ಚಿತ್ರ ಮಂಜರಿ

ಇನ್ನೊಬ್ಬರಿಗೆ ಹೇಳುವ ಮೊದಲು ನಾವು ಪಾಲಿಸಬೇಕು

ಹೊಸ ವರ್ಷಕ್ಕೆ ಹಿರಿಯ ನಟಿ ಸುಧಾರಾಣಿ ಸಂಕಲ್ಪ, ಅಂದೋಲನ ಓದುಗರಿಗಾಗಿ ವಿಶೇಷ ಬರಹ

ನಮಸ್ಕಾರ… ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಹೊಸ ವರ್ಷ ಅಂದಾಕ್ಷಣ ಸಾಮಾನ್ಯವಾಗಿ ಎಲ್ಲರೂ ರೆಸೊಲ್ಯೂಶನ್ಸ್ ಮಾಡಿಕೊಳ್ಳುತ್ತಾರೆ. ಹೊಸ ಕ್ಯಾಲೆಂಡರ್ ವರ್ಷ ಎನ್ನುವ ಕಾರಣಕ್ಕೆ. ಜನವರಿ 1 ಎಂದ ತಕ್ಷಣ, ಇನ್ನು ಮೇಲೆ ನಾನು ಹೀಗಿರ್ತೀನಿ, ಹೀಗೆ ಮಾಡ್ತೀನಿ, ಈ ಕೆಲಸಗಳನ್ನು ಮಾಡಬೇಕು, ಹೀಗೆ ಬೇರೆಬೇರೆ ಜನ ಬೇರೆಬೇರೆ ತರದಲ್ಲಿ ಬೇರೆಬೇರೆ ರೆಸೊಲ್ಯೂಶನ್‌ಗಳನ್ನು ಮಾಡಿಕೊಳ್ಳುತ್ತಾರೆ.

ಆದರೆ ನಮಗೆಲ್ಲರಿಗೂ ಗೊತ್ತಿರುವ ವಿಷಯ ಎಂದರೆ, ಸಾಮಾನ್ಯವಾಗಿ ಒಂದು ವಾರದ ಮೇಲೆ ಈ ನಿರ್ಧಾರಗಳನ್ನು ಪಾಲಿಸುವುದಿಲ್ಲ. ವಿಶೇಷವಾಗಿ ಅದು ಎಲ್ಲಿ ಅಂದರೆ, ನಾನು ವರ್ಕ್‌ಔಟ್ ಮಾಡ್ತೀನಿ, ಆರೋಗ್ಯಕಾಪಾಡಲು ಬೇಕಾದ ಆಹಾರ ತಿನ್ತೀನಿ… ಇಂತಹ ವಿಚಾರಗಳಲ್ಲಿ ಹಳಿ ತಪ್ಪಿ ಹೋಗ್ತೀವಿ.
ವಿಶೇಷವಾಗಿ ಈಗಿನ ಜೀವನಶೈಲಿ, ಜಾಗತೀಕರಣ, ಈ ದಿನಗಳ ಕೊರಳು ಕೊಯ್ಯುವ ಸ್ಪರ್ಧೆ, ಪ್ರತಿಯೊಂದರಲ್ಲೂ ಹೋಲಿಕೆ. ಹೀಗೆ ತುಂಬಾನೆ ನಮ್ಮ ಸುತ್ತ ಈ ನೆಗೆಟಿವಿಟಿ ಇರುವುದರಿಂದ, ಯಾವ ಚೆಂಡು ನಮ್ಮ ಕೈಯಲ್ಲಿದೆ, ಎಷ್ಟು ಚೆಂಡುಗಳಿವೆ, ಯಾವುದು ತುಂಬ ಮುಖ್ಯವಾದದ್ದು, ಯಾವುದನ್ನು ನಾವು ಜೋಪಾನವಾಗಿ ನೋಡಿಕೊಳ್ಳಬೇಕು ಎನ್ನುವುದನ್ನು ನಾವು ಮರೆತು ಹೋಗ್ತಾ ಇದ್ಧೀವಿ. ವಿಶೇಷವಾಗಿ ಯುವಪೀಳಿಗೆ.

ನಾನು ಏನು ಹೇಳಲು ಬಂದೆ ಅಂದರೆ, ಆ ಎರಡು ಚೆಂಡುಗಳಲ್ಲಿ ಒಂದು ನಮ್ಮ ಕೆಲಸ, ಅದು ರಬ್ಬರ್ ಚೆಂಡು. ಇನ್ನೊಂದು ನಮ್ಮ ಇಡೀ ಜೀವನ ಅಂತ ಇಟ್ಟುಕೊಳ್ಳಿ. ಅದು ಗಾಜಿನ ಚೆಂಡು. ಅದರಲ್ಲಿ ನಮ್ಮ ಭಾವನೆಗಳಾಗಿರಬಹುದು, ಸಂಬಂಧಗಳಾಗಿರಬಹುದು, ಮೌಲ್ಯಗಳಾಗಿರಬಹುದು, ಅಥವಾ ನಮಗೆ ಜೀವನದಲ್ಲಿ ಮುಖ್ಯವಾದ ಮನಶ್ಶಾಂತಿ, ಸಂತೋಷ, ಇದೆಲ್ಲ ಕೂಡಿರುವಂತಹದು ಆ ಗಾಜಿನ ಚೆಂಡು. ನಾವು ಈ ಜಗ್ಲರಿಯಲ್ಲಿ ಎಲ್ಲೋ ಒಂದು ಕಡೆ ಆ ರಬ್ಬರ್ ಬಾಲ್ ಅಂದ್ರೆ ನಮ್ಮ ಈ ಕೆಲಸ, ಪ್ರಾಪಂಚಿಕ ಅಗತ್ಯದ ವಸ್ತುಗಳು ಏನಿವೆ, ದುಡ್ಡು, ಕಾಸು, ಸ್ಥಾನ, ಹೆಸರು, ಈ ಸಮಾಜದಲ್ಲಿ ಅಂತಸ್ತು, ಇವೆಲ್ಲ ತುಂಬಿರುವಂತಹದ್ದು ಆ ರಬ್ಬರ್ ಚೆಂಡು. ಬರೀ ಅದರ ಕಡೆಗೇ ಗಮನ ಕೇಂದ್ರೀಕರಿಸುತ್ತಾ, ನಮ್ಮ ಗಾಜಿನ ಚೆಂಡು ಏನಿದೆ ನಮ್ ಒಂದು ಸಹಾನುಭೂತಿ, ಕನಿಕರ, ಅನುಕಂಪ ಇವೆಲ್ಲ ಕೂಡಿರುವುದನ್ನು ಮರೆತುಬಿಡುತ್ತಿದ್ದೇವೆ.

ಆ ರಬ್ಬರ್ ಚೆಂಡನ್ನು ಹಿಡಿಯುವ ಧಾವಂತದಲ್ಲಿ, ನಮ್ಮ ಆರೋಗ್ಯವನ್ನೂ ಒಳಗೊಂಡ ಗಾಜಿನಚೆಂಡು, ಕೈಜಾರಿ ಬೀಳ್ತಾನೇ ಇರುತ್ತೆ. ಬಿದ್ದಾಗ ಕೆಲವೊಮ್ಮೆ ಅದು ಸ್ವಲ್ಪ ಸಿಡಿದುಹೋಗಬಹುದು, ಕೆಲವೊಮ್ಮೆ ಬಿರುಕು ಬಿಡಬಹುದು, ಇನ್ನು ಕೆಲವರ ಜೀವನದಲ್ಲಿ ಅದು ಒಡೆದೇ ಹೋಗಬಹುದು. ಈ ತಪ್ಪನ್ನು ನಾವು ಪದೇಪದೇ ಮಾಡಾ ಇದ್ದೀವಿ.
ಪ್ರತಿ ವರ್ಷದ ನಿರ್ಧಾರ ಇದನ್ನು ಸರಿಯಾಗಿ ಬ್ಯಾಲೆನ್ಸ್ ಮಾಡುತ್ತಾ ಹೋಗುವುದಾಗಬೇಕು. ನನ್ನ ಪ್ರಕಾರ ಈ ಒಂದು ಗಾಜಿನ ಚೆಂಡು ಏನಿದೆ, ಅದು ತುಂಬಾ ಮುಖ್ಯ. ಈ ರಬ್ಬರ್ ಚೆಂಡು ಒಂದು ವೇಳೆ ಬಿದ್ದರೂ ಮತ್ತೆ ಮೇಲೆ ಬರುತ್ತದೆ. ನಾವು ಕೆಲಸ ಕಳ್ಕೊಂಡರೆ, ಮತ್ತೆ ಪ್ರಯತ್ನ ಪಟ್ಟರೆ ಇನ್ನೊಂದು ಕೆಲಸ ಸಿಗಬಹುದು. ದುಡ್ಡು ಆವಶ್ಯಕ. ಆದರೆ ಅದೇ ನಮ್ಮ ಜೀವನವಲ್ಲ. ಆದರೆ ಈ ಗಾಜಿನ ಚೆಂಡು ಏನಿದೆ, ಅದು ನಮ್ಮ ಆರೋಗ್ಯ ಆಗಿರಬಹುದು, ಮನಶ್ಶಾಂತಿ, ಸಂತೋಷ, ಕುಟುಂಬ, ಅಥವಾ ನಮ್ಮ ಮೌಲ್ಯಗಳು, ಸಂಬಂಧಗಳು ಇವೆಲ್ಲ ಒಂದು ಚೂರು ಮುಕ್ಕಾದರೆ, ಒಡೆದು ಹೋದರೆ, ಮತ್ತೆ ಯಾವತ್ತಿಗೂ ಅದು ಸರಿ ಮಾಡೋದಕ್ಕೆ ಆಗೋಲ್ಲ. ಹಾಗಾಗಿ ನನ್ನ ಪ್ರತಿ ವರ್ಷದ ನಿರ್ಧಾರ ಏನು ಅಂತ ಹೇಳಿದರೆ, ಆದಷ್ಟು ಮಟ್ಟಿಗೆ ಈ ಗಾಜಿನ ಚೆಂಡನ್ನು ತುಂಬ ಜೋಪಾನವಾಗಿ ನೋಡ್ಕೊಬೇಕು. ಅದರ ಅರ್ಥ ರಬ್ಬರ್ ಚೆಂಡು ಬಿಡಬೇಕು ಅಂತಲ್ಲ. ಅದು ಬಿದ್ದರೂ ಎಲ್ಲೋ ಬೇರೆ ಅವಕಾಶ ಇದೆ.

ಇನ್ನೊಬ್ಬರಿಗೆ ಹೇಳುವ ಮೊದಲು ನಾವು ಅದನ್ನು ಪಾಲಿಸಬೇಕು. ಹೊಸ ವರ್ಷದಲ್ಲಿ ಇದು ನನ್ನ ನಿರ್ಧಾರ. ಇಂತಹ ಯೋಚನೆ ನಿಮ್ಮದೂ ಆಗಬಹುದಲ್ಲ. ೨೦೨೩ ಎಲ್ಲರಿಗೂ ಶುಭ ತರಲಿ, ಶಾಂತಿ, ನೆಮ್ಮದಿ ಆರೋಗ್ಯ ತರಲಿ ಎಂದು ಹಾರೈಸುತ್ತೇನೆ.

ಎಲ್ಲಕ್ಕಿಂತ ಮುಖ್ಯವಾದ ಅಂಶ, ನನ್ನ ಪ್ರಕಾರ ಜೀವನ ಯಾವತ್ತೂ ಒಂದು ರೀತಿಯ ಜಗ್ಲರಿ. ನಿರಂತರವಾಗಿ ನಾವು ಹಲವಾರು ಪಾತ್ರಗಳನ್ನು ನಿಭಾಯಿಸುತ್ತಿರುತ್ತೇವೆ. ನಾವು ಈ ಸರ್ಕಸ್‌ನಲ್ಲಿ ನೋಡಿರುತ್ತೇವಲ್ಲ, ಮೂರುನಾಲ್ಕು ಚೆಂಡುಗಳನ್ನು ಮೇಲಕ್ಕೆ ಎಸೆದು ಹಿಡಿಯುತ್ತಿರುತ್ತಾರಲ್ಲ ಹಾಗೆ. ಅದರಲ್ಲಿ ಯಾವ ಚೆಂಡು ಮುಖ್ಯವಾದುದು ಎಂದು ಮರೆತಿರುತ್ತೇವೆ. ನಾವು ಅದರ ಕಡೆ ಪೂರ್ತಿ ಗಮನಾನೇ ಕೊಡುವುದಿಲ್ಲ.

andolana

Recent Posts

ಓದುಗರ ಪತ್ರ: ವಿ…ರಾಮ ..!

ದೇಶದ ತುಂಬಾ ಇಂದು ಭಕ್ತ ಗಣ ಮಾಡುತ್ತಿದೆ ಜಪ ರಾಮ ರಾಮ... ಆ ಟ್ರಂಪಣ್ಣನೂ ಜಪಿಸುತ್ತಿದ್ದಾರಂತೆ ಯಾವಾಗ ಘೋಷಿಸುತ್ತದೆಯೋ ಇರಾನ್,…

3 hours ago

ಓದುಗರ ಪತ್ರ: ಗಿಡಗಳನ್ನು ನೆಟ್ಟು ಪರಿಸರ ಉಳಿಸಿ

ಕೆಲವು ತಿಂಗಳ ಹಿಂದೆ ಹೈದರಾಲಿರಸ್ತೆಯ ಎರಡೂ ಬದಿ ೪೦ ಮರಗಳನ್ನು ಹೊಂದಿ ಹಸಿರು ಕಂಗೊಳಿಸುತ್ತಿತ್ತು. ರಸ್ತೆ ಅಗಲೀಕರಣದ ನೆಪದಲ್ಲಿ ಅಹೋರಾತ್ರಿ…

3 hours ago

ಓದುಗರ ಪತ್ರ: ಹಗಲು ದರೋಡೆ ನಿಲ್ಲಿಸಿ

ಇತ್ತೀಚಿನ ದಿನಗಳಲ್ಲಿ ಬೆಂಗಳೂರು, ಮೈಸೂರು, ಹೈದರಾಬಾದ್, ಮುಂಬೈನಂತಹ ನಗರ ಪ್ರದೇಶಗಳಲ್ಲಿ ಓಲಾ, ಊಬರ್, ರ‍್ಯಾಪಿಡೋ, ನಮ್ಮ ಯಾತ್ರೆ ಎಂಬ ಆಪ್…

3 hours ago

‘ಕೆಡಿ’ ಹಾಡು, ‘ಲವ್ ಮಾಕ್‌ಟೈಲ್ ೩’, ಕಥೆಯ ಆತ್ಮ, ನಿರೂಪಣೆ, ಕೃತಿಸ್ವಾಮ್ಯಗಳ ಸುತ್ತ

ಕನ್ನಡ ಚಿತ್ರರಂಗ ಸದ್ದು ಮಾಡುತ್ತಿದೆ. ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಎಲ್ಲ ಮುಖಗಳ ಪರಿಚಯವೂ ಈಗ ಆಗತೊಡಗಿದೆ. ನಿರ್ಮಾಪಕ ಕನಕಪುರ…

3 hours ago

ಸಮರ್ಪಕ ನಿರ್ವಹಣೆಯಿಲ್ಲದೇ ಸ್ಥಗಿತಗೊಂಡ ಕುಡಿಯುವ ನೀರಿನ ಘಟಕಗಳು

ಮಹಾದೇಶ್ ಎಂ.ಗೌಡ ಹನೂರು: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ೨೪ ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ…

3 hours ago

ಭೇರ್ಯ ಗ್ರಾಪಂಗೆ ೨ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ

ಭೇರ್ಯ ಮಹೇಶ್ ಡಿಜಿಟಲ್ ಗ್ರಂಥಾಲಯ, ಸ್ವಚ್ಛತೆ, ನೈರ್ಮಲ್ಯ, ನೀರು ಸರಬರಾಜು, ಇನ್ನಿತರ ವಿಭಾಗಗಳಲ್ಲಿ ವಿಶೇಷ ಸಾಧನೆ ಭೇರ್ಯ: ಭಾರತದ ನಿಜವಾದ…

3 hours ago