ಚಿತ್ರ ಮಂಜರಿ

ಕೆಜಿಎಫ್‌-2 ಹಿಂದಿಕ್ಕಿದ ಕಾಂತಾರ : ಭಾರತದಲ್ಲೇ ಅತಿ ಹಚ್ಚು ರೇಟಿಂಗ್‌ ಪಡೆದ ಹೆಗ್ಗಳಿಕೆ

ಸ್ಯಾಂಡಲ್‌ವುಡ್‌ ಮಾತ್ರವಲ್ಲದೇ ಭಾರತದಾದ್ಯಂತ ಕಾಂತಾರ ಸಿನಿಮಾದೇ ಹವಾ. ಬೇರೆ ಬೇರೆ ಪರಭಾಷೆಯಿಂದ ಕಾಂತಾರ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಪ್ರೇಕ್ಷಕರ ಜೊತೆಗೆ ಸಿನಿ ಸೆಲೆಬ್ರಿಟಿಗಳು ಸಹ ರಿಷಬ್ ಶೆಟ್ಟಿ ಕಾಂತಾರಗೆ ಫಿದಾ ಆಗಿದ್ದಾರೆ. ಈಗಾಗಲೇ ಅನೇಕ ಸ್ಟಾರ್ಸ್ ಕಾಂತಾರ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಸೆಪ್ಟಂಬರ್ 30ರಂದು ತೆರೆಗೆ ಬಂದ ಬಂದ ಸಿನಿಮಾ ಇಂದಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ರಿಷಬ್ ಶೆಟ್ಟಿ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ರಿಷಬ್ ಶೆಟ್ಟಿಗೆ ಮೆಚ್ಚುಗೆಯ ಮಹಾಪೂರ ಬರುತ್ತಿದೆ. ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ಕಾಂತರಾ ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬಂದಿದೆ.

ರಿಷಬ್ ಕಾಂತಾರ ಮತ್ತೊಂದು ದಾಖಲೆ ಮಾಡಿದೆ. ರೇಟಿಂಗ್ ವಿಚಾರದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಸಿನಿಮಾವನ್ನು ಹಿಂದಿಕ್ಕಿದೆ. ಹೌದು, ಭಾರತದಲ್ಲಿ ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾವಾಗಿ ಹೊರಹೊಮ್ಮಿದೆ ಕಾಂತಾರ.  IMDb ನಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಸಿನಿಮಾವಾಗಿದೆ.  IMDbಯಲ್ಲಿ ಕಾಂತಾರ ಸಿನಿಮಾಗೆ 9.6 ರೇಟಿಂಗ್ ನೀಡಲಾಗಿದೆ. ಅತೀ ಹೆಚ್ಚು ರೇಟಿಂಗ್ ಪಡೆದ ಸಿನಿಮಾ ಇದಾಗಿದೆ. ಅಂದಹಾಗೆ ಕೆಜಿಎಫ್-2 ಸಿನಿಮಾಗೆ 10ಕ್ಕೆ 8.4 ನೀಡಲಾಗಿತ್ತು. ಇನ್ನು ಆರ್ ಆರ್ ಆರ್ ಸಿನಿಮಾಗೆ 10ಕ್ಕೆ 8 ರೇಟಿಂಗ್ ನೀಡಲಾಗಿತ್ತು. ಇದೀಗ ಕಾಂತಾರ ಅತೀ ಹೆಚ್ಚು ರೇಟಿಂಗ್ ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ.

ಕರಾವಳಿಯ ಸಂಸ್ಕೃತಿ, ಆಚಾರ-ವಿಚಾರವನ್ನು ಕಾಂತಾರ ಮೂಲಕ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ರಿಷಬ್. ಕಾಡಿನ ಜೊತೆ ಬದುಕುವ ಜನರು ಮತ್ತು ಸರ್ಕಾರಿ ಅಧಿಕಾರಿಗಳ ಸಂಘರ್ಷ, ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟದ ಬಗ್ಗೆ ರಿಷಬ್ ಶೆಟ್ಟಿ ಕಾಂತಾರ ಮೂಲಕ ಜನರ ಮುಂದಿಟ್ಟಿದ್ದಾರೆ. ಜೊತೆಗೆ ದೈವಾರಾಧನೆ, ಭೂತಕೋಲ ಆಚರಣೆ ಕಾಂತಾರದ ಹೈಲೆಟ್. ಈ ಚಿತ್ರಕ್ಕೆ ರಿಷಬ್ ಶೆಟ್ಟಿ ನಟಿಸುವ ಜೊತೆಗೆ ನಿರ್ದೇಶನದ ಜಬಾವ್ದಾರಿಯನ್ನು ವಹಿಸಿಕೊಂಡಿದ್ದರು. ಅಜನೀಶ್ ಲೋಕಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ಕಿಶೋರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಸಹ ಪಾತ್ರದಲ್ಲಿ ನಟಿಸಿದ್ದಾರೆ. ಸ್ಯಾಂಡಲ್ ವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಕಾಂತಾರ ಮೂಡಿಬಂದಿದೆ.

andolana

Recent Posts

ಪೊಲೀಸರ ಮೇಲೆ ಹಲ್ಲೆ: 20 ಜನರ ವಿರುದ್ಧ ಕೇಸ್‌ ದಾಖಲು

ನವದೆಹಲಿ: ಮುಖ್ಯ ಚುನಾವಾಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ಆಗ್ರಹಿಸಿ ಸಿಜೆಪಿ ನಿನ್ನೆ ಬೃಹತ್‌ ಪ್ರತಿಭಟನೆಗೆ ಕರೆ ನೀಡಿತ್ತು. ಈ…

4 hours ago

ದೇವಿ ಕೃಪೆ ಜನರ ಮೇಲಿರಲಿ, ಜನರ ಕೃಪೆ ನಮ್ಮ ಸರ್ಕಾರದ ಮೇಲಿರಲಿ: ಸಿಎಂ ಡಿಕೆಶಿ

ಮೈಸೂರು:  ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ದೇವಿಯ ಕೃಪೆ…

5 hours ago

ದಸರಾ ಉದ್ಘಾಟಿಸುವಷ್ಟು ದೊಡ್ಡವನು ನಾನಲ್ಲ: ಗವಿಸಿದ್ದೇಶ್ವರ ಶ್ರೀ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಪ್ಪಳದ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ವಿನಮ್ರ ಮಾತುಗಳನ್ನಾಡಿದ್ದಾರೆ. “ದಸರಾ…

6 hours ago

ಮನಸೆಳೆವ ಫಲ ಪುಷ್ಪ ಪ್ರದರ್ಶನ

ಪ್ರಕೃತಿಯೊಂದಿಗೆ ನಂಟನ್ನು ನೆನಪಿಸುವ ಒಂದು ಸುಂದರ ಪಯಣ. 15 ಎಕರೆ ವಿಸ್ತೀರ್ಣ, 70 ಸಸ್ಯಶಾಸ್ತ್ರೀಯ ಜಾತಿಯ 327ಕ್ಕೂ ಹೆಚ್ಚಿನ ವೈವಿಧ್ಯಮಯ…

6 hours ago

ಮೈಸೂರು ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಯುತ್ತಿರುವ 416ನೇ ನಾಡಹಬ್ಬ ದಸರಾ…

8 hours ago

ಓದುಗರ ಪತ್ರ: ಬಳಸಿದ ಅಡುಗೆ ಎಣ್ಣೆ: ಯೋಜನೆ ಪ್ರಶಂಸನೀಯ

ಬಳಸಿದ ಅಡುಗೆ ಎಣ್ಣೆಯನ್ನು ಸರಕಾರವೇ ಸಂಗ್ರಹಿಸಿ ಜೈವಿಕ ಇಂಧನವಾಗಿ (ಬಯೋಡೀಸೆಲ) ಪರಿವರ್ತಿಸುವ ಯೋಜನೆ ಪ್ರಶಂಸನೀಯ. ಪುನರಾವರ್ತಿತ ಎಣ್ಣೆ ಬಳಕೆಯಿಂದ ಹೊರಹೊಮ್ಮುವ…

9 hours ago