ಉತ್ತರ ಭಾರತ ಪ್ರವಾಸದ ವೇಳೆ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದರು ಸೂಪರ್ ಸ್ಟಾರ್ ರಜನಿಕಾಂತ್. ಈ ನಡೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು. ವಯಸ್ಸಿನ ಅಂತರವಿರು ವ್ಯಕ್ತಿಯ ಕಾಲಿಗೆ ಬಿದ್ದದ್ದು ಒಂದು ಕಡೆಯಾಗಿದ್ದರೆ, ತಮಿಳಿನ ಅಸ್ಮಿತೆಯನ್ನೇ ಯೋಗಿ ಪಾದಕ್ಕೆ ಇಟ್ಟಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡಿದ್ದರು. ಅದಕ್ಕೀಯ ರಜನಿ ಉತ್ತರಿಸಿದ್ದಾರೆ.
ಪ್ರವಾಸ ಮುಗಿಸಿಕೊಂಡು ಚೆನ್ನೈಗೆ ವಾಪಸ್ಸಾಗಿರುವ ರಜನಿಕಾಂತ್, ಮಾಧ್ಯಮಗಳ ಜೊತೆ ಮಾತನಾಡಿ ಯೋಗಿಗಳು, ತಪಸ್ವಿಗಳು, ಮಹಾತ್ಮರು ನನಗಿಂತ ಎಷ್ಟೇ ಚಿಕ್ಕವರಾಗಿದ್ದರೂ, ಅವರ ಕಾಲು ಹಿಡಿದುಕೊಂಡು ಆಶೀರ್ವಾದ ಪಡೆಯುವುದು ನನ್ನ ಅಭ್ಯಾಸ. ಅದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ರಜನಿ ಹೇಳಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಜೈಲರ್ ಸಿನಿಮಾ ಯಶಸ್ಸಿನ ಬೆನ್ನಲ್ಲೇ ರಜನಿಕಾಂತ್ ಟೆಂಪಲ್ ರನ್ ಮಾಡುತ್ತಿದ್ದರು. ಸಿನಿಮಾ ರಿಲೀಸ್ ವೇಳೆ ಅವರು ಹಿಮಾಲಯಕ್ಕೆ ಹಾರಿದ್ದರು. ಅಲ್ಲಿ ಧ್ಯಾನಕ್ಕೆ ಶರಣಾಗಿದ್ದರು. ಅಲ್ಲಿಂದ ಹೊರಟು ಇದೀಗ ಉತ್ತರ ಪ್ರದೇಶದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದ್ದರು. ಅಯೋಧ್ಯಗೆ ತೆರಳಿ ಶ್ರೀರಾಮನ ದರ್ಶನ ಪಡೆದಿದ್ದಾರೆ. ನಿರ್ಮಾಣ ಹಂತದಲ್ಲಿರುವ ದೇವಸ್ಥಾನವನ್ನೂ ಅವರು ವೀಕ್ಷಣೆ ಮಾಡಿದ್ದಾರೆ.
ಈ ವೇಳೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಭೇಟಿಯಾಗಿದ್ದರು. ಅವರ ಕಾಲು ಹಿಡಿದು ನಮಸ್ಕರಿಸಿದ್ದರು. ನಂತರ ಆಗಸ್ಟ್ 19ರಂದು ಜೈಲರ್ ಚಿತ್ರವನ್ನು ಅವರೊಂದಿಗೆ ವೀಕ್ಷಿಸಿದ್ದರು. ಯೋಗಿಯ ಕಾಲು ಹಿಡಿದದ್ದು ಟೀಕೆಗೆ ಗುರಿಯಾಗಿತ್ತು. ಸಖತ್ ಟ್ರೋಲ್ ಕೂಡ ಆಗಿತ್ತು.
ತಲೈವಾ-ಶಿವಣ್ಣ ಕಾಂಬಿನೇಷನ್ ನ ಜೈಲರ್ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ತಲೈವಾ ಸಿನಿಮಾವನ್ನ ಒಪ್ಪಿ ಜನ ಮೆಚ್ಚಿಕೊಂಡಿದ್ದಾರೆ. ಸಿನಿಮಾ ಕಥೆ, ಡೈಲಾಗ್, ಸಾಂಗ್ಸ್ ಎಲ್ಲವೂ ಫ್ಯಾನ್ಸ್‌ಗೆ ಮೋಡಿ ಮಾಡಿದೆ. ಆಗಸ್ಟ್ 10ಕ್ಕೆ ರಿಲೀಸ್ ಆಗಿದ್ದು, ಐನೂರು ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಈ ಮೂಲಕ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.
ಎಚ್.ಡಿ.ಕೋಟೆ : ಪ್ರಭಾವಿಗಳು ಮತ್ತು ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ, ಮುಗ್ಧ ಆದಿವಾಸಿ ಜನರ ೮ ಎಕರೆ ಜಮೀನು ಕಬಳಿಸಲು…
ಮೈಸೂರು : ಸಿಎಆರ್, ಡಿಎಆರ್ ಪೇದೆಗಳ ನೇಮಕಾತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಭಾನುವಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯು ಸುಗಮವಾಗಿ ನಡೆಯಿತು.…
ದೆಹಲಿ : ನೈಋತ್ಯ ದೆಹಲಿಯ ಸತ್ಯ ನಿಕೇತನದಲ್ಲಿ ಇಂದು ಮಧ್ಯಾಹ್ನ ಆರು ಅಂತಸ್ತಿನ ಕಟ್ಟಡ ಕುಸಿದು ಹಲವರು ಅವಶೇಷಗಳಡಿ ಸಿಲುಕಿರುವ…
ಬೆಂಗಳೂರು : ತಮಗೆ ಅಶ್ಲೀಲ ಸಂದೇಶ ಕಳಿಸಿದವರ ವಿರುದ್ಧ ನಟಿ ರಮ್ಯಾ ಅವರು ಕಾನೂನು ಸಮರ ಸಾರಿದ್ದು, ರಾಜಿಯಾಗುವ ಪ್ರಶ್ನೆಯೇ…
ಸಿದ್ದಾಪುರ: ಪಟ್ಟಣದೊಳಗೆ ಭಾನುವಾರ ಬೆಳಗಿನ ಜಾವ ಐದು ಕಾಡಾನೆಗಳು ಸಂಚರಿಸಿರುವ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಿದ್ದಾಪುರದಿಂದ ಮೈಸೂರು ಕಡೆಗೆ…
ಸೋಮವಾರಪೇಟೆ: ಪಟ್ಟಣದ ಎಂ.ಜಿ. ರಸ್ತೆಯಲ್ಲಿರುವ ಎಸ್‌ಬಿಐ ಬ್ಯಾಂಕ್‌ಗೆ ಹೊಂದಿಕೊಂಡಿರುವ ಎಟಿಎಂ ಅನ್ನು ದರೋಡೆ ಮಾಡಲು ಖದೀಮರ ತಂಡವೊಂದು ಯತ್ನಿಸಿರುವ ಘಟನೆ…