Andolana originals

ಪಾಳು ಬಿದ್ದಿದ್ದ ಪುಷ್ಕರಣಿಗೆ ಜೀವಕಳೆ ತಂದ ಯುವ ಸಂಘಟಕರು

ಹೇಮಂತ್‌ಕುಮಾರ್

ನಳನಳಿಸುತ್ತಿರುವ ಗಜೇಂದ್ರ ಮೋಕ ಕೊಳ, ಮಾಂಡವ್ಯ ಯೋಗ ಮಂಟಪ 

ಮಂಡ್ಯ: ಪುರಾತನ ಕಾಲದ ಪುಷ್ಕರಣಿ ಪಾಳು ಬಿದ್ದು ಅನೈತಿಕ ಚಟುವಟಿಕೆಗಳ ತಾಣವಾಗಿದ್ದುದನ್ನು ಜೀರ್ಣೋದ್ಧಾರಗೊಳಿಸಿದ ಪರಿಣಾಮ ಇಂದು ಕಲ್ಯಾಣಿ ಮತ್ತು ಯೋಗ ಮಂಟಪ ಜೀವ ಕಳೆಯಿಂದ ಕಂಗೊಳಿಸುತ್ತಿದೆ. ಇದು ಸಂಘಟಿತ ಪ್ರಯತ್ನದಿಂದ ಯಾವುದೇ ಕಾರ್ಯ ಸಾಧಿಸಬಹುದು ಎಂಬುದಕ್ಕೆ ಒಂದು ನಿದರ್ಶನವಾಗಿದೆ.

ನಗರದ ಕಾಳಿಕಾಂಬ ದೇವಾಲಯದ ಮುಂಭಾಗದಲ್ಲಿ ಮೈಶುಗರ್ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಶ್ರೀಲಕ್ಷಿ ಜನಾರ್ಧನಸ್ವಾಮಿ ದೇವಾಲಯಕ್ಕೆ ಸೇರಿದ ಗಜೇಂದ್ರಮೋಕ್ಷ ಕೊಳ ಇಂದು ಸ್ವಚ್ಛ ನೀರಿನಿಂದ ಕಂಗೊಳಿಸುತ್ತಿದ್ದು, ಸುತ್ತಮುತ್ತಲ ವಾತಾವರಣ ಆಹ್ಲಾದಕರವಾಗಿ ಮಾರ್ಪಟ್ಟಿದೆ. ಇದಕ್ಕೆ ಪ್ರಮುಖ ಕಾರಣ ಈ ಹಿಂದೆ ಅಪರ ಜಿಲ್ಲಾಧಿಕಾರಿಯಾಗಿದ್ದ, ಈಗ ಕೆಂಗೇರಿ ವಿಶ್ವ ಒಕ್ಕಲಿಗರ ಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿರುವ ಡಾ.ನಿಶ್ಚಲಾನಂದನಾಥ ಸ್ವಾಮೀಜಿಯವರು, ಕಲ್ಯಾಣಿಯ ಈ ದುಸ್ಥಿತಿಯನ್ನು ಕಂಡು ಎಸ್‌ಎಸ್‌ಕೆ ವಿಶ್ವಕರ್ಮ ಸೇವಾ ಟ್ರಸ್ಟ್‌ನ ಅಧ್ಯಕ್ಷ, ಯುವ ಮುಖಂಡ ಎಂ.ಬಿ.ರಮೇಶ್ ಹಾಗೂ ಮಂಡ್ಯ ಜಿಲ್ಲಾ ನಾಯಕರ ಸಂಘದ ಅಧ್ಯಕ್ಷ ಜಗದೀಶ್, ವೆಂಕಟೇಶ್, ಮೆಡಿಕಲ್ ಅಸೋಸಿಯೇಷನ್, ವರ್ತಕರ ಸಂಘ ಮುಂತಾದವರ ಸಹಯೋಗದಲ್ಲಿ ನಡೆದ ಶ್ರಮದಾನದಿಂದ ಪಾಳು ಬಿದ್ದ ಕಲ್ಯಾಣಿಗೆ ಮೋಕ್ಷ ಸಿಕ್ಕಿದೆ.

ಡಾ.ಎಚ್.ಎಲ್.ನಾಗರಾಜು ಅವರು ತಹಸಿಲ್ದಾರರಾಗಿ ಕರ್ತವ್ಯ ನಿರ್ವಹಿಸಿದ ಎಲ್ಲ ಕಡೆಗಳಲ್ಲಿ ಇಂತಹ ಕಲ್ಯಾಣಿ, ಮಂಟಪಗಳ ಅಭಿವೃದ್ಧಿಗೆ ಅಲ್ಲಿನ ಯುವಕರನ್ನು ಪ್ರೇರೇಪಿಸಿ ಅಭಿವೃದ್ಧಿಗೊಳಿಸಲು ಕಾರಣರಾಗಿದ್ದಾರೆ. ಅದರಂತೆ ಅವರು ಮಂಡ್ಯ ಅಪರ ಜಿಲ್ಲಾಧಿಕಾರಿಗಳಾಗಿದ್ದಾಗ ಈ ಗಜೇಂದ್ರಮೋಕ್ಷ ಕೊಳದ ಇತಿಹಾಸ ತಿಳಿದು, ಇದನ್ನು ಅಭಿವೃದ್ಧಿಪಡಿಸಲು ಮುಂದಾಗಿ, ನಿಮ್ಮ ನೆರವಿಗೆ ನಾನಿದ್ದೇನೆಂದು ಎಂ.ಬಿ.ರಮೇಶ್ ಅವರಿಗೆ ಪ್ರೇರೇಪಣೆ ನಿಡಿದ್ದರು. ಅದರಂತೆ ಕಲ್ಯಾಣಿ ಸುತ್ತ ಬೆಳೆದಿದ್ದ ಗಿಡ-ಗಂಟಿಗಳನ್ನು ತೆರವುಗೊಳಿಸಿ, ಪಾಚಿಕಟ್ಟಿದ ನೀರು ಮತ್ತು ಹೂಳನ್ನು ೨ ಬಾರಿ ಹೊರತೆಗೆಸಿದರಲ್ಲದೆ, ಆವರಣವನ್ನು ಸ್ವಚ್ಛಗೊಳಿಸಿದರು.

ಅಲ್ಲಿದ್ದ ಅರಳೀಕಟ್ಟೆಗೊಂದು ಹೊಸ ರೂಪು ನೀಡಲಾಗಿದ್ದು, ಶಾಸಕರು ಹಾಗೂ ನಗರಸಭೆ ಅಧ್ಯಕ್ಷರ ಅನುದಾನದಿಂದ ಬೋರ್‌ವೆಲ್ ಕೊರೆಸಲಾಗಿದೆ. ಆ ನೀರಿನಿಂದ ಸುತ್ತಲೂ ಉದ್ಯಾನ, ಔಷಧ ಗಿಡಗಳು ಹಾಗೂ ನವಗ್ರಹ ಗಿಡಗಳನ್ನು ಬೆಳೆಸಲಾಗುತ್ತಿದೆ. ಮುಖ್ಯವಾಗಿ ಮಂಡ್ಯ ಸಂಸದರಾಗಿದ್ದ ಸುಮಲತಾ ಅಂಬರೀಶ್ ಅವರ ಅನುದಾನದಿಂದ ನಿರ್ಮಿತಿ ಕೇಂದ್ರದ ಜಯಪ್ರಕಾಶ್ ಅವರು ಜಿಲ್ಲಾಧಿಕಾರಿ ಡಾ.ಕುಮಾರ ಅವರ ಮಾರ್ಗದರ್ಶನದಲ್ಲಿ ಅತ್ಯುತ್ತಮವಾದ ಯೋಗ ಮಂಟಪ, ಕಾಂಪೌಂಡ್ ಮತ್ತು ಸ್ವಾಗತ ಕಮಾನನ್ನು ನಿರ್ಮಿಸಿದ್ದಾರೆ. ಜಿಲ್ಲಾ ಪೊಲೀಸ್ ಅಧೀಕ್ಷಕರಾಗಿದ್ದ ಯತೀಶ್ ಅವರು ಹಳ್ಳಕೊಳ್ಳಗಳಿಗೆ ಮಣ್ಣು ಭರ್ತಿ ಮಾಡಿಸಿಕೊಟ್ಟಿದ್ದಾರೆ. ಇಂತಹ ಸಂಘಟಿತ ಪ್ರಯತ್ನದಿಂದಾಗಿ ಇಂದು ಗಜೇಂದ್ರಮೋಕ್ಷ ಕೊಳ ಪ್ರಶಾಂತ ವಾತಾವರಣದಿಂದ ಯೋಗಾಸಕ್ತರು, ಭರತನಾಟ್ಯ ಕಲಾವಿದರು ಇಲ್ಲಿನ ಮಾಂಡವ್ಯ ಯೋಗ ಮಂಟಪವನ್ನು ಬಳಸಿಕೊಳ್ಳುವಂತಾಗಿದೆ.

” ಇದೊಂದು ಸಂಘಟಿತ ಪ್ರಯತ್ನ. ಪಾಳು ಬಿದ್ದಿದ್ದ ಮಂಟಪವನ್ನು ಜೀರ್ಣೋದ್ಧಾರಗೊಳಿಸಬೇಕೆಂಬ ತುಡಿತ ನನ್ನಲ್ಲಿತ್ತು. ಅದಕ್ಕೆ ಪ್ರೇರೇಪಣೆ ನೀಡಿದವರು ಡಾ.ಎಚ್.ಎಲ್.ನಾಗರಾಜು ಅವರು. ನಂತರ ನನ್ನ ಸಮಯ, ಹೋರಾಟ ಎಲ್ಲವೂ ಇದಕ್ಕೆ ಸೀಮಿತವಾಯಿತು. ಪರಿಣಾಮ ಸಂಸದರು, ಶಾಸಕರು, ಸಂಘಟನೆಗಳ ಬೆನ್ನುಬಿದ್ದು ಅನುದಾನ ತಂದಿದ್ದರಿಂದ ಇಂದು ಈ ಹಂತಕ್ಕೆ ಬಂದಿದೆ. ಇಂದು ಪ್ರತಿನಿತ್ಯ ಯೋಗ ನಡೆಯುತ್ತಿದೆ. ಸಾಂಸ್ಕೃತಿಕ, ಸಾಹಿತ್ಯಕ ಕಾರ್ಯಕ್ರಮಗಳು ನಡೆಯಲು ಅನುಕೂಲವಾಗಿದೆ.”

-ಎಂ.ಬಿ.ರಮೇಶ್, ಎಸ್‌ಎಸ್‌ಕೆ ವಿಶ್ವಕರ್ಮ ಸೇವಾ ಟ್ರಸ್ಟ್ ಅಧ್ಯಕ್ಷರು. ಮಂಡ್ಯ

” ಜಿಲ್ಲೆಯಲ್ಲಿ ಸಂಸ್ಕೃತಿ, ಸಂಪ್ರದಾಯಗಳ ಸ್ಮಾರಕಗಳಾಗಿರುವ ಕಲ್ಯಾಣಿ, ಮಂಟಪಗಳು ಸಾಕಷ್ಟಿವೆ. ಪೂರ್ವಿಕರು ನಿರ್ಮಿಸಿರುವ ಕೆರೆ, ಕಟ್ಟೆ, ಕಲ್ಯಾಣಿ, ಮಂಟಪಗಳನ್ನು ಮುಂದಿನ ಪೀಳಿಗೆಗೆ ನಾವು ಸಂರಕ್ಷಿಸಿ ಉಳಿಸಬೇಕಾದುದು ಅತ್ಯವಶ್ಯವಾಗಿದೆ. ಹಾಗಾಗಿ ಪೂರ್ವಾಶ್ರಮದಲ್ಲಿ ಅಪರ ಜಿಲ್ಲಾಧಿಕಾರಿಯಾಗಿದ್ದಾಗ ಈ ಗಜೇಂದ್ರಮೋಕ್ಷ ಕೊಳವನ್ನು ಅಭಿವೃದ್ಧಿಪಡಿಸಲು ಯುವ ಮುಖಂಡ ಎಂ.ಬಿ.ರಮೇಶ್ ಅವರಿಗೆ ಪ್ರೋತ್ಸಾಹ ನೀಡಿದೆ. ಅವರು ಕೂಡ ಇದರ ಹೊಣೆಹೊತ್ತು ನಿರೀಕ್ಷೆ ಮೀರಿ ಕೆಲಸ ಮಾಡಿದ್ದಾರೆ. ಇಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯ ಚಟುವಟಿಕೆಗಳು ಹೆಚ್ಚಾಗಿ ನಡೆಯಲಿ ಎಂಬುದು ನಮ್ಮ ಹಾರೈಕೆ.”

-ಡಾ.ನಿಶ್ಚಲಾನಂನಾಥ ಸ್ವಾಮೀಜಿ, ಪೀಠಾಧಿಪತಿಗಳು, ಕೆಂಗೇರಿ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠ

ಆಂದೋಲನ ಡೆಸ್ಕ್

Recent Posts

9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಕಾಮುಕನನ್ನು ಹಿಡಿದು ಥಳಿಸಿದ ಗ್ರಾಮಸ್ಥರು

ಮೈಸೂರು: 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನನ್ನು ಗ್ರಾಮಸ್ಥರು ಹಿಡಿದು ಥಳಿಸಿರುವ ಘಟನೆ ನಡೆದಿದೆ. ಮೈಸೂರು ಜಿಲ್ಲೆಯ…

23 mins ago

ಓದುಗರ ಪತ್ರ: ಕೆ.ಕೆ.ಮಹಮದ್ ಅವರ ಹೇಳಿಕೆ ಪ್ರಬುದ್ಧ ನಡೆ

ಕೇರಳದ ಕೋಯಿಕ್ಕೋಡಿನಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್‌ಐ) ಮಾಜಿ ಪ್ರಾದೇಶಿಕ ನಿರ್ದೇಶಕರಾದ ಕೆ.ಕೆ. ಮಹಮ್ಮದ್…

48 mins ago

ಓದುಗರ ಪತ್ರ: ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ನಾಗರಿಕ ಸ್ನೇಹಿ

ಕಂದಾಯ ಇಲಾಖೆ ಡಿಜಿಟಲ್ ಇ-ಸ್ಟ್ಯಾಂಪ್ ವ್ಯವಸ್ಥೆ ಜಾರಿಗೆ ದಿಟ್ಟ ಹೆಜ್ಜೆ ಇಟ್ಟಿದೆ. ಇದು ನಾಗರಿಕ ಸ್ನೇಹಿಯೂ ಆಗಿದೆ. ಇಂದಿಗೂ ತಾಲ್ಲೂಕು…

52 mins ago

ಓದುಗರ ಪತ್ರ: ದ್ವೇಷ ಭಾಷಣಕ್ಕೆ  ಕಾನೂನು ಕಡಿವಾಣ ಸಾಗತಾರ್ಹ

ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ…

1 hour ago

ಡಾ.ಬಿ.ಆರ್.ಅಂಬೇಡ್ಕರ್ ಎಂಬ ಅಮರ ಜಗತ್ತು…

ಮಲ್ಕುಂಡಿ ಮಹದೇವಸ್ವಾಮಿ ವಿಕಲ್ಪಗಳ ಅಲೆಯ ಮೇಲೆ ಸದಾ ತೇಲಿ ಬರುವ ಸಂಕಲ್ಪ  ಬಾಬಾ ಸಾಹೇಬರ ಪಾರ್ಥಿವ ಶರೀರ ಪ್ರಕೃತಿಯಲ್ಲಿ ಲೀನವಾಗುವ…

1 hour ago

ರೈಲ್ವೆ ಮೇಲ್ಸೇತುವೆ; ಭೂ ದರ ಕಗ್ಗಂಟು ಬಗೆಹರಿಯುವುದೇ?

ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…

4 hours ago