ಚಿತ್ರ ಮಂಜರಿ

ಅಕ್ಷಯ್‌ ಕುಮಾರ್‌ಗೆ ಕಪಾಳಮೋಕ್ಷ ಮಾಡಿ 10 ಲಕ್ಷ ರೂ. ಬಹುಮಾನ ಗೆಲ್ಲಿ : ರಾಷ್ಟ್ರೀಯ ಹಿಂದೂ ಪರಿಷತ್ ಭಾರತ್ ಸಂಘಟನೆ

ಅಕ್ಷಯ್ ಕುಮಾರ್ ಅವರು OMG 2 ಚಿತ್ರದಲ್ಲಿ ಶಿವನ ಮೆಸೆಂಜರ್‌ ಪಾತ್ರ ಮಾಡಿದ್ದಾರೆ. ಅಲ್ಲದೆ, ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಕುರಿತ ಅಂಶ ಚಿತ್ರದಲ್ಲಿದೆ. ಈ ಮೂಲಕ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಬಾಲಿವುಡ್ ನಟನ ಮೇಲೆ ಕಪಾಳಮೋಕ್ಷ ಅಥವಾ ಉಗುಳುವ ಯಾರಿಗಾದರೂ ರಾಷ್ಟ್ರೀಯ ಹಿಂದೂ ಪರಿಷತ್ ಭಾರತ್ ಸಂಘಟನೆ 10 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

ಬಾಲಿವುಡ್‌ ಸ್ಟಾರ್‌ ಅಕ್ಷಯ್‌ ಕುಮಾರ್‌ ಅವರ OMG 2 ಬಾಲಿವುಡ್‌ ಚಿತ್ರ ಶುಕ್ರವಾರ ಬಿಡುಗಡೆಯಾಗಿದೆ. ಆದರೆ, ಈ ಚಿತ್ರಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಬಾಲಿವುಡ್ ನಟನ ಮೇಲೆ ಕಪಾಳಮೋಕ್ಷ ಅಥವಾ ಉಗುಳುವ ಯಾರಿಗಾದರೂ ರಾಷ್ಟ್ರೀಯ ಹಿಂದೂ ಪರಿಷತ್ ಭಾರತ್ ಸಂಘಟನೆ ಬಹುಮಾನವನ್ನು ಘೋಷಿಸಿದೆ.

ಅಕ್ಷಯ್ ಕುಮಾರ್ ಅವರು OMG 2 ಚಿತ್ರದಲ್ಲಿ ಶಿವನ ಮೆಸೆಂಜರ್‌ ಪಾತ್ರ ಮಾಡಿದ್ದಾರೆ. ಅಲ್ಲದೆ, ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಕುರಿತ ಅಂಶ ಚಿತ್ರದಲ್ಲಿದೆ. ಈ ಮೂಲಕ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕಾಗಿ ಬಾಲಿವುಡ್ ನಟನ ಮೇಲೆ ಕಪಾಳಮೋಕ್ಷ ಅಥವಾ ಉಗುಳುವ ಯಾರಿಗಾದರೂ ರಾಷ್ಟ್ರೀಯ ಹಿಂದೂ ಪರಿಷತ್ ಭಾರತ್ ಸಂಘಟನೆ 10 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.

ಡ್ರೆಡ್‌ಲಾಕ್‌ ಮತ್ತು ಬೂಟುಗಳೊಂದಿಗೆ ಅಕ್ಷಯ್‌ ಕುಮಾರ್‌ ಅವರ ಲುಕ್‌, ಕಚೋರಿಗಳನ್ನು ಖರೀದಿಸುವುದು ಮತ್ತು ಕೊಳಕು ಕೊಳದಲ್ಲಿ ಸ್ನಾನ ಮಾಡುವ ಬಗ್ಗೆ ಅವರು ವಿಶೇಷವಾಗಿ ಅಸಮಾಧಾನಗೊಂಡಿದ್ದಾರೆ ಎಂದು ರಾಷ್ಟ್ರೀಯ ಹಿಂದೂ ಪರಿಷತ್ ಭಾರತ್ ಅಧ್ಯಕ್ಷ ಗೋವಿಂದ್ ಪರಾಶರ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಇದು ಶಿವನ ಪ್ರತಿಷ್ಠೆಗೆ ಧಕ್ಕೆ ತರುತ್ತಿದೆ ಎಂದೂ ಅವರು ಹೇಳಿದ್ದಾರೆ. ಹಾಗೂ, ಸೆನ್ಸಾರ್ ಮಂಡಳಿ ಮತ್ತು ಕೇಂದ್ರ ಸರ್ಕಾರದಿಂದ ಚಿತ್ರವನ್ನು ನಿಷೇಧಿಸುವಂತೆ ಸಂಘಟನೆಯು ಒತ್ತಾಯಿಸಿದೆ ಎಂದೂ ವರದಿಯು ಸೂಚಿಸುತ್ತದೆ.

ಈ ಮದ್ಯೆ, OMG 2 ಬಿಡುಗಡೆಯಾದ ಮೊದಲ ದಿನದಂದು ಬಾಕ್ಸ್ ಆಫೀಸ್‌ನಲ್ಲಿ 10.26 ಕೋಟಿ ರೂ. ಗಳಿಕೆ ಮಾಡಿದೆ. ಅದೇ ದಿನ ಬಿಡುಗಡೆಯಾದ ಸನ್ನಿ ಡಿಯೋಲ್‌ನ Gadar 2 ಚಿತ್ರ 40 ಕೋಟಿ ರೂ. ಗಳಿಸುವಲ್ಲಿ ಯಶಸ್ವಿಯಾಗಿದೆ. OMG 2 ನಲ್ಲಿ ಪಂಕಜ್ ತ್ರಿಪಾಠಿ ಮತ್ತು ಯಾಮಿ ಗೌತಮ್ ಕೂಡ ನಟಿಸಿದ್ದಾರೆ. ಇದು ಭಾರತೀಯ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣದ ಸುತ್ತ ಸುತ್ತುವ ತನ್ನ ಕಥಾವಸ್ತು ಹೊಂದಿರುವ ಹಿನ್ನೆಲೆ ವಿವಾದಗಳನ್ನು ಉಂಟುಮಾಡಿದೆ. ಇನ್ನು, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ ಅದಕ್ಕೆ ವಯಸ್ಕರಿಗೆ ಮಾತ್ರ ಅಂದರೆ A ಪ್ರಮಾಣಪತ್ರ ನೀಡಿದೆ.

ಅಮಿತ್ ರೈ ನಿರ್ದೇಶಿಸಿದ ಈ ಚಿತ್ರವು ಸಾಮಾನ್ಯ ಮನುಷ್ಯನ ಕಥೆಯನ್ನು ಅನುಸರಿಸುತ್ತದೆ. ತಂದೆ ಕಾಂತಿ ಶರಣ್ ಮುದ್ಗಲ್ ನಂಬಿಕೆಯ ಕುಟುಂಬದ ವ್ಯಕ್ತಿ, ಅವರು ತಮ್ಮ ಪ್ರೀತಿಯ ಮಗನನ್ನು ರಕ್ಷಿಸಲು ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುತ್ತಾರೆ. ಅಕ್ಷಯ್ ಕುಮಾರ್ ಅವರ ಪಾತ್ರ, ಶಿವನು ಕಷ್ಟದ ಸಮಯದಲ್ಲಿ ಅವರಿಗೆ ಮಾರ್ಗದರ್ಶನ ನೀಡುತ್ತಾರೆ ಮತ್ತು ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಅವರ ಮಾರ್ಗದರ್ಶಕನಾಗಿ ನಿರ್ವಹಿಸುತ್ತಾರೆ ಎಂದು ತಿಳಿದುಬಂದಿದೆ.

lokesh

Recent Posts

ಜಾತೀಯತೆ ತೊಲಗಲಿ : ಡಾ.ಯತೀಂದ್ರ ಸಿದ್ದರಾಮಯ್ಯ

ನಂಜನಗೂಡು : ಜಾತೀಯತೆ ಎಂಬುದು ಸಂಪೂರ್ಣವಾಗಿ ತೊಲಗಬೇಕು. ಎಲ್ಲ ಸಮುದಾಯದವರು ನಮ್ಮವರೇ ಎಂದು ತಿಳಿದಾಗ ಮಾತ್ರ ಜಾತೀಯತೆ ದೂರವಾಗಲು ಸಾಧ್ಯ…

9 hours ago

ರಂಗಾಯಣ | ಐದು ದಿನಗಳ ʼನಿರಂತರ ರಂಗ ಉತ್ಸವʼಕ್ಕೆ ತೆರೆ

ಮೈಸೂರು : ನಿರಂತರ ರಂಗ ತಂಡದ ‘ನಿರಂತರ ರಂಗ ಉತ್ಸವ-2025-26’ರ ಐದು ದಿನಗಳ ರಂಗೋತ್ಸವದ ಕೊನೆಯ ದಿನ ‘ಕೊಡಲ್ಲ ಅಂದ್ರೆ…

9 hours ago

ಭೀಕರ ಸರಣಿ ಅಪಘಾತ : ಇಬ್ಬರು ಸಾವು, 20ಕ್ಕೂ ಹೆಚ್ಚು ವಾಹನ ಹಾನಿ

ಬೆಂಗಳೂರು : ನಗರದ ಹೊರವಲಯದ ಆನೇಕಲ್‌ನಲ್ಲಿ ಭಾನುವಾರ ಭೀಕರ ಸರಣಿ ಅಪಘಾತವಾಗಿದೆ. ವೇಗವಾಗಿ ನುಗ್ಗಿ ಬಂದ ಬೃಹತ್ ಕಂಟೈನರ್ ಲಾರಿಯೊಂದು…

9 hours ago

ವಿದ್ಯಾವಂತರಲ್ಲಿ ಹೆಚ್ಚುತ್ತಿರುವ ಮೌಢ್ಯತೆ, ಕಂದಾಚಾರ : ಸಿಎಂ ವಿಷಾದ

ಮಂಡ್ಯ : ಮೌಢ್ಯಗಳನ್ನು ಜನರು ತಿರಸ್ಕರಿಸಿ ಬಸವಾದಿ ಶರಣರು ತಿಳಿಸಿರುವುದನ್ನು ಪಾಲನೆ ಮಾಡಬೇಕು. ವಿದ್ಯಾವಂತರಲ್ಲಿ ಕಂದಾಚಾರ ಹಾಗೂ ಮೌಢ್ಯತೆ ಇರುವುದು…

9 hours ago

ವಸ್ತುಪ್ರದರ್ಶನದಲ್ಲಿ ಜನಾಕರ್ಷಿಸಿದ ಚಿತ್ರ ಸಂತೆ

ಮೈಸೂರು : ನಗರದ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಲಲಿತ ಕಲೆ ಮತ್ತು ಕರಕುಶಲ ಹಾಗೂ ಮಹಿಳಾ ಉದ್ದಿಮೆ ಉಪ…

9 hours ago

ಬಂಧನದ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕನಿಗೆ ಲುಕ್‌ಔಟ್‌ ನೋಟಿಸ್‌ ಜಾರಿ

ಬೆಂಗಳೂರು : ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಬಿಜೆಪಿ ಶಾಸಕ ಬೈರತಿ ಬಸವರಾಜು, ಕಳೆದೆರಡು…

9 hours ago