ಬೆಂಗಳೂರು : ಎರಡು ದಿನಗಳ ಹಿಂದಷ್ಟೇ, ಜನಪ್ರಿಯ ರಿಯಾಲಿಟಿ ಶೋ ಆದ ಕನ್ನಡದ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಅವರು ಹುಲಿ ಉಗುರುಳ್ಳ ಡಾಲರ್ – ಚೈನ್ ಅನ್ನು ತಮ್ಮ ಕೊರಳಿಗೆ ಹಾಕಿಕೊಂಡಿದ್ದರಿಂದ ಅವರನ್ನು ಪೊಲೀಸರು ಬಂಧಿಸಿದ್ದರು. ಆ ವಿಚಾರ ಸುದ್ದಿ ವಾಹಿನಿಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅ. 24ರಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಈಗ ನಟ ದರ್ಶನ್ ಹಾಗೂ ಜನಪ್ರಿಯ ಧರ್ಮಗುರುವಾದ ವಿನಯ್ ಗುರೂಜಿಯವರು ಇದೇ ರೀತಿಯ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಬೆಂಗಳೂರಿನಲ್ಲಿರುವ ಸರ್ವಸಂಘಗಳ ಒಕ್ಕೂಟದ ಅಧ್ಯಕ್ಷರಾದ ಸಿ.ಎಂ. ಶಿವಕುಮಾರ್ ನಾಯಕ್ ಅವರು, ಇವರಿಬ್ಬರ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸುವುದಾಗಿ ಅ. 23ರಂದೇ ಪ್ರಕಟಿಸಿದ್ದರು. ಸಾಮಾಜಿಕ ಜಾಲತಾಣವೊಂದರಲ್ಲಿ ಅವರು ಹಾಕಿದ್ದ ಪೋಸ್ಟ್ ವೈರಲ್ ಆಗಿತ್ತು.
ಆರೋಪವೇನು.? : ಸಿ.ಎಂ. ಶಿವಕುಮಾರ್ ಅವರು ಹಾಕಿರುವ ಪೋಸ್ಟ್ ನ ಪ್ರಕಾರ, “ನಟ ದರ್ಶನ್ ಅವರು ತಮ್ಮದೊಂದು ಫೋಟೋದಲ್ಲಿ ಚಿನ್ನದ ಚೈನ್ ನಲ್ಲಿ ಹುಲಿಯ ಉಗುರು ಇರುವ ಡಾಲರ್ ಅನ್ನು ತಮ್ಮ ಕೊರಳಿಗೆ ಹಾಕಿಕೊಂಡಿದ್ದಾರೆ. ಅತ್ತ, ವಿನಯ್ ಗುರೂಜಿಯವರು ತಮ್ಮ ಭಾವಚಿತ್ರವೊಂದರಲ್ಲಿ ಹುಲಿಯ ಚರ್ಮದ ಮೇಲೆ ಕುಳಿತಿದ್ದಾರೆ.
ಇದು ಕಾನೂನಿನ ಉಲ್ಲಂಘನೆಯಾಗಿದೆ. ಅರಣ್ಯ ಕಾಯ್ದೆಯಡಿ ಇವರನ್ನು ದೂರು ದಾಖಲು ಮಾಡಬೇಕೆಂದು ಸರ್ವ ಸಂಘಟನೆಗಳ ಒಕ್ಕೂಟದಿಂದ ದೂರು ಕೊಡುತ್ತಿದ್ದೇವೆ ಎಂದು ಹೇಳಿರುವ ಅವರು, ಈ ಬರಹದ ಕೆಳಗಡೆ ಒಕ್ಕೂಟದ ಅಧ್ಯಕ್ಷರು ಸಿ.ಎಂ. ಶಿವಕುಮಾರ್ ಎಂದು ತಮ್ಮ ಹೆಸರನ್ನು ಹಾಕಿಕೊಂಡಿದ್ದಾರೆ.
ವರ್ತೂರು ಸಂತೋಷ್ ಪ್ರಕರಣವೇನು? : ಅ. 23ರ ರಾತ್ರಿಯೇ ಬೆಂಗಳೂರಿನ ಹೊರವಲಯದಲ್ಲಿರುವ ರಾಮೋಹಳ್ಳಿಯ ಬಳಿ ಹಾಕಲಾಗಿರುವ ಬಿಗ್ ಬಾಸ್ ಸೆಟ್ ನಿಂದಲೇ ಅರಣ್ಯಾಧಿಕಾರಿಗಳು ಹಾಗೂ ಪೊಲೀಸರು ಸಂತೋಷ್ ಅವರನ್ನು ವಶಕ್ಕೆ ಪಡೆದಿದ್ದರು. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೆ, ಸಂತೋಷ್ ಅವರ ಕೊರಳಲ್ಲಿದ್ದ, ಹುಲಿ ಉಗುರಿನದ್ದು ಎಂದು ಹೇಳಲಾಗಿರುವ ಡಾಲರ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಡಾಲರ್ ನಲ್ಲಿರುವುದು ಹುಲಿಯ ಉಗುರೇ ಅಥವಾ ಅಲ್ಲವೇ ಎಂಬುದನ್ನು ತಿಳಿಯಲು ಲಾಕೆಟನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಇನ್ನು, ವರ್ತೂರು ಸಂತೋಷ್ ಅವರ ಬಂಧನದ ಬಗ್ಗೆ ಸಂತೋಷ್ ಅವರ ತಾಯಿ ಪ್ರತಿಕ್ರಿಯಿಸಿದ್ದು, ಇದೊಂದು ಷಡ್ಯಂತ್ರವಾಗಿದೆ. ನಾವು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುವವರು. ನಮಗೆ ಹುಲಿ ಉಗುರು ಮತ್ತೇನೂ ಗೊತ್ತಿಲ್ಲ. ಕೆಲವು ವರ್ಷಗಳ ಹಿಂದೆ ಪೇಟೆಯಿಂದ ಹಣಕ್ಕೆ ಖರೀದಿಸಿದ ತಂದಿದ್ದಾಗಿ ನನ್ನ ಮಗ (ಸಂತೋಷ್) ಆ ಲಾಕೆಟನ್ನು ನನಗೆ ತೋರಿಸಿದ್ದ. ನಾನು ಅದಕ್ಕೆ ಚಿನ್ನದ ಸರ ಮಾಡಿಸಿಕೊಂಡು ಹಾಕಿಕೋ ಎಂದು ಹೇಳಿದ್ದೆ. ಅದರಂತೆ, ಆತ ಚಿನ್ನದ ಸರವನ್ನು ಮಾಡಿಸಿಕೊಂಡು ಹಾಕಿಕೊಂಡಿದ್ದ. ಇಷ್ಟು ವರ್ಷವಾದ ನಂತರ ಈಗ ಯಾರೋ ದೂರು ನೀಡಿದ್ದಾರೆ. ನನ್ನ ಮನಗ ಏಳ್ಗೆಯನ್ನು ಸಹಿಸಲಾಗದೇ ಇಂಥದ್ದೊಂದು ಷಡ್ಯಂತ್ರವನ್ನು ಮಾಡಲಾಗಿದೆ ಎಂದು ಹೇಳಿದ್ದರು.
ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…
ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ…
ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…
ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…
ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…
ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…