ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ರ ಸ್ಪರ್ದಿಗಳಾಗಿದ್ದ ದಿವ್ಯಾ ಉರುಡುಗ ಹಾಗೂ ಅರವಿಂದ್ ಅವರು ಬಿಗ್ ಬಾಸ್ ಮನೆಯಲ್ಲಿಯೇ ಪ್ರೇಮ ಪಕ್ಷಿಗಳಾಗಿದ್ದರು. ಅಂತೆಯೇ ದೊಡ್ಮನೆಯಲ್ಲಿ ಸಖತ್ ಕ್ಲೋಸ್ ಆಗಿದ್ದರು.
ಬಿಗ್ ಬಾಸ್ ಮನೆಯಲ್ಲಿ ಹಲವರಿಗೆ ಪ್ರೇಮಾಂಕುರವಾಗಿತ್ತು ಆ ಪೈಕಿ ದಿವ್ಯಾ ಹಾಗೂ ಅರವಿಂದ್ ಜೋಡಿ ಬಹಳ ವಿಶೇಷವೆನಿಸುತ್ತದೆ.ಈ ಜೋಡಿ ಪರಸ್ಪರ ಭೇಟಿಯಾಗಿ ಇಂದಿಗೆ 1000 ದಿನ ಪೂರ್ಣಗೊಂಡಿದೆ. ಈ ಕುರಿತು ದಿವ್ಯಾ ಉರುಡುಗ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ನಾನು ನಿಮ್ಮೊಂದಿಗೆ 1000 ಸುವರ್ಣ ದಿನಗಳನ್ನು ಕಳೆದಿದ್ದೇನೆ. ನಾನು ನಿಮ್ಮ ಬಗ್ಗೆ ಯೋಚಿಸಿದಾಗಲೆಲ್ಲಾ ಪಡೆಯಲು ಎಷ್ಟೊಂದು ಅದೃಷ್ಟಶಾಲಿ ಎನ್ನಿಸುತ್ತದೆ ಎಂದು ಬರೆದುಕೊಂಡಿದ್ದಾರೆ.
ಅರ್ಧಂಬರ್ಧ ಪ್ರೇಮ ಕಥೆ ಎಂಬ ಸಿನಿಮಾದಲ್ಲಿ ದಿವ್ಯಾ ಉರುಡುಗ ಹಾಗೂ ಅರವಿಂದ್ ಇಬ್ಬರೂ ಕೂಡ ಒಟ್ಟಾಗಿ ನಟಿಸಿದ್ದಾರೆ. ಈ ಸಿನಿಮಾ ಶೀಘ್ರವೇ ತೆರೆಕಾಣಲಿದೆ.ಇದು ಅರವಿಂದ್ ಅವರ ಮೊದಲನೇ ಸಿನಿಮಾ ಆಗಿದೆ. ಲೈಟ್ ಹೌಸ್ ಮೀಡಿಯಾ ಮತ್ತು ಆರ್ ಎಸಿ ವಿಷುವಲ್ಸ್ ಸೇರಿ ಈ ಅರ್ಧಂಬರ್ಧ ಪ್ರೇಮಕಥೆ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ಇತ್ತೀಚೆಗೆ ದಿವ್ಯಾ ಉರುಡುಗ ಹಾಗೂ ಅರವಿಂದ್ ಇಬ್ಬರೂ ಕೂಡ ಒಟ್ಟಿಗೆ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮೇಲ್ನೋಟಕ್ಕೆ ಇದು ಲಗ್ನ ಪತ್ರಿಕೆ ಪೂಜೆ ಎಂಬಂತಿತ್ತು. ಅಭಿಮಾನಿಗಳೂ ಕೂಡ ಇದು ಮದುವೆಯ ಕರೆಯೋಲೆ ಎಂದೇ ಭಾವಿಸಿದ್ದರು. ಆದರೆ ಈ ಜೋಡಿ ಮದುವೆಯ ಕುರಿತಾಗಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ತೆರೆ ಮೇಲಿನ ಪ್ರಣಯ ಪಕ್ಷಿಗಳಾಗಿರುವ ಈ ಜೋಡಿಗಳು ಯಾವಾಗ ಸಪ್ತಪದಿ ತುಳಿಯುತ್ತಾರೆ ಕಾದು ನೋಡಬೇಕಿದೆ.
ಗುಂಡ್ಲುಪೇಟೆ : ತಾಲ್ಲೂಕಿನ ಬರಗಿ ಗ್ರಾಮದ ಜಮೀನುಗಳಲ್ಲಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಕೊಂದುಹಾಕಿದ್ದ ವಿಚಾರವಾಗಿ ಅರಣ್ಯ ಇಲಾಖೆ ಚಿರತೆ…
ಮೈಸೂರು : ಬುಧವಾರವಷ್ಟೇ ಹೆಬ್ಬಾಳ್‌ನಲ್ಲಿ ಶೆಡ್‌ವೊಂದರ ಮೇಲೆ ದಾಳಿ ನಡೆಸಿದ್ದ ಎನ್‌ಸಿಬಿ ಪೊಲೀಸರು, ಮಾದಕ ವಸ್ತು ಮಾರಾಟ ಆರೋಪ ಪ್ರಕರಣದಲ್ಲಿ…
ಹನೂರು : ತಾಲ್ಲೂಕಿನ ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶದ ಬೈಲೂರು ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ತೇಗದ ಮರಗಳನ್ನು ಕಟಾವು…
ಮೈಸೂರು : ವಿಶ್ವವಿದ್ಯಾನಿಲಯಗಳ ಕ್ಯಾಂಪಸ್‌ನಲ್ಲಿ ಜಾತಿ, ಧರ್ಮ,ಲಿಂಗ ಆಧಾರಿತ ಶೋಷಣೆಯನ್ನು ತಡೆಗಟ್ಟಲು ಯುಜಿಸಿಯ ಉದ್ದೇಶಿತ ಹೊಸ ನಿಯಮಾವಳಿಗಳ ಜಾರಿಗೆ ಒತ್ತಾಯಿಸಿ…
ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಖಾದಿ ಬಟ್ಟೆ ಬಳಕೆ ಕಡ್ಡಾಯಗೊಳಿಸಲಾಗಿದೆ. ಪ್ರತಿ ತಿಂಗಳ ಮೊದಲ ಶನಿವಾರ ಖಾದಿ ಬಟ್ಟೆ…
ಹೊಸದಿಲ್ಲಿ : ಮಹತ್ವದ ಬೆಳವಣಿಗೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿದೆ. ವಿಶ್ವವಿದ್ಯಾಲಯ…