ಪಂಜಾಬಿ ಗಾಯಕ ಮತ್ತು ನಟ ಗಿಪ್ಪಿ ಗ್ರೆವಾಲ್ ಅವರ ಕೆನಡಾದ ವ್ಯಾಂಕೋವರ್‌ನ ವೈಟ್ ರಾಕ್‌ನಲ್ಲಿರುವ ಮನೆ ಮೇಲೆ ಗುಂಡಿನ ದಾಳಿ ನಡೆಸಿರುವುದಾಗಿ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಫೇಸ್‌ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಮೂಲತಃ ಮೊಹಾಲಿಯವರಾದ ಗಾಯಕ ಗಿಪ್ಪಿ ಗ್ರೆವಾಲ್‌ಗೆ ಈ ಹಿಂದೆ ಗ್ಯಾಂಗ್‌ಸ್ಟರ್‌ಗಳಿಂದ ಬೆದರಿಕೆಗಳು ಬಂದಿದ್ದವು, ನಂತರ ಅವರಿಗೆ ಭದ್ರತೆಯನ್ನು ಒದಗಿಸಲಾಯಿತು. ಪ್ರಸ್ತುತ ಅವರು ಕೆನಡಾದಲ್ಲಿ ನೆಲೆಸಿದ್ದಾರೆ.
ಲಾರೆನ್ಸ್ ಬಿಷ್ಣೋಯ್ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಸಲ್ಮಾನ್ ಖಾನ್ ಗೆ ನೀನು ತುಂಬಾ ಆತ್ಮೀಯ. ನಿನ್ನನ್ನು ಈಗಲೇ ಕಾಪಾಡು ಎಂದು ನಿನ್ನ ಅಣ್ಣನಿಗೆ ಹೇಳು. ನಮ್ಮಿಂದ ನಿನ್ನನ್ನು ಯಾರೂ ರಕ್ಷಿಸುತ್ತಾರೆ. ಈಗ ನಾವು ನೀಡಿರುವ ಸಂದೇಶ ಸಲ್ಮಾನ್ ಖಾನ್‌ಗಾಗಿ. ನಿನ್ನನ್ನು ನಮ್ಮಿಂದ ದಾವೂದ್ ಇಬ್ರಾಹಿಂ ರಕ್ಷಿಸುತ್ತಾನೆ ಎಂದುಕೊಂಡು ಸುಖವಾಗಿ ಕಾಲ ಕಳೆಯಬೇಡ ಎಂದು ಬಾಲಿವುಡ್ ಭಾಯ್‌ಜಾನ್ ವಿರುದ್ಧ ಪೋಸ್ಟ್ ಮಾಡಿದ್ದಾರೆ.
ಗಿಪ್ಪಿ ಅವರ ಕಾಮಿಡಿ ಚಿತ್ರ ‘ಮೌಜಾ ಹಿ ಮೌಜಾ’ ಟ್ರೇಲರ್ ಲಾಂಚ್ ಆಗಿತ್ತು. ಈ ಈವಂಟ್‌ನಲ್ಲಿ ಸಲ್ಮಾನ್ ಖಾನ್ ಕೂಡ ಭಾಗವಹಿಸಿದ್ದರು. ಗಿಪ್ಪಿ ಗ್ರೆವಾಲ್ ಅವರ ‘ಮೌಜಾ ಹಿ ಮೌಜಾ’ ಚಿತ್ರದ ಟ್ರೈಲರ್ ಅನ್ನು ಸಲ್ಮಾನ್ ಖಾನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ತಂಡಕ್ಕೆ ತಮ್ಮ ಶುಭ ಕೋರಿದ್ದಾರೆ.
ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…
ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…
ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…
ಬೆಂಗಳೂರು : ರಾಜ್ಯದಲ್ಲಿ ಸೀಸನಲ್ ಫ್ಲೂ ಹೆಚ್ಚಳ ಆಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಡಿಸೆಂಬರ್, ಜನವರಿಯಿಂದ…
ಹನೂರು : ಮಹದೇಶ್ವರ ಬೆಟ್ಟ ರಸ್ತೆಯಲ್ಲಿ ನಡೆದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಜಿಂಕೆಯೊಂದು ರಸ್ತೆಯಲ್ಲಿಯೇ ಮೃತಪಟ್ಟಿರುವ ಘಟನೆ ಭಾನುವಾರ…