ಕಿರುತೆರೆ ವೀಕ್ಷಕರಿಗೆ ಸತತವಾಗಿ ವಿವಿಧ ಧಾರಾವಾಹಿ, ವಾರಾಂತ್ಯದಲ್ಲಿ ವಿಶೇಷ ಚಲನಚಿತ್ರಗಳು ಹಾಗೂ ರಿಯಾಲಿಟಿ ಶೋಗಳ ಮೂಲಕ ಮನರಂಜನೆ ನೀಡುತ್ತಾ ಬರುತ್ತಿರುವ ಕನ್ನಡದ ಅತಿ ಹೆಚ್ಚು ಟಿಆರ್‌ಪಿ ಗಳಿಸುವ ಮನರಂಜನಾ ವಾಹಿನಿ ಜೀ ಕನ್ನಡ ಇತ್ತೀಚೆಗಷ್ಟೆ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮವನ್ನು ನಡೆಸಿದೆ.
ಈ ಕಾರ್ಯಕ್ರಮದಲ್ಲಿ ತಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳ ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಕಲಾವಿದರ ಹಾಗೂ ಧಾರಾವಾಹಿಗಳನ್ನು ಆರಿಸಿ ಪ್ರಶಸ್ತಿಯನ್ನು ನೀಡಿ ಪ್ರಶಂಸಿಸಲಾಗಿದೆ. ಇನ್ನು ಕಳೆದ ಕೆಲ ದಿನಗಳ ಹಿಂದೆ ವೀಕ್ಷಕರಿಗೆ ತಮ್ಮ ನೆಚ್ಚಿನ ಕಲಾವಿದರು ಹಾಗೂ ಕಾರ್ಯಕ್ರಮಗಳಿಗೆ ವೋಟ್ ಮಾಡಲು ಜೀ ವಾಹಿನಿ ವೋಟ್ ಪೋಲ್ ತೆರೆದಿತ್ತು.
ಹೀಗೆ ನಡೆದ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಯಾವ ಯಾವ ಕಲಾವಿದರು ಹಾಗೂ ಧಾರಾವಾಹಿಗಳಿಗೆ ಪ್ರಶಸ್ತಿ ದಕ್ಕಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ನೆಚ್ಚಿನ ನಾಯಕ ನಟ- ಗೌತಮ್. ಅಮೃತಧಾರೆ
ಜೀ ಕನ್ನಡ ವರ್ಷದ ಉದಯೋನ್ಮುಖ ತಾರೆ- ಸಿಹಿ, ಸೀತಾ ರಾಮ ಧಾರಾವಾಹಿ
ಜನಪ್ರಿಯ ನಾಯಕ ನಟ- ಶ್ರೀರಾಮ, ಸೀತಾ ರಾಮ ಸೀರಿಯಲ್
ನೆಚ್ಚಿನ ಸೊಸೆ- ಲೀಲಾ, ಹಿಟ್ಲರ್ ಕಲ್ಯಾಣ ಸೀರಿಯಲ್
ನೆಚ್ಚಿನ ಹಾಸ್ಯ ಕಲಾವಿದ- ಆನಂದ್, ಅಮೃತಧಾರೆ ಸೀರಿಯಲ್
ನೆಚ್ಚಿನ ಸಹೋದರಿ- ಸುಮ, ಸ್ನೇಹಾ, ಸಹನಾ, ಪುಟ್ಟಕ್ಕನ ಮಕ್ಕಳು ಸೀರಿಯಲ್
ನೆಚ್ಚಿನ ಸ್ಟೈಲ್ ಐಕಾನ್ ಫೀಮೇಲ್- ಮಹಿಮಾ, ಅಮೃತಧಾರೆ ಸೀರಿಯಲ್
ಜನಪ್ರಿಯ ನಾಯಕ- ಕಂಠಿ, ಪುಟ್ಟಕ್ಕನ ಮಕ್ಕಳು ಸೀರಿಯಲ್
ನೆಚ್ಚಿನ ಸ್ನೇಹಿತ- ಅಶೋಕ, ಸೀತಾ ರಾಮ ಸೀರಿಯಲ್
ನೆಚ್ಚಿನ ರಿಯಾಲಿಟಿ ಶೋ- ಡಾನ್ಸ್ ಕರ್ನಾಟಕ ಡಾನ್ಸ್
ನೆಚ್ಚಿನ ನಾಯಕ ನಟ- ಶಿವಪ್ರಸಾದ್, ಭೂಮಿಗೆ ಬಂದ ಭಗವಂತ
ನೆಚ್ಚಿನ ಸಹೋದರ- ಜೀವನ್, ಅಮೃತಧಾರೆ
ನೆಚ್ಚಿನ ಅತ್ತೆ- ಸೀತಮ್ಮ, ಸತ್ಯ ಸೀರಿಯಲ್
ನೆಚ್ಚಿನ ಸೊಸೆ- ಸತ್ಯ, ಸತ್ಯ ಸೀರಿಯಲ್
ಜನಪ್ರಿಯ ಧಾರಾವಾಹಿ- ಸೀತಾರಾಮ
ನೆಚ್ಚಿನ ಆಂಕರ್- ಕುರಿ ಪ್ರತಾಪ್
ನೆಚ್ಚಿನ ಜೋಡಿ- ಕಂಠಿ- ಸ್ನೇಹಾ, ಪುಟ್ಟಕ್ಕನ ಮಕ್ಕಳು
ನೆಚ್ಚಿನ ಮಾವ- ದತ್ತ, ಶ್ರೀರಸ್ತು ಶುಭಮಸ್ತು
ಜೀ ಕನ್ನಡದ ಹಿರಿಯ ಸದಸ್ಯ- ಆನಂದ ಗುರೂಜಿ, ಮಹರ್ಷಿವಾಣಿ
ಜನಪ್ರಿಯ ನಾಯಕ ನಟಿ- ಭೂಮಿಕಾ, ಅಮೃತಧಾರೆ
ನೆಚ್ಚಿನ ಅಳಿಯ- ಕಾರ್ತಿಕ್, ಸತ್ಯ
ಜೀ ಕನ್ನಡದ ಹೆಮ್ಮೆ- ಉಮಾಶ್ರೀ, ಪುಟ್ಟಕ್ಕನ ಮಕ್ಕಳು
ನೆಚ್ಚಿನ ಧಾರಾವಾಹಿ- ಪುಟ್ಟಕ್ಕನ ಮಕ್ಕಳು
ಜನಪ್ರಿಯ ನಾಯಕಿ ನಟಿ- ಸೀತಾ, ಸೀತಾ ರಾಮ
ನೆಚ್ಚಿನ ಆಂಕರ್- ಶ್ವೇತಾ ಚೆಂಗಪ್ಪ
ಜನಪ್ರಿಯ ಆಂಕರ್- ಅನುಶ್ರೀ
ನೆಚ್ಚಿನ ನಾಯಕ ನಟಿ- ತುಳಸಿ, ಶ್ರೀರಸ್ತು ಶುಭಮಸ್ತು
ನೆಚ್ಚಿನ ನಾಯಕ ನಟಿ- ಗಿರಿಜಾ, ಭೂಮಿಗೆ ಬಂದ ಭಗವಂತ
ಜನಪ್ರಿಯ ಜೋಡಿ- ವೇದಾಂತ್ ಅಮೂಲ್ಯ, ಗಟ್ಟಿಮೇಳ
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…