ಸ್ಟಾರ್ ಸುವರ್ಣದಲ್ಲಿ ನವೆಂಬರ್ ೨೮ರಂದು (ಇಂದಿನಿಂದ) ಸೋಮವಾರದಿಂದ ಸಂಜೆ ೭ ಗಂಟೆಗೆ ಪ್ರಾರಂಭ
ಮೈಸೂರು: ಕನ್ನಡ ಕಿರುತೆರೆಯಲ್ಲಿ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈಗಾಗಲೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎಡೆಯೂರು ಶ್ರೀ ಸಿದ್ದಲಿಂಗೇಶ್ವರ, ಮುದ್ದು ಮಣಿಗಳು, ಮನಸೆಲ್ಲಾ ನೀನೇ, ಮರಳಿ ಮನಸಾಗಿದೆ, ಬೆಟ್ಟದ ಹೂ, ಜೇನುಗೂಡು ಧಾರಾವಾಹಿಗಳು ಪ್ರೇಕ್ಷಕರ ಮನ ಗೆದ್ದು ಮನೆ ಮಾತಾಗಿವೆ. ಇದೀಗ ಸ್ಟಾರ್ ಸುವರ್ಣ ವಾಹಿನಿಯು ‘ಕಥೆಯೊಂದು ಶುರುವಾಗಿದೆ’ ಧಾರಾವಾಹಿ ಪ್ರಾರಂಭಿಸಲು ಸಜ್ಜಾಗಿದೆ.
‘ಕಥೆಯೊಂದು ಶುರುವಾಗಿದೆ’ ಇದು ಮೂರು ಜೋಡಿಗಳು ಹಾಗೂ ಎರಡು ಮನೆತನಗಳ ಮಧ್ಯೆ ನಡೆಯುವ ಪ್ರೀತಿ ಸಂಘರ್ಷದ ಅದ್ಧೂರಿ ಧಾರಾವಾಹಿ. ಈ ಧಾರಾವಾಹಿಯ ಕಥಾನಾಯಕಿ ಕೃತಿ. ಈಕೆ ಮಧ್ಯಮ ಕುಟುಂಬದ ಹುಡುಗಿಯಾಗಿರುತ್ತಾಳೆ. ಈಕೆ ಎಷ್ಟೇ ಕಷ್ಟ ಬಂದ್ರು ನಗುತ್ತಾ ಮನೆ ನಿಭಾಯಿಸೋ ಛಲಗಾರ್ತಿ. ಸಮಾಜದಲ್ಲಿ ಮಹಿಳೆಯರು ಯಾವುದಕ್ಕೂ ಕಮ್ಮಿ ಇಲ್ಲ, ಗಂಡಿಗೆ ಸರಿ ಸಮಾನಾಗಿ ನಿಲ್ಲೋ ಸಾಮರ್ಥ್ಯ ಹೆಣ್ಣಿಗಿದೆ ಎಂದು ತೋರಿಸೋಕೆ ‘ಹೆಣ್ಮಕ್ಳೆ ಸ್ಟ್ರಾಂಗು ಗುರು’ ಎಂಬ ನಾಮಪದದ ಅಡಿ ಸಮಾಜದಲ್ಲಿರೋ ಹೆಣ್ಣು ಕುಲಕ್ಕೆ ಸ್ಛೂರ್ತಿಯಾಗಿ ನಿಲ್ತಿದ್ದಾಳೆ ನಮ್ಮ ಕೃತಿ.
ಇನ್ನು ಈ ಕಥೆಯ ನಾಯಕ ಯುವರಾಜ ಬಹದ್ದೂರ್. ಬಹದ್ದೂರ್ ಫ್ಯಾಮಿಲಿಗೆ ಇವನೇ ಹಿರಿಯ ಮಗ. ಆದರೆ, ಸ್ವಲ್ಪ ಅಹಂಕಾರಿ, ಇವನ ನಿರ್ಧಾರ ತುಂಬಾ ಅಚ್ಚುಕಟ್ಟು. ಇವನು ತುಂಬಾ ಕಟ್ಟುನಿಟ್ಟು. ಮಾತಲ್ಲಿ ಮನೆ ಕಟ್ದೇ ಕೆಲಸ ಮಾಡಿ ತೋರಿಸೋ ಇವನು ಕೆಲಸಕ್ಕೆ ತುಂಬಾ ಪ್ರಾಮುಖ್ಯತೆ ಕೊಡ್ತಾನೆ.
ಒಬ್ಬಳು ಸ್ವಾಭಿಮಾನಿ, ಇನ್ನೊಬ್ಬ ಅಹಂಕಾರಿ. ಸ್ವಾಭಿಮಾನಿ ಹಾಗೂ ಅಹಂಕಾರಿಗಳ ನಡುವೆ ನಡೆಯುವ ಜಿದ್ದಾಜಿದ್ದಿಯೇ ಈ ಧಾರಾವಾಹಿಯ ಕಥಾಹಂದರವಾಗಿದೆ. ಈ ಧಾರಾವಾಹಿಯ ತಾರಾ ಬಳಗದಲ್ಲಿ ಸುಂದಶ್ರೀ, ಸಹನಾ, ಅಭಿನಯ, ಭವಾನಿ, ಸುಜಾತ ಅಕ್ಷುಯ್, ಸುಜ್ಯ್, ಭವಿಶ್, ಇಂಚರ ಜೋಶಿ ಸೇರಿದಂತೆ ಇನ್ನು ಹಲವಾರು ಕಲಾವಿದರು ಅಭಿನಯಿಸುತ್ತಿದ್ದಾರೆ. ಹೊಚ್ಚ ಹೊಸ ಧಾರಾವಾಹಿ ‘ಕಥೆಯೊಂದು ಶುರುವಾಗಿದೆ’ ಇದೇ ನವೆಂಬರ್ ೨೮ರಂದು ಸೋಮವಾರದಿಂದ ಸಂಜೆ ೭ ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ ತಪ್ಪದೇ ವೀಕ್ಷಿಸಿ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…