ಬೆಂಗಳೂರು : ಗೋವಾದಲ್ಲಿ ನಡೆದ ಸಂತೋಷಂ ಅವಾರ್ಡ್ಸ್ ಫಂಕ್ಷನ್ ನಲ್ಲಿ ರಮೇಶ್ ಅರವಿಂದ್ ಸೇರಿದಂತೆ ಕನ್ನಡ ಕಲಾವಿದರಿಗೆ ಮೆಗಾಸ್ಟಾರ್ ಚಿರಂಜೀವಿ ಪಿಆರ್‌ಒ ಸುರೇಶ್ ಕೊಂಡೇಟಿಯಿಂದ ದೊಡ್ಡ ಅವಮಾನವಾಗಿದೆ ಎಂದು ಆರೋಪ ಕೇಳಿಬಂದ ಹಿನ್ನಲೆಯಲ್ಲಿ ಕನ್ನಡಿಗರಿಗೆ ಪಿಆರ್‌ಓ ಸುರೇಶ್ ಕ್ಷಮೇಯಾಚಿಸಿದ್ದಾರೆ.
ಗೋವಾದಲ್ಲಿ ಸಂತೋಷಂ ಅವಾರ್ಡ್ಸ್ ನೀಡಲು ಕನ್ನಡ ಸ್ಟಾರ್ಸ್‌ಗೆ ಸುರೇಶ್ ಆಹ್ವಾನ ನೀಡಿದ್ದರು ಸುರೇಶ್. ಬಂದಂತಹ ಅತಿಥಿಗಳಿಗೆ ಸರಿಯಾದ ಆತಿಥ್ಯ ನೀಡದೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಕ್ರಾಂತಿ ಸಿನಿಮಾಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವಾರ್ಡ್ ನೀಡುತ್ತಿದ್ದಂತೆ ವೇದಿಕೆಯಲ್ಲಿ ಕರೆಂಟ್ ಆಫ್ ಆಗಿದ್ದು, ಆಯೋಜನೆಯಲ್ಲಿ ಮಹಾ ಎಡವಟ್ಟು ಸಂಭವಿಸಿದೆ.
ಕನ್ನಡಿಗರಿಗೆ ತೆಲುಗು ಆಯೋಜಕರಿಂದ ನಡೆದ ಅವಮಾನವನ್ನು ಸಹಿಸದ ಕನ್ನಡ ಕಲಾವಿದರು ಕಾರ್ಯಕ್ರಮವನ್ನು ಬಾಯ್ಕಾಟ್ ಮಾಡಿ ಬೆಂಗಳೂರಿಗೆ ಮರಳಿದ್ದಾರೆ. ಈ ಅವಾರ್ಡ್ ಶೋನಲ್ಲಿ ರಮೇಶ್ ಅರವಿಂದ್, ಸಪ್ತಮಿ ಗೌಡ, ರಾಜವರ್ಧನ್, ಬಿ ಸುರೇಶ್, ಶೈಲಜಾ ನಾಗ್ ಸೇರಿದಂತೆ ಸುಮಾರು 35 ಮಂದಿ ಕನ್ನಡದ ಸ್ಟಾರ್ಸ್‌ಗಳು ಭಾಗಿಯಾಗಿದ್ದರು ಎನ್ನಲಾಗಿದೆ.
ಗೋವಾದಲ್ಲಿ ನಡೆದ ಸಂತೋಷಂ ಅವಾರ್ಡ್ಸ್ ಫಂಕ್ಷನ್ ನಲ್ಲಿ ನಡೆದ ಘಟನೆ ಮತ್ತು ಎಡವಟ್ಟುಗಳಿಗೆ ಆಯೋಜಕ ಸುರೇಶ್ ಕೊಂಡೇಟಿ ಕ್ಷಮೆ ಕೇಳಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, 1,200 ಮಂದಿ ಸೆಲೆಬ್ರಿಟೀಸ್ಗೆ ಆತಿಥ್ಯ ನೀಡೋದ್ರಲ್ಲಿ ಏರುಪೇರಾಗಿದೆ. ಇದು ಉದ್ದೇಶಪೂರ್ವಕವಾಗಿ ಆಗಿರೋದಲ್ಲ. ದಯವಿಟ್ಟು ಅರ್ಥ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.
ನನಗೆ ನಾಲ್ಕು ಚಿತ್ರರಂಗದ ತಾರೆಯರೆಲ್ಲಾ ಒಂದೇ. ಅದರಲ್ಲಿ ಯಾವುದೇ ತಾರತಮ್ಯ ಇಲ್ಲ. ಕಂಪ್ಲೀಟ್ ಆಗಿ ಇದು ನಾನೊಬ್ಬನೇ ನೀಡ್ತಾ ಬರ್ತಿರೋ ಪ್ರಶಸ್ತಿ ಪ್ರದಾನ ಸಮಾರಂಭ. ಇದಕ್ಕೂ ತೆಲುಗು ಚಿತ್ರರಂಗಕ್ಕೂ ಸಂಬಂಧವಿಲ್ಲ. ನನ್ನಿಂದ ತೊಂದರೆಗೊಳಗಾದ ಪ್ರತಿಯೊಬ್ಬರಿಗೂ ಕ್ಷಮೆ ಯಾಚಿಸುತ್ತೇನೆ ಎಂದು ಸುರೇಶ್ ಕೊಂಡೇಟಿ ತಮ್ಮ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಗುಂಡ್ಲುಪೇಟೆ: ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಈಗ ಬ್ರೇಕ್ ಹಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅರಣ್ಯಾಧಿಕಾರಿಗಳು…
ಬೆಂಗಳೂರು: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿಗಳ ಕೊರತೆಯಿರುವುದು ನಿಜ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.…
ಬೆಂಗಳೂರು: ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ನಟಿ ರನ್ಯಾರಾವ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಡಿಐಆರ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದೇಗೆ ಎಂಬ…
ಹಾಸನ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿ-ಮಗ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಕಬ್ಬಳ್ಳಿ…
ಬೆಂಗಳೂರು: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ…
ಸಮತೋಲನದ ಬಜೆಟ್!... ಮೂಡಿ ಬಂದಿದೆ ಸರ್ವರ ಹಿತ ಏಳ್ಗೆಯ ಕರ್ನಾಟಕದ ಮಾದರಿ ಜನಪರ ಬಜೆಟ್! ಮುಖ್ಯಮಂತ್ರಿಗಳ ಅನುಭವದ ಮೂಸೆಯಲಿ ಸುಸ್ಥಿರ…