ಚಿತ್ರ ಮಂಜರಿ

ಸೀತಾರಾಮ್‌ ನಿರ್ದೇಶನದ ಹೊಸ ಅಧ್ಯಾಯ ಮಯಾಮೃಗ ತೆರೆಗೆ ಬರಲಿದೆ

‘ಮಾಯಾಮೃಗ’ ಮಧ್ಯಾಹ್ನ ಕಳೆದು ಸಂಜೆ ಆಗುತ್ತಿರುವ ಹಾಗೆ ಜನ ಟೀ ಕುಡಿಯೋದನ್ನಾದರೂ ಮರೆತಾರು, ಮಾಯಾಮೃಗ ಸೀರಿಯಲ್ ಮಿಸ್ ಮಾಡಲ್ಲ ಅನ್ನೋ ಕಾಲವೊಂದಿತ್ತು. ಸೀಮಿತ ಧಾರಾವಾಹಿಗಳಷ್ಟೇ ಇದ್ದ ಆ ದಿನಗಳಲ್ಲಿ ಮನೆ ಮನೆಗಳಲ್ಲೂ ಸಂಜೆಯಾಗ್ತಿದ್ದ ಹಾಗೆ ‘ಮಯಾಮೃಗ ಮಾಯಾಮೃಗವೆಲ್ಲಿ… ‘ ಅನ್ನುವ ಶೀರ್ಷಿಕೆ ಗೀತೆಯ ಸೌಂಡ್‌. ಆಗಷ್ಟೇ ಶಾಲೆ ಮುಗಿಸಿ ಬಂದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯೋಮಿತಿಯ ಜನರನ್ನು ಟಿವಿ ಮುಂದೆ ಕೂರಿಸಿದ್ದ ಧಾರಾವಾಹಿ ಇದು. ಬದುಕಿನ ಕಷ್ಟ ಸುಖ, ಪರಂಪರೆ ಆಧುನಿಕತೆಯ ಮುಖಾಮುಖಿ, ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗದ ಜನರ ಮಾನಸಿಕ ತುಮುಲಗಳು ಇವನ್ನೆಲ್ಲ ಚಿಕ್ಕ ಮಕ್ಕಳಿಗೂ ಅರ್ಥ ಆಗೋ ಥರ ಕನ್ವೇ ಮಾಡುವಲ್ಲಿ ಟಿ ಎನ್ ಸೀತಾರಾಂ ಗೆದ್ದಿದ್ದರು. ಲಾಯರ್ ವೃತ್ತಿಯಲ್ಲಿ ಅಂಥಾ ಯಶಸ್ಸು ಸಾಧಿಸಲು ಸಾಧ್ಯವಾದಿದ್ದರೂ ಸೀರಿಯಲ್‌ನಲ್ಲಿ ಸಿಎಸ್‌ಪಿ ಯಾಗಿ ನುರಿತ ಲಾಯರ್ ಪಾತ್ರದಲ್ಲಿ ಮಿಂಚಿದ ಅವರನ್ನು ಒಂದಿಡೀ ಜನರೇಶನ್ ಇಂದು ಮಿಸ್ ಮಾಡುತ್ತಿದೆ. ತಮ್ಮ ಅಭಿಮಾನಿ ಬಳಗಕ್ಕೆ ಅಂದು ನಿರಾಸೆ ಮಾಡದಿದ್ದ ಟಿಎನ್‌ಎಸ್‌ ಇದೀಗ ಮತ್ತೆ ಹೊಸ ಮಾಯಾಮೃಗದ ಮೂಲಕ ವೀಕ್ಷಕರಿಗೆ ಮನೋರಂಜನೆ ನೀಡುವ ಜೊತೆಗೆ ಚಿಂತನೆಗೆ ಹಚ್ಚುವುದಕ್ಕೂ ಸಜ್ಜಾಗುತ್ತಿದ್ದಾರೆ.

‘ಮಾಯಾಮೃಗ’ ಧಾರಾವಾಹಿಯನ್ನು ಟಿ. ಎನ್. ಸೀತಾರಾಮ್ ಜೊತೆಗೆ ಪಿ. ಶೇಷಾದ್ರಿ ಮತ್ತು ನಾಗೇಂದ್ರ ಶಾ ನಿರ್ದೇಶಿಸಿದ್ದರು. ಇದನ್ನು ಮೊದಲ ಬಾರಿಗೆ ಡಿಡಿ ಚಂದನ ಟಿವಿ ವಾಹಿನಿಯಲ್ಲಿ 1998 ರಲ್ಲಿ ಪ್ರಸಾರ ಮಾಡಲಾಯಿತು. ಮತ್ತು ಇದು ಮಾರ್ಚ್ 10, 2014 ರಂದು ಝೀ ಕನ್ನಡ ದೂರದರ್ಶನ ವಾಹಿನಿಯಲ್ಲಿ ಮತ್ತೆ ಪ್ರಸಾರವಾಗಿತ್ತು. ಅಮೇಲೆ ಭೂಮಿಕಾ ಓಟಿಟಿಯಲ್ಲಿ ಬಿಡುಗಡೆಯಾಯ್ತು. ಜನ ಅಂದು ನೋಡಿದ್ದ ನೆನಪಲ್ಲೇ ಈ ಸೀರಿಯಲ್‌ನ ಮತ್ತೆ ಮತ್ತೆ ನೋಡಿದರು. ಆದರೆ ಅದದನ್ನೇ ಎಷ್ಟು ಸಲ ನೋಡಲು ಸಾಧ್ಯ, ಹಾಗಾಗಿ ಹೊಸ ಮಾಯಾಮೃಗದ ಸೃಷ್ಟಿಗೆ ಟಿ ಎನ್ ಸೀತಾರಾಮ್ ಮುಂದಾಗಿದ್ದಾರೆ.

ಈ ಧಾರಾವಾಹಿಯ ಯಶಸ್ಸಿನಿಂದ ಟಿ ಎನ್ ಸೀತಾರಾಮ್ ಮನೆ ಮಾತಾದರು. ಮುಂದೆಯೂ ಅವರದೇ ಸ್ಟೈಲಿನಲ್ಲಿ ಒಂದಿಷ್ಟು ಸೀರಿಯಲ್‌ಗಳನ್ನು ನಿರ್ದೇಶಿಸಿದರು. ಅವರ ನಿರ್ದೇಶನದ ಕೊನೆಯ ಧಾರಾವಾಹಿ ‘ಮಗಳು ಜಾನಕಿ’. ನಂತರ ಅವರು ವಿದ್ಯಾಭೂಷಣರ ಮಗಳನ್ನು ಮುಖ್ಯ ಪಾತ್ರಕ್ಕೆ ತಂದು ಸೀರಿಯಲ್‌ ಒಂದನ್ನು ನಿರ್ದೇಶಿಸಲು ಪ್ಲಾನ್ ಮಾಡಿದ್ದರು. ಆದರೆ ಕೋವಿಡ್ ಕಾರಣಕ್ಕೆ ಆ ಸೀರಿಯಲ್ ತೆರೆಗೆ ಬರಲೇ ಇಲ್ಲ. ಇದೀಗ ಮತ್ತೆ ಮಾಯಾಮೃಗದ ಹಿಂದೆ ಬಿದ್ದಿದ್ದಾರೆ.

andolana

Recent Posts

ಸಿಡಬ್ಲ್ಯುಎಂಎ ಆದೇಶ ಪಾಲಿಸಿ ; ಕರ್ನಾಟಕಕ್ಕೆ ಸುಪ್ರೀಂ ಸೂಚನೆ

ಹೊಸದಿಲ್ಲಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವ ಸಂಬಂಧದ ವಿವಾದ ಮತ್ತೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಾವೇರಿ ನೀರು ನಿರ್ವಹಣಾ…

1 min ago

ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಎಚ್1ಎನ್1‌ ಸೋಂಕು ದೃಢ

ಬೆಂಗಳೂರು : ನಗರದ ಖಾಸಗಿ ಶಾಲೆಯೊಂದರ ಇಬ್ಬರು ಶಿಕ್ಷಕರಿಗೆ ಹೆಚ್1ಎನ್1 (H1N1) ದೃಢಪಟ್ಟಿದ್ದು ಆತಂಕ ಮೂಡಿಸಿದೆ. ಸದ್ಯಕ್ಕೆ ಹೈಸ್ಕೂಲ್ ಮಾತ್ರ…

32 mins ago

ವಿಧಾನಸಭೆಯಲ್ಲಿ ಹನೂರು ಎನ್‌ಕೌಂಟರ್‌ ಸದ್ದು: ಗದ್ದಲ ಕೋಲಾಹಲ

ಬೆಂಗಳೂರು: ವಿಧಾನಸಭೆಯ ಕಲಾಪದಲ್ಲಿಂದು ಹನೂರು ಎನ್‌ಕೌಂಟರ್‌ ಪ್ರಕರಣ ಭಾರೀ ಚರ್ಚೆಗೆ ಕಾರಣವಾಯಿತು. ಕಲಾಪ ಆರಂಭವಾದ ತಕ್ಷಣವೇ ವಿಷಯ ಪ್ರಸ್ತಾಪಿಸಿದ ಆರ್.ಅಶೋಕ್‌,…

5 hours ago

ಕಾರ್ಮಿಕರ ಮೇಲೆ ಕಾಡಾನೆ ದಾಳಿ: ಒಬ್ಬ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಕೊಡಗು: ಸಿದ್ದಾಪುರ ವ್ಯಾಪ್ತಿಯ ಶಿಲ್ಪ ಎಸ್ಟೇಟ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ಬಂಗಾಳ ಮೂಲದ…

7 hours ago

ಕಾವೇರಿ ವನ್ಯಜೀವಿಧಾಮದಲ್ಲಿ ಎನ್‌ಕೌಂಟರ್: ಮೃತ 3 ಕುಟುಂಬಗಳಿಗೆ ಶಾಸಕ ಎಂ.ಆರ್. ಮಂಜುನಾಥ್ 15 ಲಕ್ಷ ಪರಿಹಾರ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕಾವೇರಿ ವನ್ಯಜೀವಿಧಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದ…

8 hours ago

ಹನೂರಿನಲ್ಲಿ ಮೂವರ ಎನ್‌ಕೌಂಟರ್ ಪ್ರಕರಣ: ಘಟನಾ ಸ್ಥಳಕ್ಕೆ ತನಿಖಾ ತಂಡ ಭೇಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ನಡೆದ ಎನ್‌ಕೌಂಟರ್ ಘಟನೆಯ…

9 hours ago