ಕೆಜಿಎಫ್‌ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆದ ರಾಕಿಂಗ್ ಸ್ಟಾರ್‌ ಯಶ್‌ ಸದ್ಯ ಕೆಜಿಎಫ್‌ ಸರಣಿಗಳು ಬಂದು ಹೋಗಿ ಒಂದುವರೆ ವರ್ಷ ಕಳೆದರೂ ಕೂಡ ಯಶ್‌ ತಮ್ಮ ಮುಂದಿನ ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್‌ ನೀಡಿಲ್ಲ. ಹೀಗಾಗಿ ರಾಕಿ ಬಾಯ್‌ ಅಭಿಮಾನಿಗಳು ಬೆಸರದಿಂದಲೇ ಮುಂದಿನ ಸಿನಿಮಾಗಾಗಿ ಕಾದು ಕುಳಿತಿದ್ದಾರೆ. ಈ ನಡುವೆ ಆಗಾಗ ಯಶ್‌ 19 ಬಗ್ಗೆ ಗಾಳಿಸುದ್ದಿಗಳು ಹರಿದಾಡುತ್ತಿರುತ್ತವೆ. ಇದೀಗ ಯಶ್‌ 19 ಸಿನಿಮಾಗೆ ಕೌಂಟ್‌ ಡೌನ್‌ ಶುರುವಾಗಿದೆ ಎನ್ನಲಾಗುತ್ತಿದೆ.

ಇದೀಗ ಯಶ್‌ ಅವರು ಅಪ್ಲೋಡ್‌ ಮಾಡಿರುವ ಇಸ್ಟಾಗ್ರಾಮ್‌ ಪ್ರೊಫೈಲ್‌ ಫೋಟೋದಿಂದ ಯಶ್‌ 19 ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಲೋಡಿಂಗ್‌ ಎಂಬ ಬರಹವಿರುವ ಫೋಟೊವನ್ನು ಯಶ್‌ ಅವರು ಅಪ್‌ಲೋಡ್‌ ಮಾಡಿದ್ದಾರೆ. ಸಧ್ಯ ಈ ಫೋಟೊ ಅವರ ಮುಂದಿನ ಸಿನಿಮಾ ಅಪ್ಡೇಟ್‌ ನೀಡಿದ್ದಾರಾ ಎಂಬ ಕುತೂಹಲ ಹುಟ್ಟಿಸಿದೆ.

ಕಳೆದ ಕೆಲ ದಿನಗಳ ಹಿಂದೆ ಸ್ವತಃ ಯಶ್‌ ಅವರೇ ಬಿಜಿಎಸ್‌ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಹೌದು, ನವೆಂಬರ್‌ 23 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಯಶ್‌ ತಮ್ಮ ಮುಂದಿನ ಚಿತ್ರದ ಅಪ್‌ಡೇಟ್‌ ಅನ್ನು ಸ್ವತಃ ತಾವೇ ನೀಡಲಿದ್ದೇನೆ ಎಂದು ಹೇಳಿಕೊಳ್ಳುವ ಮೂಲಕ ಎಲ್ಲಾ ಊಹಾಪೋಹದ ಸುದ್ದಿಗಳಿಗೂ ತೆರೆ ಎಳೆದಿದ್ದರು.

“ಒಳ್ಳೊಳ್ಳೆ ಹೊಸ ಕಲಾವಿದರು ಬರುತ್ತಾ ಇದ್ದಾರೆ. ಅವರ ಚಿತ್ರಗಳನ್ನು ನೋಡಿ ಬೆನ್ನು ತಟ್ಟಿ. ನಮಗೂ ನೀವು ಬೆನ್ನು ತಟ್ಟಿದ್ದಕ್ಕೆ ನಾನು ಇವತ್ತು ಈ ಸ್ಥಾನದಲ್ಲಿರೋದು. ನೀವೆಲ್ಲಾ ಕೇಳ್ತಾ ಇದೀರ ನನಗೆ ಗೊತ್ತು ಅಪ್‌ಡೇಟ್‌ ಅಂತ. ಒಂದು ವಿಷಯ ಹೇಳ್ತೀನಿ, ನಾನು ಕೂತಿದೀನಿ ಅಂದ್ರೆ ಅದು ನೀವು ಕೊಟ್ಟ ಧೈರ್ಯದಿಂದ. ಹಂಗಂತ ನಾನು ರಿಲ್ಯಾಕ್ಸ್‌ ಆಗಿ ಕೂತಿಲ್ಲ. ನೀವು ಕೊಟ್ಟಿರೋ ಸಕ್ಸಸ್‌ ಜವಾಬ್ದಾರಿ ಅಂತ ತಿಳಿದುಕೊಂಡು ಇನ್ನೂ ಮುಂದೆ ಕೆಲಸ ಮಾಡಬೇಕು ಅಂತ ಮುಂದಿನ ಹಂತಕ್ಕೋಸ್ಕರ ಪ್ರಿಪೇರ್‌ ಆಗ್ತಾ ಇದೀನಿ, ಕೆಲಸ ಮಾಡ್ತೀನಿ. ತಾಳ್ಮೆ ಇಟ್ಟುಕೊಳ್ಳಿ, ನಾನು ಯಾವತ್ತೂ ಅನೌನ್ಸ್‌ಮೆಂಟ್‌ ಅಂತ ಹೇಳಿಲ್ಲ. ತುಂಬಾ ಜನ ಅವರ ಖುಷಿಗೆ ಪ್ರತಿ ಹಬ್ಬ ಬಂದಾಗ, ಯಾವುದೇ ತಿಂಗಳು ಬಂದಾಗಲೂ ಈ ತಿಂಗಳು ಅಪ್‌ಡೇಟ್‌ ಅಂತ ಹೇಳಿ ಹೇಳಿ ನಿಮಗೆ ಆ ತಾಳ್ಮೆ ಲೆವೆಲ್‌ ಹೋಗ್ತಿದೆ, ಮಿಸ್‌ಗೈಡ್‌ ಆಗ್ತಿದೆ. ನಾನೇ ಹೇಳ್ತೀನಿ, ಅಡುಗೆ ಬೆಂದಮೇಲೆ ಬಡಿಸಬೇಕು, ಮುಂಚೆನೇ ಮಾಡೋಕೆ ನನಗೆ ಇಷ್ಟ ಇಲ್ಲ, ಸ್ವಲ್ಪ ತಾಳ್ಮೆ ಇಟ್ಟುಕೊಳ್ಳಿ, ನಿಮಗೆ ಇಷ್ಟವಾಗುವಂತ ಕೆಲಸ ಆಗುತ್ತೆ, ಥ್ಯಾಂಕ್ಯೂ” ಎಂದು ಯಶ್‌ ಹೇಳಿಕೆ ನೀಡಿದರು.

lokesh

Recent Posts

ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆ: ಗರಿಕೆ ಖಂಡಿ ಅರಣ್ಯದಲ್ಲಿ ಶವ ಪತ್ತೆ

ಹನೂರು: ವಿಷ ಕುಡಿದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗರಿಕೆಕಂಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.…

8 hours ago

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಭೇಟಿಯಾದ ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ: ದೆಹಲಿ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಇಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ. ನಿನ್ನೆ…

9 hours ago

ಶ್ರಾವಣ ಮಾಸದ ಕೊನೆಯ ದಿನದ 108 ಕುಂಭಾಭಿಷೇಕ: ಮಲೆ ಮಹದೇಶ್ವರ ಕ್ಷೇತ್ರದಲ್ಲಿ ಭಕ್ತಿ ವೈಭವ

ಹನೂರು: ಸುಕ್ಷೇತ್ರ ಶ್ರೀ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ಶ್ರಾವಣ ಮಾಸದ ಸಮಾರೋಪದ ಅಂಗವಾಗಿ 108 ಕುಂಭಾಭಿಷೇಕ ಮಹೋತ್ಸವ ಹಾಗೂ…

10 hours ago

ಹನೂರು| ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಮೂವರು ಯುವಕರು ದುರ್ಮರಣ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಕೊಪ್ಪ ಗ್ರಾಮದಿಂದ ಕೊಳ್ಳೇಗಾಲಕ್ಕೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ…

11 hours ago

ಓದುಗರ ಪತ್ರ: ದಸರಾ ಚಿತ್ರೋತ್ಸವ ಮುಂದುವರಿಯಲಿ

ಮೈಸೂರು ದಸರಾ ನಮ್ಮ ನಾಡಿನ ಹೆಮ್ಮೆ. ಈ ನಾಡಹಬ್ಬದಲ್ಲಿ ದಸರಾ ಚಿತ್ರೋತ್ಸವವನ್ನು ರದ್ದುಪಡಿಸಿರುವ ನಿರ್ಧಾರ ಖಂಡನೀಯ. ಈ ನಿರ್ಧಾರವನ್ನು ಮರುಪರಿಶೀಲಿಸಿ…

16 hours ago

ಓದುಗರ ಪತ್ರ: ಫಿಲಂ ಸಿಟಿ ಯೋಜನೆ ಆದಷ್ಟು ಬೇಗ ಕಾರ್ಯರೂಪಕ್ಕೆ ಬರಲಿ

ಮೈಸೂರು ಜಿಲ್ಲೆಯ ಇಮ್ಮಾವು ಬಳಿ ಅಂತರಾಷ್ಟ್ರೀಯ ದರ್ಜೆಯ ಫಿಲಂ ಸಿಟಿ ನಿರ್ಮಿಸುವ ಬಗ್ಗೆ ಮೈಸೂರು ಜಿ ಉಸ್ತುವಾರಿ ಸಚಿವರಾದ ಯತೀಂದ್ರ…

16 hours ago