ಚಿತ್ರ ಮಂಜರಿ

ಒಟಿಟಿ ಸೆನ್ಸಾರ್‌ಶಿಪ್‌ ಅರ್ಜಿಯನ್ನು ತಳ್ಳಿ ಹಾಕಿದ ಕೋರ್ಟ್‌

ಮನರಂಜನೆಯ ಜಗತ್ತಿನಲ್ಲಿ ಈಗ ಒಟಿಟಿ ಪ್ಲಾಟ್​ಫಾರ್ಮ್​ನದ್ದೇ ಹವಾ. ಎಲ್ಲ ಹೊಸ ಸಿನಿಮಾಗಳೂ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಕೆಲವೇ ದಿನಗಳ ನಂತರ ಒಟಿಟಿಗೆ ಲಗ್ಗೆ ಇಡುತ್ತವೆ. ಹಲವಾರು ವೆಬ್​ ಸರಣಿಗಳು ಪ್ರತಿ ವಾರ ಬಿಡುಗಡೆ ಆಗುತ್ತವೆ. ರಿಯಾಲಿಟಿ ಶೋಗಳು ಕೂಡ ಒಟಿಟಿಯಲ್ಲಿ ಶೈನ್​ ಆಗುತ್ತಿವೆ. ಹೊಸ ಹೊಸ ಸಿನಿಮಾಗಳನ್ನು ಕೊಂಡುಕೊಳ್ಳುವಲ್ಲಿ ಎಲ್ಲ ಒಟಿಟಿ ಸಂಸ್ಥೆಗಳ ನಡುವೆ ಪೈಪೋಟಿ ಇದೆ. ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರ ಆಗುವ ಕಂಟೆಂಟ್​ಗಳ ಬಗ್ಗೆ ಕೆಲವರಿಗೆ ತರಕಾರು ಇದೆ. ಬೋಲ್ಡ್​ ದೃಶ್ಯಗಳು ಹೆಚ್ಚಾಗಿರುತ್ತವೆ ಎಂದು ಅನೇಕರು ಮೂಗು ಮುರಿದಿದ್ದುಂಟು. ಈ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆ ಬಗ್ಗೆ ಮಹತ್ವದ ತೀರ್ಪು ಪ್ರಕಟ ಆಗಿದೆ. ಒಟಿಟಿ ಕಂಟೆಂಟ್​ಗಳಿಗೆ ಸೆನ್ಸಾರ್ ಸಮಿತಿ ರಚಿಸಲು ಸಾಧ್ಯವಿಲ್ಲ ಎಂದು ಕೋರ್ಟ್​ ಹೇಳಿದೆ.

‘ವೆಬ್​ ಸಿರೀಸ್​ಗಳಿಗೆ ಸೆನ್ಸಾರ್​ ಕಮಿಟಿ ಇರಲು ಹೇಗೆ ಸಾಧ್ಯ? ಅದಕ್ಕಾಗಿ ಬೇರೆಯದೇ ಕಾನೂನು ಇದೆ. ಅದರ ಅಡಿಯಲ್ಲಿ ಒಟಿಟಿ ಬರುತ್ತದೆ ಎಂದಾದರೆ ಮಾತ್ರ ಈಗಿರುವ ಕಾನೂನು ಅನ್ವಯ ಆಗುತ್ತದೆ. ಬೇರೆ ಬೇರೆ ದೇಶಗಳಿಂದಲೂ ಕಂಟೆಂಟ್​ ಪ್ರಸಾರ ಆಗುವುದರಿಂದ ಅನೇಕ ಪ್ರಶ್ನೆಗಳು ಉದ್ಭವ ಆಗುತ್ತವೆ’ ಎಂದು ಕೋರ್ಟ್​ ತಿಳಿಸಿದೆ.

‘ವೀಕ್ಷಕರು ಇಲ್ಲಿನವರೇ ಆಗಿದ್ದರೂ ಕೂಡ ಕಂಟೆಂಟ್​ ಪ್ರಸಾರ ಆಗುತ್ತಿರುವುದು ಬೇರೆ ಬೇರೆ ದೇಶಗಳಿಂದ. ಪ್ರಸಾರ ಆದ ನಂತರ ಏನಾದರೂ ತಪ್ಪಿದ್ದರೆ ಕ್ರಮ ಕೈಗೊಳ್ಳುವುದು ಬೇರೆ. ನಿಮ್ಮ ಅರ್ಜಿ ಹೆಚ್ಚು ವಿವರವಾಗಿ ಇರಬೇಕು’ ಎಂದು ಹೇಳುವ ಮೂಲಕ ಅರ್ಜಿದಾರರ ಮನವಿಯನ್ನು ಕೋರ್ಟ್​ ತಳ್ಳಿಹಾಕಿದೆ.

ಭಾರತದಲ್ಲೂ ಒಟಿಟಿ ಸಂಸ್ಥೆಗಳ ಪ್ರಾಬಲ್ಯ ಹೆಚ್ಚಿದೆ. ಅಮೇಜಾನ್​ ಪ್ರೈಂ ವಿಡಿಯೋ, ನೆಟ್​ಫ್ಲಿಕ್ಸ್​, ಸೋನಿ ಲಿವ್​, ಜೀ5, ವೂಟ್​ ಸೆಲೆಕ್ಟ್​, ಡಿಸ್ನಿ ಪ್ಲಸ್​ ಹಾಟ್​ ಸ್ಟಾರ್​, ಆಲ್ಟ್​ ಬಾಲಾಜಿ, ಆಹಾ ಸೇರಿದಂತೆ ಹತ್ತಾರು ಒಟಿಟಿ ಸಂಸ್ಥೆಗಳು ಕಾರ್ಯನಿರತವಾಗಿವೆ. ಇವುಗಳಲ್ಲಿ ಪ್ರಸಾರ ಆಗುವ ಕೆಲವು ಕಂಟೆಂಟ್​ಗಳು ತುಂಬ ಬೋಲ್ಡ್​ ಆಗಿರುತ್ತವೆ. ಎಲ್ಲಾ ವಯೋಮಾನದವರಿಗೆ ಸೂಕ್ತ ಆಗದಂತಹ ದೃಶ್ಯಗಳು ಕೂಡ ಇರುತ್ತವೆ. ಅವುಗಳಿಗೆ ಸೆನ್ಸಾರ್​ ಮಾಡಬೇಕು ಎಂಬುದು ಕೆಲವರ ಒತ್ತಾಯ.

‘ಮಿರ್ಜಾಪುರ್​’ ವೆಬ್​ ಸರಣಿಯ ಹೊಸ ಸೀಸನ್​ಗೆ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಅದಕ್ಕೆ ತಡೆ ನೀಡಬೇಕು ಎಂದು ಮಿರ್ಜಾಪುರ್​ ನಗರದ ನಿವಾಸಿಯೊಬ್ಬರು ಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ಈ ವೆಬ್​ ಸರಣಿಯಲ್ಲಿ ಮಿರ್ಜಾಪುರ್ ನಗರವನ್ನು ಆಕ್ಷೇಪಾರ್ಹವಾಗಿ ತೋರಿಸಲಾಗಿದ್ದು, ಅದರ ಬಿಡುಗಡೆಗೆ ತಡೆ ನೀಡಬೇಕು ಎಂಬ ಮನವಿಯನ್ನು ಕೋರ್ಟ್​ ತಳ್ಳಿಹಾಕಿದೆ.

andolana

Recent Posts

ಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಸುರಿದ ಮಳೆಯ ವಿವರ

ಕೊಡಗು: ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 37 ಮಿ.ಮೀ. ಮಳೆಯಾಗಿದೆ. ಕಳೆದ…

14 hours ago

ಹಾರಂಗಿ ಜಲಾಶಯದ ಇಂದಿನ ನೀರಿನ ಮಟ್ಟ

ಮಡಿಕೇರಿ: ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ ಗರಿಷ್ಠ ಮಟ್ಟಕ್ಕೆ ತಲುಪಿದೆ. ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಇಂದು 2,858.45…

14 hours ago

ತಮಿಳುನಾಡಿಗೆ ನಿತ್ಯ 9 ಸಾವಿರ ಕ್ಯೂಸೆಕ್ ನೀರು ಹರಿಸಿ – CWRC ಶಿಫಾರಸು ಎತ್ತಿಹಿಡಿದ CWMA

ನವದೆಹಲಿ: ತಮಿಳುನಾಡಿಗೆ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿಯ, ಅಂದರೆ CWRCಯ ಶಿಫಾರಸನ್ನು ಕಾವೇರಿ ನೀರು…

14 hours ago

ಓದುಗರ ಪತ್ರ: ಭವಿಷ್ಯದ ಬೆಳಕಾಗಲಿ!

ಭವಿಷ್ಯದ ಬೆಳಕಾಗಲಿ! ಎಲ್ಲರ ಒಳಗೊಳ್ಳುವ ಎಲ್ಲರ ಹಿತ ಅಭ್ಯುದಯದ ಹೊಸ ದೇಶ ಕಟ್ಟುವುದಾಗಿ ಗುಡುಗುತಿದೆ ಜೆನ್ ಝೀ ಪಡೆ! ಈ…

17 hours ago

ಓದುಗರ ಪತ್ರ: ಓದುಗರ ಪತ್ರ ಚಾಮುಂಡಿಬೆಟ್ಟ: ನೋ-ಫ್ಲೈಝೋನ್ ಆಗಲಿ

ತಿರುಪತಿಯ ಮಾದರಿಯಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೂ ನೋ -ಫ್ಲೈಝೋನ್ ಘೋಷಣೆಗೆ ಗಂಭೀರವಾಗಿ ಪರಿಶೀಲಿಸುವಂತೆ ಸಂಸದ ಯದುವೀರ್ ಅವರು ಕೇಂದ್ರ ನಾಗರಿಕ ವಿಮಾನಯಾನ…

17 hours ago

ಓದುಗರ ಪತ್ರ: ಪ್ರೇಕ್ಷಕರ ಆಸಕ್ತಿಗೆ ತಕ್ಕಂತೆ ಕಾರ್ಯಕ್ರಮ ಆಯೋಜಿಸಿ

ಈ ವರ್ಷದ ನಾಡ ಹಬ್ಬ ದಸರಾದಲ್ಲಿ ನಡೆಯುವ ಕವಿಗೋಷ್ಠಿಗೆ, ಕವಿಗೋಷ್ಠಿಯ ಉಪಸಮಿತಿಯವರು ಅರ್ಜಿ ಸಲ್ಲಿಸಲು ತಿಳಿಸಿದ್ದಾರೆ. ಪ್ರಧಾನ ಕವಿಗೋಷ್ಠಿ, ಯುವ…

17 hours ago