-ಪ್ರಶಾಂತ್ ಎಸ್.
ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ಕಣ್ಣಿಗೆ ಕಾಣಿಸುವಂತಹ ಕೆಲ ಕೆಎಸ್ಆರ್‌ಟಿಸಿ ಬಸ್ ಪ್ರಯಾಣಿಕರ ತಂಗುದಾಣಗಳಲ್ಲಿ ಸರಿಯಾದ ವ್ಯವಸ್ಥೆಯಿಲ್ಲದೇ ಸಾರ್ವಜನಿಕರು ಪರದಾಡುತ್ತಿರುವುದು ಸರಿಯಷ್ಟೆ. ಆದರೆ, ಒಂದಷ್ಟುಸುಸಜ್ಜಿತ, ಸುಂದರ ತಂಗುದಾಣಗಳು ಕೂಡ ನಗರದಲ್ಲಿ ಇವೆ.
ಈ ತಂಗುದಾಣಗಳು ಆಕರ್ಷಣೀಯವಾಗಿದ್ದು, ನೋಡುತ್ತಿದ್ದಂತೆ ‘ವಾಹ್’ ಎಂದು ಉದ್ಗರಿಸುವಷ್ಟು ಸುಂದರವಾಗಿ ಕಾಣುತ್ತಿವೆ. ಪ್ರಯಾಣಿಕರ ಮೆಚ್ಚುಗೆಯನ್ನೂ ಪಡೆದಿವೆ. ಇದಕ್ಕೆ ನಗರದ ಸಿದ್ದಪ್ಪ ವೃತ್ತ, ಕುವೆಂಪುನಗರ ಶಾಂತಿಸಾಗರ್ ಕಾಂಪ್ಲೆಕ್ಸ್ ಎದುರು, ಜಯನಗರ ರೈಲ್ವೆ ಗೇಟ್ ಬಳಿ ಕಾಂತರಾಜ ಅರಸ್ ರಸ್ತೆ, ಜಯನಗರ 2ನೇ ಮುಖ್ಯರಸ್ತೆಯಲ್ಲಿರುವ ತಂಗುದಾಣಗಳು ಉದಾಹರಣೆಯಾಗಿವೆ. ಇವು ಹೊಸದಾಗಿ ನಿರ್ಮಿಸಿರುವ ತಂಗುದಾಣಗಳಲ್ಲ. 2020-21 ರಲ್ಲಿ ನಗರಪಾಲಿಕೆ ವತಿಯಿಂದ ಆಧುನಿಕ ಶೈಲಿಯಲ್ಲಿ ನವೀಕರಣಗೊಂಡಿವೆ.
ಈ ತಂಗುದಾಣಗಳಲ್ಲಿ ಪ್ರಯಾಣಿಕರಿಗೆ ಪ್ರಾಥಮಿಕ ಸೌಲಭ್ಯಗಳಾದ ಆಸನ ಮತ್ತು ಆಸರೆಯ ವ್ಯವಸ್ಥೆ ಇದೆ. ತಂಗುದಾಣದಲ್ಲಿ ಡಿಜಿಟಲ್ ಪರದೆಯಲ್ಲಿ ಆಯಾ ಮಾರ್ಗದ ಮೂಲಕ ಹಾದು ಹೋಗುವ ಬಸ್ಗಳ ಮಾಹಿತಿ, ತಂಗುದಾಣಕ್ಕೆ ಬಸ್ ಬಂದು ತಲುಪುವ ಸರಾಸರಿ ಸಮಯದ ಮಾಹಿತಿ ಬಿತ್ತರಗೊಳ್ಳುತ್ತಿದ್ದು, ರಾತ್ರಿ ವೇಳೆ ಎಲ್ಇಡಿ ಬಲ್ಪ್‌ಗಳು ಬೆಳಕು ಹರಿಸುತ್ತವೆ.
ಕುವೆಂಪುನಗರದಲ್ಲಿ ಸುಸಜ್ಜಿತ ತಂಗುದಾಣ : ನೂರಾರು ಬಸ್ ತಂಗುದಾಣಗಳಿದ್ದರೂ, ಪ್ರಯಾಣಿಕ ಸ್ನೇಹಿ ಹಾಗೂ ಅತ್ಯಾಧುನಿಕ ಸೌಲಭ್ಯವುಳ್ಳ ತಂಗುದಾಣಗಳ ಸಂಖ್ಯೆ ವಿರಳ. ಕುವೆಂಪುನಗರದ ಕಾಂಪ್ಲೆಕ್ಸ್ ಬಳಿ ಇರುವ ಪ್ರಯಾಣಿಕರ ತಂಗುದಾಣ ಇದಕ್ಕೆ ಅಪವಾದವಾಗಿದೆ. ಸುಸಜ್ಜಿತ ಮತ್ತು ಅತ್ಯಾಧುನಿಕ ಸೌಲಭ್ಯ ಕಲ್ಪಿಸಲಾಗಿದೆ. ಪ್ರಯಾಣಿಕರಿಗೆ ಉಪಯುಕ್ತ ವಾಗುವ ರೀತಿಯಲ್ಲಿ ಇದನ್ನು ವಿನ್ಯಾಸ ಗೊಳಿಸಲಾಗಿದೆ.
ಸಿದ್ದಪ್ಪ ಚೌಕದಲ್ಲಿ ಆಧುನಿಕ ಸ್ಪರ್ಶದ ತಂಗುದಾಣ: ಈ ತಂಗುದಾಣ ಒಂದು ರೀತಿಯಲ್ಲಿ ಜನಸ್ನೇಹಿ ಆಗಿದೆ. ಬಸ್ ಪ್ರಯಾಣಿಕರು ಮಾತ್ರವಲ್ಲದೆ, ಸಾರ್ವಜನಿಕರು ಕೂಡ ದಣಿವಾರಿಸಿಕೊಳ್ಳಬಹುದು ಎಂಬಷ್ಟು ವ್ಯವಸ್ಥಿತವಾಗಿ ಈ ತಂಗುದಾಣವನ್ನು 2020-21ರಲ್ಲಿ ಕಾಯಕಲ್ಪ ನೀಡಲಾಗಿದೆ.
ಬಸ್‌ಗಳು ಸುಲಭವಾಗಿ ತಂಗುದಾಣದ ಬಳಿ ನಿಲ್ಲಲು ಇಂಟರ್ಲಾಕ್ ವ್ಯವಸ್ಥೆ ಇದೆ. ಮಾರ್ಬಲ್ ನಿರ್ಮಿತ ಆಸನ, ಡಿಜಿಟಲ್ ಗಡಿಯಾರವನ್ನು ಅಳವಡಿಸಲಾಗಿದೆ. ತಂಗುದಾಣದ ಬಳಿಯಲ್ಲಿ ಅವಘಡ ಸಂಭವಿಸಿದಲ್ಲಿ ನೇರವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಟೋಲ್ ಫ್ರೀ ನಂಬರ್ ಅನ್ನು ಕೂಡ ನಮೂದಿಸಿ ರುವುದು ವಿಶೇಷವಾಗಿ ಗಮನ ಸೆಳೆಯುತ್ತದೆ.
ವ್ಯವಸ್ಥಿತ ತಂಗುದಾಣದಿಂದ ವ್ಯಾಪಾರಸ್ಥರಿಗೂ ಅನುಕೂಲ
ಕುವೆಂಪುನಗರ, ಜಯನಗರ ಗೇಟ್ ಬಳಿ ಇರುವ ಬಸ್ ಪ್ರಯಾಣಿಕರ ತಂಗುದಾಣಗಳನ್ನು ನವೀಕರಿಸಿರುವುದರಿಂದ ಸ್ಥಳೀಯ ವ್ಯಾಪಾರಸ್ಥರಿಗೂ ಅನುಕೂಲವಾಗಿದೆ. ಈ ತಂಗುದಾಣಗಳು ಆಧುನಿಕ ಶೈಲಿಯ ಆಸನಗಳನ್ನು ಹೊಂದಿರುವುದರಿಂದ ಬಸ್‌ಗಾಗಿ ಕಾಯುವವರು, ದಣಿವಾರಿಸಿ ಕೊಳ್ಳುವ ಸಾರ್ವಜನಿಕರು ಹೆಚ್ಚು ಸಮಯ ಇಲ್ಲಿ ಕುಳಿತುಕೊಳ್ಳುತ್ತಾರೆ. ಸಮಯ ಕಳೆಯುವುದಕ್ಕೆ ಸೌತೆಕಾಯಿ, ಹಣ್ಣುಗಳು ಅಥವಾ ತಿನಿಸುಗಳನ್ನು ಸ್ಥಳೀಯ ತಳ್ಳುಗಾಡಿಗಳು, ಅಂಗಡಿ- ಮುಂಗಟ್ಟುಗಳಲ್ಲಿ ಖರೀದಿಸುತ್ತಾರೆ. ಇದರಿಂದ ವ್ಯಾಪಾರದಲ್ಲೂ ಸ್ವಲ್ಪ ಹೆಚ್ಚಳ ಆಗಿದೆ ಎನ್ನಬಹುದು.
ಬಸ್ ನಿಲ್ದಾಣ ಹೊಸ ವಿನ್ಯಾಸದಲ್ಲಿ ರೂಪುಗೊಂಡಿದೆ. ನಿರ್ವಹಣೆ ಸರಿಯಾಗಿರಬೇಕು. ಬಸ್ ನಿಲ್ದಾಣ
ನಮ್ಮದೆಂಬ ಭಾವನೆ ಪ್ರಯಾಣಿಕರಲ್ಲೂ ಇರಬೇಕು. ಸ್ವಚ್ಛತೆಯನ್ನು ಕೂಡ ಕಾಪಾಡಬೇಕಿದೆ.
-ಜಯಮ್ಮ, ಅಶೋಕಪುರಂ (ಕುವೆಂಪುನಗರ ತಂಗುದಾಣದಲ್ಲಿ
ಬಸ್‌ಗಾಗಿ ಕಾಯುತ್ತಿದ್ದವರು)
.ಆಕರ್ಷಣೀಯವಾದ ಆಸನದೊಂದಿಗೆ ಆಸರೆ
. ಪ್ರಯಾಣಿಕರ ಸ್ನೇಹಿ, ಪೊಲೀಸ್ ಸಹಾಯವಾಣಿ ಸೌಲಭ್ಯ!
ಫೋಟೊ ಕಳುಹಿಸಿ
ನಿಮ್ಮ ಬಡಾವಣೆಗಳು ಅಥವಾ ಮುಖ್ಯ ರಸ್ತೆಗಳಲ್ಲಿ ಸಮಸ್ಯೆ ಬಿಂಬಿಸುತ್ತಿರುವ ಪ್ರಯಾಣಿಕರ ತಂಗುದಾಣಗಳ ಫೋಟೊ ಮತ್ತು ವಿಳಾಸ ಕಳುಹಿಸಿ. ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
ಮೊ.ಸಂ.90171777071
ಬೆಂಗಳೂರು : ಬೆಂಗಳೂರಿನಲ್ಲಿ ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಟ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ…
ಬೆಳಗಾವಿ : ಸರ್ಕಾರದಿಂದ ಪಡೆದ ಸಿಎ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಈಗಿರುವ ಮೂರು ವರ್ಷಗಳ ಮಿತಿಯನ್ನು ಐದು ವರ್ಷಗಳಿಗೆ…
ಮೈಸೂರು : ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಹಾಗೂ ಮುಂಬೈನ ಬಾಂಧ್ರಾ ಪೊಲೀಸ್ ಅಧಿಕಾರಿ ಸೋಗಿನಲ್ಲಿ ನಗರದ ವೈದ್ಯರೊಬ್ಬರಿಗೆ…
ಮೈಸೂರು : ಜಾತಿ ನಿಂದನೆ, ಅಸ್ಪೃಶ್ಯತೆ ಆಚರಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರು ದಾಖಲು ಹಾಗೂ ತನಿಖೆ ನಡೆಸುವ ಉದ್ದೇಶದಿಂದ ಆರಂಭಗೊಂಡಿರುವ…
ಮೈಸೂರು : ಕರ್ನಾಟಕ ಪೊಲೀಸ್ ಅಕಾಡೆಮಿ ಮತ್ತು ಸಾವಿತ್ರಿಬಾಯಿ ಫುಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆಯ ನಡುವೆ ಒಡಂಬಡಿಕೆಗೆ…
ಬೆಳಗಾವಿ (ಸುವರ್ಣಸೌಧ) : ಇತ್ತೀಚೆಗೆ ನಿಧನರಾದ ಸಾಹಿತಿ ಎಸ್.ಎಲ್.ಭೈರಪ್ಪ ಅವರ ಸ್ಮಾರಕವನ್ನು ಮೈಸೂರಿನಲ್ಲಿ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ…