2023ರ ದಿಸೆಂಬರ್ 29ರಂದು ರಿಲೀಸ್ ಆದ ನಟ ದರ್ಶನ್ ಅಭಿನಯದ ಕಾಟೇರ ಸಿನಿಮಾ ಯಶಸ್ಸು ಕಂಡಿದೆ. ಬಿಡುಗಡೆಗೊಂಡ ಕೇವಲ 7 ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ, ತರುಣ್ ಸುಧೀರ್ ನಿರ್ದೇಶನ ಮತ್ತು ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಕಾಟೇರ ಸಿನಿಮಾ 104 ಕೋಟಿ ರೂಪಾಯಿ ಬಾಚಿಕೊಳ್ಳುವ ಮೂಲಕ 2024ರಲ್ಲಿನ ಕನ್ನಡದ ಮೊಲದ ಯಶಸ್ವಿ ಚಿತ್ರವಾಗಿ ಗೆದ್ದು ಬೀಗಿದೆ. ಇದು ದರ್ಶನ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.
ನಟ ದರ್ಶನ್ ಅವರ ಆಪ್ತರು ನೀಡಿದ ಮಾಹಿತಿ ಪ್ರಕಾರ ‘ಕಾಟೇರ’ ಸಿನಿಮಾ ಏಳು ದಿನಕ್ಕೆ 104.58 ಕೋಟಿ ರೂಪಾಯಿ ಗಳಿಸಿದೆ. ಕೇವಲ ಕನ್ನಡದಲ್ಲಿ ರಿಲೀಸ್ ಆಗಿ ‘ಕಾಟೇರ’ ಇಷ್ಟು ದೊಡ್ಡ ಮೊತ್ತದ ಗಳಿಕೆ ಮಾಡುತ್ತಿರುವುದು ತಂಡದ ಖುಷಿ ಹೆಚ್ಚಿಸಿದೆ. ಸದ್ಯ ಅಪ್ಪಟ ಕನ್ನಡ ಸಿನಿಮಾ ಕನ್ನಡದ ನೆಲದಲ್ಲಿ ಗೆದ್ದಬೀಗಿದ್ದು, ಟಾಲಿವುಡ್ ಹಾಗೂ ಕಾಲಿವುಡ್ನಲ್ಲೂ ‘ಕಾಟೇರ’ ಚಿತ್ರ ರಿಲೀಸ್ ಬೇಡಿಕೆ ಕಂಡುಬಂದ ಹಿನ್ನಲೆಯಲ್ಲಿ ಇತರೆ ಭಾಷೆಗಳಿಗೆ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡುವ ಬಗ್ಗೆ ಚಿತ್ರತಂಡ ಯೋಚಿಸುತ್ತಿದೆ.
ಕಾಟೇರ ಕಲೆಕ್ಷನ್ ವಿವರ:
ಡಿಸೆಂಬರ್ 29: 19.79 ಕೋಟಿ ರೂಪಾಯಿ
ಡಿಸೆಂಬರ್ 30: 17.35 ಕೋಟಿ ರೂಪಾಯಿ
ಡಿಸೆಂಬರ್ 31: 20.94 ಕೋಟಿ ರೂಪಾಯಿ
ಜನವರಿ 1: 18.26 ಕೋಟಿ ರೂಪಾಯಿ
ಜನವರಿ 2: 9.24 ಕೋಟಿ ರೂಪಾಯಿ
ಜನವರಿ 3: 9.78 ಕೋಟಿ ರೂಪಾಯಿ
ಜನವರಿ 4: 9.52 ಕೋಟಿ ರೂಪಾಯಿ
ಈವರೆಗೆ ಕಾಟೇರ ಚಿತ್ರದ 52.77 ಲಕ್ಷ ಟಿಕೆಟ್‌ಗಳು ಮಾರಾಟವಾಗಿದೆ. ಹಿರಿಯ ನಟಿ ಮಾಲಾಶ್ರೀ ಮಗಳಾದ ಆರಾಧನಾ ಮೊಟ್ಟ ಮೊದಲ ಬಾರಿಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ. ಅಚ್ಯುತ್ ಕುಮಾರ್, ಜಗಪತಿ ಬಾಬು, ಕುಮಾರ್ ಗೋವಿಂದ್ ಸೇರಿದಂತೆ ದೊಟ್ಟ ತಾರಾ ಬಳಗಳವನ್ನೇ ಚಿತ್ರತಂಡ ಹೊಂದಿದೆ.
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…
ಪುಣೆ: ದೇಶದಲ್ಲಿ ಹೊಸದಾಗಿ ಮಂದಿರ-ಮಸೀದಿಗಳ ವಿವಾದಗಳನ್ನು ಹುಟ್ಟುಹಾಕುತ್ತಿರುವುದಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಳವಳ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ…
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ ಮೂರು ದಿನಗಳ ಕಾಲ 87 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.ಸಮ್ಮೇಳನದಲ್ಲಿ ನಾಡಪ್ರಭು…
ಬೆಳಗಾವಿ: ಜನಪ್ರತಿನಿಧಿ ಆಗಿರುವ ಸಿ.ಟಿ.ರವಿ ಬಂಧಿಸಿದ ಮೇಲೆ, ಸುರಕ್ಷತೆಗೆ ದೃಷ್ಟಿಯಿಂದ ಅವರನ್ನು ರಾತ್ರಿಯಿಡಿ ಪೊಲೀಸ್ ವಾಹನದಲ್ಲಿ ಸುತ್ತಾಡಿಸಬೇಕಾಯಿತು ಎಂದು ನಗರ…