ಕಿರುತೆರೆಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್-10 ದಿನೇ ದಿನೇ ರಂಗೇರುತ್ತಿದ್ದು, ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ, ಗಲಾಟೆ ಎಲ್ಲವನ್ನು ಪಂಚಾಯಿತಿ ಕಟ್ಟೆಯಲ್ಲಿ ಬಗೆ ಹರಸುವ ನಿಟ್ಟಿನಲ್ಲಿ ಕಿಚ್ಚ ಸುದೀಪ ಅವರು ವಾರಾಂತ್ಯದಲ್ಲಿ ಮನೆಯ ಸ್ಪರ್ಧಿಗಳೊಂದಿಗೆ ಚರ್ಚೆ ನಡೆಸುತ್ತಾರೆ.
ಅದರಂತೆಯೇ ಈ ವಾರ (ನವೆಂಬರ್ 25) ನಡೆದ ವಾರದ ಕಥೆ ಕಿಚ್ಚನ ಜೊತೆ ವೀಕೆಂಡ್ ಶೋನಲ್ಲಿ ಕಿಚ್ಚ ಸುದೀಪ್ ಮಾತನಾಡಿದ್ದು, ಒಬ್ಬರಿಗೆ ಕಿಚ್ಚನ ಚಪ್ಪಾಳೆ ನೀಡಿದ್ದಾರೆ. ನೈಜೀರಿಯಾ ಮೂಲದ ಮೈಕಲ್ ಅಜಯ್ ಅವರ ಕನ್ನಡ ಪ್ರೀತಿಯನ್ನು ಸುದೀಪ್ ಪ್ರಶಂಸಿಸಿದ ಕಿಚ್ಚ ತಮ್ಮ ವಾರದ ಕಿಚ್ಚನ ಚಪ್ಪಾಳೆಯನ್ನು ಮೈಕಲ್‌ಗೆ ನೀಡಿದ್ದಾರೆ.
ಮೈಕಲ್ ಕುರಿತು ಕಿಚ್ಚ, : “ಮನೆಯಲ್ಲಿ ಕೋಪ ಬಂದಾಗ, ಅಪ್ಪಟ ಕನ್ನಡ ಮಾತಾನಾಡುವವರ ಬಾಯಲ್ಲೇ ಇಂಗ್ಲಿಷ್ ಬಂದುಬಿಡತ್ತೆ. ಆದ್ರೆ, ಮೊನ್ನೆ ನಡೆದ ಗಲಾಟೆಯಯಲ್ಲಿ ನೀವು ಕೋಪದಲ್ಲಿದ್ರೂ ಕೂಡ ಹುಡುಕಿ ಹುಡುಕಿ ಕನ್ನಡ ಪದಗಳನ್ನೇ ಬಳಸಿ ಉತ್ತರ ಕೊಡ್ತಾ ಇದ್ರಿ, ತಮಗೆ ಕನ್ನಡ ಬರಲ್ಲ ಅನ್ನೋದನ್ನು ನೀವು ಗುರಾಣಿಯಾಗಿ ಬಳಸಿಕೊಳ್ಳಬಹುದಿತ್ತು. ಆದರೆ ನೀವು ಅದನ್ನು ಬಳಸದೇ, ಕನ್ನಡ ಮಾತನಾಡಲು ನೀವು ಹಾಕಿದ ಎಫರ್ಟ್‌ಗೆ ನಮ್ಮ ಮೆಚ್ಚುಗೆ ಇದೆ. ಅದಕ್ಕಾಗಿ ನಾನು ನಿಮ್ಮನ್ನು ಪ್ರಶಂಸಿಸುತ್ತೇನೆ. Opportunist ಅನ್ನೋ ಪದಕ್ಕೆ ಅರ್ಥ ಹುಡುಕಿ ಕೊನೆಗೆ ಅವಕಾಶವಾದಿ ಅಂತ ಹೇಳಿದ್ರಿ” ಎಂದು ಮೈಕಲ್ ಕನ್ನಡ ಪ್ರೇಮದ ಬಗ್ಗೆ ಕಿಚ್ಚ ಸುದೀಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೈಕಲ್‌ಗೆ ಕಿಚ್ಚನ ಚಪ್ಪಾಳೆ
‘ಕಳೆದ ವಾರ ಕಿಚ್ಚನ ಚಪ್ಪಾಳೆ ನಡೆದಿರಲಿಲ್ಲ. ಆದರೆ ಈ ವಾರ ನೀಡುತ್ತಿದ್ದೇನೆ. ಈ ವಾರ ಒಬ್ಬ ವ್ಯಕ್ತಿಗೆ ಆಟದ ಮೇಲೆ ಫೋಕಸ್ ಜಾಸ್ತಿ ಆಗುತ್ತದೆ, ಎಫರ್ಟ್ ಜಾಸ್ತಿ ಕಾಣಿಸುತ್ತದೆ. ಸ್ಟ್ರಾಟರ್ಜಿ ಚೆನ್ನಾಗಿತ್ತು. ಟೀಮ್ ಜೊತೆಗೆ ಚೆನ್ನಾಗಿ ಸ್ಪಂದಿಸುತ್ತಾರೆ, ಚೆನ್ನಾಗಿ ಆಡುತ್ತಾರೆ. ಅಭಿಪ್ರಾಯಗಳನ್ನು ಓಪನ್ ಆಗಿ ಮಾತನಾಡುತ್ತಾರೆ. ಅದ್ಭುತವಾಗಿ ನನ್ನ ಕಣ್ಣಿಗೆ ಕಾಣಿಸಿದ್ದು ಮೈಕಲ್ ಅವರು. ಈ ವಾರ ಕಿಚ್ಚನ ಚಪ್ಪಾಳೆ ಮೈಕಲ್‌ಗೆ ಹೋಗುತ್ತಿದೆ. ನೀವು ಕನ್ನಡ ಮಾತನಾಡಲು ಹಾಕಿದ ಎಫರ್ಟ್ ಒಂಚೂರು ಎದ್ದು ಕಾಣಿಸ್ತು. ಅದೇ ತುಂಬ ಪ್ಲಸ್ ಆಯ್ತು ಮೈಕಲ್’ ಎಂದು ಕಿಚ್ಚ ಸುದೀಪ್ ಹೇಳಿದರು.
ಕಿಚ್ಚ ಸುದೀಪ್ ಅವರು ಕಿಚ್ಚನ ಚಪ್ಪಾಳೆ ನೀಡಿದ್ದಕ್ಕೆ ಮೈಕಲ್ ಅವರು ಧನ್ಯವಾದಗಳನ್ನು ತಿಳಿಸಿದರು. ಸಾಮಾಜಿಕ ಜಾಲತಾಣದಲ್ಲೂ ಮೈಕಲ್ ಅವರ ಆಟದ ರೀತಿಗೆ ಮತ್ತು ಅವರಿಗೆ ಕನ್ನಡ ಭಾಷೆ ಮೇಲೆ ಇರುವ ಪ್ರೀತಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…