Andolana originals

ಮೂತ್ರ ಸಂಬಂಧಿ ಸಮಸ್ಯೆಗಳಿಗೆ ಏನು ಪರಿಹಾರ?

     ಡಾ.ದುಷ್ಯಂತ್ ಪಿ.

ವೃದ್ಧರಲ್ಲಿ ಸಾಮಾನ್ಯವಾಗಿ ಕಾಣುವ ಆರೋಗ್ಯ ಸಮಸ್ಯೆಗಳಲ್ಲಿ ಮೂತ್ರ ವಿಸರ್ಜನೆಗೆ ಸಂಬಂಧಿ ಸಿದ ತೊಂದರೆ ಸ್ವಾಭಾವಿಕ. ಇದು ಅವರಲ್ಲಿ ಅನಾರೋಗ್ಯ ಉಂಟು ಮಾಡುವುದಲ್ಲದೆ ಅವರ ಜೀವನ ಶೈಲಿಯ ಮೇಲೂ ಹೆಚ್ಚು ಪರಿಣಾಮ ಬೀರುತ್ತದೆ.

ಈ ಸಮಸ್ಯೆಗಳಿಂದ ಹಿರಿಯ ನಾಗರಿಕರ ಜೀವನದ ಗುಣಮಟ್ಟ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಅಲ್ಲದೆ ಅವರು ವಿವಿಧ ರೀತಿಯ ಮೂತ್ರ ಸಂಬಂಧಿತ ತೊಂದರೆಗಳಿಂದ ಬಳಲುತ್ತಾರೆ. ಸಾಮಾನ್ಯವಾಗಿ ಮೂತ್ರವನ್ನು ಹೆಚ್ಚು ಕಾಲ ಹಿಡಿದಿಟ್ಟುಕೊಳ್ಳಲು ಆಗದಿರುವುದು, ಕೆಮ್ಮಿದಾಗ ಅಥವಾ ಭಾರ ಎತ್ತಿದಾಗ ಮೂತ್ರ ಹೋಗುವುದು, ಸದಾಕಾಲ ಮೂತ್ರ ಸೋರಿಕೆಯಾಗುವುದು, ಮೂತ್ರ ವಿಸರ್ಜಿಸಲು ಬಚ್ಚಲಿಗೆ ಹೋಗುವ ಮೊದಲೇ ವಿಸರ್ಜನೆಯಾಗುವುದು ಹೀಗೆ ಹಲವು ರೀತಿಯಲ್ಲಿ ತೊಂದರೆ ಉಂಟಾಗಬಹುದು.

ವಯೋ ಸಹಜವಾಗಿ ಅಂಗಾಂಗದಲ್ಲಿನ ಬದಲಾವಣೆಗಳು, ಮೂತ್ರ ನಾಳಕ್ಕೆ ಹೊಂದಿ ಕೊಂಡಿರುವ ಸ್ನಾಯುಗಳಲ್ಲಿ ಬಲಹೀನತೆ, ಗಂಡಸರಲ್ಲಿ ಕಾಣುವ ಪ್ರಾಸ್ಟೇಟ್ ಗ್ರಂಥಿಯ ಊತ ಮುಂತಾದವುಗಳಿಂದ ಮೂತ್ರ ಸಂಬಂಧಿತ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ವೃದ್ಧರಲ್ಲಿ ಮುಖ್ಯವಾಗಿ ಮೂತ್ರಕೋಶದ ಸೋಂಕು ಹೆಚ್ಚಾಗಿ ಕಾಣಿಸಿಕೊಂಡು ಈ ಮೇಲಿನ ಯಾವುದಾದರೂ ತೊಂದರೆ ಗಳಿಂದಾಗಿ ಮೂತ್ರಕೋಶದಲ್ಲಿ ಮೂತ್ರ ಹೆಚ್ಚು ಸಮಯ ಸಂಗ್ರಹವಾಗುತ್ತದೆ. ಇದರಿಂದಾಗಿ ವೃದ್ಧರು ಬಹುಬೇಗ ಮೂತ್ರದ ಸೋಂಕಿಗೆ ತುತ್ತಾಗುತ್ತಾರೆ. ಅನಿಯಂತ್ರಿತ ಡಯಾಬಿಟಿಸ್‌ ಕಾಯಿಲೆ ಮೂತ್ರ ಸೋಂಕಿಗೆ ಒಂದು ಮುಖ್ಯ ಕಾರಣ.

ಮೂತ್ರ ಸಂಬಂಧಿತ ಈ ಕಾಯಿಲೆಗಳನ್ನು ನಿವಾರಿಸಲು ಮತ್ತು ನಿಯಂತ್ರಿಸಲು ವಿವಿಧ ರೀತಿಯ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳೆಂದರೆ…

1 ಜೀವನ ಶೈಲಿಯಲ್ಲಿ ಬದಲಾವಣೆ- ನಿಯಮಿತ ಸಮಯದಲ್ಲಿ ಮೂತ್ರ ವಿಸರ್ಜಿಸಲು ಅಭ್ಯಾಸ ಮಾಡಿಕೊಳ್ಳುವುದು. ಬಚ್ಚಲಿಗೆ ಸುಲಭವಾಗಿ ಹೋಗಲು ಸೂಕ್ತ ರೀತಿಯ ವ್ಯವಸ್ಥೆ ಮಾಡಿಕೊಳ್ಳುವುದು, ಕಾಫಿ, ಟೀ ಸೇವನೆ ಮಿತಿಯಲ್ಲಿರಬೇಕು ಮತ್ತು ಮದ್ಯಸೇವನೆ ಬಿಡಬೇಕು. ಮೂತ್ರನಾಳಕ್ಕೆ ಹೊಂದಿಕೊಂಡಿರುವ ಸ್ನಾಯುಗಳಲ್ಲಿ ಬಲ ಹೆಚ್ಚಿಸಲು ಕೀಗಲ್ ವ್ಯಾಯಾಮ (Kiegel Exercise) ಮಾಡಬೇಕು. ಇದು ಹೇಗೆಂದರೆ, ಕುಳಿತಲ್ಲಿಯೇ ಮೂತ್ರ ಹಿಡಿದುಕೊಳ್ಳುವಂತೆ ಸೊಂಟದ ಕೆಳಗಿನ ಸ್ನಾಯುಗಳನ್ನು ಗಟ್ಟಿಗೊಳಿಸುವುದು ಮತ್ತು ಬಿಡುವುದು. ಹೀಗೆ ಎಂಟರಿಂದ ಹತ್ತು ಬಾರಿ ಮಾಡಬೇಕು. ದಿನವೊಂದಕ್ಕೆ ಮೂರು ಸಲ ಹೀಗೆ ಮಾಡಬೇಕು. ಇದರಿಂದ ಮೂತ್ರ ವಿಸರ್ಜನೆಯಲ್ಲಿ ನಿಯಂತ್ರಣ ಹೆಚ್ಚಾಗುತ್ತದೆ.

2. ಔಷಧಿಗಳು- ಮೂತ್ರದ ಸೋಂಕು ಮತ್ತು ಮೂತ್ರ ಕೋಶದ ತೊಂದರೆಗೆ ವೈದ್ಯರ ಸಲಹೆ ಮೇರೆಗೆ ಸೂಕ್ತವಾದ ಔಷಧಿಗಳನ್ನು ತೆಗೆದುಕೊಳ್ಳಬೇಕು. ಡಯಾಬಿಟಿಸ್ ನಿಯಂತ್ರಣವೂ ಕೂಡ ಬಹಳ ಮುಖ್ಯ.

3. ವೈದ್ಯಕೀಯ ಸಾಧನ ಮತ್ತು ಶಸ್ತ್ರಚಿಕಿತ್ಸೆ– ಸಮಸ್ಯೆಗಳು ನಿಯಂತ್ರಣಕ್ಕೆ ಬಾರದೆ ಇದ್ದಾಗ ಕೆಲವೊಂದು ಸಾಧನಗಳನ್ನು ಬಳಸಬೇಕಾಗುತ್ತದೆ. ಮೂತ್ರದ ಸಮಸ್ಯೆಗೆ ಮೂತ್ರ ನಳಿಕೆಯನ್ನು (Urinary Catheter) ಬಳಸಬೇಕಾಗುತ್ತದೆ. ಕೆಲವೊಮ್ಮೆ ಇದನ್ನು ನಿರಂತರವಾಗಿ ಬಳಸಬೇಕಾದ ಪರಿಸ್ಥಿತಿ ಉಂಟಾಗಬಹುದು. ಆಗ ಮೂತ್ರ ನಳಿಕೆಯನ್ನು ಹೇಗೆ ನಿರ್ವಹಿಸುವುದು ಎನ್ನುವುದನ್ನು ವೃದ್ಧರ ಮನೆಯವರು ಕಲಿಯಬೇಕಾಗುತ್ತದೆ. ಪ್ರಾಸ್ಟೇಟ್ ಗ್ರಂಥಿಯ ಶಸ್ತ್ರಚಿಕಿತ್ಸೆ ಅಥವಾ ಮೂತ್ರ ನಾಳದ ಶಸ್ತ್ರಚಿಕಿತ್ಸೆಗಳೂ ಮೂತ್ರದ ಸಮಸ್ಯೆಗೆ ಪರಿಹಾರವಾಗಬಹುದು. ಮೂತ್ರ ಸಂಬಂಧಿ ಕಾಯಿಲೆಗಳು ವೃದ್ಧರ ಸಹಜ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರುವುದರಿಂದ ಇದರ ಬಗೆಗಿನ ಅರಿವು ಮತ್ತು ಕಾಳಜಿ ಅತ್ಯಗತ್ಯ.

ಆಂದೋಲನ ಡೆಸ್ಕ್

Recent Posts

ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ: ಉಪಚುನಾವಣೆ: ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ವರಿಷ್ಠರು

ಪಕ್ಷದ ಗೆಲುವಿಗೆ ಶ್ರಮಿಸಲು ರಾಜ್ಯದ ನಾಯಕರಿಗೆ ಹೈಕಮಾಂಡ್ ಸೂಚನೆ ಕಳೆದ ವಾರ ಬಿಜೆಪಿ ಪಾಳೆಯದಲ್ಲಿ ಹರಿದಾಡಿದ ಒಂದು ಸುದ್ದಿ ಕುತೂಹಲಕ್ಕೆ ಕಾರಣವಾಯಿತು.…

2 hours ago

‘ವಿದ್ಯಾರ್ಥಿ ಸ್ನೇಹಿ ಸಾರಿಗೆʼ

ಮಕ್ಕಳ ಸುರಕ್ಷತೆ ಮತ್ತು ಶಾಲಾ ಪ್ರಯಾಣ ಸುಗಮಗೊಳಿಸುವ ಉದ್ದೇಶ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಿಫಾರಸು ೧೨…

2 hours ago

ಫುಟ್‌ಪಾತ್ ಏರಿದ ವಾಹನಗಳು; ಜನರಿಗೆ ಗೋಳು

ಪ್ರಶಾಂತ್ ಎಸ್. ಮೈಸೂರು: ವಾಹನಗಳು ರಸ್ತೆಯಲ್ಲಿ ಸಂಚರಿಸಿದರೆ, ಪಾದಚಾರಿಗಳು ಫುಟ್‌ಪಾತ್‌ನಲ್ಲಿ ಓಡಾಡ ಬೇಕು ಎನ್ನುವುದು ಸಾಮಾನ್ಯ ಸಂಗತಿ. ಆದರೆ, ಕುವೆಂಪುನಗರದ…

2 hours ago

ಶತಕದ ಗಡಿ ದಾಟಿದ ಬನ್ನಂಗಾಡಿ ಶಾಲೆ

ಎಸ್.ನಾಗಸುಂದರ್ ಪಾಂಡವಪುರ ಪಾಂಡವಪುರ: ದಾನಿಗಳ ನೆರವು, ಸ್ಥಳೀಯರ ಸಹಕಾರದಿಂದ ಆರಂಭಗೊಂಡ ಶಾಲೆಯು ನೂರು ವರ್ಷಗಳ ಗಡಿ ದಾಟಿ ಹೆಜ್ಜೆ ಮುಂದಿರಿಸಿದೆ.…

2 hours ago

ಕಾಡಿನಲ್ಲಿ ಶರಣ್ಯಳನ್ನು ಹುಡುಕಿದ್ದು ಯಾರು?

ಅಬ್ದುಲ್ ರಶೀದ್ ಕೊಡಗಿನ ಪರಿಶಿಷ್ಟ ಅಡಿಯ ಜನಾಂಗದ ಕೂಲಿ ಕಾರ್ಮಿಕ ಯುವಕರಾದ ಸುಬ್ರಮಣಿ, ರಾಜು, ಅಯ್ಯಪ್ಪ, ಮಣಿಕಂಠ, ಮಣಿ ಸಾಹಸಗಾಥೆ…

2 hours ago