Andolana originals

ಮುಸುಕಿನ ಜೋಳದ ಬೆಳೆಗೆ ಬಿಳಿ ಸುಳಿ ರೋಗ ಬಾಧೆ

ಮಂಜು ಕೋಟೆ

ಕೋಟೆ, ಸರಗೂರು ಭಾಗದ ರೈತರಲ್ಲಿ ಆತಂಕ; ಅಧಿಕಾರಿಗಳಿಂದ ನಿಯಂತ್ರಣ ಸಲ

ಎಚ್.ಡಿ.ಕೋಟೆ: ರೈತರ ಆರ್ಥಿಕ ಬೆಳೆಯಾದ ಮುಸುಕಿನಜೋಳದ ಬೆಳೆಗೆ ಬಿಳಿ ಸುಳಿ ರೋಗ ಕಾಣಿಸಿಕೊಂಡು ಬೆಳೆ ನಾಶವಾಗುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಎಚ್.ಡಿ.ಕೋಟೆ ಮತ್ತು ಸರಗೂರು ತಾಲ್ಲೂಕುಗಳಲ್ಲಿ ಈ ಬಾರಿ ರೈತರು ಬೆಳೆದ ಮುಸುಕಿನ ಜೋಳದ ಬೆಳೆಗೆ ಕೀಟ ಮತ್ತು ರೋಗ ಬಾಧೆ ಕಾಣಿಸಿಕೊಂಡು ರೈತರು ಔಷಧಿ ಸಿಂಪಡಣೆ ಮಾಡಲು ಮುಂದಾಗಿದ್ದಾರೆ.

ಹಂಪಾಪುರ, ಬಿ.ಮಟಕೆರೆ, ಅಂತರಸಂತೆ, ಸರಗೂರು, ಎಚ್.ಡಿ.ಕೋಟೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ ಹಾಗೂ ಖಾಸಗಿ ಅಂಗಡಿಗಳಲ್ಲಿ ಬಿತ್ತನೆ ಬೀಜಗಳನ್ನು ಪಡೆದಿದ್ದ ರೈತರು ಕೋಟೆ ತಾಲ್ಲೂಕಿನಲ್ಲಿ ೧೧,೫೦೦ ಹೆಕ್ಟೇರ್, ಸರಗೂರು ತಾಲ್ಲೂಕಿನಲ್ಲಿ ೯,೮೫೦ ಹೆಕ್ಟೇರ್ ಸೇರಿದಂತೆ ಒಟ್ಟು ೨೧,೩೫೦ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬೆಳೆದಿದ್ದಾರೆ.

ಬಿತ್ತನೆ ಮಾಡಿದ ಒಂದು ತಿಂಗಳ ಒಳಗಾಗಿ ಈ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ರೋಗ ತಗುಲಿದ ಗಿಡಗಳ ಎಲೆಗಳ ಕೆಳಗೆ ಹಾಗೂ ಮೇಲ್ಭಾಗದಲ್ಲಿ ಬಿಳಿ ಬಣ್ಣದ ಶಿಲೀಂಧ್ರದ ಪುಡಿಗಳಂತೆ ಕಾಣಿಸಿಕೊಂಡ ನಂತರ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ, ಗಿಡದ ಬೆಳವಣಿಗೆ ಕುಗ್ಗಿ ೮೦-೯೦ರಷ್ಟು ಇಳುವರಿ ಕುಂಠಿತವಾಗುತ್ತಿದೆ.

ಕೀಟಬಾಧೆಯಿಂದ ಕಂಗಾಲಾಗಿರುವ ನಾಗನಹಳ್ಳಿ, ಹೆಗಡಾಪುರ, ಹಿರೇಹಳ್ಳಿ, ಮೇಟಿಕುಪ್ಪೆ, ಬೆಳಗನಹಳ್ಳಿ, ಹೊಸತೊರವಳ್ಳಿ, ಕೊಲ್ಲೇಗೌಡನಹಳ್ಳಿ, ಗುಜ್ಜಪ್ಪನಹುಂಡಿ, ಚಾಕಹಳ್ಳಿ, ಸಿದ್ದರಾಮನಹುಂಡಿ, ರಾಮೇನಹಳ್ಳಿ, ಕಂದಲಿಕೆ ಸೇರಿದಂತೆ ಹಲವು ಗ್ರಾಮಗಳ ರೈತರು ಪ್ರಸ್ತುತ ಬೆಳೆದಿರುವ ಮೆಕ್ಕೆಜೋಳದ ಬೆಳೆಯನ್ನು ಬೇರು ಸಮೇತ ನಾಶ ಮಾಡಿ, ರಾಗಿ, ದ್ವಿದಳಧಾನ್ಯ ಬೆಳೆಗಳಾದ ಅಲಸಂದೆ, ಅವರೆ ಬೆಳೆಗಳನ್ನು ಬಿತ್ತನೆ ಮಾಡಲು ಮುಂದಾಗಿದ್ದಾರೆ.

ಒಟ್ಟಿನಲ್ಲಿ ತಾಲ್ಲೂಕಿನ ರೈತರಿಗೆ ಪ್ರತಿ ಸಾಲಿನಲ್ಲಿ ಬೆಳೆಗಳಿಗೆ ರೋಗ ಬಾಧೆ, ಕೀಟಬಾಧೆ ಕಂಡುಬಂದು ಕಡಿಮೆ ಇಳುವರಿ ಬರುವುದು, ಬೆಳೆ ಚೆನ್ನಾಗಿ ಬಂದರೂ ಉತ್ತಮ ಬೆಲೆ ಸಿಗದೇ ಇರುವುದು ಕಂಗಾಲಾಗಿಸಿದೆ.

” ರೈತರು ಮೆಕ್ಕೆಜೋಳ ಬೆಳೆದು ಕಟಾವಾದ ಬಳಿಕ ಜಮೀನಿನಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆಯಬೇಕು. ಜೋಳ ಬೆಳೆದ ಭೂಮಿಯಲ್ಲಿ ನೀರು ಹೆಚ್ಚಾಗಿ ನಿಲ್ಲದಂತೆ ನೋಡಿಕೊಳ್ಳಬೇಕು. ಗಿಡಗಳಿಗೆ ರೋಗ ಬರುವ ಮುನ್ಸೂಚನೆ ತಿಳಿದ ನಂತರ ರೋಗ ಬಂದ ಗಿಡಗಳನ್ನು ಕಿತ್ತು ಹಾಕಬೇಕು. ಮೆಕ್ಕೆಜೋಳ ಬಿತ್ತನೆ ಮಾಡಿದ ೨೦ ರಿಂದ ೨೫ ದಿನಗಳ ನಂತರ ಮೆಟಾಲಾಕ್ಸಿ ೪ ಡಬ್ಲ್ಯುಪಿ ಜೊತೆಗೆ ಮ್ಯಾಂಕೊಜೆಬ್ ೬೪ ಡಬ್ಲ್ಯುಪಿ ಎರಡು ಗ್ರಾಂ ಮಿಶ್ರಣವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿದರೆ ರೋಗ ಮತ್ತು ಕೀಟಬಾಧೆಯನ್ನು ನಿಯಂತ್ರಿಸಬಹುದು.”

-ಜಯರಾಮಯ್ಯ, ಸಹಾಯಕ ಕೃಷಿ ನಿರ್ದೇಶಕರು, ಎಚ್.ಡಿ.ಕೋಟೆ

” ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳಕ್ಕೆ ಕಳೆದ ವಾರದಿಂದ ರೋಗ ಮತ್ತು ಕೀಟಬಾಧೆ ಕಾಣಿಸಿಕೊಂಡಿದ್ದು ಕಂಗಳಾಗಿದ್ದೇವೆ. ಅಂಗಡಿಗಳಲ್ಲಿ ಔಷಧಿಗಳನ್ನು ತಂದು ಸಿಂಪಡಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಸಾವಿರಾರು ರೂ. ಖರ್ಚು ಮಾಡಿ ಬೆಳೆ ಬೆಳೆದಿದ್ದೇವೆ. ಮುಂದೆ ಏನಾಗುತ್ತದೆಯೋ ಎಂಬ ಆತಂಕ ಉಂಟಾಗಿದೆ.”

-ಚಂದ್ರು, ರೈತ, ಹೆಗಡಾಪುರ

ಆಂದೋಲನ ಡೆಸ್ಕ್

Recent Posts

ಮೊದಲ ಬಾರಿ ಗೆದ್ದವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ: ಶಾಸಕ ಕೆ.ಹರೀಶ್‌ ಗೌಡ

ಮೈಸೂರು: ಮೊದಲ ಬಾರಿ ಗೆದ್ದವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ ಎಂದು ಶಾಸಕ ಕೆ.ಹರೀಶ್‌ ಗೌಡ ಹೇಳಿದ್ದಾರೆ. ಈ ಕುರಿತು…

11 hours ago

ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದೇವೆ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದೇವೆ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಅವರು, ಗ್ಯಾರಂಟಿ…

11 hours ago

ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ: ಶಾಸಕ ತನ್ವೀರ್‌ ಸೇಠ್‌

ಮೈಸೂರು: ಅಧಿಕಾರ ಹಸ್ತಾಂತರ ವಿಚಾರದಲ್ಲಿ ರಾಜ್ಯದಲ್ಲಿ ಗೊಂದಲವಿದೆ ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ…

11 hours ago

ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಮಲ್ಲಿಕಾರ್ಜುನ ಮುತ್ಯಾ

ಯಾದಗಿರಿ: ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ನಾಪತ್ತೆಯಾಗಿರುವ ಸ್ವಯಂ ಘೋಷಿತ ದೇವಮಾನವ ಮಲ್ಲಿಕಾರ್ಜುನ ಮುತ್ಯಾ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ಬಿಡುಗಡೆ…

12 hours ago

ಟಿ.ನರಸೀಪುರ ತಾಲ್ಲೂಕಿನಲ್ಲಿ ಚಿರತೆಗಳ ಹಾವಳಿ: ಭಯಭೀತರಾದ ಜನತೆ

ಟಿ.ನರಸೀಪುರ: ತಾಲ್ಲೂಕಿನಲ್ಲಿ ಚಿರತೆಗಳ ಹಾವಳಿ ಮಿತಿಮೀರಿದ್ದು, ಜನತೆ ಭಯಭೀತರಾಗಿದ್ದಾರೆ. ತಾಲ್ಲೂಕಿನ ಎಸ್.ಕೆಬ್ಬೆಹುಂಡಿ, ಕನ್ನಾಯಕನಹಳ್ಳಿ ಗ್ರಾಮದ ಮಧ್ಯೆ ಚಿರತೆ ಪ್ರತ್ಯಕ್ಷವಾಗಿದ್ದು, ಈ…

12 hours ago

ರಾಜಧಾನಿಯ ಮಾಲಿನ್ಯ ನಿಯಂತ್ರಣಕ್ಕೆ ನಿರ್ದಿಷ್ಟ ಮಾನದಂಡ- ಪರಿಸರ ಸಚಿವ ಈಶ್ವರ್‌ ಖಂಡ್ರೆ

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯಂತೆ ಬೆಂಗಳೂರು ಸಹ ಮತ್ತೊಂದು ಗ್ಯಾಸ್ ಛೇಂಬರ್ ಆಗದಂತೆ ಕ್ರಮ ವಹಿಸಲು ಶೀಘ್ರವೇ ನಗರದ ಎಲ್ಲ…

12 hours ago