ಕಾಂತಾರ ಸಿನಿಮಾ ಗೆಲುವು ಎಷ್ಟು ಖುಷಿ ಕೊಟ್ಟಿದೆಯೋ ಅಷ್ಟೇ ದುಖಃವನ್ನೂ ಕೊಟ್ಟಿದೆ ಎಂದು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಬೇಸರ ಹೊಹೊರ ಹಾಕಿದ್ದಾರೆ.
ನಂದಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟ ಹಾಗೂ ನಿರ್ದೇಶಕ ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ರಿಷಬ್ ಶೆಟ್ಟಿ, ನನಗೆ ಕಾಂತಾರ ಸಿನಿಮಾದ ಗೆಲುವು ಎಷ್ಟು ಖುಷಿ ಕೊಟ್ಟಿದೆಯೋ ಅಷ್ಟೇ ನೋವನ್ನೂ ಕೂಡ ಕೊಟ್ಟಿದೆ ಎಂದಿದ್ದಾರೆ.
ದೈವಾರಾಧನೆಯ ಬಗ್ಗೆ ಕನ್ನಡ, ತುಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಈಗಿನ ಕಾಲಘಟ್ಟದಲ್ಲಿ ದೈವಾರಾಧನೆಯ ಶ್ರೇಷ್ಠತೆ ಹೇಳುವ ಸಲುವಾಗಿ ಈ ಸಿನಿಮಾ ಮಾಡಿದ್ದೀನಿ. ಆದರೆ ಕಾಂತಾರ ಬಳಿಕ ದೈವದ ಹಾಡಿಗೆ ತಪ್ಪಾಗಿ ರೀಲ್ಸ್ ಮಾಡೋದು ಜಾಸ್ತಿ ಆಗಿದೆ. ದೈವಾರಾಧನೆಗೆ ಅಪಮಾನ ಮಾಡಬೇಡಿ. ಪಂಜುರ್ಲಿ, ದೈವಾರಾಧನೆ, ಕೋಲ ನಮ್ಮ ನೆಲದ ಮೂಲ ಸಂಸ್ಕೃತಿ. ನಮ್ಮ ನೆಲದ ಕಥೆ ಹೇಳಬೇಕು ಅಂತಾ ಈ ಸಿನಿಮಾ ಮಾಡಿದ್ದೀನಿ ದಯವಿಟ್ಟು ದೈವದ ಹಾಡಿಗೆ ತಪ್ಪಾಗಿ ರೀಲ್ಸ್ ಮಾಡಬೇಡಿ ಎಂದು ಕೇಳಿಕೊಂಡಿದ್ದಾರೆ.
ಕಾಂತಾರ 2ನಲ್ಲಿ ಕರಾವಳಿ ಭಾಗದ ಜನರ ದೈವಾರಾಧನೆ ಭೂತಕೋಲದ ಮಹತ್ವವನ್ನು ಸಾರಿ ಹೇಳಿದ್ದ ನಿರ್ದೇಶಕ ರಿಷಬ್ ಶೆಟ್ಟಿ ಇಡೀ ದೇಶದ ಜನತೆಯ ಮನಸ್ಸನ್ನು ಗೆದ್ದಿದ್ದರು. ಈ ಬೃಹತ್ ಗೆಲುವಿನ ಬೆನ್ನಲ್ಲೇ ರಿಷಬ್ ಶೆಟ್ಟಿ ಕಾಂತಾರ ಮೊದಲ ಭಾಗವನ್ನು ಘೋಷಿಸಿ ಭೂತಾರಾಧನೆ, ಪಂಜುರ್ಲಿ ಹಾಗೂ ಗುಳಿಗ ದೇವರುಗಳ ಇತಿಹಾಸವನ್ನು ಬಿಚ್ಚಿಡಲು ಮುಂದಾಗಿದ್ದಾರೆ.
ನವೆಂಬರ್ 27 ರಂದು ಕಾಂತಾರ ಚಾಪ್ಟರ್ ಒಂದರ ಮುಹೂರ್ತ ನೆರವೇರಿತ್ತು. ಕಾಂತಾರ ಚಿತ್ರತಂಡ ವಿಶೇಷವಾದ ಫಸ್ಟ್‌ಲುಕ್ ಟೀಸರ್ ಬಿಡುಗಡೆ ಮಾಡುವ ಮೂಲಕ ಕಾಂತಾರ ಪ್ರೀಕ್ವೆಲ್ ಮೇಲೆ ವೀಕ್ಷರಿಗಿದ್ದ ನಿರೀಕ್ಷೆಯನ್ನು ದುಪ್ಪಟ್ಟಾಗುವಂತೆ ಮಾಡಿತ್ತು.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…