ಬೆಂಗಳೂರು: ಕನ್ನಡದ ಅತ್ಯುತ್ತಮ ಚಿತ್ರಗಳನ್ನು ಹಾಗೂ ಕಲಾವಿದರನ್ನು ಗುರುತಿಸಿ ಪ್ರಶಸ್ತಿಗಳನ್ನು ಸೈಮಾ, ಐಫಾ, ಫಿಲ್ಮ್‌ಫೇರ್ ಹೆಸರಿನಡಿಯಲ್ಲಿ ನೀಡಲಾಗುತ್ತಿತ್ತು. ಆದರೆ ಕನ್ನಡದವರಿಗೆಂದೇ ಪ್ರತ್ಯೇಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇಲ್ಲ ಎಂಬ ಕೂಗು, ಕೊರಗು ಈ ಹಿಂದಿನಿಂದಲೂ ಸಹ ಕೇಳಿಬಂದಿತ್ತು.
ಈ ಕೊರಗಿಗೆ ಇದೀಗ ಫುಲ್‌ಸ್ಟಾಪ್ ಬಿದ್ದಿದ್ದು ನಂದಿ ಅವಾರ್ಡ್ಸ್ ಕಾರ್ಯಕ್ರಮವನ್ನು ಈ ವರ್ಷದಿಂದ ಆರಂಭಿಸಲಾಗಿದೆ. ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿವಿಧ ಕೆಟಗರಿಗಳ ಅಡಿಯಲ್ಲಿ ಪ್ರಶಸ್ತಿಗಳನ್ನು ನೀಡಿ ಕಲಾವಿದರನ್ನು ಪ್ರಶಂಸಿಸಲಾಗುತ್ತಿದೆ. ಮೊದಲ ನಂದಿ ಅವಾರ್ಡ್ಸ್ ಕಾರ್ಯಕ್ರಮ ಡಿಸೆಂಬರ್ 6ರಂದು ನಗರದ ಒರಾಯನ್ ಮಾಲ್‌ನಲ್ಲಿ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಯಾವ ಯಾವ ಕಲಾವಿದರು ಹಾಗೂ ಚಿತ್ರಗಳಿಗೆ ಯಾವ ಕೆಟಗರಿ ಅಡಿಯಲ್ಲಿ ಪ್ರಶಸ್ತಿ ಲಭಿಸಿತು ಎಂಬ ಮಾಹಿತಿ ಈ ಕೆಳಕಂಡಂತಿದೆ..
1. ಅತ್ಯುತ್ತಮ ಬಯೋಪಿಕ್: ವಿಜಯಾನಂದ
2. ಲೆಜೆಂಡರಿ ನಾಯಕಿ : ಲೀಲಾವತಿ
3. ಜೀವಮಾನ ಸಾಧನೆ ಪ್ರಶಸ್ತಿ : ಶ್ರೀನಾಥ್ ಹಾಗೂ ಭಾರತಿ ವಿಷ್ಣುವರ್ಧನ್
4. ಅತ್ಯುತ್ತಮ ಡಾಕ್ಯುಮೆಂಟರಿ: ಗಂಧದಗುಡಿ
5. ಅತ್ಯುತ್ತಮ ಉದಯೋನ್ಮುಖ ನಟ: ವಿಕ್ರಮ್ ರವಿಚಂದ್ರನ್
6. ಅತ್ಯುತ್ತಮ ಉದಯೋನ್ಮುಖ ನಟಿ: ರೀಷ್ಮ ನಾಣಯ್ಯ
7. ಅತ್ಯುತ್ತಮ ಹಾಸ್ಯನಟ: ರಂಗಾಯಣ ರಘು
8. ಅತ್ಯುತ್ತಮ ಹಾಸ್ಯನಟಿ: ಹೇಮಾದತ್
9. ಅತ್ಯುತ್ತಮ ಪೋಷಕನಟಿ – ವೀಣಾ ಸುಂದರ್
10. ಅತ್ಯುತ್ತಮ ನಟ ( ಕ್ರಿಟಿಕ್ಸ್ ) : ಸಂಚಾರಿ ವಿಜಯ್
11. ಅತ್ಯುತ್ತಮ ಸಂಭಾಷಣಾಕಾರ: ಮಾಸ್ತಿ
12. ಅತ್ಯುತ್ತಮ ಚಿತ್ರ: ಚಾರ್ಲಿ 777
13. ಅತ್ಯುತ್ತಮ ನಿರ್ದೇಶಕ: ರಿಷಬ್ ಶೆಟ್ಟಿ
14. ಅತ್ಯುತ್ತಮ ನಟ: ರಿಷಬ್ ಶೆಟ್ಟಿ
15. ಅತ್ಯುತ್ತಮ ನಟಿ: ಸಪ್ತಮಿ ಗೌಡ
16. ಅತ್ಯುತ್ತಮ ಖಳನಟ: ಡಾಲಿ ಧನಂಜಯ್
17. ಅತ್ಯುತ್ತಮ ಪೋಷಕನಟ: ಲೂಸ್ ಮಾದ ಯೋಗಿ
18. ಅತ್ಯುತ್ತಮ ನಟಿ ( ಕ್ರಿಟಿಕ್ಸ್ ) : ಹರಿಪ್ರಿಯಾ, ಅನು ಪ್ರಭಾಕರ್
19. ಬೆಸ್ಟ್ ಪ್ರೆಸ್ ಫೋಟೊಗ್ರಫರ್ : ಕೆಎನ್ ನಾಗೇಶ್ ಕುಮಾರ್
20. ಬೆಸ್ಟ್ ಪಿಆರ್ : ನಾಗೇಂದ್ರ
ಬೆಂಗಳೂರು: ಸಚಿವ ಎಚ್.ಕೆ.ಪಾಟೀಲ್‌ಗೆ ಜೀವ ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಫೇಸ್‌ಬುಕ್‌ನಲ್ಲಿ ಜೀವ ಬೆದರಿಕೆ…
ಬೆಂಗಳೂರು: ಹಿರಿಯ ಪತ್ರಕರ್ತ, ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಉಪಾಧ್ಯಕ್ಷರಾದ ದೊಡ್ಡ ಬೊಮಯ್ಯ ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಸಿಎಂ ಸಿದ್ದರಾಮಯ್ಯ…
ಮಡಿಕೇರಿ: ಮಾರ್ಚ್‌ನಲ್ಲಿ ಪೊನ್ನಂಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲಲಿ ನಡೆದಿದ್ದ ನಾಲ್ವರ ಹತ್ಯೆ ಪ್ರಕರಣ ಸಂಬಂಧ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ…
ಮೈಸೂರು: ಮೈಸೂರಿನ ಅರಮನೆ ಆವರಣದಲ್ಲಿ ಡಿಸೆಂಬರ್.21ರಿಂದ 31ರವರೆಗೆ ಜರುಗಲಿರುವ ಪ್ರತಿಷ್ಠಿತ ಮಾಗಿ ಉತ್ಸವದ ಅಂಗವಾಗಿ ಆಯೋಜಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಅಂತಿಮ…
ಕೊಚ್ಚಿ: ಖ್ಯಾತ ಮಲಯಾಳಂ ನಟ ಹಾಗೂ ನಿರ್ದೇಶಕ ಶ್ರೀನಿವಾಸ್ ನಿಧನರಾಗಿದ್ದಾರೆ. ಅವರಿಗೆ 69 ವರ್ಷ ವಯಸ್ಸಾಗಿತ್ತು. ಹಲವು ವರ್ಷಗಳಿಂದ ವಿವಿಧ…
ಚಾಮರಾಜನಗರ: ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲ್ಲೂಕುಗಳ ಗ್ರಾಮಸ್ಥರಲ್ಲಿ ವ್ಯಾಘ್ರಗಳ ಆತಂಕ ಮನೆ ಮಾಡಿದೆ. ಒಟ್ಟಿಗೆ ಐದು ಹುಲಿಗಳು ರಸ್ತೆಯಲ್ಲಿ ಹಾದು…