ಲೇಡಿ ಸೂಪರ್ ಸ್ಟಾರ್ ನಯನ ತಾರಾ ಅವರು ಇತ್ತೀಚೆಗಷ್ಟೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ನಯನತಾರ ಅವರಿಗೆ ಅಭಿಮಾನಿಗಳಿಂದ ಶುಭಾಷಯಗಳ ಮಹಾಪೂರವೇ ಹರಿದು ಬಂದಿತ್ತು.
ನಯನ ತಾರಾ ಅವರ ಹುಟ್ಟುಹಬ್ಬಕ್ಕೆ ಅವರ ಪತಿ ವಿಘ್ನೇಶ್ ಶಿವನ್ ಅವರು ಬರೋಬ್ಬರಿ ಮೂರು ಕೋಟಿ ರೂ. ಬೆಲೆಬಾಳುವ ಐಶಾರಾಮಿ ಮರ್ಸಿಡಿಸ್ ಮೇಬ್ಯಾಕ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ವಿಷಯವನ್ನು ತಡವಾಗಿ ಹಂಚಿಕೊಂಡಿರುವ ನಯನತಾರ ಅವರು ಕಾರಿನ ಲೋಗೋದ ಫೋಟೊವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಮನೆಗೆ ಸ್ವಾಗತ ಬ್ಯೂಟಿ. ಸ್ವೀಟೆಸ್ಟ್ ಗಿಫ್ಟ್ ನೀಡಿದ ಪತಿಗೆ ಧನ್ಯವಾದ. ಲವ್ ಯೂ ಎಂದು ಬರೆದುಕೊಂಡಿದ್ದಾರೆ.
ಮರ್ಸೀಡಿಸ್ ಕಾರಿನ ಆರಂಭಿಕ ಬೆಲೆ 2.69 ಕೋಟಿ ರೂ. ಇದ್ದು, ಸಾಕಷ್ಟು ಐಶಾರಾಮಿ ಫೀಚರ್ ಹೊಂದಿರುವ ಈ ಕಾರಿನ ಬೆಲೆ 3.40 ಕೋಟಿ ವರೆಗೂ ಇದೆ. ಇದೀಗ ಈ ದುಬಾರಿ ಕಾರು ನಯನತಾರ ಅವರಿಗೆ ಉಡುಗೊರೆಯಾಗಿ ಸಿಕ್ಕಿದೆ.
ಇತ್ತೀಚೆಗೆ ನಯನತಾರ ಅವರು ಹಂಚಿಕೊಂಡಿದ್ದ ಫೋಟೊವೊಂದು ಸಿನಿರಂಗದಲ್ಲಿ ಹಲ್ ಚಲ್ ಎಬ್ಬಿಸಿತ್ತು. ಲೇಡಿ ಸೂಪರ್ ಸ್ಟಾರ್ ನಟನೆ ಬಿಟ್ಟು ಡೈರೆಕ್ಷನ್ ಗೆ ಇಳಿತಾರಾ ಅನ್ನೋ ಅನುಮಾನ ಸೃಷ್ಟಿಸಿತ್ತು.
ನಯನತಾರ ಅವರು ಸೊಶಿಯಲ್ ಮೀಡಿಯಾದಲ್ಲಿ ಹಾಕಿದ್ದ ಫೋಟೊದಿಂದ ನಯನ ತಾರಾ ನಿರ್ದೇಶನದತ್ತ ಮುಖ ಮಾಡಲಿದ್ದಾರೆ ಎನ್ನುವ ಮಾತು ಜೋರಾಗಿತ್ತು. ಆ ಫೋಟೋದಲ್ಲಿ ನಯನ ತಾರಾ ಅವರು ಕ್ಯಾಮೆರಾ ಹಿಂದೆ ನಿಂತಿದ್ದರು. ನಟಿ ಹಂಚಿಕೊಂಡಿದ್ದ ಆ ಒಂದು ಫೋಟೊದಿಂದ ಅಭಿಮಾನಿಗಳಲ್ಲಿ ಹಲವಾರು ಪ್ರಶ್ನೆಗಳು ಮೂಡಿದ್ದವು.
ನಯನ ತಾರ ಅವರು ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ. ತ್ರಿಶಾ, ಅನುಷ್ಕಾ ಶೆಟ್ಟಿ, ಸಮಂತಾ ಸೇರಿದಂತೆ ಇನ್ನೂ ಹಲವು ಜನ ಪ್ರಿಯ ನಟಿಯರಿಗೂ ಕೂಡ ನಯನ ತಾರ ಅವರು ಪಡೆಯುವ ಸಂಭಾವನೆಯನ್ನು ಹಿಂದಿಕ್ಕಲು ಸಾಧ್ಯವಾಗಿಲ್ಲ.
ಬೆಂಗಳೂರು : ನಾಳೆಯಿಂದ ಐಪಿಎಲ್ ಪಂದ್ಯಾವಳಿಗಳು ಆರಂಭವಾಗಲಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಸಂಬಂಧಪಟ್ಟ…
ಮದ್ದೂರು : ಖಾಸಗಿ ಶಾಲೆ ಬಸ್ ಮತ್ತು ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿ, 14 ವಿದ್ಯಾರ್ಥಿಗಳ ಜತೆಗೆ 6…
ಹನೂರು : ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ…
ಎಚ್.ಡಿ.ಕೋಟೆ : ರಾಜ್ಯದಲ್ಲಿ ಜಾತ್ಯತೀತ ಜನತಾದಳ-ಬಿಜೆಪಿಯ ಮೈತ್ರಿಯ ಸರ್ಕಾರ ಅಧಿಕಾರಕ್ಕೆ ಬಂದು ಜನಪರ ಆಡಳಿತ ನೀಡುವ ದಿನಗಳು ಹತ್ತಿರವಾಗುತ್ತಿವೆ ಎಂದು…
ಬೆಂಗಳೂರು : ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ತಾವು ಕಣದಿಂದ ಹಿಂದೆ ಸರಿದಿರುವುದಾಗಿ ಘೋಷಿಸಿದ್ದಾರೆ.…
ಬೆಂಗಳೂರು : ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲಿ ರಾಜ್ಯ ಸರ್ಕಾರವು ಅತ್ಯಂತ ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಆಮೂಲಾಗ್ರ…