Andolana originals

ನೀರಿನ ‘ತಾಪ’ತ್ರಯ ಹನೂರು ಮೊದಲು!

ಟ್ಯಾಂಕರ್ ನೀರು , ಖಾಸಗಿ ಕೊಳವೆ ಬಾವಿ ಬಾಡಿಗೆ ಜತೆ ಇನ್ನು ರೀಡ್ರಿಲ್, ಹೊಸ ಕೊಳವೆ ಆಲೋಚನೆ 

ಚಾಮರಾಜನಗರ: ಬಿಸಿಲ ತಾಪ ಏರುತ್ತಿದ್ದು ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕೂಡ ದಿನೇ ದಿನೇ ಹೆಚ್ಚಾಗತೊಡಗಿದೆ. ಪ್ರಮುಖವಾಗಿ ಹನೂರು ತಾಲ್ಲೂಕಿನ ಸಮಸ್ಯೆ ನಿವಾರಿಸುವುದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ!

ಖಾಸಗಿ ಕೊಳವೆ ಬಾವಿಗಳಿಂದ ಮತ್ತು ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವ ಕೆಲಸ ಹನೂರು ತಾಲ್ಲೂಕಿನ ಕೆಲವೊಂದು ಕಡೆ ಈಗಾಗಲೇ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಅಗತ್ಯ ಇರುವೆಡೆ ಕೊಳವೆ ಬಾವಿಗಳನ್ನು ಮರು ಆಳಮಾಡಿಸುವ ಮತ್ತು ಹೊಸದಾಗಿ ಕೊಳವೆ ಬಾವಿ ಕೊರೆಸುವ ಸಂದರ್ಭ ಒದಗಿ ಬಂದರೆ ಅದಕ್ಕೆ ಸಿದ್ಧರಾಗುವ ನಿಟ್ಟಿನಲ್ಲಿ ಜಿಪಂ ಸಿಇಒ ಮೋನಾ ರೋತ್ ಅವರು ನಗರದಲ್ಲಿ ಅಧಿಕಾರಿಗಳ ಸಭೆ ಕೂಡ ಮಾಡಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ಹನೂರು ತಾಲ್ಲೂಕಿನ ೨೫ ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ. ಅದರಲ್ಲೂ ಮಾರ್ಟಳ್ಳಿ ಮತ್ತು ಕೌದಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಇದೆ. ದೊಡ್ಡ ಆಲತ್ತೂರು, ಕೌದಳ್ಳಿ, ಮಾರ್ಟಳ್ಳಿ ಮತ್ತು ರಾಮಾಪುರ ಗ್ರಾಪಂಗಳ ವ್ಯಾಪ್ತಿಯ ಕೆಲ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ. ಕೆಲ ಖಾಸಗಿ ಕೊಳವೆ ಬಾವಿಗಳವರು ಬಾಡಿಗೆ ರೂಪದಲ್ಲಿ ಹಣ ಪಡೆದು ನೀರು ಪೂರೈಸುತ್ತಿದ್ದಾರೆ. ಇನ್ನು, ಕೌದಳ್ಳಿ, ಮಾರ್ಟಳ್ಳಿ ಪಂಚಾಯಿತಿಯ ಕೆಲವೊಂದು ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ.

ಒಟ್ಟಾರೆ, ಅಜ್ಜೀಪುರ, ದಿನ್ನಳ್ಳಿ, ಎಲ್ಲೆಮಾಳ, ದೊಡ್ಡ ಆಲತ್ತೂರು, ಕೌದಳ್ಳಿ, ಮೀಣ್ಯಂ, ಮಾರ್ಟಳ್ಳಿ, ಮಹದೇಶ್ವರ ಬೆಟ್ಟ, ಹುತ್ತೂರು, ಶೆಟ್ಟಳ್ಳಿ, ಪಿ.ಜಿ.ಪಾಳ್ಯ ಒಳಗೊಂಡಂತೆ ೨೫ ಗ್ರಾಮಗಳಲ್ಲಿ ನೀರಿಗೆ ತೊಂದರೆ ಇದ್ದು ೧೧ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಮಸ್ಯೆ ಇರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹೆಚ್ಚುವರಿ ಪೈಪ್ ಲೈನ್ ಮಾಡಿ; ಕೊಳವೆ ಬಾವಿಗಳ ಆಳಕ್ಕೆ ತಕ್ಕಂತೆ ಹೆಚ್ಚುವರಿ ಪೈಪ್ಗಳನ್ನು ಬಿಟ್ಟು ನೀರಿನ ಸಮಸ್ಯೆ ತಡೆಗಟ್ಟುವ ಕೆಲಸವನ್ನೂ ವ್ಯವಸ್ಥಿತವಾಗಿ ಮಾಡಲಾಗುತ್ತಿದೆ.

” ತಮ್ಮ ಇಲಾಖೆಯ ಎಇಇಗಳ ವರದಿ ಪ್ರಕಾರ, ಸದ್ಯಕ್ಕೆ ಹನೂರು ತಾಲ್ಲೂಕಿನ ೧೧ ಪಂಚಾಯಿತಿಗಳ ೨೫ ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳೆಂದು ಗುರುತಿಸಲಾಗಿದೆ. ಉಳಿದ ತಾಲ್ಲೂಕುಗಳಲ್ಲಿ ಈ ತರಹದ ಸಮಸ್ಯೆ ಇಲ್ಲಿಯವರೆಗೂ ವರದಿಯಾಗಿಲ್ಲ.”

-ಇಮ್ಯಾನ್ಯುಯಲ್ ಸಂತೋಷ್ ಕುಮಾರ್, ಇಇ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ 

” ನಗರ ಪ್ರದೇಶದಲ್ಲಿ ಅಲ್ಲಲ್ಲಿ ಸಮಸ್ಯೆ ಇದ್ದು, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆ ವರದಿಯಾಗುತ್ತಲೇಇದೆ. ಚಾ.ನಗರ ಮತ್ತು ಕೊಳ್ಳೇಗಾಲ ನಗರಸಭೆ, ಹನೂರು, ಯಳಂದೂರು ಪಪಂ ಮತ್ತು ಗುಂಡ್ಲುಪೇಟೆ ಪುರಸಭೆ ವ್ಯಾಪ್ತಿಯಲ್ಲಿ ಕಂಡುಬಂದಿರುವ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ ವಹಿಸಲಾಗಿದೆ ಎಂದು ನಗರಾಭಿವೃದ್ಧಿ ಕೋಶದ ಅಧಿಕಾರಿಯೊಬ್ಬರು ತಿಳಿಸಿದರು.”

” ಸಹಜವಾಗಿಯೇ ಜಾನುವಾರುಗಳಿಗೂ ನೀರಿನ ಸಮಸ್ಯೆ ತಟ್ಟಿದೆ. ದನಕರು, ಕುರಿ, ಮೇಕೆಯಂತಹ ಸಾಕುಪ್ರಾಣಿಗಳು ನೀರು ಕುಡಿಯಲು ಅನುಕೂಲ ಆಗಲೆಂದು ನಿರ್ಮಿಸಿರುವ ಸಿಮೆಂಟ್ ತೊಟ್ಟಿಗಳಲ್ಲಿ ಈ ನಡುವೆ ನೀರು ಪೂರ್ಣ ತುಂಬಿಸುತ್ತಿಲ್ಲ.”

-ಸದಾಶಿವ, ಬಂಡಳ್ಳಿ

” ಚಾ.ನಗರ, ಗುಂಡ್ಲುಪೇಟೆ, ಯಳಂದೂರು ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳಿಕೊಳ್ಳುವ ರೀತಿಯಲ್ಲಿ ಇಲ್ಲದೇ ಇರಲು ಇಲ್ಲೆಲ್ಲಾ ನದಿ ಮೂಲದಿಂದ ನೀರು ಪೂರೈಸುವ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಚಾಲ್ತಿಯಲ್ಲಿರುವುದು ಆಸರೆಯಾಗಿ ಪರಿಣಮಿಸಿದೆ. ಕೊಳ್ಳೇಗಾಲ ತಾಲ್ಲೂಕಿನಲ್ಲಿಯೂ ಬಹುಗ್ರಾಮ ಯೋಜನೆಯ ಮೊದಲನೇ ಹಂತ ಕಾರ್ಯಗತ ಆಗಿರುವುದರಿಂದ ಅಲ್ಲಿಯೂ ಸಾಕಷ್ಟು ಸಮಸ್ಯೆ ಬಗೆಹರಿದಿದೆ. ಹನೂರು ತಾಲ್ಲೂಕಿನಲ್ಲಿ ಈ ಯೋಜನೆ ಕೆಲಸ ಪೂರ್ಣಗೊಂಡರೆ ನೀರಿನ ಸಮಸ್ಯೆ ಶಾಶ್ವತವಾಗಿ ನಿವಾರಣೆ ಆಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟಕ್ಕೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತಲುಪಿಲ್ಲ.ಅರಣ್ಯ ಇಲಾಖೆಯವರು ಸಂರಕ್ಷಿತ ಪ್ರದೇಶದಲ್ಲಿ ಕಾಮಗಾರಿಗೆ ತಡೆಹಾಕಿರುವುದು ಅಲ್ಲಿ ನೀರಿನ ಸಮಸ್ಯೆಯನ್ನು ಪೂರ್ಣ ಹೋಗಲಾಡಿಸಲು ಸಾಧ್ಯವಾಗಿಲ್ಲ.”

ಆಂದೋಲನ ಡೆಸ್ಕ್

Recent Posts

ಮೇಟಗಳ್ಳಿ : ಹಾವು-ಚೇಳುಗಳದ್ದೇ ದರ್ಬಾರು

ಮೈಸೂರು : ನಗರದ ಜನ ವಸತಿ ಹಾಗೂ ಕೈಗಾರಿಕಾ ಪ್ರದೇಶವಾಗಿರುವ ಮೇಟಗಳ್ಳಿ ಬಡಾವಣೆಯು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಹಾವು-ಚೇಳುಗಳ ಆವಾಸ ಸ್ಥಾನವಾಗಿ…

1 min ago

ʼದಟ್ಟಾರಣ್ಯದಲ್ಲಿ ಅಲೆದು ಅಲೆದು ದೇಹ ದಣಿದಿತ್ತುʼ

ಕೊಡಗಿನ ದಟ್ಟಾರಣ್ಯದಲ್ಲಿ ನಾಪತ್ತೆಯಾಗಿದ್ದ ಜೆ.ಎಸ್.ಶರಣ್ಯ ಅವರ ಮನದಾಳದ ಮಾತು ಪ್ರಶ್ನೆ : ನೀವು ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಕಾಡಿಗೆ ಹೋಗಿದ್ದು,…

11 mins ago

ಕದನ ವಿರಾಮ | ಇರಾನ್‌ ಮೇಲೆ 2ವಾರ ಬಾಂಬ್‌ ಹಾಕುವುದಿಲ್ಲ ಎಂದ ಟ್ರಂಪ್‌

ವಾಷಿಂಗ್ಟನ್‌ : ಇವತ್ತಿನ ರಾತ್ರಿ ಇರಾನ್‌ನ ಇಡೀ ನಾಗರಿಕತೆಯೇ ನಾಶವಾಗಲಿದೆ ಎಂದು ಬೆದರಿಕೆ ಒಡ್ಡಿದ ಕೆಲವೇ ಹೊತ್ತಲ್ಲಿ ಅಮೆರಿಕ ಅಧ್ಯಕ್ಷ…

2 hours ago

ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ: ನಾಳೆ ಮನೆ ಮನೆಗೆ ತೆರಳಿ ಮತಯಾಚನೆ

ಬೆಂಗಳೂರು: ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಹೇಳಲಾಗಿರುವ ರಾಜ್ಯದ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ…

17 hours ago

ಮಣಿಪುರದಲ್ಲಿ ಮನೆ ಮೇಲೆ ಬಾಂಬ್‌ ದಾಳಿ: ಇಬ್ಬರು ಮಕ್ಕಳು ಸಾವು

ಇಂಪಾಲ: ಮಣಿಪುರದಲ್ಲಿ ಮನೆಯೊಂದರ ಮೇಲೆ ಬಾಂಬ್‌ ದಾಳಿ ನಡೆದಿದ್ದು, ಇಬ್ಬರು ಮಕ್ಕಳು ಸಾವನ್ನಪ್ಪಿರುವ ಘಟನೆ ನಡೆದಿದೆ. ಮಣಿಪುರದ ಬಿಷ್ಣುಪುರ ಜಿಲ್ಲೆಯ…

18 hours ago

ನನ್ನ ತಾಳ್ಮೆಗೆ ಕಾಲವೇ ಉತ್ತರ ನೀಡುತ್ತದೆ: ಡಿಸಿಎಂ ಡಿ.ಕೆ.ಶಿವಕುಮಾರ್‌

ಹುಬ್ಬಳ್ಳಿ: ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂಬ ಸಚಿವ ಜಮೀರ್‌ ಅಹ್ಮಮದ್‌ ಖಾನ್‌ ಹೇಳಿಕೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.…

18 hours ago