Andolana originals

ಜಿಲ್ಲಾ ಯುವ ಒಕ್ಕೂಟದ ಕೈಸೇರಿದ ಯುವ ಭವನ

 ನವೀನ್ ಡಿಸೋಜ

ಮಹಿಳಾ ಕಾಲೇಜಿಗೆ ಕಟ್ಟಡ ಬಿಟ್ಟುಕೊಟ್ಟು ಪರಿತಪಿಸುತ್ತಿದ್ದ ಯುವ ಒಕ್ಕೂಟ; ಕಟ್ಟಡ ದೊರೆತಿರುವುದರಿಂದ ಕಾರ್ಯಚಟುವಟಿಕೆಗೆ ಅನುಕೂಲ 

ಮಡಿಕೇರಿ: ಕೊಡಗು ಜಿಯ ಯುವ ಜನತೆಗೆ ಮಾರ್ಗ ದರ್ಶನ, ವಿವಿಧ ತರಬೇತಿ ಮತ್ತು ಶಿಬಿರ ಆಯೋಜನೆ, ಯುವ ಸಮ್ಮೇಳನ, ಯುವಜನೋತ್ಸವ ಮತ್ತಿತರ ಕಾರ್ಯ ಕ್ರಮ ನಡೆಸಲೆಂದೇ ನಿರ್ಮಿಸಲಾಗಿದ್ದ ಯುವಭವನ ೧೨ ವರ್ಷಗಳ ಬಳಿಕ ಜಿಲ್ಲಾ ಯುವ ಒಕ್ಕೂಟದ ಕೈಸೇರಿದ್ದು, ಇನ್ನು ಮುಂದೆ ಕಾರ್ಯಚಟುವಟಿಕೆ ನಡೆಸಲು ಅನುಕೂಲವಾಗಲಿದೆ.

೨೦೦೪ರಲ್ಲಿ ಜಿಲ್ಲಾ ಯುವ ಭವನ ಕಟ್ಟಡ ನಿರ್ಮಾಣಕ್ಕಾಗಿ ಅಂದಿನ ಜಿಲ್ಲಾಧಿಕಾರಿಗಳು ಜಾಗ ಗುರುತು ಮಾಡಿದ್ದರು. ೨೦೦೫ರಲ್ಲಿ ಅಂದಿನ ಸಂಸದ ಡಿ.ವಿ.ಸದಾನಂದಗೌಡ ೧ ಲಕ್ಷ ರೂ. ಅನುದಾನ ನೀಡಿ ಭೂಮಿ ಪೂಜೆ ನೆರವೇರಿಸಿದ್ದರು. ೨೦೧೩ರಲ್ಲಿ ನಗರದ ಸುದರ್ಶನ ವೃತ್ತದ ಬಳಿ ಸುಸಜ್ಜಿತ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು.

೨೦೧೪-೧೫ನೇ ಸಾಲಿನಲ್ಲಿ ಮಡಿಕೇರಿ ನಗರದಲ್ಲಿ ಹೊಸದಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಭಿಸಲು ಶಿಕ್ಷಣ ಇಲಾಖೆ ಅನುಮತಿ ನೀಡಿತ್ತು. ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರು ಕಾಲೇಜು ಸ್ಥಾಪನೆಗೆ ವಿಶೇಷ ಮುತುವರ್ಜಿ ವಹಿಸಿದ್ದರು. ೨೦೧೪-೧೫ನೇ ಸಾಲಿನಲ್ಲಿ ಕಾಲೇಜು ಆರಂಭವಾದರೂ ಸ್ವಂತ ಕಟ್ಟಡವಿಲ್ಲದೆ, ಜಿಲ್ಲಾ ಯುವ ಒಕ್ಕೂಟಕ್ಕೆ ಸೇರಿದ ಯುವ ಭವನ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಾಲೇಜು ಆರಂಭಿಸಲಾಗಿತ್ತು.

ಬಳಿಕ ೧೨ ವರ್ಷಗಳು ಕಳೆದರೂ ಜಿಲ್ಲಾ ಯುವಭವನ ಯುವ ಒಕ್ಕೂಟದ ಕೈ ಸೇರದೆ ಮಾಸಿಕ ಸಭೆ, ವಿವಿಧ ಚಟುವಟಿಕೆ ನಡೆಸಲು ಸೂಕ್ತ ಸ್ಥಳವಿಲ್ಲದೆ ಬಾಡಿಗೆ ಕಟ್ಟಡಗಳಲ್ಲಿ ನಡೆಸುವಂತಾಗಿತ್ತು. ಕಟ್ಟಡ ಹಸ್ತಾಂತರಿಸುವಂತೆ ಸಾಕಷ್ಟು ಬಾರಿ ಜಿಲ್ಲಾಧಿಕಾರಿ, ಶಾಸಕರಿಗೆ ಮನವಿ ಸಲ್ಲಿಸಲಾಗಿತ್ತು.

ಪ್ರತಿಭಟನೆ ನಡೆಸಿಯೂ ಗಮನ ಸೆಳೆಯುವ ಕೆಲಸ ಮಾಡಲಾಗಿತ್ತು. ಆದರೆ ೧೨ ವರ್ಷಗಳಿಂದ ಕಟ್ಟಡವನ್ನು ಪಡೆಯಲು ಸಾಧ್ಯವಾಗದೆ ಯುವ ಒಕ್ಕೂಟ ಪರಿತಪಿಸುತ್ತಿತ್ತು. ಜೂನಿಯರ್ ಕಾಲೇಜು ಆವರಣದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ನಿರ್ಮಾಣ ಕಾರ್ಯ ಪೂರ್ಣಗೊಂಡು ಇತ್ತೀಚೆಗೆ ಉಸ್ತುವಾರಿ ಸಚಿವರು ಉದ್ಘಾಟಿಸಿದ್ದಾರೆ. ಜಿಲ್ಲಾ ಯುವ ಭವನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಕಾಲೇಜನ್ನು ಜೂನಿಯರ್ ಕಾಲೇಜು ಆವರಣದಲ್ಲಿ ನಿರ್ಮಾಣವಾಗಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಯುವ ಒಕ್ಕೂಟಕ್ಕೆ ಕಡೆಗೂ ಕಟ್ಟಡ ದೊರಕಿದೆ. ಜಿಲ್ಲೆಯಲ್ಲಿ ಯುವಕರ ಸಂಘ, ಯುವತಿ ಮಂಡಳಿ, ಮಹಿಳಾ ಸಮಾಜ ಸೇರಿದಂತೆ ೨೫೦ಕ್ಕೂ ಅಽಕ ಸಂಘಗಳಿದ್ದು, ಯುವಭವನ ದೊರಕಿರುವು ದರಿಂದ ಚಟುವಟಿಕೆಗಳಿಗೆ ಅನುಕೂಲವಾಗಲಿದೆ.

ಅ.೧೬ರಂದು ಯುವಜನೋತ್ಸವ:

ಕೊಡಗು ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮ ಅ.೧೬ರಂದು ಮಡಿಕೇರಿಯಲ್ಲಿ ನಡೆಯಲಿದ್ದು, ಯುವ ಸಮೂಹಕ್ಕಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್, ಕೊಡಗು ಜಿಲ್ಲಾ ಯುವ ಒಕ್ಕೂಟ, ತಾಲ್ಲೂಕು ಯುವ ಒಕ್ಕೂಟ, ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಸಹಯೋಗದೊಂದಿಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಸ್ಪರ್ಧೆಗಳು ನಡೆಯಲಿವೆ. ಆಸಕ್ತ ಸ್ಪರ್ಧಿಗಳು ಅಂದು ಬೆಳಿಗ್ಗೆ ೯.೩೦ ಗಂಟೆಯೊಳಗೆ ಹಾಜರಿದ್ದು ಹೆಸರು ನೋಂದಾಯಿಸಿಕೊಳ್ಳಬೇಕಿದೆ. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ ೯೫೯೧೧೩೭೨೭೫ ಅನ್ನು ಸಂಪರ್ಕಿಸಬಹುದು.

” ಯುವಭವನ ಕಟ್ಟಡವನ್ನು ಮಹಿಳಾ ಕಾಲೇಜಿಗೆ ಬಿಟ್ಟುಕೊಟ್ಟು ೧೨ ವರ್ಷಗಳಿಂದ ಸಮಸ್ಯೆ ಎದುರಿಸವಂತಾಗಿತ್ತು. ಇದೀಗ ಶಾಸಕರ ಮುತುವರ್ಜಿಯಿಂದಕಟ್ಟಡ ಮತ್ತರ ಯುವ ಒಕ್ಕೂಟಕ್ಕೆ ದೊರೆತಿದೆ. ಒಂದಷ್ಟು ಸಣ್ಣ ಪುಟ್ಟ ದುರಸ್ತಿ ಕಾರ್ಯ ಬಾಕಿ ಇದ್ದು, ದುರಸ್ತಿ ಮಾಡಿಕೊಡಲು ಶಾಸಕರಿಗೆ ಮನವಿ ಮಾಡಲಾಗಿದೆ. ಸ್ವಂತ ಕಟ್ಟಡ ದೊರಕಿರುವುದರಿಂದ ಸಭೆ, ಸಮಾರಂಭ ಸೇರಿದಂತೆ ಇನ್ನಿತರ ಚಟುವಟಿಕೆಗೆ ಅನುಕೂಲವಾಗಲಿದೆ.”

-ಪಿ.ಪಿ.ಸುಕುಮಾರ್, ಅಧ್ಯಕ್ಷರು, ಜಿಲ್ಲಾ ಯುವ ಒಕ್ಕೂಟ

ಆಂದೋಲನ ಡೆಸ್ಕ್

Recent Posts

2025 ಸವಿನೆನಪು: ಸ್ಯಾಂಡಲ್‌ವುಡ್ ಏಳು-ಬೀಳು

‘ಸ್ಯಾಂಡಲ್ ವುಡ್’ ಎಂದೇ ಹೆಸರಾಗಿರುವ ಕನ್ನಡ ಚಿತ್ರರಂಗ ಇಂದು ಭಾರತದ ಒಂದು ಪ್ರಮುಖ ಚಿತ್ರೋದ್ಯಮವಾಗಿ ಬೆಳೆದಿದೆ. ಈ ಮೊದಲು ಪ್ರತಿ…

10 mins ago

ಉದ್ಘಾಟನೆಯಾಗದ ಅಂಬಾರಿ ಖ್ಯಾತಿಯ ಅರ್ಜುನನ ಸ್ಮಾರಕ

ಲಕ್ಷ್ಮಿಕಾಂತ್ ಕೊಮಾರಪ್ಪ ೨೦೨೩ರ ಡಿ.೪ರಂದು ಕಾಡಾನೆ ಕಾರ್ಯಾಚರಣೆ ವೇಳೆ ಮೃತಪಟ್ಟಿದ್ದ ಅರ್ಜುನ; ೨ ವರ್ಷ ಕಳೆದರೂ ಅರ್ಜುನನ ಸ್ಮಾರಕ, ಪ್ರತಿಮೆಗಿಲ್ಲ…

17 mins ago

ಸಾಂಸ್ಕೃತಿಕ ನಗರಿಯಲ್ಲಿ ಕ್ರಿಸ್‌ಮಸ್ ಸಂಭ್ರಮ

ಮೈಸೂರು: ಸಂಭ್ರಮ, ಸಡಗರ, ವಿಶೇಷ ಪ್ರಾರ್ಥನೆಯೊಂದಿಗೆ ಕ್ರೈಸ್ತ ಧರ್ಮದ ದೈವ ಬಾಲಏಸುವಿನ ಜಯಂತಿಯ ಸ್ಮರಣೆಯು ಅದ್ಧೂರಿಯಾಗಿ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ…

23 mins ago

ರಾಗಿ, ಹುರುಳಿ ಒಕ್ಕಣೆಗೆ ರಸ್ತೆಯೇ ಕಣ!

ಪ್ರಶಾಂತ್ ಎಸ್. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಸಮಸ್ಯೆ ಕಣ್ಣಿಗೆ ದೂಳು ಬಿದ್ದರೆ ಅನಾಹುತ ಸಾಧ್ಯತೆ ವಾಹನ ಸವಾರರಿಗೆ ಸವಾಲು; ಎಚ್ಚರ…

28 mins ago

ಮೈಸೂರು ಕೇಂದ್ರೀಯ ಸಂಪರ್ಕ ಬ್ಯೂರೋ-CBC ಕಚೇರಿ ಸ್ಥಗಿತ ಬೇಡ : ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಸಚಿವ ಎಚ್‌ಡಿಕೆ

ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…

11 hours ago

ಉನ್ನಾವೋ ಅತ್ಯಾಚಾರ ಪ್ರಕರಣ : ರಾಹುಲ್‌ಗಾಂಧಿ ಭೇಟಿಯಾದ ಸಂತ್ರಸ್ತೆ ಕುಟುಂಬ

ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…

11 hours ago