Andolana originals

ಏ.೫ರಿಂದ ಚೇನಂಡ ಹಾಕಿ ನಮ್ಮೆ; ಭರ್ಜರಿ ಸಿದ್ಧತೆ

ನವೀನ್ ಡಿಸೋಜ

೩ ಕೋಟಿ ರೂ. ವೆಚ್ಚದಲ್ಲಿ ೨೬ನೇ ಕೊಡವ ಕೌಟುಂಬಿಕ ಹಾಕಿ ಉತ್ಸವ ಆಯೋಜನೆ

ಮಡಿಕೇರಿ: ಏ.೫ರಿಂದ ಆರಂಭವಾಗಲಿರುವ ೨೬ನೇ ಕೊಡವ ಕೌಟುಂಬಿಕ ಹಾಕಿ ಉತ್ಸವ ಚೇನಂಡ ಹಾಕಿ ನಮ್ಮೆ ೨೦೨೬ಕ್ಕೆ ಭರ್ಜರಿ ಸಿದ್ಧತೆ ನಡೆದಿದ್ದು, ಅಂದಾಜು ೨.೭೫ ರಿಂದ ೩ ಕೋಟಿ ರೂ. ವೆಚ್ಚದಲ್ಲಿ ಪಂದ್ಯಾವಳಿ ಆಯೋಜನೆಗೊಳ್ಳಲಿದೆ.

ಏ.೫ ರಿಂದ ಮೇ ೨ರವರೆಗೆ ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿರುವ ಚೇನಂಡ ಕಪ್ ಹಾಕಿ ಉತ್ಸವಕ್ಕೆ ಈಗಾಗಲೇ ಸಿದ್ಧತೆ ಆರಂಭವಾಗಿದೆ. ಗ್ಯಾಲರಿ ನಿರ್ಮಾಣ ಮತ್ತು ಮೈದಾನ ಸಿದ್ಧತಾ ಕೆಲಸಗಳು ನಡೆಯುತ್ತಿವೆ ಎಂದು ಹಾಕಿ ಉತ್ಸವದ ಕಾರ್ಯಾಧ್ಯಕ್ಷ ಚೇನಂಡ ದೀನ ಚಂಗಪ್ಪ ಮಾಹಿತಿ ನೀಡಿದ್ದಾರೆ. ಕುಂಡ್ಯೋಳಂಡ ಹಾಕಿ ಉತ್ಸವದ ಬಳಿಕ ಮೈದಾನವನ್ನು ಹಾಗೆಯೇ ಬಿಡಲಾಗಿದ್ದು, ಕ್ರಿಕೆಟ್ ಸೇರಿದಂತೆ ಇತರೇ ಪಂದ್ಯಾವಳಿಗಳು ಆಯೋಜನೆಗೊಂಡಿವೆಯಾದರೂ ನಿರ್ವಹಣೆ ಇಲ್ಲದೇ ಕೆಲವೆಡೆ ಮೈದಾನಕ್ಕೆ ಹಾನಿಯಾಗಿದೆ. ಇದನ್ನೆಲ್ಲಾ ಸರಿಪಡಿಸಿ, ಟಾಟಾ ಕಾಫಿಯ ನಿವೃತ್ತ ಸಿಬ್ಬಂದಿ ರಾಜು ಅವರ ನೇತೃತ್ವದಲ್ಲಿ ಸಿದ್ಧತಾ ಕೆಲಸ ಆರಂಭಿಸಲಾಗುವುದು ಎಂದು ದೀನ ಚಂಗಪ್ಪ ಮಾಹಿತಿ ನೀಡಿದರು.

ಪಂದ್ಯಾವಳಿಗಾಗಿ ನಾಲ್ಕು ಮೈದಾನಗಳನ್ನು ಸಿದ್ಧಗೊಳಿಸಲಾಗುತ್ತದೆ. ಆ ಪೈಕಿ ಕುಂಡ್ಯೋಳಂಡ ಕುಟುಂಬಸ್ಥರು ಸ್ವ ಇಚ್ಛೆಯಿಂದ ಒಂದು ಮೈದಾನದ ಸಿದ್ಧತಾ ಕಾರ್ಯ ನಡೆಸಿಕೊಡುತ್ತಿದ್ದಾರೆ. ಉಳಿದ ಮೂರು ಮೈದಾನಗಳನ್ನು ಚೇನಂಡ ಕುಟುಂಬಸ್ಥರು ಸಿದ್ಧಪಡಿಸಲಿದ್ದಾರೆ. ಮೈದಾನದ ಸುತ್ತಲೂ ೧೨ ಹಂತಗಳ ಗ್ಯಾಲರಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

ಪಂದ್ಯಾವಳಿಯ ಉದ್ಘಾಟನೆಯ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಕ್ರೀಡಾ ಸಚಿವ ಡಾ.ಮನ್ಸುಖ್ ಮಾಂಡವೀಯ, ರಾಜ್ಯಸಭಾ ಸದಸ್ಯ ಅಜಯ್ ಮಖಾನ್ ಸೇರಿದಂತೆ ಇತರೇ ಗಣ್ಯರು ಆಗಮಿಸುವ ಹಿನ್ನೆಲೆಯಲ್ಲಿ ಹೆಚ್ಚಿನ ಜನರಿಗಾಗಿಗ್ಯಾಲರಿ ಕೆಳಭಾಗದಲ್ಲಿ ಹೆಚ್ಚುವರಿ ಆಸನಗಳ ವ್ಯವಸ್ಥೆ ಮಾಡಿಕೊಳ್ಳಲು ಚೇನಂಡ ಕುಟುಂಬಸ್ಥರು ತೀರ್ಮಾನಿಸಿದ್ದಾರೆ.

ಚೇನಂಡ ಹಾಕಿ ಉತ್ಸವಕ್ಕಾಗಿ ಒಟ್ಟು ೩೨ ಕೇಂದ್ರಗಳಲ್ಲಿ ಕುಟುಂಬಗಳ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಕ್ರೀಡಾ ಆಸಕ್ತರು ಸ್ವಯಂಪ್ರೇರಿತರಾಗಿ ನೋಂದಣಿಗೆ ಸಹಕರಿಸುತ್ತಿದ್ದಾರೆ. ಈ ಎಲ್ಲಾ ೩೨ ಕೇಂದ್ರಗಳಿಗೆ ಸದ್ಯದಲ್ಲಿಯೇ ಭೇಟಿ ನೀಡಿ ನೋಂದಣಿ ವಿವರಗಳನ್ನು ಪಡೆದುಕೊಳ್ಳಲಾಗುತ್ತದೆ ಎಂದು ದೀನ ಚಂಗಪ್ಪ ಮಾಹಿತಿ ನೀಡಿದರು. ಈ ಬಾರಿ ಆನ್‌ಲೈನ್ ಮೂಲಕ ಪ್ರತಿ ತಂಡದ ವಿವರಗಳನ್ನು ದಾಖಲೆ ಮಾಡಿಕೊಳ್ಳಲಾಗುವುದು. ಅದರಲ್ಲಿ ಪ್ರತಿ ಆಟಗಾರರ ವಿವರ, ಅವರಿಂದ ದಾಖಲಾದ ಗೋಲುಗಳು, ಪಂದ್ಯಾವಳಿಯಲ್ಲಿ ಆಯಾ ತಂಡದ ಪ್ರತಿ ಪಂದ್ಯದ ಗೋಲು ಸೇರಿದಂತೆ ಎಲ್ಲಾ ಅಂಕಿ ಅಂಶಗಳನ್ನು ದಾಖಲಿಸಲಾಗುವುದು. ಅದನ್ನು ಮುಂದಿನ ಆಯೋಜಕರಿಗೆ ನೀಡಲಾಗುವುದು, ಇದರಿಂದ ಅವರಿಗೂ ಅನುಕೂಲವಾಗಲಿದೆ ಎಂದು ದೀನ ತಿಳಿಸಿದರು.

ಕೊಡವ ಹಾಕಿ ಉತ್ಸವವವನ್ನು ಈವರೆಗೂ ಆಯೋಜಿಸಿರುವ ಎಲ್ಲಾ ಕುಟುಂಬಗಳ ಐನ್‌ಮನೆಗಳಿಗೆ ಚೇನಂಡ ಕುಟುಂಬಸ್ಥರು ಭೇಟಿ ನೀಡಿ,ಅವರನ್ನು ಪಂದ್ಯಾವಳಿಗೆ ಆಹ್ವಾನಿಸಿ, ಅವರ ಆಯೋಜನೆಯಲ್ಲಿ ನಡೆದ ಪಂದ್ಯಾವಳಿಯ ಮಾಹಿತಿ ಪಡೆದು, ಅದನ್ನು ಸಾಕ್ಷ ಚಿತ್ರದಂತೆ ತಯಾರಿಸಿ ಪಂದ್ಯಾವಳಿ ವೇಳೆ ಬೃಹತ್ ಎಲ್‌ಇಡಿ ಪರದೆಯಲ್ಲಿ ಪ್ರದರ್ಶನಗೊಳಿಸಲಾಗುತ್ತದೆ.

ಮಳೆಯಿಂದ ರಕ್ಷಣೆಗೆ ಹೊಸ ವ್ಯವಸ್ಥೆ..! 

ಟಾರ್ಪಲಿನ್ ಸಂಸ್ಥೆಯೊಂದರ ಸಹಯೋಗದಲ್ಲಿ ಮಳೆಯಿಂದ ಮೈದಾನ ಹಾಳಾಗದಂತೆ ಸಂಪೂರ್ಣ ಮುಚ್ಚುವ ಚಿಂತನೆ ನಡೆಸಲಾಗಿದೆ. ಮಳೆ ಬಂದಾಗ ಕ್ರಿಕೆಟ್‌ನಲ್ಲಿ ಪಿಚ್ ರಕ್ಷಣೆ ಮಾಡುವಂತೆ ಇಡೀ ಮೈದಾನಕ್ಕೆ ಟಾರ್ಪಲ್ ಹೊದಿಕೆಯ ರಕ್ಷಣೆ ನೀಡುವ ಸಂಬಂಧ ಯೋಜನೆ ರೂಪಿಸಲಾಗುತ್ತಿದೆ.

” ಈಬಾರಿಯ ಚೇನಂಡ ಹಾಕಿ ಉತ್ಸವವನ್ನು ಅಂದಾಜು ಚೇನಂಡ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ೨.೭೫ರಿಂದ ೩ ಕೋಟಿ ರೂ. ವೆಚ್ಚದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಪಂದ್ಯಾವಳಿಯ ವೇಳೆ ಬಾಳೋಪಾಟ್ ತರಬೇತಿ, ಮ್ಯಾರಥಾನ್, ಹಸಿರು ತ್ಯಾಜ್ಯ ನಿರ್ವಹಣೆ, ಕೋಚಿಂಗ್ ಕ್ಯಾಂಪ್ ಸೇರಿದಂತೆ ಹಲವು ವಿಶೇಷತೆಗಳಿರಲಿವೆ.”

-ಚೇನಂಡ ದೀನ ಚಂಗಪ್ಪ, ಚೇನಂಡ ಹಾಕಿ ಉತ್ಸವದ ಕಾರ್ಯಾಧ್ಯಕ್ಷ

ಪ್ರದರ್ಶನ ಪಂದ್ಯ..!: 

ಚೇನಂಡ ಹಾಕಿ ಉತ್ಸವದ ಉದ್ಘಾಟನೆ ಸಂದರ್ಭದಲ್ಲಿ ಪ್ರದರ್ಶನ ಪಂದ್ಯಕ್ಕಾಗಿ ಭಾರತೀಯ ಹಾಕಿ ಜೂನಿಯರ್ ತಂಡವನ್ನು ಆಹ್ವಾನಿಸಲಾಗಿದೆ. ಇವರೊಂದಿಗೆ ದಕ್ಷಿಣ ರೈಲ್ವೆ ತಂಡ ಮತ್ತು ಗಲ್‌ನಿಂದ ಹಾಕಿ ತಂಡವೊಂದು ಪ್ರದರ್ಶನ ಪಂದ್ಯದಲ್ಲಿ ಪಾಲ್ಗೊಳ್ಳಲಿವೆ. ಈ ತಂಡಗಳ ಜತೆ ಸ್ಥಳೀಯ ಕೂರ್ಗ್ ಇಲವೆನ್ ತಂಡ ಪಂದ್ಯ್ಯಾ ಆಡಲಿದೆ ಎಂದು ಈಬಾರಿಯ ಚೇನಂಡ ಹಾಕಿ ಉತ್ಸವವನ್ನು ಅಂದಾಜು ಚೇನಂಡ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

 

ಆಂದೋಲನ ಡೆಸ್ಕ್

Recent Posts

ಹನೂರು | ಸುಗಮ ಸಂಚಾರಕ್ಕೆ 4.5ಕೋಟಿ ವೆಚ್ಚದಲ್ಲಿ 2 ಸೇತುವೆ ನಿರ್ಮಾಣ

ಹನೂರು : ಮಳೆಗಾಲದ ಸಂದರ್ಭದಲ್ಲಿ ರೈತರು ಹಾಗೂ ನೆರೆಯ ತಮಿಳುನಾಡಿಗೆ ತರಕಾರಿ ತೆಗೆದುಕೊಂಡು ಹೋಗುತ್ತಿದ್ದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆ,…

14 mins ago

ರಾಜ್ಯದ 2 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ : ಇಲ್ಲಿದೆ ಮಾಹಿತಿ

ಬೆಂಗಳೂರು : ಭಾರತೀಯ ಚುನಾವಣಾ ಆಯೋಗವು(ಇಸಿಐ) ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ದಿನಾಂಕವನ್ನು ಭಾನುವಾರ ಪ್ರಕಟಿಸಿದೆ. ಈ ಕುರಿತು…

33 mins ago

ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಿಸಿದ ಚುನಾವಣಾ ಆಯೋಗ

ಹೊಸದಿಲ್ಲಿ : 4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಚುನಾವಣೆ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗ(ಇಸಿಐ) ಅಧಿಕೃತವಾಗಿ…

1 hour ago

ಸೌದಿ ಅರೇಬಿಯಾದಲ್ಲಿರುವ ಅಮೇರಿಕಾದ ವಾಯುನೆಲೆಯ ಮೇಲೆ ಇರಾನ್‌ ದಾಳಿ

ಟೆಹರಾನ್:‌ ಯುಎಸ್‌ ಮಿಲಿಟರಿ ಬಳಸುತ್ತಿದ್ದ ಸೌದಿ ಅರೇಬಿಯಾದ ಅಲ್‌ ಖಾರ್ಜ್‌ ವಾಯುನೆಲೆಯ ಮೇಲೆ ಇರಾನ್‌ ಕ್ಷಿಪಣಿ ದಾಳಿ ನಡೆಸಿದೆ. ಕೆಲವು…

3 hours ago

ಸ್ವಲ್ಪ ಮಟ್ಟಿಗೆ ಹೋಟೆಲ್‌ಗಳಿಗೆ ವಾಣಿಜ್ಯ ಎಲ್‌ಪಿಜಿ ನೀಡುವ ಬಗ್ಗೆ ಚರ್ಚೆ: ಸಚಿವ ಮುನಿಯಪ್ಪ

ಬೆಂಗಳೂರು: ನಗರದಲ್ಲಿ ವಾಣಿಜ್ಯ ಎಲ್‌ಪಿಜಿ ಕೊರತೆ ಮುಂದುವರಿದಿದ್ದು, ಸ್ವಲ್ಪ ಮಟ್ಟಿಗೆ ಹೋಟೆಲ್‌ಗಳಿಗೆ ಎಲ್‌ಪಿಜಿ ನೀಡಲು ಚರ್ಚಿಸುತ್ತೇವೆ ಎಂದು ಸಚಿವ ಮುನಿಯಪ್ಪ…

3 hours ago

ಚಾಮರಾಜನಗರ| ಗೂಡ್ಸ್‌ ಆಟೋ ಪಲ್ಟಿ: 13 ಮಂದಿಗೆ ಗಾಯ

ಚಾಮರಾಜನಗರ: ಗೂಡ್ಸ್‌ ಆಟೋ ಪಲ್ಟಿಯಾಗಿ 13 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದ ಬೈಪಾಸ್‌ ರಸ್ತೆಯಲ್ಲಿ ನಡೆದಿದೆ. ಮಲೆ ಮಹದೇಶ್ವರ…

3 hours ago