ಚಿತ್ರ ಮಂಜರಿ

ಡಬ್ಬಿಂಗ್ ಮಾಡುವಾಗಲೇ ನಿಧನರಾದ ‘ಜೈಲರ್’ ಸಿನಿಮಾ ನಟ ಜಿ.ಮಾರಿಮುತ್ತು

ಖ್ಯಾತ ತಮಿಳು ನಟ, ನಿರ್ದೇಶಕ ಮಾರಿಮುತ್ತು ಅವರು ಇಂದು ನಿಧನರಾಗಿದ್ದಾರೆ. 58 ವರ್ಷದ ಮಾರಿಮುತ್ತು ಅವರು ಇಂದು ಬೆಳಗ್ಗೆ 8.30ಕ್ಕೆ ಧಾರಾವಾಹಿಯೊಂದಕ್ಕೆ ಡಬ್ಬಿಂಗ್ ಮಾಡುವ ಸಮಯದಲ್ಲಿ ನಿಧನರಾಗಿದ್ದಾರೆ. ಅವರನ್ನು ಆದಷ್ಟು ಬೇಗ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದರೂ ಕೂಡ ಯಾವುದೇ ಪ್ರಯೋಜನ ಆಗಲಿಲ್ಲ.

ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ ನಟ
ರಜನಿಕಾಂತ್ ಅವರ ‘ಜೈಲರ್’ ಸಿನಿಮಾದಲ್ಲಿ ಮಾರಿಮುತ್ತು ನಟಿಸಿದ್ದರು. ‘ರೆಡ್ ಸ್ಯಾಂಡಲ್ ವುಡ್’ ಚಿತ್ರದಲ್ಲಿಯೂ ಅವರು ನಟಿಸಿದ್ದರು. ಮಾರಿಮುತ್ತು ನಿಧನ ಎಲ್ಲರಿಗೂ ಶಾಕ್ ನೀಡಿದೆ. ಮಾರಿಮುತ್ತು ಅವರಿಗೆ ಭಾಗ್ಯಲಕ್ಷ್ಮೀ ಎಂಬ ಪತ್ನಿಯಿದ್ದಾಳೆ. ಅಕಿಲನ್, ಈಶ್ವರ್ಯಾ ಎಂಬ ಮಕ್ಕಳಿದ್ದಾರೆ.

ವೈರಲ್ ಆಗುತ್ತಿದ್ದ ಮಾರಿಮುತ್ತು ಹೇಳಿಕೆಗಳು
ಜಿ ಮಾರಿಮುತ್ತು ಅವರು ಯಾವಾಗಲೂ ಬೋಲ್ಡ್ ಹೇಳಿಕೆಗಳನ್ನು ನೀಡುವ ಮೂಲಕ ಹೆಸರು ಮಾಡಿದ್ದರು. ಮಾರಿಮುತ್ತು ಹೇಳಿಕೆಗಳು ಸದಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದ್ದವು. ‘ಜೈಲರ್’ ಸಿನಿಮಾದಲ್ಲಿ ಮಾರಿಮುತ್ತು ಅವರು ಖಳನಾಯಕನ ಪಾತ್ರ ಮಾಡಿದ್ದರು.

ಈ ಘಟನೆ ಹೇಗಾಯ್ತು?
ಸೆಪ್ಟೆಂಬರ್ 8ರಂದು ಸಹ ಕಲಾವಿದ ಕಮಲೇಶ್ ಜೊತೆ ‘Ethir Necchal’ ಎನ್ನುವ ಧಾರಾವಾಹಿಯ ಡಬ್ಬಿಂಗ್ ಮಾಡುತ್ತಿದ್ದರು. ಆ ವೇಳೆ ಅವರು ಚೆನ್ನೈನ ಸ್ಟುಡಿಯೋದಲ್ಲಿ ಬಿದ್ದರು. ಆನಂತರ ಅವರನ್ನು ಚೆನ್ನೈನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಆದರೆ ಆ ವೇಳೆಗೆ ಅವರ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇನ್ನು ಮಾರಿಮುತ್ತು ಅವರ ಮನೆಯಲ್ಲಿ ಪಾರ್ಥಿವ ಶರೀರವರನ್ನು ಇಡಲಾಗುವುದಂತೆ.

ನಿರ್ದೇಶಕನಾಗಬೇಕು ಅಂತ ಮನೆಯಿಂದ ಓಡಿ ಹೋಗಿದ್ದ ಮಾರಿಮುತ್ತು
ಈ ಹಿಂದಿನ ಸಂದರ್ಶನಗಳಲ್ಲಿ ಮಾತನಾಡಿದ್ದ ಮಾರಿಮುತ್ತು ಅವರು, ತಮಿಳು ಚಿತ್ರರಂಗದಲ್ಲಿ ಡೈರೆಕ್ಟರ್ ಆಗಬೇಕು ಎನ್ನುವ ಹುಚ್ಚಿನಿಂದ ಮನೆ ಬಿಟ್ಟು ಓಡಿ ಹೋಗಿದ್ರಂತೆ. 2008ರಲ್ಲಿ ತೆರೆ ಕಂಡ ‘ಕನ್ನುಮ್ ಕನ್ನುಮ್’ ಸಿನಿಮಾ ಮೂಲಕ ಅವರು ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಸಿನಿಮಾಗಳನ್ನು ನಿರ್ದೇಶನ ಮಾಡುವುದರ ಜೊತೆಗೆ ಅವರು ತಮಿಳು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಮಾರಿಮುತ್ತು ಅವರು ಗೀತರಚನೆಕಾರ ವೈರಮುತ್ತು ಜೊತೆ ಕೆಲಸ ಮಾಡಿದ್ದರು. ಕೆಲ ತಮಿಳು ಸಿನಿಮಾಗಳಿಗೆ ಸಹಾಯಕ ನಿರ್ದೇಶಕ ಕೂಡ ಆಗಿದ್ದರು.

‘ವಾಲಿ’, ‘ಜೀವ’, ‘ಪರಿಯೆರಮ್ ಪೆರುಮಲ್’ ಸಿನಿಮಾಗಳಲ್ಲಿ ನಟಿಸಿರುವ ಇವರು 2022ರಿಂದ ಧಾರಾವಾಹಿಯಲ್ಲಿಯೂ ನಟಿಸುತ್ತಿದ್ದಾರೆ.

andolanait

Recent Posts

IPL 2026 | ಕಂಗೆಟ್ಟ ಕ್ಯಾಪಿಟಲ್ಸ್‌ ; ಡೆಲ್ಲಿ ವಿರುದ್ಧ ಆರ್‌ಸಿಬಿಗೆ ಸುಲಭ ಜಯ

ನವದೆಹಲಿ : ಹ್ಯಾಜಲ್‌ವುಡ್‌, ಭುವನೇಶ್ವರ್ ಬೌಲಿಂಗ್‌ ಅಬ್ಬರ, ಸಂಘಟಿತ ಫೀಲ್ಡಿಂಗ್‌ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು…

26 mins ago

ಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳಿಗೆ ತರಬೇತಿ

ಮೈಸೂರು : ಕೆ-ಸೆಟ್‌ ಮತ್ತು ಯುಜಿಸಿ-ನೆಟ್‌, ಜೆಆರ್‌ಎಫ್‌ ಅರ್ಹತಾ ಪರೀಕ್ಷೆ ಬರೆಯುವವರಿಗೆ 45 ದಿನಗಳ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ…

2 hours ago

ಹಾಸನ | ಮೆದುಳಿನಲ್ಲಿ ತೀವ್ರ ರಕ್ತಸ್ರಾವ ; 25 ವರ್ಷದ ಸಾಫ್ಟ್‌ವೇರ್‌ ಇಂಜಿನಿಯರ್‌ ಯುವತಿ ಸಾವು

ಹಾಸನ : ಹಠಾತ್ ಕುಸಿದು ಬಿದ್ದು ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ ಕೋಮಾಗೆ ಜಾರಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಯುವತಿ ಚಿಕಿತ್ಸೆ ಫಲಿಸದೆ…

2 hours ago

ಚೆಲುವಾಂಬ ಆಸ್ಪತ್ರೆ | 15 ತಿಂಗಳಲ್ಲಿ 421 ಶಿಶು ಮರಣ ; ದಾಖಲೆ ಬಿಡುಗಡೆ ಮಾಡಿದ ಮಾಜಿ ಶಾಸಕ ನಾಗೇಂದ್ರ

ಮೈಸೂರು : ಮೈಸೂರು ಪ್ರಾಂತ್ಯದಲ್ಲೇ ಪ್ರಸೂತಿ, ಸ್ತ್ರೀರೋಗ ಮತ್ತು ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಹೆಸರುವಾಸಿಯಾಗಿದ್ದ ಮೈಸೂರಿನ ಚೆಲುವಾಂಬ ಆಸ್ಪತ್ರೆಯ…

2 hours ago

ಪಶ್ಚಿಮ ಬಂಗಾಳ ಎರಡನೇ ಹಂತದ ಚುನಾವಣೆ : ಏ.29ರಂದು ಮತದಾನ ; ಭಾರೀ ಬಿಗಿ ಭದ್ರತೆ

ಕೊಲ್ಕತ್ತಾ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಬಹಿರಂಗ ಚುನಾವಣೆ ಸೋಮವಾರ ಅಂತ್ಯವಾಗಿದೆ. ಏ.29ರಂದು ಮತದಾನ ನಡೆಯಲಿದ್ದು,…

3 hours ago

ಅರಳುಮರಳು ಮಾತು, ಕ್ಷಮಿಸಿಬಿಡೋಣ : ಎಚ್.ವಿಶ್ವನಾಥ್ ಹೇಳಿಕೆಗೆ ಸಚಿವ ಮಧು ಬಂಗಾರಪ್ಪ ತಿರುಗೇಟು

ಶಿವಮೊಗ್ಗ : ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ‘ಕಾಪಿ ಹೊಡೆಸಿ ಶೇ.94.1 ಫಲಿತಾಂಶ ತಂದಿದ್ದಾರೆ’ ಎಂಬ ಬಿಜೆಪಿ ಎಂಎಲ್‌ಸಿ ಎಚ್.ವಿಶ್ವನಾಥ್ ಅವರ ಹೇಳಿಕೆಗೆ…

4 hours ago