Andolana originals

ಅರಕೆರೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ,ರೋಗಿಗಳ ಪರದಾಟ

ರಾತ್ರಿ ಪಾಳಿಯಲ್ಲಿ ನರ್ಸ್‌ಗಳು, ವೈದ್ಯರ ನಿಯೋಜನೆಗೆ ಜನತೆ ಒತ್ತಾಯ

• ಸಿದ್ದೇಗೌಡ ಕೊಡಿಯಾಲ

ಶ್ರೀರಂಗಪಟ್ಟಣ : ಕ್ಷೇತ್ರದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು ತಮ್ಮ ಗ್ರಾಮವಾದ ಅರಕೆರೆಯ ಸಮುದಾಯ ಆರೋಗ್ಯ ಕೇಂದ್ರಕ್ಕೆ 24*7 ಹೆರಿಗೆ ಸೌಲಭ್ಯ ಕಲ್ಪಿಸಿದ್ದಾರೆ. ಆದರೆ, ಈ ಸೇವೆ ನಾಮಫಲಕಕ್ಕೆ ಮಾತ್ರ ಸೀಮಿತವಾಗಿದೆ.

ವಾಸ್ತವದಲ್ಲಿ ಈ ಆರೋಗ್ಯ ಕೇಂದ್ರದಲ್ಲಿ ವೈದ್ಯರ ವಸತಿ ಗೃಹವಿದ್ದರೂ ಸಂಜೆ 5 ಗಂಟೆಯ ನಂತರ ವೈದ್ಯರು ಹಾಗೂ ಹಿರಿಯ ಶುಶೂ ಷಕಿಯರೇ ಲಭ್ಯವಿರುವುದಿಲ್ಲ. ಒಬ್ಬರು ಶುಶೂಷಕಿ ಮಾತ್ರ ಇದ್ದು ತುರ್ತು ಚಿಕಿತ್ಸೆ, ಹೆರಿಗೆಗೆ ಬರುವ ಮಹಿಳೆಯರು ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ದೂರದ ಆಸ್ಪತ್ರೆಗಳಿಗೆ ಅಲೆದಾಡುವಂತಾಗಿದೆ.

ಈ ಸಮುದಾಯ ಆರೋಗ್ಯ ಕೇಂದ್ರವಿರುವ ಅರಕೆರೆ ಗ್ರಾಮವು ಹೋಬಳಿ ಕೇಂದ್ರವಾಗಿದ್ದು, ಸುತ್ತಮುತ್ತಲ ಗ್ರಾಮಗಳಾದ ಬಳ್ಳೇಕೆರೆ, ನೇರಲಕೆರೆ, ಶಾಂತಿಕೊಪ್ಪಲು, ಒಡೆಯಾಂಡಹಳ್ಳಿ, ಗೊಬ್ಬರಗಾಲ, ಚಿಂದೇಗೌಡನ ಕೊಪ್ಪಲು ಗ್ರಾಮಗಳು ಈ ವ್ಯಾಪ್ತಿಗೆ ಬರುತ್ತವೆ. ಈ ಗ್ರಾಮಗಳ ಜನರು ಚಿಕಿತ್ಸೆ ಪಡೆದುಕೊಳ್ಳಲು ಅರಕೆರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಆದರೆ ದಿನದ 24ಗಂಟೆ ಹೆರಿಗೆ ಸೌಲಭ್ಯ ಎಂದು ನಾಮಫಲಕ ಹಾಕಲಾಗಿದ್ದರೂ ಈ ಕೇಂದ್ರ ಸಂಜೆಯಾಗುತ್ತಲೇ ಬಿಕೋ ಎನ್ನುತ್ತದೆ.

ತುರ್ತು ಆರೋಗ್ಯ ಸಮಸ್ಯೆ ಕಂಡು ಬಂದರೂ 18 ಕಿ.ಮೀ.ದೂರದಲ್ಲಿರುವ ಮಂಡ್ಯ ಜಿಲ್ಲಾ ಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಆರೋಗ್ಯ ಕೇಂದ್ರವು ಶಾಸಕರ ನಿವಾಸದ ಕೂಗಳತೆ ದೂರದಲ್ಲಿದ್ದರೂ ಆರೋಗ್ಯ ಕೇಂದ್ರದಲ್ಲಿ ನಿರೀಕ್ಷಿತ ಸೌಲಭ್ಯ ಸಿಗುತ್ತಿಲ್ಲ.

ಮೊನ್ನೆ ವೃದ್ಧರೊಬ್ಬರ ತಲೆಗೆ ಪೆಟ್ಟುಬಿದ್ದು, ತುರ್ತು ಚಿಕಿತ್ಸೆಗೆ ಕರೆತಂದಾಗ ವೈದ್ಯರಿಲ್ಲದೆ ಪರದಾಡಬೇಕಾಯಿತು. ಆದರಿಂದ ಶಾಸಕರು ಕೂಡಲೇ ಇತ್ತ ಗಮನ ಹರಿಸಬೇಕೆಂದು ಜನತೆ ಮನವಿ ಮಾಡಿದ್ದಾರೆ.

ಈ ಆರೋಗ್ಯ ಕೇಂದ್ರ ಸುಸಜ್ಜಿತವಾಗಿದೆ. ಆದರೆ ವೈದ್ಯರು, ನರ್ಸ್‌ಗಳ ಕೊರತೆ ಎದ್ದುಕಾಣುತ್ತದೆ. ರಾತ್ರಿ ವೇಳೆ ಜನರು ತುರ್ತು ಚಿಕಿತ್ಸೆಗೆ ಬಂದರೆ, ಇಲ್ಲಿ ವೈದ್ಯರಿಲ್ಲದ ಕಾರಣ ಬಡ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ಎಡತಾಕಬೇಕಿದೆ. ಆದ್ದರಿಂದ ಶಾಸಕರು ರಾತ್ರಿ ವೇಳೆ ವೈದ್ಯರು ಮತ್ತು ನರ್ಸ್ ಗಳನ್ನು ಕರ್ತವ್ಯಕ್ಕೆ ನಿಯೋಜಿಸಿದರೆ ಅರಕೆರೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಜನತೆಗೆ ಅನುಕೂಲವಾಗುತ್ತದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಉತ್ತರ ಸಿಕ್ಕಿಂನಲ್ಲಿ ಭೂಕುಸಿತ : ಚುಂಗಾಥಾಂಗ್‌ನಲ್ಲಿ ಸಿಲುಕಿದ 200 ಪ್ರವಾಸಿಗರು

ಸಿಕ್ಕಿಂ : ಉತ್ತರ ಸಿಕ್ಕಿಂನಲ್ಲಿ ಭಾರೀ ಮಳೆಯಿಂದ ಭೂಕುಸಿತ ಸಂಭವಿಸಿ, ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸುಮಾರು 200 ಪ್ರವಾಸಿಗರು ಚುಂಗ್‌ಥಾಂಗ್‌ನಲ್ಲಿ…

16 mins ago

ಸಂಘರ್ಷ ಶಮನಕ್ಕೆ 15 ಅಂಶ ಮುಂದಿಟ್ಟ ಟ್ರಂಪ್‌ ; ಸಂಧಾನ ಅಣಕಿಸಿದ ಇರಾನ್‌

ವಾಷಿಂಗ್ಟನ್‌ : ಪಶ್ಚಿಮ ಏಪ್ಯಾ ಸಂಘರ್ಷ ಶಮನಕ್ಕೆ ನಡೆಯುತ್ತಿರುವ ಪ್ರಯತ್ನಗಳ ಮಧ್ಯೆ, ಟ್ರಂಪ್ ಆಡಳಿತ 15 ಅಂಶಗಳ ಪ್ರಸ್ತಾವನೆಯನ್ನು ಇರಾನ್…

32 mins ago

ಹನೂರು | ಬಾವಿಗೆ ಬಿದ್ದ ಶ್ವಾನ, ಅಗ್ನಿಶಾಮಕ ಠಾಣಾ ಸಿಬ್ಬಂದಿಗಳಿಂದ ರಕ್ಷಣೆ

ಹನೂರು : ನೀರಿರುವ ಬಾವಿಗೆ ಬಿದ್ದಿದ್ದ ಶ್ವಾನವನ್ನು ರಕ್ಷಣೆ ಮಾಡುವಲ್ಲಿ ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಘಟನೆಯ ವಿವರ ಹನೂರು…

1 hour ago

ಎಲ್‌ಪಿಜಿ ಕೊರತೆ ಪರಿಸ್ಥಿತಿ ; ಹಾಲಿನ ವಹಿವಾಟು ಯಥಾಸ್ಥಿತಿ

ಕೆ.ಬಿ.ರಮೇಶ ನಾಯಕ ಮೈಸೂರು : ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವಯುದ್ಧದ ಪರಿಣಾಮದಿಂದಾಗಿ ಭಾರತದಲ್ಲಿ ಎಲ್‌ಪಿಜಿ ಸಿಲಿಂಡರ್ ಪೂರೈಕೆಗೆ ದೊಡ್ಡ ಹೊಡೆತ ಬಿದ್ದು…

2 hours ago

ಓದುಗರ ಪತ್ರ | ಶಾಸನಸಭೆಗಳಲ್ಲಿ ಹೊಸ ಯೋಜನೆಗಳ ಚರ್ಚೆಯಾಗಲಿ

ಕರ್ನಾಟಕ ವಿಧಾನಸಭೆ ಹಾಗೂ ಸಂಸತ್‌ ಮೇಲನೆ ಹಾಗೂ ಕೆಳಮನೆಗಳಲ್ಲಿ 2026ರ (ಬಜೆಟ್ ಮೇಲಿನ ಚರ್ಚೆ) ಮುಂದುವರಿದ ಅಧಿವೇಶನಗಳು ನಡೆಯುತ್ತಿವೆ. ಬಜೆಟ್…

2 hours ago

ಓದುಗರ ಪತ್ರ | ಒಳ ಮೀಸಲಾತಿ ಸಮಾನವಾಗಿ ಹಂಚಿಕೆಯಾಗಲಿ

ಒಳ ಮೀಸಲಾತಿ ಕುರಿತು ಮಾ.27ರಂದು ನಡೆಯಲಿರುವ ಸಚಿವ ಸಂಪುಟ ಸಭೆಯ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಸಂಪುಟ ಸಭೆಯು ಎಲ್ಲಾ…

2 hours ago