೨೮ ವರ್ಷದಿಂದ ಬಾಕಿ ಉಳಿಕೆ; ಪಾಲಿಕೆಗೆ ದೊಡ್ಡ ನಷ್ಟ
ಕೆ.ಬಿ.ರಮೇಶನಾಯಕ
ವರ್ಷದಿಂದ ವರ್ಷಕ್ಕೆ ಬಾಕಿ ಮೊತ್ತದಲ್ಲಿ ಹೆಚ್ಚಳ
೧೫ನೇ ಹಣಕಾಸು ಆಯೋಗದ ಅನುದಾನ ಕಡಿತ; ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿ
ನೀರಿನ ತೆರಿಗೆ ಪಾವತಿಗೆ ಗ್ರಾಹಕರ ನಿರಾಸಕ್ತಿ ಕರ ವಸೂಲಿಗೆ ಪ್ರತ್ಯೇಕ ತಂಡ ರಚನೆ ಸಾಧ್ಯತೆ
ಮೈಸೂರು: ಜನರಿಗೆ ದಿನದ ೨೪ ಗಂಟೆಗಳ ಕಾಲವೂ ಕುಡಿಯುವ ನೀರು ಸರಬರಾಜು ಮಾಡುವ ಜತೆಗೆ ನಿರ್ವಹಣೆ ವೆಚ್ಚ ಭರಿಸಲು ಅನುದಾನ ಇಲ್ಲದೆ ಮಹಾನಗರಪಾಲಿಕೆ ಸರ್ಕಾರದ ಮೊರೆ ಹೋಗುತ್ತಿದ್ದರೆ, ೨೮ ವರ್ಷಗಳಿಂದ ನೀರಿನ ತೆರಿಗೆ ಬಾಕಿ ಸಂಗ್ರಹವಾಗದೆ ಉಳಿಯುತ್ತಲೇ ಬಂದಿದೆ.
ಕಳೆದ ಮೂರು ವರ್ಷಗಳಲ್ಲಿ ಕುಡಿಯುವ ನೀರಿನತೆರಿಗೆ ಸಂಗ್ರಹದಲ್ಲಿ ಭಾರೀ ಇಳಿಮುಖವಾಗಿದ್ದು, ೨೩೬ ಕೋಟಿ ರೂ. ವಸೂಲಿ ಆಗಬೇಕಾಗಿದೆ.
೧೫ನೇ ಹಣಕಾಸು ಆಯೋಗದ ಅನು ದಾನ ಕಡಿತದಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗುವ ಸಾಧ್ಯತೆ ಇದೆ ಇಂತಹ ಸಂದರ್ಭದಲ್ಲೇ ನೀರಿನ ಬಾಕಿ ವಸೂಲಿಯಾಗದೆ ಇರುವುದು ಅಧಿಕಾರಿಗಳನ್ನು ಚಿಂತೆಗೀಡುಮಾಡಿದೆ.
ಸುಮಾರು ೨೩೬ ಕೋಟಿ ರೂ. ನೀರಿನ ಕರ ಬಾಕಿ ಇದೆ. ಇದರಲ್ಲಿ ವಾಣಿಜ್ಯ ಬಳಕೆಯ ನೀರಿನ ತೆರಿಗೆ ಕೂಡ ಸೇರಿದೆ. ಮನೆ ಬಾಗಿಲಿಗೆ ಪೂರೈಕೆ ಮಾಡುತ್ತಿರುವ ನೀರಿನ ಕರ ವಸೂಲಿ ಕೂಡ ಸಮಸ್ಯೆಯಾಗಿದೆ. ಗ್ರಾಹಕರು ಕಚೇರಿಗೆ ಬಂದು ನೀರಿನ ಕರ ಪಾವತಿಸಲುತೊಂದರೆ ಆಗಬಹುದು ಎಂಬ ಕಾರಣಕ್ಕೆ ಆನ್‌ಲೈನ್ ಪಾವತಿಗೂ ಅವಕಾಶ ಕಲ್ಪಿಸಲಾಗಿದೆ. ನಗರಪಾಲಿಕೆ ಮುಖ್ಯ ಕಚೇರಿ, ವಲಯ ಕಚೇರಿ ಮತ್ತು ವಾಣಿವಿಲಾಸ ನೀರು ಸರಬರಾಜು ಕಚೇರಿಗಳಲ್ಲೂ ನೀರಿನ ತೆರಿಗೆ ಪಾವತಿಗೆ ಅವಕಾಶ ಮಾಡಿಕೊಟ್ಟಿದ್ದರೂ, ಗ್ರಾಹಕರು ನಿರಾಸಕ್ತಿ ತೋರಿಸುತ್ತಿದ್ದಾರೆ. ಇದರಿಂದಾಗಿ ತೀವ್ರ ಒತ್ತಡದಲ್ಲಿರುವ ನಗರಪಾಲಿಕೆ ಅಧಿಕಾರಿಗಳು ಮುಂದಿನ ಬೇಸಿಗೆ ಹೊತ್ತಿಗೆ ಅಧಿಕಗೊಳ್ಳಬಹುದಾದ ನೀರು ಸರಬರಾಜು ನಿರ್ವಹಣಾ ವೆಚ್ಚವನ್ನು ಸರಿದೂಗಿಸುವ ಸಂಬಂಧ ಈಗಿನಿಂದಲೇ ಚಿಂತೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೋಟಿ ಕೋಟಿ ರೂ. ಬಾಕಿ: ನಗರದ ೬೫ ವಾರ್ಡುಗಳು ಮತ್ತು ಮುಡಾ ವ್ಯಾಪ್ತಿಯ ಬಡಾವಣೆಗಳಲ್ಲಿ ನೀರಿನ ತೆರಿಗೆ ಕೋಟಿಗಟ್ಟಲೆ ಬಾಕಿ ಉಳಿದಿದೆ. ಮುಡಾ ಬಡಾವಣೆಗಳಿಗೂ ನಗರಪಾಲಿಕೆ ನೀರು ಪೂರೈಕೆ ಮಾಡುತ್ತಿದ್ದರೂ ತೆರಿಗೆ ಮಾತ್ರ ಸಂಗ್ರಹವಾಗದೆ ಬೆಟ್ಟದಂತೆ ಬೆಳೆಯುತ್ತಿದೆ. ಪಾಲಿಕೆಯ ವಾಟರ್‌ಮನ್‌ಗಳು, ಹೆಲ್ಪರ್‌ಗಳು, ಮೀಟರ್ ರೀಡರ್ ಗಳು, ಇನ್‌ಸ್ಪೆಕ್ಟರ್‌ಗಳು ಪ್ರತ್ಯೇಕ ತಂಡ ರಚನೆ ಮಾಡಿಕೊಂಡು ಮನೆ ಮನೆಗೆ ತೆರಳುತ್ತಿದ್ದರೂ, ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ವಸೂಲಿಯಾಗುತ್ತಿಲ್ಲ. ನಗರದ ೬೫ ವಾರ್ಡುಗಳಲ್ಲದೆ, ಆಲನಹಳ್ಳಿ ಬಡಾವಣೆ, ಆಲನಹಳ್ಳಿ, ಆಶ್ರಯ ಬಡಾವಣೆ, ಭಾರತ್ ನಗರ, ಚಾಮುಂಡಿಬೆಟ್ಟ, ದಾಮೋದರ್ ಬಡಾವಣೆ, ಗಾಯತ್ರಿ ಬಡಾವಣೆ, ಗಿರಿದರ್ಶಿನಿ ಬಡಾವಣೆ, ಹೂಟಗಳ್ಳಿ,ಮಹಾಲಕ್ಷ್ಮೀ ಲೇಔಟ್, ನಂದಿನಿ ಲೇ ಔಟ್, ಪೊಲೀಸ್ ಲೇಔಟ್, ಸಾತಗಳ್ಳಿ, ಎಸ್‌ಬಿಎಂ ಲೇ ಔಟ್, ವಿಜಯನಗರ ಮೂರನೇ ಹಂತ, ಮುಡಾದಿಂದ ಅಭಿವೃದ್ಧಿಪಡಿಸಿದ ಬಡಾವಣೆಗಳು ಮುಂತಾದೆಡೆ ೧,೬೬,೩೭೬ ನಲ್ಲಿ ಸಂಪರ್ಕಗಳಿವೆ.
ಶೀಘ್ರದಲ್ಲೇ ಅಭಿಯಾನ: ಬಾಕಿ ಉಳಿದಿರುವ ನೀರಿನ ಕರ ವಸೂಲಿಗೆ ನಗರಪಾಲಿಕೆ ಅಽಕಾರಿಗಳು ಶೀಘ್ರ ಅಭಿಯಾನ ನಡೆಸಲು ಮುಂದಾಗಿದ್ದಾರೆ. ಒಂದು ಬಾರಿ ಕರ ಪಾವತಿಗೆ ಗಡುವು ನೀಡಿ, ನಂತರ ನೀರಿನ ಸಂಪರ್ಕವನ್ನು ಕಡಿತಗೊಳಿಸುವ ಅಸ ಪ್ರಯೋಗಿಸಲು ನಗರಪಾಲಿಕೆ ಮುಂದಾಗಿದೆ. ಹಾಲಿ ಸಂಗ್ರಹವಾಗುತ್ತಿರುವ ಮೊತ್ತಕ್ಕಿಂತ ನಿರ್ವಹಣೆ ಮಾಡುವುದು ದೊಡ್ಡ ಸವಾಲಾಗಿದೆ. ಬೇಸಿಗೆ ದಿನಗಳಲ್ಲಿ ನೀರನ್ನು ಪಂಪ್ ಮಾಡುವ ಸಂದರ್ಭ ಒದಗಿದರೆ ಮತ್ತಷ್ಟು ಕೊರತೆಯಾಗಲಿದೆ. ಹಾಗಾಗಿ, ಬಾಕಿ ವಸೂಲಿಗೆ ಫೀಲ್ಡ್‌ಗೆ ಇಳಿಯಲು ಪ್ರತ್ಯೇಕ ತಂಡ ರಚಿಸುವ ಸಾಧ್ಯತೆ ಇದೆ
ವರ್ಷ : ಆರಂಭಿಕ ಬಾಕಿ : ಪ್ರಸಕ್ತ ವರ್ಷದ ಬೇಡಿಕೆ: ಸಂಗ್ರಹ: ಒಟ್ಟು ಬಾಕಿ
೨೦೨೨- ೨೩: ೧,೯೭,೩೪,೯೭: ೪೦೮ ೮೯,೩೭,೪೬,೧೦೩: ೭೭,೮೩,೭೨,೪೪೨: ೨,೦೭,೭೩,೨೦,೮೫೩
೨೦೨೩- ೨೪: ೨,೦೭,೭೩,೨೦,೮೫೩: ೯೧,೫೩,೯೨,೦೫೫: ೭೪,೬೨,೦೮,೨೬೪ : ೨,೨೪,೬೫,೦೪,೬೪೪
೨೦೨೪-೨೫ : ೨,೨೪,೬೫,೦೪,೬೪೪ : ೭೩,೪೭,೯೬,೭೪೨ : ೬೨,೧೧,೭೧,೧೮೬: ೨,೨೬, ೦೧,೩೦,೨೦೦
ಸರ್ಕಾರಿ ಸಂಸ್ಥೆಗಳಿಂದಲೂ ಬಾಕಿ: ನೀರಿನ ತೆರಿಗೆ ಬಾಕಿ ಉಳಿಸಿಕೊಂಡಿರುವವರು ಕೇವಲ ಸಾರ್ವಜನಿಕರು ಮಾತ್ರವಲ್ಲ. ಸರ್ಕಾರಿ ಸಂಸ್ಥೆಗಳ ಪಾಲೂ ದೊಡ್ಡ ಮಟ್ಟಿಗೆ ಇದೆ. ಸರ್ಕಾರಿ ಕಚೇರಿಗಳಲ್ಲಿ ಪಾಲಿಕೆಯಿಂದ ಪೂರೈಕೆಯಾಗುತ್ತಿರುವ ನೀರು ಭಾರಿ ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಆದರೆ, ಬಹುತೇಕ ಸರ್ಕಾರಿ ಸಂಸ್ಥೆಗಳು ಅದರ ಶುಲ್ಕ ಪಾವತಿಸುತ್ತಿಲ್ಲ. ಮನೆಗಳಿಗೆ ಪೂರೈಕೆಯಾಗುತ್ತಿರುವ ನೀರಿನ ಶುಲ್ಕವನ್ನು ಪಾವತಿಸದಿದ್ದರೆ ಕಡಿತಗೊಳಿಸುತ್ತಾರೆ. ಆದರೆ, ವಾಣಿಜ್ಯ ಬಳಕೆ ಹಾಗೂ ಸರ್ಕಾರಿ ಸಂಸ್ಥೆಗಳಿಂದ ಪಾವತಿ ಆಗಬೇಕಿರುವ ನೀರಿನ ಕರವನ್ನು ಮೊದಲು ವಸೂಲಿ ಮಾಡಲಿ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
” ಕುಡಿಯುವ ನೀರಿನ ಬಾಕಿ ವಸೂಲಿಗೆ ಪ್ರತ್ಯೇಕ ತಂಡ ರಚನೆ ಮಾಡಲಾಗುವುದು ಮತ್ತು ಅಭಿಯಾನ ನಡೆಸಲಾಗುತ್ತದೆ. ಹಲವಾರು ವರ್ಷಗಳಿಂದ ಉಳಿದಿರುವ ನೀರಿನ ತೆರಿಗೆ ಬಾಕಿ ವಸೂಲಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ನೀರಿನ ತೆರಿಗೆ ವಸೂಲಿ ಪ್ರಮಾಣ ಕಡಿಮೆಯಾಗಿರುವ ಬಗ್ಗೆ ಮಾಹಿತಿ ಪಡೆಯುತ್ತೇನೆ.”
ಶೇಖ್ ತನ್ವೀರ್ ಅಸಿ-, ಆಯುಕ್ತರು, ನಗರಪಾಲಿಕೆ
ಯಶಸ್ವಿ ರಾಜಕೀಯ ನಾಯಕತ್ವಕ್ಕೆ ಈಗ ಬೇಕಾಗಿರುವುದು ವರ್ಚಸ್ಸು ಮತ್ತು ಜನಪ್ರಿಯತೆ. ಈ ಗುಣಗಳಿದ್ದರೆ ಸರ್ಕಾರ ಮತ್ತು ಪಕ್ಷದಲ್ಲಿ ಏನು ಬೇಕಾದರೂ…
-ಗಿರೀಶ್ ಹುಣಸೂರು ೫ ವರ್ಷಗಳ ಬಳಿಕ ಉಚಿತ ಸ್ಯಾನಿಟರಿ ನ್ಯಾಪ್‌ಕಿನ್ ವಿತರಣೆಗೆ ಮುಂದಾದ ಸರ್ಕಾರ ಮೈಸೂರು: ಹದಿಹರೆಯದ ಹೆಣ್ಣು ಮಕ್ಕಳಲ್ಲಿ…
೨೦೨೫ನೇ ವರ್ಷಕ್ಕೆ ವಿದಾಯ ಹೇಳಿ ೨೦೨೬ರ ಹೊಸ ವರ್ಷವನ್ನು ಸ್ವಾಗತಿಸುವ ದಿನ ಸನ್ನಿಹಿತವಾಗಿದೆ. ಪ್ರತಿ ಸಲ ಹೊಸ ವರ್ಷವನ್ನು ಹರ್ಷದಿಂದ…
ಟಾಂಗಾ ಸವಾರಿ ವಲಯ ನಿರ್ಮಾಣಕ್ಕೆ ೨.೭೧ ಕೋಟಿ ರೂ. ಮಂಜೂರು ಕೇಂದ್ರದ ಸ್ವದೇಶ ದರ್ಶನ ಯೋಜನೆಯಡಿ ಗ್ರೀನ್ ಟೂರ್‌ಗೆ ಆದ್ಯತೆ …
ಹಾಸನ ಜಿಲ್ಲೆ ಹಳೇಬೀಡಿನ ಪುಷ್ಪಗಿರಿ ಮಠದಲ್ಲಿ ಆಯೋಜನೆ: ಡಾ.ಅನಂತರಾವ್ ಮಂಡ್ಯ: ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆ ವತಿಯಿಂದ…
ಕೋಟಿಗಾನಹಳ್ಳಿ ರಾಮಯ್ಯ ಇದು ಕದಡಿದ ನೀರಿನಂತಹ ಕಾಲ. ಈ ಮಬ್ಬಿನ ವಾತಾವರಣದಲ್ಲಿ ಬಹುರೂಪಿ ರಂಗಾಯಣದಲ್ಲಿ ‘ಬಹುರೂಪಿ ಅಂಬೇಡ್ಕರ್’ ಎಂಬ ಆಶಯ…