ಚಿತ್ರ ಮಂಜರಿ

ಮೈಸೂರು: ವಾಸುಕಿ ಗಾಯನ ‘ವೈಭವ’

ಮೈಸೂರು: ಅರಮನೆ ಆವರಣದಲ್ಲಿ ಅರಮನೆ ಮಂಡಳಿ ವತಿಯಿಂದ ಆಯೋಜಿಸಿರುವ ಯುಗಾದಿ ಸಂಗೀತೋತ್ಸವದಲ್ಲಿ ಶುಕ್ರವಾರ ಗಾಯಕ ವಾಸುಕಿ ವೈಭವ್ ಅವರು ಸಹೃದಯರನ್ನು ಸಂಗೀತದ ಅಲೆಯಲ್ಲಿ ತೇಲಿಸಿದರು.

ಗಾಯನದ ಮೋಡಿಗೆ ಯುವ ಸಮೂಹ ಹುಚ್ಚೆದ್ದು ಕುಣಿದರೆ, ಹಿರಿಯರು ಮಾಧುರ್ಯ ಗೀತೆಗಳಿಗೆ ಮನಸೋತರು.

ಸಂಗೀತೋತ್ಸವದ ಕಡೇ ದಿನವಾದ ಶುಕ್ರವಾರ ವಾಸುಕಿ ವೈವಿಧ್ಯದ ಗಾನ ಲಹರಿ ಹರಿಸಿದರು. ಮಾತುಗಳಲ್ಲೂ ಮೋಡಿ ಮಾಡಿದ್ದು ವಿಶೇಷ!

‘ಮೈಸೂರು ಎಂದರೆ ಸಾಂಸ್ಕೃತಿಕ ನಗರಿ. ಇಲ್ಲಿ ರಂಗಾಯಣ ಮತ್ತು ನಮ್ಮ ಗುರುಗಳಾದ ಬಿ.ವಿ.ಕಾರಂತರು ನೆನೆಪಾಗುತ್ತಾರೆ’ ಎನ್ನುತ್ತಲೇ ನಾಟಕಕಾರ ಗಿರೀಶ್ ಕಾರ್ನಾಡ್ ಅವರ ‘ಹಯವದನ’ ನಾಟಕದ ಬಿ.ವಿ.ಕಾರಂತ ಸಂಗೀತ ನೀಡಿರುವ ‘ಗಜವದನ ಹೇರಂಭ’ ರಂಗಗೀತೆ ಹಾಡುವ ಮೂಲಕ ಎಲ್ಲರನ್ನು ಸೆಳೆದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ‘ಅರರೇ ಅವಳ ನಗೆಯಾ’… ಎಂದು ಹಾಡಲು ಆರಂಭಿಸುತ್ತಿದ್ದಂತೆ ಯುವ ಸಮೂಹ ಶಿಳ್ಳೆ, ಚಪ್ಪಾಳೆಗಳ ಮಳೆ ಸುರಿಸಿತು. ನಂತರ ಶಂಕರ್ ನಾಗ್ ನಟಿಸಿರುವ ಎಸ್.ಪಿ.ಸಾಂಗ್ಲಿಯಾನ ಚಿತ್ರದ ‘ಗೀತಾಂಜಲಿ’ ಹಾಡಿ ಸಮ್ಮೋಹನಗೊಳಿಸಿದರು.

ಅರಮನೆಯ ಆವರಣದಲ್ಲಿ ತಂಪಾಗಿ ಬೀಸುತ್ತಿದ್ದ ಗಾಳಿಯ ನಡುವೆ ವಾಸುಕಿ ವೈಭವ್ ತಮ್ಮದೇ ಸಂಗೀತ ನಿರ್ದೇಶನ ಬಡವ ರಾಸ್ಕಲ್, ಕರಿಮಾಯಿ ನಾಟಕ, ಇನ್ನೇನೂ ಬೇಕಾಗಿದೆ ಸೇರಿದಂತೆ 10ಕ್ಕೂ ಹೆಚ್ಚು ಗೀತೆಗಳನ್ನು ಹಾಡುವ ಮೂಲಕ ಎಲ್ಲರನ್ನು ಸಂಗೀತ ಲೋಕಕ್ಕೆ ಕರೆದೊಯ್ದರು. ಗಾಯಕರಾದ ದರ್ಶನ್ ನಾರಾಯಣ್, ಭರತ್ ನಾಯಕ್, ಮಾಧುರಿ ಶೇಷಾದ್ರಿ ಸಾಥ್ ನೀಡಿದರು.

ಇದಕ್ಕೂ ಮೊದಲು ಕರ್ನಾಟಕ ಪೊಲೀಸ್‌ ಬ್ಯಾಂಡ್ ತಂಡವೂ ಬ್ಯಾಂಡ್ ಮಾಸ್ಟರ್ ಮಂಜುನಾಥ್ ಅವರ ಸಾರಥ್ಯದಲ್ಲಿ ಸ್ಲಂ ಡಾಗ್ ಮಿಲೇನಿಯರ್ ಚಿತ್ರದ ಜೈ ಹೋ.. ಮೇಡ್‌ ಇನ್‌ ಇಂಡಿಯಾ.. ಮತ್ತು ಶಂಕರ್‌ ನಾಗ್‌ ಚಿತ್ರದ ನೋಡಿ ಸ್ವಾಮಿ ನಾವಿರೋದು ಹೀಗೆ.. ಗೀತೆಗಳನ್ನು ನುಡಿಸಿದರು.

andolanait

Recent Posts

ಡಿ.ಕೆ.ಶಿವಕುಮಾರ್‌ ನಿಯತ್ತಿನ ಸೈನಿಕ: ಶಾಸಕ ರವಿಕುಮಾರ್‌ ಗಣಿಗ ಬ್ಯಾಟಿಂಗ್‌

ಮಂಡ್ಯ: ಸಚಿವ ಎಚ್‌.ಸಿ.ಮಹದೇವಪ್ಪ ಅವರ ಬೀದಿನಾಯಿ ಹೇಳಿಕೆ ಕುರಿತು ಸಾಕಷ್ಟು ಚರ್ಚೆಯಾಗುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್‌ ಶಾಸಕ…

29 mins ago

ಸಾಗರದಲ್ಲಿ ಭಾರತದ ಸಾರ್ವಭೌಮತ್ವ: ವಿಶಾಖಪಟ್ಟಣಂನಲ್ಲಿ ರಾಷ್ಟ್ರಪತಿ ಮುರ್ಮುರಿಂದ ನೌಕಾಶಕ್ತಿ ಪ್ರದರ್ಶನ ವೀಕ್ಷಣೆ

ವಿಶಾಖಪಟ್ಟಣಂ: ಭಾರತೀಯ ನೌಕಾಪಡೆಯ ವಿಶ್ವದ ವಿವಿಧ ದೇಶಗಳ ನೌಕಾಪಡೆಗಳೊಂದಿಗೆ ಸೇರಿ ತನ್ನ ಅಪ್ರತಿಮ ಶೌರ್ಯ ಹಾಗೂ ಸನ್ನದ್ಧತೆಯನ್ನು ಬುಧವಾರ ವಿಶಾಖಪಟ್ಟಣಂ…

46 mins ago

ಗುಂಡ್ಲುಪೇಟೆ| ಹುಲಿ ದಾಳಿಗೆ ಹಸು ಸಾವು

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು  ಗುಂಡ್ಲುಪೇಟೆ: ತಾಲ್ಲೂಕಿನ ಮಾದಾಪಟ್ಟಣ ಗ್ರಾಮದಲ್ಲಿ ಹಸುವಿನ ಮೇಲೆ ಹುಲಿ‌ ದಾಳಿ ನಡೆಸಿ ಕೊಂದು…

1 hour ago

ರಾಜ್ಯ ಸರ್ಕಾರಕ್ಕೆ ಮಾಧ್ಯಮಗಳನ್ನು ಕಂಡರೆ ನಡುಕವೇಕೆ?: ಜೆಡಿಎಸ್‌ ಲೇವಡಿ

ಬೆಂಗಳೂರು: ವಿಧಾನಸೌಧಕ್ಕೆ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಜೆಡಿಎಸ್‌ ಲೇವಡಿ ಮಾಡಿದೆ. ಪ್ರಶ್ನೆ ಕೇಳುವ…

2 hours ago

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ: ಪತ್ರ ವೈರಲ್‌

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರ ಮಾಧ್ಯಮಗಳಿಗೆ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ನಿರ್ಬಂಧ ಹೇರಲಿದೆ. ಈ ಕುರಿತು ಸರ್ಕಾರದ…

2 hours ago

ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆ ಸಂಪನ್ನ: ಎ.ಈ.ರಘು ಸಂತಸ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ…

3 hours ago