ಕೆಲ ಸಿನಿಮಾಗಳು ಸೇರಿದಂತೆ ಕನ್ನಡ ಕಿರುತೆರೆಯಲ್ಲಿ ಅಭಿನಯಿಸುವ ಮೂಲಕ ನಿತಿನ್ ಗೋಪಿ ಖ್ಯಾತಿ ಪಡೆದಿದ್ದರು. ನಿತಿನ್ ಗೋಪಿ ಅವರು ಕೊಳಲು ವಾದಕ ಗೋಪಿ ಅವರ ಮಗನಾಗಿದ್ದ ಸಾಹಸಸಿಂದ ವಿಷ್ಣುವರ್ಧನ್ ಜೊತೆ ಹಲೋ ಡ್ಯಾಡಿ ಚಿತ್ರದಲ್ಲಿ ನಟಿಸಿದ್ದರು.
ಇನ್ನು ಕೆರಳಿದ ಕೇಸರಿ, ಮುತ್ತಿನಂಥ ಹೆಂಡತಿ, ನಿಶ್ಯಬ್ಧ, ಚಿರಬಾಂಧವ್ಯ ಸೇರಿದಂತೆ ಹಲವು ಚಿತ್ರಗಳಲ್ಲಿ ನಿತಿನ್ ಗೋಪಿ ಅವರು ನಟಿಸಿದ್ದರು. ನಿತಿನ್ ಗೋಪಿ ಅವರ ನಿಧನಕ್ಕೆ ಅಭಿಮಾನಿಗಳು ಮತ್ತು ಆಪ್ತರು ಕಂಬನಿ ಮಿಡಿದಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಲಾಗುತ್ತಿದೆ.