಿದೆ. ಬಾಕಿ ಉಳಿದಿರುವ ಚಿತ್ರೀಕರಣವನ್ನು ಆದಷ್ಟು ಬೇಗ ಮುಗಿಸಿ, ಆ ಚಿತ್ರವನ್ನು ತೆರೆಗೆ ತರುವುದಕ್ಕೆ ಚಿತ್ರ ತಂಡ ಮುಂದಾಗಿದೆ. ಜಡೇಶ್ ಹಂಪಿ ನಿರ್ದೇಶನದ ಈ ಚಿತ್ರ ಸಹ ಬಹುಶಃ ವರ್ಷದ ಮೊದಲಾರ್ಧದಲ್ಲಿ ಬಿಡುಗಡೆ ಆಗಲಿದೆ. ಇನ್ನು, ಶಿವರಾಜ್‌ಕುಮಾರ್ ಮತ್ತು ಧನಂಜಯ್ ಅಭಿನಯದ ‘ಉತ್ತರ ಕಾಂಡ’ ಚಿತ್ರವು ನಿಂತಿಲ್ಲ ಎಂದು ನಿರ್ಮಾಪಕ ಕಾರ್ತಿಕ್ ಗೌಡ ಈಗಾಗಲೇ ಹೇಳಿದ್ದಾರೆ. ಶಿವರಾಜ್‌ಕುಮಾರ್ ಅನಾರೋಗ್ಯದಿಂದ ಚಿತ್ರೀಕರಣ ಮುಂದೂಡಲಾಗಿದ್ದು, ಅವರು ಚಿಕಿತ್ಸೆ ಮುಗಿಸಿಕೊಂಡು ವಾಪಸ್ಸಾದ ಮೇಲೆ ಚಿತ್ರ ಮುಂದುವರಿ ಯಲಿದೆಯಂತೆ. ಈ ಚಿತ್ರ ಸಹ ಈ ವರ್ಷದ ಕೊನೆಗೆ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಇದಲ್ಲದೆ ಶ್ರೀನಗರ ಕಿಟ್ಟಿ ಅಭಿನಯದ ‘ಸಂಜು ವೆಡ್ಸ್ ಗೀತಾ ೨’, ಯೋಗರಾಜ್ ಭಟ್ ನಿರ್ದೇಶನದ ‘ಮನದ ಕಡಲು’, ಗಣೇಶ್, ರಮೇಶ್ ಅರವಿಂದ್ ಅಭಿನಯದ ‘ಯುವರ್ಸ್ ಸಿನ್ಸಿಯರ್ಲಿ ರಾಮ್’, ಧನಂಜಯ್ ಅಭಿನಯದ ‘ಅಣ್ಣ ಫ್ರಮ್ ಮೆಕ್ಸಿಕೋ’, ಪ್ರಜ್ವಲ್ ಅಭಿನಯದ ‘ಕರಾವಳಿ’, ಯುವರಾಜಕುಮಾರ್ ಅಭಿನಯದ ‘ಎಕ್ಕ’ ಮುಂತಾದ ಹಲವು ಚಿತ್ರಗಳು ಪಟ್ಟಿಯಲ್ಲಿದೆ. ಈ ಪೈಕಿ ಕೆಲವು ಚಿತ್ರಗಳ ಚಿತ್ರೀಕರಣ ಮುಗಿದು ಬಿಡುಗಡೆ ದಿನಾಂಕ ಘೋಷಣೆಯಾದರೆ, ಇನ್ನೂ ಕೆಲವು ಚಿತ್ರಗಳ ಚಿತ್ರೀಕರಣ ಪ್ರಗತಿಯಲ್ಲಿರುವುದರಿಂದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿಲ್ಲ.

‘೪೫’ ಚಿತ್ರಕ್ಕೆ ಜನ ಕಾಯುತ್ತಿರುವುದಕ್ಕೂ ಕಾರಣವಿದೆ. ಪ್ರಮುಖವಾಗಿ,ಈ ಚಿತ್ರದಲ್ಲಿ ಶಿವರಾಜ್‌ಕುಮಾರ್, ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ ಜೊತೆಯಾಗಿ ನಟಿಸಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶಿಸುತ್ತಿದ್ದಾರೆ.

ಆಂದೋಲನ ಡೆಸ್ಕ್

Recent Posts

ಆಕಸ್ಮಿಕ ಬೆಂಕಿ : ಒಕ್ಕಣೆ ಕಣದ ರಾಗಿ ಫಸಲು ನಾಸ

ಹನೂರು : ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಒಕ್ಕಣೆ ಕಣದಲ್ಲಿ ಹಾಕಲಾಗಿದ್ದ ರಾಗಿ ಫಸಲಿಗೆ ಬೆಂಕಿ ಬಿದ್ದು ಸುಮಾರು 30 ಕ್ವಿಂಟಾಲ್…

8 hours ago

ಸಿಎಂ ಸಿದ್ದರಾಮಯ್ಯ ಆರೋಗ್ಯದಲ್ಲಿ ಏರು-ಪೇರು ; ಸದನ ಕಲಾಪಗಳಿಂದ ದೂರ ಉಳಿದ ಸಿಎಂ

ಬೆಳಗಾವಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ತುಸು ಏರುಪೇರು ಆದ ಕಾರಣ, ಇಂದು (ಡಿಸೆಂಬರ್ 17) ವಿಧಾನಸಭೆ ಅಧಿವೇಶನದಲ್ಲಿ…

8 hours ago

ಶ್ರೀಕಂಠೇಶ್ವರ ದೇವಾಲಯದಲ್ಲಿ ಅಕ್ರಮ?; ತನಿಖೆ ಆರಂಭಿಸಿದ ಎಸಿ ತಂಡ

ನಂಜನಗೂಡು : ದಕ್ಷಿಣ ಕಾಶಿ ಎಂದೇ ಹೆಸರಾಗಿರುವ, ಆದಾಯದಲ್ಲಿ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿರುವ ನಂಜನಗೂಡು ಶ್ರೀಕಂಠೇಶ್ವರ ದೇವಾಯದಲ್ಲಿ ಲಕ್ಷಾಂತರ ರೂ.…

8 hours ago

ಪ್ರಧಾನಿ ಮೋದಿಗೆ ಇಥಿಯೋಪಿಯಾದ ಅತ್ಯುನ್ನತ ಗೌರವ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾದ ಅತ್ಯುನ್ನತ ಪ್ರಶಸ್ತಿ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’…

8 hours ago

ಧರ್ಮಸ್ಥಳ ಪ್ರಕರಣ : ಚಿನ್ನಯ್ಯಗೆ ಕೊನೆಗೂ ಬಿಡುಗಡೆ ಭಾಗ್ಯ

ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿಟ್ಟ ಪ್ರಕರಣದಲ್ಲಿ ವಿಶೇಷ ತನಿಖಾ ತಂಡದಿಂದ ಬಂಧನಕ್ಕೆ ಒಳಗಾದ ಚಿನ್ನಯ್ಯ ಕೊನೆಗೂ…

8 hours ago

ಕೈಗಾರಿಕೆ ಸ್ಥಾಪನೆಗೆ 500 ಎಕರೆ ಜಾಗ ಕೊಡುತ್ತೇನೆ : ಎಚ್‌ಡಿಕೆ ಯಾವ ಕೈಗಾರಿಕೆ ತರುತ್ತಾರೋ ತರಲಿ : ಶಾಸಕ ನರೇಂದ್ರಸ್ವಾಮಿ ಸವಾಲು

ಮಂಡ್ಯ : ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಯಾವ ಕೈಗಾರಿಕೆಯನ್ನು ತರುವರೋ ತರಲಿ. ಮಳವಳ್ಳಿ ಕ್ಷೇತ್ರದಲ್ಲಿ 400ರಿಂದ 500 ಎಕರೆ…

8 hours ago