Andolana originals

ವಯನಾಡು ದುರಂತ: ಕೆಆರ್‌ ಪೇಟೆಯ ಮಹಿಳೆ, ಮೊಮ್ಮಗ ಸಾವು

ದಂಪತಿ ಜೀವನ್ಮರಣದ ಹೋರಾಟ

ಕೆ. ಆರ್. ಪೇಟೆ: ಕೇರಳ ರಾಜ್ಯದ ವಯನಾಡಿನಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಕೆ. ಆರ್. ಪೇಟೆ ತಾಲ್ಲೂಕಿನ ಕತ್ತರಘಟ್ಟ ಮೂಲದ ಮಹಿಳೆಯೊಬ್ಬರ ಅತ್ತೆ ಮತ್ತು ಪುತ್ರ ಮೃತಪಟ್ಟಿದ್ದು, ಸ್ವತಃ ಮಹಿಳೆ, ಆಕೆಯ ಪತಿ, ಮಾವ ತೀವ್ರವಾಗಿ ಗಾಯಗೊಂಡಿದ್ದಾರೆ.

ಕತ್ತರಘಟ್ಟ ಗ್ರಾಮದ ಜಗದೀಶ್ ಮತ್ತು ಕುಳ್ಳಮ್ಮ ಅವರ ಪುತ್ರಿ ಜಾನ್ಸಿರಾಣಿ ಅವರನ್ನು ಮೂಲತಃ ನಂಜನಗೂಡು ತಾಲ್ಲೂಕಿನ ಸರಗೂರು ಗ್ರಾಮದ ಅನಿಲ್‌ಕುಮಾರ್‌ರವರಿಗೆ ೨೦೨೦ರಲ್ಲಿ ವಿವಾಹ ಮಾಡಕೊಡಲಾಗಿತ್ತು. ಪ್ರಸ್ತುತ ಕೇರಳದ ಮುಂಡಕ್ಕೈ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಅವರ ಅತ್ತೆ ಲೀಲಾವತಿ (೫೫) ಮತ್ತು ಪುತ್ರ ನಿಹಾಲ್ (೨) ದುರಂತದಲ್ಲಿ ಸಾವಿಗೀಡಾಗಿದ್ದಾರೆ.

ಕೇರಳದ ಮುಂಡಕ್ಕೈ ಗ್ರಾಮದಲ್ಲಿ ವಾಸವಿದ್ದ ಗ್ರಾಮದಲ್ಲಿ ತಡರಾತ್ರಿ ಸಂಭವಿಸಿದ ಘಟನೆಯಲ್ಲಿ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಝಾನ್ಸಿರಾಣಿ ಮತ್ತು ಅವರ ಗಂಡ ಅನಿಲ್ ಕುಮಾರ್ ಹಾಗೂ ಮಾವ ದೇವರಾಜು, ಹೆಚ್ಚಿನ ಚಿಕಿತ್ಸೆಗಾಗಿ ಕೇರಳದ ವಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭೀಕರ ದುರಂತದಿಂದ ತಮ್ಮ ಗ್ರಾಮದ ಮಗಳು ಮತ್ತು ಮೊಮ್ಮಗುವನ್ನು ಕಳೆದುಕೊಂಡಿರುವ ಕತ್ತರಘಟ್ಟ ಗ್ರಾಮದಲ್ಲಿ ದುಃಖ ಮಡುಗಟ್ಟಿತು.

ಶಾಸಕ ಮಂಜು, ತಹಶೀಲ್ದಾರ್‌ ಭೇಟಿ
ದಂಪತಿ ಜೀವನ್ಮರಣದ ಹೋರಾಟ ಶಾಸಕ ಮಂಜು, ತಹಸಿಲ್ದಾರ್ ಭೇಟಿ ಕೇರಳ ಭೂ ಕುಸಿತ ದುರಂತದಲ್ಲಿ ಸಾವಿಗೀಡಾಗಿರುವ ಲೀಲಾವತಿ ಅವರ ತವರು ಮನೆಗೆ ಶಾಸಕ ಎಚ್. ಟಿ. ಮಂಜು, ಹಾಗೂ ತಹಸಿಲ್ದಾರ್ ನಿಸರ್ಗ ಪ್ರಿಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರಲ್ಲದೇ, ಕೇರಳದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಜಾನ್ಸಿರಾಣಿ ಮತ್ತು ಅನಿಲ್ ಕುಮಾರ್ ದಂಪತಿ ಬಗ್ಗೆ ಮಾಹಿತಿ ಪಡೆದರು.

ಆಂದೋಲನ ಡೆಸ್ಕ್

Recent Posts

ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನ

ಬೆಂಗಳೂರು : ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ(95) ಅವರು ನಿಧನರಾಗಿದ್ದಾರೆ.…

52 mins ago

ಆಯ್ತಪ್ಪ ನಾಳೆ ʻಗ್ಯಾರಂಟಿʼ ನಿಲ್ಲಿಸಿತ್ತೀವಿ ಬಿಡಿ : ಪರಮೇಶ್ವರ್‌ ಹೀಗೆ ಹೇಳಿದ್ಯಾಕೆ?

ತುಮಕೂರು : ವಿರೋಧ ಪಕ್ಷದವರು ಪದೇ ಪದೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯನ್ನು ವಿರೋಧಿಸುತ್ತಾರೆ. ಗ್ಯಾರಂಟಿ ಕೊಡದೆ ರಸ್ತೆ,…

60 mins ago

ಇಂದಿರಾಗಾಂಧಿ ತ್ಯಾಗದ ಮುಂದೆ ನಮ್ಮದೇನು ಇಲ್ಲ : ಖರ್ಗೆ ಭಾವುಕ ನುಡಿ

ಹೊಸದಿಲ್ಲಿ : ಇಂದು ನನ್ನ ಮಗನಿಗೆ ಎಂಟು ಗಂಟೆಯ ಆಪರೇಷನ್‌ ಇತ್ತು. ಪತ್ನಿ, ಮಗಳು ಎಲ್ಲರೂ ಫೋನ್‌ ಮಾಡಿ ಬಹಳ…

1 hour ago

ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ ; ಸಾರ್ವಜನಿಕರಲ್ಲಿ ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ!

ಮೈಸೂರು : ನಿರ್ದಿಷ್ಟ ಬ್ರಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ 'ಜಿನೋಟಾಕ್ಸಿಕ್ ಅಂಶ' ಪತ್ತೆಯಾಗಿದೆ ಎಂದು ಹೇಳುವ ವೈರಲ್ ವಿಡಿಯೋ ಇದೀಗ…

1 hour ago

ಶಿವಾಜಿ ಮುಸ್ಲಿಂರ ವಿರೋಧಿಯಾಗಿರಲಿಲ್ಲ :ಸಚಿವ ಕಾರ್ಮಿಕ ಸಂತೋಷ ಲಾಡ್‌

ಬೆಳಗಾವಿ : ಮರಾಠರು ಮುಸ್ಲಿಂ ವಿರೋಧಿ ಅಂತ‌ ಹಣೆಪಟ್ಟಿ ಕಟ್ಟಿಕೊಂಡಿದ್ದೇವೆ. ನಾವು ಮೊಘಲರ ವಿರುದ್ಧ ಇದ್ದೆವು. ಆದರೆ ಮುಸ್ಲಿಂರ ವಿರೋಧಿಗಳಾಗಿರಲಿಲ್ಲ.…

2 hours ago

ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೂ ಆದ್ಯತೆ ನೀಡಬೇಕು : ಸಂಸದ ಯದುವೀರ್‌

ಮೈಸೂರು : ‘ಹಳೆಯ ಮೈಸೂರು ರಕ್ಷಣೆಯ ನಿಟ್ಟಿನಲ್ಲಿ ಕಾಲಕಾಲಕ್ಕೆ ಸೂಕ್ತ ಕ್ರಮ ವಹಿಸಬೇಕು. ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೂ ಆದ್ಯತೆ ನೀಡಬೇಕು.…

3 hours ago