ಪುನೀತ್ ಮಡಿಕೇರಿ
ಏ.೬ರಿಂದ ೪೦ ದಿನಗಳ ಕಾಲ ಪಂದ್ಯಾವಳಿ ಆಯೋಜನೆ; ಅಂದಾಜು ೪೦ ಲಕ್ಷ ರೂ. ವೆಚ್ಚ
ಮಡಿಕೇರಿ: ಕೊಡವ ಕೌಟುಂಬಿಕ ಕ್ರಿಕೆಟ್‌ನಲ್ಲಿ ೮ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ಚೆಕ್ಕೇರ ಕುಟುಂಬ ಈ ಬಾರಿ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯ ಸಾರಥ್ಯ ವಹಿಸಿದೆ.
ಚೆಕ್ಕೇರ ಕುಟುಂಬ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ೨೩ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯಾಗಿರುವ ಚೆಕ್ಕೇರ ಕ್ರಿಕೆಟ್ ಕಪ್ ಏ.೬ರಂದು ಆರಂಭಗೊಳ್ಳಲಿದೆ. ಹುದಿಕೇರಿ ಜನತಾ ಪ್ರೌಢಶಾಲೆ ಮತ್ತು ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಮ್ಮೆ ನಡೆಯಲಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಕ್ರಿಕೆಟ್ ಸ್ಪರ್ಧೆ ನಡೆಯಲಿದೆ. ಪುರುಷರಲ್ಲಿ ೩೦೦, ಮಹಿಳೆಯರ ೧೦೦ ತಂಡಗಳು ಭಾಗವಹಿಸುವ ನಿರೀಕ್ಷೆಯನ್ನು ಆಯೋಜಕರು ಹೊಂದಿದ್ದಾರೆ. ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಕೂಡ ಈ ವರ್ಷದ ಕ್ರಿಕೆಟ್ ಕಪ್‌ಗೆ ಹೆಚ್ಚು ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೋಣಗೇರಿ, ತಿತಿಮತಿ, ಹುದಿಕೇರಿ, ಬಾಳೆಲೆ, ಕುಟ್ಟ, ಬೀರುಗ, ಕಡಂಗ ಭಾಗಗಳಲ್ಲಿ ಚೆಕ್ಕೇರ ಕುಟುಂಬ ಜೀವನ ಸಾಗಿಸುತ್ತಿದ್ದು, ಹಬ್ಬ ಹರಿದಿನಗಳನ್ನು ಒಟ್ಟಾಗಿ ಆಚರಿಸುತ್ತಿದೆ.
ಸುಮಾರು ೩೫೦ ಸದಸ್ಯರನ್ನು ಚೆಕ್ಕೇರ ಕುಟುಂಬ ಒಳಗೊಂಡಿದ್ದು, ಚೆಕ್ಕೇರ ಕುಟುಂಬದ ತಕ್ಕರಾಗಿ ಪಿ.ರಾಜೇಶ್ ಕೆಲಸ ನಿರ್ವ ಹಿಸುತ್ತಿದ್ದಾರೆ. ಚೆಕ್ಕೇರ ಕ್ರಿಕೆಟ್ ಕಪ್ ಅಧ್ಯಕ್ಷರಾಗಿ ಚೆಕ್ಕೇರ ಚಂದ್ರ ಪ್ರಕಾಶ್, ಕೊಡವ ಕ್ರಿಕೆಟ್ ಕಾರ್ಯದರ್ಶಿಯಾಗಿ ಕೊಕ್ಕಂಗೇಡ ರಂಜನ್, ಚೆಕ್ಕೇರ ಕ್ರಿಕೆಟ್ ಕಪ್ ನಮ್ಮೆಯ ಸಂಚಾಲಕರಾಗಿ ಚೆಕ್ಕೇರ ಆದರ್ಶ್, ಕ್ರಿಕೆಟ್ ಸಮಿತಿಯ ನಿರ್ದೇಶಕರಾಗಿ ಚಿಟ್ಯಪ್ಪ , ಖಜಾಂಚಿಯಾಗಿ ವಿವೇಕ್, ಇತರರು ಕ್ರಿಕೆಟ್ ನಮ್ಮೆಯ ಯಶಸ್ವಿಗಾಗಿ ಶ್ರಮ ವಹಿಸಿದ್ದಾರೆ.
ಅಂದಾಜು ೪೦ ಲಕ್ಷ ರೂ. ವೆಚ್ಚದಲ್ಲಿ ಕ್ರೀಡಾಕೂಟ ನಡೆಯಲಿದೆ. ಸಂಬಂಧಪಟ್ಟವರಿಗೆಈಗಾಗಲೇ ಮನವಿ ನೀಡಲಾಗಿದ್ದು, ಆರ್ಥಿಕ ಕ್ರೋಢೀಕರಣವೂ ನಡೆಯುತ್ತಿದೆ. ಲೋಗೋದಲ್ಲಿಯೂ ಪುರುಷ ಹಾಗೂ ಮಹಿಳಾ ಕ್ರೀಡಾಪಟುವಿಗೆ ಸಮಾನ ಆದ್ಯತೆ ನೀಡಲಾಗಿದೆ. ಗಂಡು ಹೆಣ್ಣು ಎಂಬ ಭೇದ ಕೊಡವ ಜನಾಂಗದಲ್ಲಿ ಇಲ್ಲ ಎಂಬ ಸಂದೇಶ ಸಾರಲಾಗಿದೆ. ಇದರೊಂದಿಗೆ ಐನ್‌ಮನೆಯ ಸಾಂಸ್ಕೃತಿಕ ಹಿರಿಮೆಯನ್ನು ಪ್ರತಿಬಿಂಬಿಸಲಾಗಿದೆ.
ಕ್ರಿಕೆಟ್‌ನೊಂದಿಗೆ ಸಾಹಿತ್ಯಕ್ಕೆ ಒತ್ತು: ಕ್ರಿಕೆಟ್ ನೊಂದಿಗೆ ಸಾಹಿತ್ಯಕ್ಕೆ ಒತ್ತು ನೀಡಲು ಪ್ರಬಂಧ ಸ್ಪರ್ಧೆಯನ್ನೂ ಆಯೋಜಿಸಿದ್ದು, ಕೊಡವ ಹಾಕಿ ಮತ್ತು ಕೊಡವ ಕ್ರಿಕೆಟ್ ವಿಷಯದಲ್ಲಿ ೪ ಪುಟ ಮೀರದಂತೆ ಪ್ರಬಂಧ ಬರೆದು ಚೆಕ್ಕೇರ ಕ್ರಿಕೆಟ್ ಕಪ್, ಹುದಿಕೇರಿ ವಿಳಾಸಕ್ಕೆ ಕಳುಹಿಸಬೇಕಿದೆ. ಕೊಡವ ಹಾಕಿ ಹಾಗೂ ಕೊಡವ ಕ್ರಿಕೆಟ್‌ನ ಹುಟ್ಟು, ಮುಂದಿನ ಬೆಳವಣಿಗೆಗೆ ಸಂಬಂಧಿಸಿದಂತೆ ವಯಸ್ಸಿನ ಮಿತಿ ಇಲ್ಲದಂತೆ ಆಸಕ್ತರು ಕೈ ಬರಹದಲ್ಲಿ ಬರೆದು ಕಳಿಸಬಹುದಾಗಿದೆ. ಉತ್ತಮ ಬರಹಕ್ಕೆ ನಮ್ಮೆ ಉದ್ಘಾಟನೆಯಂದು ಬಹುಮಾನವೂ ಇದೆ ಎಂದು ಆಯೋಜಕರು ತಿಳಿಸಿದ್ದಾರೆ.
ಮ್ಯಾರಥಾನ್ ಸ ರ್ಧೆ: ಕ್ರಿಕೆಟ್ ಪಂದ್ಯಾಟದೊಂದಿಗೆ ಒಕ ಡೊಕ ಡ ನಡುವೆ(ಕುಟುಂಬಗಳ ನಡುವೆ) ಮ್ಯಾರಥಾನ್ ಸ ರ್ಧೆಯನ್ನು ಹಮ್ಮಿಕೊಳ್ಳುವ ಯೋಜನೆ ರೂಪಿಸಲಾಗಿದೆ. ಪ್ರತಿ ತಂಡದಲ್ಲಿಯೂ ಓರ್ವ ಮಹಿಳಾ ಸದಸ್ಯೆಯನ್ನು ಕಡ್ಡಾಯ ಮಾಡಲಾಗಿದ್ದು, ಕ್ರಿಕೆಟ್ ಪಂದ್ಯಾಟದ ನಡುವೆ ಮ್ಯಾರಥಾನ್ ಮನರಂಜನೆಯೂ ದೊರೆಯಲಿದೆ.
” ಚೆಕ್ಕೇರ ಕುಟುಂಬ ಮತ್ತು ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ ೨೩ನೇ ವರ್ಷದ ಕೊಡವ ಕೌಟುಂಬಿಕ ಕ್ರಿಕೆಟ್ ನಮ್ಮೆಯಾಗಿರುವ ಚೆಕ್ಕೇರ ಕ್ರಿಕೆಟ್ ಕಪ್ ಏ.೬ರಂದು ಆರಂಭಗೊಳ್ಳಲಿದೆ. ದಿನ ಪಂದ್ಯಾಟ ಆಯೋಜಿಸುವ ಯೋಜನೆ ಇದ್ದು, ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಕ್ರೀಡೆಯೊಂದಿಗೆ ಸಾಹಿತ್ಯಕ್ಕೂ ಒತ್ತು ನೀಡಲಾಗಿದೆ.”
-ಚೆಕ್ಕೇರ ಚಂದ್ರ ಪ್ರಕಾಶ್, ಅಧ್ಯಕ್ಷರು, ಚೆಕ್ಕೇರ ಕ್ರಿಕೆಟ್ ಕಪ್
” ಕ್ರಿಕೆಟ್ ನಮ್ಮೆ ಆಯೋಜಿಸಲು ಕುಟುಂಬ ಸಿದ್ಧವಾಗಿದೆ. ಅವಿಭಕ್ತ ಕುಟುಂಬವಾಗಿ ಜೀವನ ಸಾಗಿಸುತ್ತಿದ್ದ ಕೊಡವರು ಇಂದು ವಿಭಕ್ತ ಕುಟುಂಬವಾಗಿ ಜೀವನ ಸಾಗಿಸುತ್ತಿದ್ದಾರೆ. ಎಲ್ಲರಲ್ಲೂ ಒಗ್ಗಟ್ಟು ಮೂಡಿಸಲು ಕ್ರಿಕೆಟ್ ನಮ್ಮೆ ಸಹಕಾರಿಯಾಗುತ್ತಿದೆ.”
-ಪಿ.ರಾಜೇಶ್, ಚೆಕ್ಕೇರ ಒಕ್ಕ ತಕ್ಕ
” ಕ್ರಿಕೆಟ್ ನಮ್ಮೆಗೆ ಸಕಲ ಸಿದ ತೆ ಆರಂಭಗೊಂಡಿದ್ದು, ಫೆ.೧ ರಿಂದ ತಂಡಗಳ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ವೆಬ್‌ಸೈಟ್ ಮೂಲಕ, ವಿವಿಧ ಗ್ರಾಮಗಳಲ್ಲಿ ನೇರವಾಗಿ ನೋಂದಾಯಿಸಲು ಅವಕಾಶ ನೀಡಲಾಗಿದೆ.”
-ಚೆಕ್ಕೇರ ಆದರ್ಶ್, ಸಂಚಾಲಕರು, ಕ್ರಿಕೆಟ್ ನಮ್ಮೆ
ಮಹಾದೇಶ್ ಎಂ ಗೌಡ ಹನೂರು: ತಮ್ಮ ಊರಿನಿಂದ ದೂರದಲ್ಲಿರುವ ಶಾಲಾ ಕಾಲೇಜುಗಳಿಗೆ ಹೋಗುವುದಕ್ಕೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಲು ಕೋರಿ…
ಬಿ.ಎಸ್.ವಿನಯ್ ಮೊನ್ನೆ ಯಳಂದೂರಿನ ಬೀದಿಯಲ್ಲಿ ಸಾಗುತ್ತಿದ್ದಾಗ ಬಳೆಮಂಟಪದ ಮುಂದೆ ಪರಿಚಿತ ಹಿರಿಯರೊಬ್ಬರು ಎದುರಾದರು. ‘ಯಜಮಾನರೇ, ಕಾರ್ಯಕ್ರಮಕ್ಕೆ ಯಾಕೆ ಬರಲಿಲ್ಲ?’ ಕೇಳಿದರೆ…
ವಿನುತ ಕೋರಮಂಗಲ ನಮ್ಮ ಹಟ್ಟಿಯಿಂದ ನಾಲ್ಕೈದು ಕಿ.ಮೀ. ದೂರವಿರುವ ನಮ್ಮೂರಿನ ಕೆರೆಯ ಅಂಗಳಕ್ಕೆ ನಾವೇನು ನಡೆದುಕೊಂಡು ಹೋಗುತ್ತಿರಲಿಲ್ಲ. ಗಂಗೆ ಎಂದು…
ಅಕ್ಷತಾ ಖಾಲಿ ಹಾಳೆಯ ಒಂದೇ ಮಗ್ಗುಲಿನಲ್ಲಿ ಚಿತ್ತಿಲ್ಲದಂತೆ ಬರೆದು, ಪದ ಮಿತಿಯನ್ನು ಬೆರಳು ಲೆಕ್ಕದಲ್ಲಿ ಎಣಿಸಿ, ಪತ್ರಿಕೆಯ ವಿಳಾಸಕ್ಕೆ ಕಳುಹಿಸಿದ…
ಹನೂರು: ತಾಲೂಕಿನ ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಮಲೆ ಮಹದೇಶ್ವರ ಅರಣ್ಯ ಪ್ರದೇಶ ವ್ಯಾಪ್ತಿಯ ಬಳಗುಡ್ಡ ಬಿಟ್ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಎರಡು…