ವಾಷಿಂಗ್ಟನ್: 1960ರ ದಶಕದಲ್ಲಿ ಮಾದಕ ತಾರೆ ಎಂದೇ ಹೆಸರು ಗಳಿಸಿದ್ದ ರಾಕ್ವೆಲ್ ವೆಲ್ಚ್ 82ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅನಾರೋಗ್ಯದ ಹಿನ್ನೆಲೆ ಅವರು ಇಹಲೋಕ ತ್ಯಜಿಸಿದ್ದಾರೆ. ಬುಧವಾರ (ಫೆ. 15)ರಂದು ಅವರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ ಎಂದು ಅಮೆರಿಕ ಟ್ಯಾಬ್ಲೋಯ್ಡ್ ನ್ಯೂಸ್ ಅರ್ಗನೈಸೆಷನ್ ಟಿಎಂಜೆಡ್ ವರದಿ ಮಾಡಿದೆ.ಹಾಲಿವುಡ್ನ ಉನ್ಮಾದದ ಬೆಡಗಿ: 1966 ಫ್ಯಾಂಟಸ್ಟಿಕ್ ವೊಯೇಜ್ ಮತ್ತು ಒನ್ ಮಿಲಿಯನ್ ಇಯರ್ B. C ಚಿತ್ರದ ಮೂಲಕ ರಾಕ್ವೆಲ್ ಹೆಸರು ಗಳಿಸಿದ್ದರು. B. C ಚಿತ್ರದಲ್ಲಿ ಒಂದೆರಡು ನಿಮಿಷದ ಪಾತ್ರದಲ್ಲಿ ಮಿಂಚಿದ್ದರೂ ತಮ್ಮ ಉಡುಪಿನಿಂದಾಗಿ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಿದ್ದರು. ಕೊಂಚ ಹೆಚ್ಚು ಎನ್ನುವ ಮಾದಕತೆ ಜೊತೆ ಬಿಕಿನಿಯಲ್ಲಿ ಮಿಂಚಿದ್ದ ಅವರು, ಉದ್ಯಮದಲ್ಲಿ ಸೆಕ್ಸ್ ಸಿಂಬಲ್ ಆಗಿ ರೂಪುಗೊಂಡರು. ಇದಾದ ಬಳಿಕ ವೆಲ್ವ್ ಸ್ಟಾರ್ಡಮ್ ಕೂಡ ಹೆಚ್ಚಿತ್ತು. 1960 ಮತ್ತು 1970ರ ದಶಕದಲ್ಲಿ ಅತ್ಯಂತ ಬೇಡಿಕೆಯ ನಟಿಯಾಗಿ ಅವರು ರೂಪುಗೊಂಡರು.
ಇನ್ನು ತಮ್ಮ ಸಿನಿ ವೃತ್ತಿ ಜೀವನದಲ್ಲಿ ಅನೇಕ ಪ್ರಶಸ್ತಿಗಳನ್ನು ಕೂಡ ಅವರು ಬಾಚಿಕೊಂಡಿದ್ದಾರೆ. 1974ರಲ್ಲಿ ನಟಿಸಿದ್ದ ಮ್ಯೂಸಿಯಲ್ ಕಾಮಿಡಿ ಚಿತ್ರ ದಿ ತ್ರಿ ಮುಸ್ಕಿಟೀರ್ಸ್ ಸಿನಿಮಾಗಾಗಿ ಗೋಲ್ಡನ್ ಗ್ಲೋಬ್ನಲ್ಲಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದರು. ಇನ್ನು ನಟಿಯ ಸಾವಿನ ಕುರಿತು ತಿಳಿಸಿರುವ ಅಮೆರಿಕ ಮೂಲದ ಸುದ್ದಿ ಸಂಸ್ಥೆ ಫಾಕ್ಸ್ ನ್ಯೂಸ್, ವೆಲ್ಚ್ ಸಿನಿ ಉದ್ಯಮದಲ್ಲಿ ಉನ್ಮಾದ ನಟಿಯಾಗಿ ಗುರುತಿಸಿಕೊಂಡಿದ್ದರು. ಅಷ್ಟೇ ಅಲ್ಲದೇ, ಟಿವಿ ಮತ್ತು ನಾಟಕ ಮಾಧ್ಯಮಗಳಲ್ಲೂ ಗುರುತಿಸಿಕೊಂಡಿದ್ದರು.
ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…
ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…
ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…
ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…
ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…