ಚಿತ್ರ ಮಂಜರಿ

28 ದಿನ 30 ಚಿತ್ರಗಳ ಬಿಡುಗಡೆ: ಫೆಬ್ರವರಿಯಲ್ಲಿ ಸಿನಿಮಾ ಸುನಾಮಿ

ಕಳೆದ ವರ್ಷ ಕನ್ನಡ ಚಿತ್ರರಂಗಕ್ಕೆ ಯಶಸ್ಸಿಗಿಂತ, ಸೋಲು ಮತ್ತು ನಷ್ಟವೇ ಹೆಚ್ಚಾಗಿತ್ತು. ೨೦೨೫ರಲ್ಲಿ ಪರಿಸ್ಥಿತಿ ಸ್ವಲ್ಪ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ, ಈ ವರ್ಷದ ಆರಂಭ ಅಷ್ಟೇನೂ ಉತ್ತೇಜಕವಾಗಿಲ್ಲ. ಈ ಒಂದೂವರೆ ತಿಂಗಳಲ್ಲಿ ೩೦ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಿದ್ದು, ಯಾವೊಂದು ಚಿತ್ರವೂ ಯಶಸ್ವಿಯಾಗಲಿಲ್ಲ. ಶೇ.೯೦ ರಷ್ಟು ಚಿತ್ರಗಳು ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವುದಕ್ಕೂ ಸಾಧ್ಯವಾಗಲಿಲ್ಲ.

ಫೆಬ್ರವರಿಯ ಮೊದಲೆರಡು ವಾರಗಳಲ್ಲಿ ಒಟ್ಟು ೧೪ ಚಿತ್ರಗಳು ಬಿಡುಗಡೆಯಾಗಿವೆ. ಅದರಲ್ಲೂ ಮೊದಲ ವಾರವೇ ಎಂಟು ಚಿತ್ರಗಳು ಬಿಡುಗಡೆಯಾಗಿವೆ. ಫೆಬ್ರವರಿ ೦೭ರಂದು ‘ಗಜರಾಮ’, ‘ಭಗೀರಥ’, ‘ಮಿಸ್ಟರ್ ರಾಣಿ’, ‘ತಲ್ವಾರ್’, ‘ಅಧಿಪತ್ರ’, ‘ಅನ್‌ಲಾಕ್ ರಾಘವ’, ‘ಅನಾಮಧೇಯ ಅಶೋಕ್ ಕುಮಾರ್’ ಮತ್ತು ‘ಶರಣರ ಶಕ್ತಿ’ ಚಿತ್ರಗಳು ಬಿಡುಗಡೆಯಾದವು. ಎಂಟೂ ಚಿತ್ರಗಳು ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವಲ್ಲಿ ಸೋತಿವೆ.

ಫೆಬ್ರವರಿ ೧೪ರಂದು ‘ಸಿದ್ಲಿಂಗು ೨’, ‘ಭುವನಂ ಗಗನಂ’, ‘ರಾಜು ಜೇಮ್ಸ್‌ಬಾಂಡ್’, ‘ಜಸ್ಟೀಸ್’ ಮತ್ತು ‘ನಿಮಿತ್ತ ಮಾತ್ರ’ ಚಿತ್ರಗಳು ಬಿಡುಗಡೆಯಾಗಿವೆ. ಈ ಐದು ಚಿತ್ರಗಳಲ್ಲಿ ‘ಸಿದ್ಲಿಂಗು ೨’ ಮತ್ತು ‘ಭುವನಂ ಗಗನಂ’ ಚಿತ್ರಗಳು ತಕ್ಕ ಮಟ್ಟಿಗೆ ಇವೆ ಎಂಬ ಅಭಿಪ್ರಾಯ ಕೇಳಿ ಬಂದರೆ, ಮಿಕ್ಕ ಯಾವ ಚಿತ್ರಗಳ ಬಗ್ಗೆಯೂ ಪ್ರೇಕ್ಷಕರಿಂದ ಪ್ರತಿಕ್ರಿಯೆ ಇಲ್ಲ. ಈ ಎರಡೂ ಚಿತ್ರಗಳು ದೊಡ್ಡ ಕಲೆಕ್ಷನ್ ಏನೂ ಮಾಡುತ್ತಿಲ್ಲ.

ಈ ಶುಕ್ರವಾರ (ಫೆ.೨೧) ದಾಖಲೆಯ ೧೦ ಚಿತ್ರಗಳು ಬಿಡುಗಡೆಯಾಗುತ್ತಿವೆ. ಒಂದೇ ವಾರ ಇಷ್ಟೊಂದು ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಕನ್ನಡ ಚಿತ್ರರಂಗಕ್ಕೆ ಹೊಸದೇನಲ್ಲ. ಹಿಂದೆಯೂ ಬಿಡುಗಡೆಯಾಗಿವೆ. ಆದರೆ, ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ ೧೦ ಚಿತ್ರಗಳು ಒಂದೇ ವಾರ ಬಿಡುಗಡೆಯಾಗುತ್ತಿದೆ. ‘ವಿಷ್ಣುಪ್ರಿಯ,’ ‘ಕ್ಯಾಪಿಟಲ್ ಸಿಟಿ’, ‘ಶ್ಯಾನುಭೋಗರ ಮಗಳು’, ‘ಎಲ್ಲೋ ಜೋಗಪ್ಪ ನಿನ್ನರಮನೆ’, ‘ಎದ್ದೇಳು ಮಂಜುನಾಥ ೨’, ‘ವಿದ್ಯಾ ಗಣೇಶ’, ‘ನನಗೂ ಲವ್ವಾಗಿದೆ’, ‘ಒಲವಿನ ಪಯಣ’, ‘ಗಗನ ಕುಸುಮ’, ‘ಭಾವ ತೀರಯಾನ’ ಮತ್ತು ‘ನಿಮಗೊಂದು ಸಿಹಿಸುದ್ದಿ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ ಯಾವ ಚಿತ್ರ ನಿಲ್ಲುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ.

ಇನ್ನು, ಫೆಬ್ರವರಿ ಕೊನೆಯ ಶುಕ್ರವಾರ (ಫೆ.೨೮) ಈಗಾಗಲೇ ಆರು ಚಿತ್ರಗಳು ಬಿಡುಗಡೆಯಾಗುವುದಾಗಿ ಘೋಷಣೆಯಾಗಿವೆ. ‘೧೯೯೦’, ‘ರಾಕ್ಷಸ’, ‘ಅಪಾಯವಿದೆ ಎಚ್ಚರಿಕೆ’, ‘ಶಭಾಷ್ ಬಡ್ಡಿಮಗನೆ’, ‘ನಾಗವಲ್ಲಿ ಬಂಗಲೆ’ ಮತ್ತು ‘ಮಾಂಕ್ ದಿ ಯಂಗ್’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಆರು ಚಿತ್ರಗಳ ಜೊತೆಗೆ ಕೊನೆಯ ಕ್ಷಣದಲ್ಲಿ ಇನ್ನಷ್ಟು ಚಿತ್ರಗಳು ಬಿಡುಗಡೆಯಾಗುತ್ತವೋ, ಈಗಲೇ ಹೇಳುವುದು ಕಷ್ಟ.

ಒಟ್ಟಾರೆ ಈ ತಿಂಗಳು ೩೦ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗಲಿದ್ದು, ಜನವರಿಯಲ್ಲಿ ಬಿಡುಗಡೆಯಾದ ೨೨ ಚಿತ್ರಗಳನ್ನು ಸೇರಿಸಿದರೆ, ಒಟ್ಟಾರೆ ಮೊದಲೆರಡು ತಿಂಗಳಲ್ಲಿ ೫೨ ಚಿತ್ರಗಳ ಬಿಡುಗಡೆಯನ್ನು ಕಂಡಂತಾಗುತ್ತದೆ. ಮೊದಲೆರಡು ತಿಂಗಳಲ್ಲಿ ಇಷ್ಟೊಂದು ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಚಿತ್ರಗಳ ಬಿಡುಗಡೆ ಸಂಖ್ಯೆಯೇನೋ ಹೆಚ್ಚುತ್ತಲೇ ಇದೆ. ಆದರೆ, ನೋಡುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿದೆ.

ಚಿತ್ರ ಜಾಸ್ತಿ; ಪ್ರಚಾರ ಕಡಿಮೆ

ಚಿತ್ರಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ, ಪ್ರಚಾರ ಮಾತ್ರ ಇಲ್ಲ. ಬಹಳಷ್ಟು ಚಿತ್ರಗಳು ಬಿಡುಗಡೆಯಾಗುತ್ತಿರುವುದೇ ಗೊತ್ತಾಗುತ್ತಿಲ್ಲ. ಚಿತ್ರರಂಗದಲ್ಲಿ ಸಕ್ರಿಯವಾಗಿರುವವರಿಗೇ ಈ ಕಷ್ಟವಾದರೆ, ಜನಸಾಮಾನ್ಯರಿಗಂತೂ ಇಂಥದ್ದೊಂದು ಚಿತ್ರವಿದೆ ಎಂಬುದು ಗಮನಕ್ಕೆ ಬರುತ್ತಿಲ್ಲ. ಈ ತಿಂಗಳು ಬಿಡುಗಡೆಯಾಗುತ್ತಿರುವ ಚಿತ್ರಗಳ ಪೈಕಿ ‘ಭಗೀರಥ’, ‘ಮಿಸ್ಟರ್ ರಾಣಿ’, ‘ತಲ್ವಾರ್’, ‘ಅಧಿಪತ್ರ’, ‘ಅನಾಮಧೇಯ ಅಶೋಕ್‌ಕುಮಾರ್’, ‘ಜಸ್ಟೀಸ್’, ‘ಕ್ಯಾಪಿಟಲ್ ಸಿಟಿ’, ‘ಶ್ಯಾನುಭೋಗರ ಮಗಳು’, ‘ಎಲ್ಲೋ ಜೋಗಪ್ಪ ನಿನ್ನರಮನೆ’, ‘ಎದ್ದೇಳು ಮಂಜುನಾಥ ೨’, ‘ವಿದ್ಯಾಗಣೇಶ’, ‘ನನಗೂ ಲವ್ವಾಗಿದೆ’, ‘ಒಲವಿನ ಪಯಣ’, ‘ಗಗನ ಕುಸುಮ’, ‘ಭಾವತೀರ ಯಾನ’, ‘ರಾಕ್ಷಸ’, ‘ಶಭಾಷ್ ಬಡ್ಡಿಮಗನೆ’, ‘ನಾಗವಲ್ಲಿ ಬಂಗಲೆ’ ಮುಂತಾದ ಚಿತ್ರಗಳ ಬಗ್ಗೆ ಸೂಕ್ತವಾದ ಮಾಹಿತಿಗಳೇ ಇಲ್ಲ. ಕೆಲವು ಚಿತ್ರಗಳ ಪತ್ರಿಕಾಗೋಷ್ಠಿಗಳಾಗಿವೆಯಾದರೂ, ಹೆಚ್ಚು ಪ್ರಚಾರವಿಲ್ಲ

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ: ಮನೆ ಗೇಟುಗಳ ಮುಂದೆ ಅಪರಿಚಿತರ ‘ಕಾರುಬಾರು’

ಮನೆಗಳ ಗೇಟಿನ ಮುಂದೆಯೇ ಅಪರಿಚಿತರ ಕಾರು ನಿಲ್ಲಿಸುವ ಕೆಟ್ಟ ಪರಂಪರೆಯನ್ನು ಅನೇಕ ಕಡೆ ಕಾಣಬಹುದು. ಸೂರ್ಯಬೇಕರಿ ಬಳಿಯ ಎರಡನೇ ಅಡ್ಡರಸ್ತೆಯಲ್ಲಿ…

2 hours ago

ಓದುಗರ ಪತ್ರ: ರೈಲು ನೀರಿನ ಬಾಟಲಿಗೆ ಒಂದು ರೂ. ಹೆಚ್ಚು ವಸೂಲಿ!

ಭಾರತೀಯ ರೈಲ್ವೆಯನ್ನು ನೆಚ್ಚಿಕೊಂಡಿರುವವರು ಕೊಟ್ಯಂತರ ಮಂದಿ ಇದ್ದಾರೆ. ಈ ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ರೈಲು ನಿಲ್ದಾಣಗಳಲ್ಲಿ ರೈಲು ನೀರಿನ ಬಾಟಲಿಗಳ…

2 hours ago

ಓದುಗರ ಪತ್ರ: ಹೆಚ್ಚಿನ ಟಿಕೆಟ್ ದರ ನೀಡಲು ಸಿದ್ಧರಾಗಬೇಕಾ?

ಬೆಲೆ ಹೆಚ್ಚಳವೆಂಬುದು ಈಗ ಅನಿರೀಕ್ಷಿತವಲ್ಲವೆಂಬುದು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿದೆ. ಸದ್ಯದಲ್ಲೆ ಇದಕ್ಕೆ ಸೇರ್ಪಡೆಯಾಗುವಂತಿದೆ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಬಸ್…

2 hours ago

ಬಡಮಕ್ಕಳಿಗೆ ಬೆಚ್ಚಗಿನ ಬದುಕು ನೀಡುವ ಕುಶಾಲ್ ರಾಜ್

ಪಂಜು ಗಂಗೊಳ್ಳಿ ಅವರ ವಾರದ ಅಂಕಣ  ಮಕ್ಕಳ ಶಿಕ್ಷಣಕ್ಕೆ ನೆರವಾಗಲು ‘ಲೋಟಸ್ ಪೆಟಲ್ ಫೌಂಡೇಶನ್’ ಸ್ಥಾಪನೆ  ಜಾರ್ಖಂಡಿನ ರಾಂಚಿಯ ಕುಶಾಲ್ ರಾಜ್…

2 hours ago

ಬಸವನಹುಳು ಸಾಕಣೆಯೂ ಲಾಭದಾಯಕ

ಕೇಶವ್ ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯಿಂದ ಅಚ್ಚರಿಯ ಸಂಶೋಧನೆ! ಮೈಸೂರು: ಬಸವನಹುಳುಗಳನ್ನು ಜಮೀನುಗಳಲ್ಲಿ ರೈತರು ನೋಡಿದರೆ, ನಮ್ಮ…

2 hours ago

ಎಸ್‌ಐಆರ್: ಎನ್.ಆರ್.ಕ್ಷೇತ್ರದಲ್ಲೇ ೧ ಲಕ್ಷ ಮತದಾರರು ಔಟ್

ಕೆ.ಬಿ.ರಮೇಶನಾಯಕ ನಮೂನೆ-೬ ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇನ್ನೂ ಇದೆ ಅವಕಾಶ  ಮೈಸೂರು: ಮುಂಬರುವ ವಿಧಾನಸಭೆ, ಲೋಕಸಭಾ ಚುನಾವಣೆಗೂ…

2 hours ago