ಇತ್ತೀಚೆಗೆ ಡೀಪ್ ಫೇಕ್ ತಂತ್ರಜ್ಙಾನದ ಹಾವಳಿ ಹೆಚ್ಚಾಗಿದೆ. ಕೆಲದಿನಗಳ ನಟಿ ರಶ್ಮಿಕಾ ಮಂದಣ್ಣ, ಕಾಜೊಲ್, ಅವರ ಡೀಪ್ ಫೇಕ್ ವಿಡಿಯೋ ಸಖತ್ ವೈರಲ್ ಆಗಿ ಸಂಚಲನ ಸೃಷ್ಟಿಸಿತ್ತು. ಇದೀಗ ನಟಿ ಆಲಿಯಾ ಭಟ್ ಅವರಿಗೂ ಕೂಡ ಡೀಪ್ ಫೇಕ್ ಸಂಕಷ್ಟ ಎದುರಾಗಿದೆ.
ಅರೆಬರೆ ಬಟ್ಟೆ ಧರಿಸಿರುವ ಯುವತಿಯ ದೇಹಕ್ಕೆ ಡೀಪ್ ಫೇಕ್ ತಂತ್ರಜ್ಙಾನ ಬಳಸಿ ನಟಿ ಆಲಿಯಾ ಭಟ್ ಅವರ ಮುಖವನ್ನು ಅಂಟಿಸಿ ವೈರಲ್ ಮಾಡಲಾಗಿದೆ.
ಡೀಪ್ ಫೇಕ್ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಸೈಬರ್ ಕ್ರೈಂ ತಂಡ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಆದರೂ ಕೂಡ ಡೀಪ್ ಫೇಕ್ ಹಾವಳಿ ನಿಂತಿಲ್ಲ.
ಕೆಲ ದಿನಗಳ ಹಿಂದೆ ನಟಿ ರಶ್ಮಿಕಾ ಮಂದಣ್ಣ ಅವರು ತುಂಡುಡುಗೆ ಧರಿಸಿ ಲಿಫ್ಟ್ ಪ್ರವೇಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಅಸಲಿಗೆ ಜರಾ ಪಟೇಲ್ ಎಂಬ ಯುವತಿಯ ವಿಡಿಯೋಗೆ ರಶ್ಮಿಕಾ ಮಂದಣ್ಣ ಅವರ ಮುಖವನ್ನು ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಮಾರ್ಪ್ ಮಾಡಲಾಗಿತ್ತು. ಈ ಕುರಿತು ಪತ್ರಕರ್ತ ಅಮಿತ್ ಫ್ಯಾಕ್ಟ್ ಚೆಕ್ ಮಾಡಿ ಇದು ಡೀಪ್ ಫೇಕ್ ವಿಡಿಯೋ ಎಂದು ಸ್ಪಷ್ಟನೆ ನೀಡಿದ್ದರು.
ಇದೇ ರೀತಿ ಯುವತ್ತಿಯೊಬ್ಬರು ಬಟ್ಟೆ ಬದಲಿಸುತ್ತಿರುವ ವಿಡಿಯೋವೊಂದಕ್ಕೆ ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ಬಿ ಟೌನ್ ನ ಕೃಷ್ಣ ಸುಂದರಿ ಕಾಜೋಲ್ ಅವರ ಮುಖವನ್ನು ಎಡಿಟ್ ಮಾಡಿ ವೈರಲ್ ಮಾಡಲಾಗಿತ್ತು.
ಅಸಲಿಗೆ ಈ ವಿಡಿಯೋವನ್ನು ಜೂನ್ 5 ರಂದು ಟಿಕ್ ಟಾಕ್ ನಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್ ಒಬ್ಬರು, ಗೆಟ್ ರೆಡಿ ವಿತ್ ಮಿ ಟ್ರೆಂಡ್ ಅಡಿಯಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋವನ್ನು ಬಳಸಿಕೊಂಡು ವಿಡಿಯೋದಲ್ಲಿರುವ ಯುವತಿಯ ಮುಖಕ್ಕೆ ನಟಿ ಕಾಜೋಲ್ ಅವರ ಮುಖವನ್ನು ಜೋಡಿಸಲಾಗಿದೆ ಎಂದು ಪ್ಯಾಕ್ಟ್ ಚೆಕ್ ಮಾಡುವ ಬೂಮ್ ವರದಿ ಮಾಡಿತ್ತು.
• ಕೆ.ಬಿ.ಶಂಶುದ್ದೀನ್ ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಪಟ್ಟಣ ಅಭಿವೃದ್ಧಿಯಾದಂತೆ ಕಳ್ಳತನವೂ ಹೆಚ್ಚಳ; ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ…
ವಡೆಯನಪುರ ಸಮೀಪದ ಕೆರೆ ಒಡೆಯುವ ಆತಂಕ; ಏರಿಯನ್ನು ದುರಸ್ತಿಪಡಿಸಲು ಒತ್ತಾಯ • ಮಹೇಂದ್ರ ಹಸಗೂಲಿ ಗುಂಡ್ಲುಪೇಟೆ: ತಾಲ್ಲೂಕಿನ ವಡೆಯನಪುರದ ಸಮೀಪವಿರುವ…
• ರಮೇಶ್ ಪಿ.ರಂಗಸಮುದ್ರ ಪಕ್ಷಿಗಳಿಗೂ ಕೃಷಿಗೂ ಅವಿನಾಭಾವ ಸಂಬಂಧವಿದೆ. ಪಕ್ಷಿಗಳು ಮಾನವನಿಗಿಂತಲೂ ಹೆಚ್ಚಾಗಿ ಪ್ರಕೃತಿಯೊಡನೆ ಬೆರೆತಿವೆ. ಸಸ್ಯ ವೈವಿಧ್ಯತೆಯ ನಡುವೆ…
ಪ್ರತಿ ಕ್ವಿಂಟಾಲ್ ಉಂಡೆ ಕೊಬ್ಬರಿಗೆ 100 ರೂ. ಹಾಗೂ ಹೋಳಾದ ಕೊಬ್ಬರಿಗೆ 420 ರೂ. ದರ ಹೆಚ್ಚಿಸಲಾಗಿದೆ ಎಂದು ಕೇಂದ್ರ…
• ಜಿ.ಕೃಷ್ಣ ಪ್ರಸಾದ್ ಕಾವೇರಿ ಬಯಲಿನಲ್ಲಿ ಭತ್ತದ ಕಟಾವು ಶುರುವಾಗಿದೆ. ದೈತ್ಯ ಗಾತ್ರದ ಕಟಾವು ಯಂತ್ರಗಳು ಗದ್ದೆಗೆ ಲಗ್ಗೆ ಇಟ್ಟಿವೆ.…
ರಾಜ್ಯ ಬಿಜೆಪಿಯ ಆಂತರಿಕ ಸಂಘರ್ಷ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಒಂದು ಕಡೆ ಪಕ್ಷಾಧ್ಯಕ್ಷ ವಿಜಯೇಂದ್ರ ಅವರ ಬಣ ಮತ್ತೊಂದು ಕಡೆ…