ಚಿತ್ರ ಮಂಜರಿ

ಆರ್‌ಸಿಬಿ ಜೆರ್ಸಿಯನ್ನು ತೆಗೆದು ಹಾಕುವಂತೆ ಜೈಲರ್ ನಿರ್ಮಾಪಕರಿಗೆ ಕೋರ್ಟ್ ಸೂಚನೆ

ಸೆಪ್ಟೆಂಬರ್ 1 ರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಜೆರ್ಸಿಯನ್ನು ಹೊಂದಿರುವ ದೃಶ್ಯವನ್ನು ಯಾವುದೇ ಥಿಯೇಟರ್‌ಗಳಲ್ಲಿ ಪ್ರದರ್ಶಿಸದಂತೆ “ಜೈಲರ್” ಚಲನಚಿತ್ರ ನಿರ್ಮಾಪಕರಿಗೆ ದೆಹಲಿ ಹೈಕೋರ್ಟ್ ನಿರ್ದೇಶಿಸಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರದ ಪಾತ್ರವೊಂದಕ್ಕೆ ಆರ್​ಸಿಬಿ ಜೆರ್ಸಿಯನ್ನು ಬಳಸಲಾಗಿದೆ. ಇದೀಗ ಈ ಆರ್​ಸಿಬಿ ಜೆರ್ಸಿಯ ಧರಿಸಿರುವ ಪಾತ್ರಧಾರಿಯ ದೃಶ್ಯಕ್ಕೆ ಕತ್ತರಿ ಹಾಕುವಂತೆ ಕೋರ್ಟ್​ ಸೂಚಿಸಿದೆ.

ಈ ಚಿತ್ರದ ಕಾಂಟ್ರಾಕ್ಟ್​ ಕಿಲ್ಲರ್ ಪಾತ್ರದಲ್ಲಿ ಆರ್​ಸಿಬಿ ಜೆರ್ಸಿ ಧರಿಸಿರುವ ವ್ಯಕ್ತಿ ಕಾಣಿಸಿಕೊಂಡಿದ್ದರು. ಅಲ್ಲದೆ ಈ ಪಾತ್ರಧಾರಿ ಮಹಿಳೆಯ ಬಗ್ಗೆ ಅವಹೇಳನಕಾರಿ ಮತ್ತು ಸ್ತ್ರೀದ್ವೇಷದ ಡೈಲಾಗ್​ಗಳನ್ನು ಹೇಳುವುದನ್ನು ಜೈಲರ್​ ಚಿತ್ರದಲ್ಲಿ ಕಾಣಬಹುದು. ಇದರ ವಿರುದ್ಧ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಕೋರ್ಟ್ ಮೆಟ್ಟಿಲೇರಿದ್ದರು.

ನಮ್ಮ ಅನುಮತಿಯಿಲ್ಲದೆ ತಮ್ಮ ಜೆರ್ಸಿಯನ್ನು ಬಳಸಿ ನಕಾರಾತ್ಮಕವಾಗಿ ಬಿಂಬಿಸಲಾಗಿದೆ. ಇದರಿಂದ ಆರ್​ಸಿಬಿ ಬ್ರ್ಯಾಂಡ್ ಇಮೇಜ್​ಗೆ ಮತ್ತು ಇಕ್ವಿಟಿಗೆ ಹಾನಿಯುಂಟಾಗುತ್ತಿದೆ ಎಂದು ಆರ್​ಸಿಬಿ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ತನ್ನ ವಾದವನ್ನು ಮುಂದಿಟ್ಟಿದೆ.

ಈ ಮೊಕದ್ದಮೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್, ಜೈಲರ್ ಚಿತ್ರದಿಂದ ಈ ದೃಶ್ಯವನ್ನು ಅಥವಾ ಆರ್​ಸಿಬಿ ಜೆರ್ಸಿ ಧರಿಸಿರುವುದನ್ನು ತೆಗೆದು ಹಾಕುವಂತೆ ಸೂಚಿಸಿದೆ. ಅಷ್ಟೇ ಅಲ್ಲದೆ ಚಿತ್ರವು ಟಿವಿ, ಸ್ಯಾಟ್​ಲೈಟ್ ಅಥವಾ ಒಟಿಟಿಯಲ್ಲಿ ಬಿಡುಗಡೆ ಮೊದಲು ಈ ದೃಶ್ಯವನ್ನು ಎಡಿಟ್ ಮಾಡಬೇಕೆಂದು ತಿಳಿಸಲಾಗಿದೆ.

ದೆಹಲಿ ಹೈಕೋರ್ಟ್​ನ ಈ ಎಲ್ಲಾ ಆದೇಶಗಳಿಗೂ ಜೈಲರ್​ ನಿರ್ಮಾಪಕರು ಒಪ್ಪಿಗೆ ಸೂಚಿಸಿದ್ದಾರೆ. ಹಾಗೆಯೇ ಸದ್ಯ ಥಿಯೇಟರ್​ನಲ್ಲಿರುವ ಜೈಲರ್ ಚಿತ್ರದಿಂದ, ಸೆಪ್ಟೆಂಬರ್ 1 ರೊಳಗೆ ಆರ್​ಸಿಬಿ ಜೆರ್ಸಿಯ ದೃಶ್ಯವನ್ನು ತೆಗೆದು ಹಾಕುವಂತೆ ಕೋರ್ಟ್ ಸೂಚಿಸಿದೆ. ಹಾಗೆಯೇ ನ್ಯಾಯಾಲಯದ ಸಂಪೂರ್ಣ ಶುಲ್ಕವನ್ನು ಫಿರ್ಯಾದಿದಾರರಿಗೆ ಮರುಪಾವತಿಸಲು ದೆಹಲಿ ಹೈಕೋರ್ಟ್ ಆದೇಶಿಸಿದೆ.

andolanait

Recent Posts

ನಾಳೆಯಿಂದ ಮಡಿಕೇರಿಯಲ್ಲಿ ಕೂರ್ಗ್‌ ಕಾರ್ನಿವಲ್‌

ನವೀನ್ ಡಿಸೋಜ ೨ನೇ ಬಾರಿಗೆ ನಡೆಯುವ ಪ್ರವಾಸಿ ಉತ್ಸವಕ್ಕೆ ಸಿದ್ಧತೆ; ಹೋಟೆಲ್ ಮತ್ತು ರೆಸಾರ್ಟ್ ಅಸೋಸಿಯೇಷನ್ ಸಹಭಾಗಿತ್ವ  ಮಡಿಕೇರಿ: ಡಿ.೨೦…

25 mins ago

ಮುಡಾ ಅಕ್ರಮ : ತೆರೆಗೆ ಸರಿದ ದೇಸಾಯಿ ಆಯೋಗದ ವರದಿ

ಕೆ.ಬಿ.ರಮೇಶನಾಯಕ ಮುಡಾ ಅಕ್ರಮಗಳ ಕುರಿತು ೬ ಸಂಪುಟಗಳಲ್ಲಿ ಸಲ್ಲಿಸಿದ್ದ ವರದಿ ೩೦೦ ನಿವೇಶನಗಳು ಬದಲಿ ನಿವೇಶನಗಳಾಗಿ ಹಂಚಿಕೆ ೫೦:೫೦ ಅನುಪಾತದಡಿ…

36 mins ago

ಗುಂಡ್ಲುಪೇಟೆ | ಉಪಟಳ ನೀಡುತಿದ್ದ ಹುಲಿ ಸೆರೆ ; ಮತ್ತೊಂದು ದರ್ಶನ

ಗುಂಡ್ಲುಪೇಟೆ : ತಾಲ್ಲೂಕಿನ ಬೊಮ್ಮಲಾಪುರ ಬಳಿ ಅನೇಕ ದಿನಗಳಿಂದ ರೈತರಿಗೆ ಉಪಟಳ ನೀಡಿ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದ್ದ ಹುಲಿಯನ್ನು…

12 hours ago

ಬೆಳ್ತಂಗಡಿ | ಮಹೇಶ್‌ ಶೆಟ್ಟಿ ತಿಮರೋಡಿ ಮತ್ತೆ ಗಡಿಪಾರು

ಬೆಳ್ತಂಗಡಿ : ಧರ್ಮಸ್ಥಳ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಎರಡನೇ ಬಾರಿಗೆ ಗಡಿಪಾರು ಮಾಡಿ ಪುತ್ತೂರು ಎ.ಸಿ.ಆದೇಶ…

12 hours ago

ಲೋಕಸಭೆ | ವಿಭಾ ಜಿರಾಮ್‌ ಮಸೂದೆ ಅಂಗೀಕಾಋ : ಪ್ರತಿಪಕ್ಷಗಳಿಂದ ಪ್ರತಿ ಹರಿದು ಆಕ್ರೋಶ

ಹೊಸದಿಲ್ಲಿ : ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಅಸ್ತಿತ್ವದಲ್ಲಿರುವ ‘ಮನ್ರೇಗಾ ಯೋಜನೆ’(ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ)ಯಿಂದ…

12 hours ago