ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಸರಣಿ ಸಿನಿಮಾಗಳು ರಿಲೀಸ್ ಆಗಿ ಹಲವು ವರ್ಷಗಳೇ ಕಳೆದಿವೆ. ಆದರೂ, ಅದರ ಕ್ರೇಜ್ ಇನ್ನೂ ನಿಂತಿಲ್ಲ. ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಕಮಾಯಿ ಮಾಡಿದವು. ಇದೀಗ ಈ ಎರಡೂ ಚಿತ್ರಗಳು ಜಪಾನ್ ಭಾಷೆಗೆ ಡಬ್ ಆಗಿ ರಿಲೀಸ್ ಆಗುತ್ತಿವೆ.
ಕೆಜಿಎಫ್ 1 ಮತ್ತು ಕೆಜಿಎಫ್ 2 ಎರಡೂ ಸಿನಿಮಾಗಳನ್ನು ಈಗಾಗಲೇ ಜಪಾನ್ ಭಾಷೆಗೆ ಡಬ್ ಮಾಡಿದ್ದು, ಏಕಕಾಲಕ್ಕೆ ಎರಡೂ ಚಿತ್ರಗಳು ಜುಲೈ 14ರಂದು ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ ಜಪಾನ್ ನಲ್ಲಿ ಏಕಕಾಲಕ್ಕೆ ಸರಣಿ ಚಿತ್ರಗಳು ಬಿಡುಗಡೆ ಆಗುತ್ತಿರುವುದು ವಿಶೇಷ. ಈಗಾಗಲೇ ಈ ಕುರಿತು ಜಪಾನ್ ನಲ್ಲಿ ಪ್ರಚಾರ ಕಾರ್ಯ ಕೂಡ ಶುರು ಮಾಡಲಾಗಿದೆ. ಕೆಜಿಎಫ್ 1 ಸಿನಿಮಾ 91 ಶೋಗಳು ಹಾಗೂ ಕೆಜಿಎಫ್ 2 ಸಿನಿಮಾದ 85 ಶೋಗಳು ಮುಂಗಡವಾಗಿ ಈಗಾಗಲೇ ಬುಕ್ ಆಗಿವೆ.
ಕೆಜಿಎಫ್ ಚಿತ್ರಗಳ ಮೂಲಕ ಪ್ಯಾನ್ ಇಂಡಿಯಾ ನೋಡುಗರನ್ನು ತಲುಪಿದ್ದರು ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಟ ಯಶ್. ಕೆಜಿಎಫ್ 1 ಮಾಡಿದ ಮೋಡಿಯೇ ಕೆಜಿಎಫ್ 2 ಚಿತ್ರಕ್ಕೆ ಸಾಕಷ್ಟು ಪ್ಲಸ್ ಪಾಯಿಂಟ್ ಆಯಿತು. ಮೊದಲ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ತಂದುಕೊಟ್ಟ ಹಣದ ಎರಡರಷ್ಟು ಪಾರ್ಟ್ 2 ಮಾಡಿತು. ಹೀಗಾಗಿ ಎರಡೂ ಚಿತ್ರಗಳ ಮೂಲಕ ಕೇವಲ ದೇಶದಲ್ಲಿ ಮಾತ್ರವಲ್ಲ, ವಿದೇಶದಲ್ಲೂ ಕನ್ನಡ ಚಿತ್ರಗಳಿಗೆ ಬೇಡಿಕೆ ಬಂತು.
ಆರ್.ಆರ್.ಆರ್ ಸಿನಿಮಾದ ನಂತರ ದಕ್ಷಿಣದ ಮತ್ತೊಂದು ಸಿನಿಮಾ ಜಪಾನ್ ಭಾಷೆಯಲ್ಲಿ ರಿಲೀಸ್ ಆಗುತ್ತಿರುವುದು ಗುರುತಿಸಬೇಕಾದ ಸಂಗತಿ. ಜುಲೈ 14 ರಂದು ರಿಲೀಸ್ ಆಗುತ್ತಿರುವ ಚಿತ್ರಕ್ಕಾಗಿ ಯಶ್ ಜಪಾನ್ ಭಾಷೆಯಲ್ಲೇ ವಿಡಿಯೋವೊಂದನ್ನು ಮಾಡಿ, ಸಿನಿಮಾ ನೋಡುವಂತೆ ಅಲ್ಲಿನ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಆರ್.ಆರ್.ಆರ್ ಸಿನಿಮಾ ಕೂಡ ಈ ಹಿಂದೆ ಜಪಾನ್ ಭಾಷೆಯಲ್ಲಿ ರಿಲೀಸ್ ಆಗಿತ್ತು. ನೂರು ಕೋಟಿಗೂ ಅಧಿಕ ಹಣವನ್ನು ಬಾಕ್ಸ್ ಆಫೀಸಿನಲ್ಲಿ ಲೂಟಿ ಮಾಡಿತ್ತು. ಆ ಸಿನಿಮಾ ಗೆಲುವು ಕಂಡ ಬೆನ್ನಲ್ಲೇ ಕೆಜಿಎಫ್ ಸಿನಿಮಾವನ್ನೂ ಜಪಾನ್ ಭಾಷೆಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಇದೀಗ ನಾಳೆ ಸಿನಿಮಾ ರಿಲೀಸ್ ಆಗುತ್ತಿದೆ.
ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…
ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಶ್ಲೀಲ ಪದ ಬಳಸಿ ನಿಂದಿಸಿರುವ ಆರೋಪದ ಮೇಲೆ ಬಂಧಿತಾರಾಗಿರುವ ಬಿಜೆಪಿ ಎಂಎಲ್ಸಿ ಸಿ.ಟಿ…
ಮೈಸೂರು: ನಗರದ ಅಲ್ ಅನ್ಸಾರ್ ಆಸ್ಪತ್ರೆಯ ವೈದ್ಯರೊಬ್ಬರ ಮೇಲೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಹಲ್ಲೆ ನಡೆಸಿದ ಘಟನೆ ನಡೆದಿದೆ. ಡಾ.…
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…