‘ಮಾಯಾಮೃಗ’ ಮಧ್ಯಾಹ್ನ ಕಳೆದು ಸಂಜೆ ಆಗುತ್ತಿರುವ ಹಾಗೆ ಜನ ಟೀ ಕುಡಿಯೋದನ್ನಾದರೂ ಮರೆತಾರು, ಮಾಯಾಮೃಗ ಸೀರಿಯಲ್ ಮಿಸ್ ಮಾಡಲ್ಲ ಅನ್ನೋ ಕಾಲವೊಂದಿತ್ತು. ಸೀಮಿತ ಧಾರಾವಾಹಿಗಳಷ್ಟೇ ಇದ್ದ ಆ ದಿನಗಳಲ್ಲಿ ಮನೆ ಮನೆಗಳಲ್ಲೂ ಸಂಜೆಯಾಗ್ತಿದ್ದ ಹಾಗೆ ‘ಮಯಾಮೃಗ ಮಾಯಾಮೃಗವೆಲ್ಲಿ… ‘ ಅನ್ನುವ ಶೀರ್ಷಿಕೆ ಗೀತೆಯ ಸೌಂಡ್. ಆಗಷ್ಟೇ ಶಾಲೆ ಮುಗಿಸಿ ಬಂದ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯೋಮಿತಿಯ ಜನರನ್ನು ಟಿವಿ ಮುಂದೆ ಕೂರಿಸಿದ್ದ ಧಾರಾವಾಹಿ ಇದು. ಬದುಕಿನ ಕಷ್ಟ ಸುಖ, ಪರಂಪರೆ ಆಧುನಿಕತೆಯ ಮುಖಾಮುಖಿ, ಮಧ್ಯಮ ವರ್ಗ, ಮೇಲ್ಮಧ್ಯಮ ವರ್ಗದ ಜನರ ಮಾನಸಿಕ ತುಮುಲಗಳು ಇವನ್ನೆಲ್ಲ ಚಿಕ್ಕ ಮಕ್ಕಳಿಗೂ ಅರ್ಥ ಆಗೋ ಥರ ಕನ್ವೇ ಮಾಡುವಲ್ಲಿ ಟಿ ಎನ್ ಸೀತಾರಾಂ ಗೆದ್ದಿದ್ದರು. ಲಾಯರ್ ವೃತ್ತಿಯಲ್ಲಿ ಅಂಥಾ ಯಶಸ್ಸು ಸಾಧಿಸಲು ಸಾಧ್ಯವಾದಿದ್ದರೂ ಸೀರಿಯಲ್‌ನಲ್ಲಿ ಸಿಎಸ್‌ಪಿ ಯಾಗಿ ನುರಿತ ಲಾಯರ್ ಪಾತ್ರದಲ್ಲಿ ಮಿಂಚಿದ ಅವರನ್ನು ಒಂದಿಡೀ ಜನರೇಶನ್ ಇಂದು ಮಿಸ್ ಮಾಡುತ್ತಿದೆ. ತಮ್ಮ ಅಭಿಮಾನಿ ಬಳಗಕ್ಕೆ ಅಂದು ನಿರಾಸೆ ಮಾಡದಿದ್ದ ಟಿಎನ್‌ಎಸ್ ಇದೀಗ ಮತ್ತೆ ಹೊಸ ಮಾಯಾಮೃಗದ ಮೂಲಕ ವೀಕ್ಷಕರಿಗೆ ಮನೋರಂಜನೆ ನೀಡುವ ಜೊತೆಗೆ ಚಿಂತನೆಗೆ ಹಚ್ಚುವುದಕ್ಕೂ ಸಜ್ಜಾಗುತ್ತಿದ್ದಾರೆ.
‘ಮಾಯಾಮೃಗ’ ಧಾರಾವಾಹಿಯನ್ನು ಟಿ. ಎನ್. ಸೀತಾರಾಮ್ ಜೊತೆಗೆ ಪಿ. ಶೇಷಾದ್ರಿ ಮತ್ತು ನಾಗೇಂದ್ರ ಶಾ ನಿರ್ದೇಶಿಸಿದ್ದರು. ಇದನ್ನು ಮೊದಲ ಬಾರಿಗೆ ಡಿಡಿ ಚಂದನ ಟಿವಿ ವಾಹಿನಿಯಲ್ಲಿ 1998 ರಲ್ಲಿ ಪ್ರಸಾರ ಮಾಡಲಾಯಿತು. ಮತ್ತು ಇದು ಮಾರ್ಚ್ 10, 2014 ರಂದು ಝೀ ಕನ್ನಡ ದೂರದರ್ಶನ ವಾಹಿನಿಯಲ್ಲಿ ಮತ್ತೆ ಪ್ರಸಾರವಾಗಿತ್ತು. ಅಮೇಲೆ ಭೂಮಿಕಾ ಓಟಿಟಿಯಲ್ಲಿ ಬಿಡುಗಡೆಯಾಯ್ತು. ಜನ ಅಂದು ನೋಡಿದ್ದ ನೆನಪಲ್ಲೇ ಈ ಸೀರಿಯಲ್‌ನ ಮತ್ತೆ ಮತ್ತೆ ನೋಡಿದರು. ಆದರೆ ಅದದನ್ನೇ ಎಷ್ಟು ಸಲ ನೋಡಲು ಸಾಧ್ಯ, ಹಾಗಾಗಿ ಹೊಸ ಮಾಯಾಮೃಗದ ಸೃಷ್ಟಿಗೆ ಟಿ ಎನ್ ಸೀತಾರಾಮ್ ಮುಂದಾಗಿದ್ದಾರೆ.
ಈ ಧಾರಾವಾಹಿಯ ಯಶಸ್ಸಿನಿಂದ ಟಿ ಎನ್ ಸೀತಾರಾಮ್ ಮನೆ ಮಾತಾದರು. ಮುಂದೆಯೂ ಅವರದೇ ಸ್ಟೈಲಿನಲ್ಲಿ ಒಂದಿಷ್ಟು ಸೀರಿಯಲ್‌ಗಳನ್ನು ನಿರ್ದೇಶಿಸಿದರು. ಅವರ ನಿರ್ದೇಶನದ ಕೊನೆಯ ಧಾರಾವಾಹಿ ‘ಮಗಳು ಜಾನಕಿ’. ನಂತರ ಅವರು ವಿದ್ಯಾಭೂಷಣರ ಮಗಳನ್ನು ಮುಖ್ಯ ಪಾತ್ರಕ್ಕೆ ತಂದು ಸೀರಿಯಲ್ ಒಂದನ್ನು ನಿರ್ದೇಶಿಸಲು ಪ್ಲಾನ್ ಮಾಡಿದ್ದರು. ಆದರೆ ಕೋವಿಡ್ ಕಾರಣಕ್ಕೆ ಆ ಸೀರಿಯಲ್ ತೆರೆಗೆ ಬರಲೇ ಇಲ್ಲ. ಇದೀಗ ಮತ್ತೆ ಮಾಯಾಮೃಗದ ಹಿಂದೆ ಬಿದ್ದಿದ್ದಾರೆ.
ಮಂಡ್ಯ: ಪಾರ್ಸೆಲ್ ಕೊಡುವ ನೆಪದಲ್ಲಿ ಬಂದು ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಡ್ಯದ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ. ರಮೇಶ್…
ಬೆಂಗಳೂರು: ನಿವೃತ್ತ ಸಾರಿಗೆ ನೌಕರರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಗ್ರಾಚ್ಯುಟಿ ಹಣವನ್ನು ಬಿಡುಗಡೆ ಮಾಡಿದೆ. ಗ್ರಾಚ್ಯುಟಿ ಮತ್ತು ಗಳಿಕೆ…
ಬೆಂಗಳೂರು: ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆಯನ್ನು ಸಿಎಂ ಸಿದ್ದರಾಮಯ್ಯ ದುರುಪಯೋಗಪಡಿಸಿಕೊಂಡಿದ್ದಾರೆ…
ಹೈದರಾಬಾದ್: ಡಿಸೆಂಬರ್.4ರಂದು ಸಂಧ್ಯಾ ಥಿಯೇಟರ್ ಬಳಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯೋರ್ವರು ಮೃತಪಟ್ಟಿದ್ದು ದುರದೃಷ್ಟಕರ ಎಂದು ನಟ ಅಲ್ಲು ಅರ್ಜುನ್ ಬೇಸರ…
ಬೆಂಗಳೂರು: ಎರಡು ಕಾರು, ಎರಡು ಲಾರಿ ಹಾಗೂ ಶಾಲಾ ಬಸ್ ನಡುವಿನ ಸರಣಿ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ…
ಬೆಂಗಳೂರು: ವಕ್ಫ್ ಮಂಡಳಿಯು ಹಿಂದೂ ಹಾಗೂ ರೈತರ ಆಸ್ತಿ ಕಬಳಿಕೆ ಮಾಡುತ್ತಿರುವ ಬಗ್ಗೆ ಸದನದಲ್ಲಿ ದಾಖಲೆ ಸಮೇತ ಮಾತನಾಡಿದ್ದು, ಈ…