ಕೆಜಿಎಫ್ ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಯಶ್ ಯಶಸ್ಸಿನ ಉತ್ತುಂಗದಲ್ಲಿ ತೇಲುತ್ತಿದ್ದಾರೆ. ಕೆಜಿಎಫ್ ನಿಂದ ಯಶ್ ಗೆ ದೇಶದಾದ್ಯಂತ ಅಭಿಮಾನಿಗಳು ಸೃಷ್ಟಿಯಾಗಿದ್ದಾರೆ.
ಈ ನಡುವೆ ಬಿ ಟೌನ್ ಬ್ಯೂಟಿ, ಯಶ್ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಬಾಲಿವುಡ್ ಡೈರೆಕ್ಟರ್ ಕರಣ್ ಜೋಹರ್ ನಡೆಸಿಕೊಡುವ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ “ಕಾಫಿ ವಿತ್ ಕರಣ್” ಸೀಸನ್ 8 ರಲ್ಲಿ ಕರೀನಾ ಕಪೂರ್ ಭಾಗಿಯಾಗಿದ್ದಾರೆ. ಕಾರ್ಯಕ್ರಮದಲ್ಲಿ ಕರಣ್ ಅವರು ಕರೀನಾಗೆ ರ್ಯಪಿಡ್ ಫೈರ್ ರೌಂಡ್ ಪ್ರಶ್ನೆಗಳನ್ನು ಕೇಳಿದ್ದಾರೆ.
ಈ ವೇಳೆ ಸೌತ್ ಇಂಡಿಯಾದ ಯಾವ ಸ್ಟಾರ್ ಜೊತೆ ನಟಿಸಬೇಕು ಎಂದು ಕರಣ್ ಜೋಹರ್ ಪ್ರಶ್ನೆಯೊಂದನ್ನು ಕೇಳಿದ್ದು, ಅಲ್ಲು ಅರ್ಜುನ್, ಪ್ರಭಾಸ್, ವಿಜಯ್ ದೇವರಕೊಂಡ, ರಾಮ್ ಚರಣ್ ತೇಜ, ಹಾಗೂ ಯಶ್ ಹೆಸರನ್ನು ಮುಂದಿಟ್ಟಿದ್ದಾರೆ.
ಈ ಪ್ರಶ್ನೆಗೆ ಉತ್ತರಿಸಿರುವ ಬಾಲಿವುಡ್ ನಟಿ ಕರೀನಾ ಕಪೂರ್, ಬೆಬೋ ಎಲ್ಲರೂ ಸೂಪರ್,ಆದರೆ “ನಾನು ಕೆಜಿಎಫ್ ಹುಡುಗಿ”. ನನಗೆ ಕೆಜಿಎಫ್ ಸಿನಿಮಾ ಎಂದರೆ ತುಂಬಾ ಇಷ್ಟ. ನಾನು ಯಶ್ ಜೊತೆ ನಟಿಸಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಕೆಜಿಎಫ್ ಸರಣಿ ಸಿನಿಮಾ ಬಂದು ಹೋಗಿ ಒಂದುವರೆ ವರ್ಷ ಕಳೆದರೂ ಕ್ರೇಜ್ ಮಾತ್ರಾ ಕಮ್ಮಿ ಆಗಿಲ್ಲ. ಈಗಲೂ ಕೂಡ ಕೆಜಿಎಫ್ ಗುಂಗಿನಲ್ಲೇ ಇರುವ ರಾಕಿ ಬಾಯ್ ಅಭಿಮಾನಿಗಳು, “ಯಶ್ 19” ಗಾಗಿ ಕಾಯುತ್ತಿದ್ದಾರೆ. ಸದ್ಯ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ರೆಡಿಯಾಗಿರುವ ಸಲಾರ್ ಸಿನಿಮಾದಲ್ಲಿ ಯಶ್ ಗೆಸ್ಟ್ ಅಪಿಯರೆನ್ಸ್ ನಟಿಸಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದರ ನಡುವೆ ಬಿ ಟೌನ್ ಬ್ಯೂಟಿ ರಾಕಿಂಗ್ ಸ್ಟಾರ್ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ ಅಗಿದೆ.
ಹುಣಸೂರು: ಹಾಡಿಗಳ ಅರಣ್ಯ ಹಕ್ಕು ಸಮಿತಿಗಳ ಪ್ರತಿನಿಧಿಗಳಿಂದ ಅರಣ್ಯ ಪ್ರವೇಶ ಅಭಿಯಾನ ಹುಣಸೂರು: ತಾಲ್ಲೂಕಿನ ಆದಿವಾಸಿಗಳು ೨೦೦೬ರ ಆರಣ್ಯ ಹಕ್ಕು…
ಕೆ.ಬಿ.ರಮೇಶ ನಾಯಕ ೨೦೧೩-೧೪, ೨೦೧೪-೧೫ನೇ ಸಾಲಿನಲ್ಲಿ ಪ್ರವೇಶ ಪಡೆದು ಉತ್ತೀರ್ಣರಾದವರಿಗೆ ಪದವಿ ಪ್ರಮಾಣಪತ್ರ ಮುಕ್ತ ವಿವಿಯ ಇನ್‌ಹೌಸ್‌ನಲ್ಲಿ ಪ್ರವೇಶ ಪಡೆದಿದ್ದವರಿಗೆ…
ಕಡಿಮೆ ದರದಲ್ಲಿ ಊಟ, ತಿಂಡಿ ನೀಡುತ್ತಿದ್ದ ಕ್ಯಾಂಟೀನ್ ಮುಚ್ಚಿದ್ದರಿಂದ ಕೂಲಿ ಕಾರ್ಮಿಕರಿಗೆ, ಬಡವರಿಗೆ ತೊಂದರೆ ಎಚ್.ಡಿ.ಕೋಟೆ: ಅನೇಕ ವಿದ್ಯಾರ್ಥಿಗಳಿಗೆ, ಕೂಲಿ…
ನಾಲ್ವರು ನಿವೃತ್ತ ಪೊಲೀಸ್ ಅಧಿಕಾರಿಗಳ ನೇತೃತ್ವದ ಕ್ಷಿಪ್ರ ಕಾರ್ಯಪಡೆ ರಚನೆಗೆ ಒಪ್ಪಿಗೆ ಮೈಸೂರು: ಶಿಕ್ಷಣ, ಸಾಮಾಜಿಕ, ಆರೋಗ್ಯ ಮತ್ತಿತರ ಸೇವಾ…
ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…