ಸರಗೂರು ದಾಸೇಗೌಡ
ಸರಗೂರು: ಕೇರಳ ಮತ್ತು ತಾಲ್ಲೂಕಿನ ಚಿಕ್ಕಬರಗಿ, ದೊಡ್ಡಬರಗಿ, ಆಲನಹಳ್ಳಿ, ಕುರ್ಣೇಗಾಲ, ಕಾಡಬೇಗೂರು, ಹೊಸ ಕೋಟೆ, ಮುತ್ತಿಗೆಹುಂಡಿ ಭಾಗಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ತಾಲ್ಲೂಕಿನ ನುಗು ಜಲಾಶಯದ ನೀರಿನ ಮಟ್ಟ ೯೩ ಅಡಿಗಳನ್ನು ತಲುಪಿದೆ.
ಕೆಲ ದಿನಗಳ ಹಿಂದೆ ಜಲಾಶಯದಲ್ಲಿ ೮೨ ಅಡಿಗಳಷ್ಟು ನೀರು ಸಂಗ್ರಹವಾಗಿತ್ತು. ಸದ್ಯ ಜಲಾಶಯಕ್ಕೆ ೧,೩೯೨ ಕ್ಯೂಸೆಕ್ಸ್ ನೀರು ಒಳಹರಿವಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೇ ತಿಂಗಳಿನಲ್ಲಿ ಜಲಾಶಯದಲ್ಲಿ ಈ ಮಟ್ಟದ ನೀರು ಸಂಗ್ರಹವಾಗಿದೆ.
ನುಗು ಜಲಾಶಯದ ಗರಿಷ್ಟ ಮಟ್ಟ ೧೧೦ ಅಡಿಗಳಿದ್ದು, ಸದ್ಯ ನೀರಿನ ಮಟ್ಟ ೯೩ ಅಡಿಗಳಷ್ಟಿದೆ ಎಂದು ನುಗು ಜಲಾಶಯದ ಇಂಜಿನಿಯರ್ ದೀಪಕ್ ತಿಳಿಸಿದ್ದಾರೆ.
೫.೪೪ ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಜಲಾಶಯ ವ್ಯಾಪ್ತಿಯಲ್ಲಿ ಸುಮಾರು ೧೮,೧೧೦ ಎಕರೆ ಅಚ್ಚುಕಟ್ಟು ಪ್ರದೇಶವಿದೆ. ಸರಗೂರು ತಾಲ್ಲೂಕಿನ ೧,೫೦೦ ಎಕರೆ ಪ್ರದೇಶಕ್ಕೆ ನೀರು ಹರಿಸಿದರೆ, ಉಳಿದ ನೀರು ನಂಜನಗೂಡು ತಾಲ್ಲೂಕಿನ ಜನರಿಗೆ ದೊರಕಲಿದೆ. ಮೇಲ್ದಂಡೆ ನಾಲೆ ೮೭ ಕಿ.ಮೀ. ಉದ್ದವಿದ್ದು, ನಂಜನಗೂಡಿನ ನರಸಾಂಬುಧಿ ಕೆರೆಯವರೆಗೆ ಇದೆ. ೬೬೦ ಕ್ಯೂಸೆಕ್ಸ್ ನೀರು ಬಳಕೆಯಾಗಲಿದೆ.
ಜಲಾಶಯದ ಸಮೀಪದಲ್ಲೇ ೨ ಕಿ.ಮೀ. ದೂರದಲ್ಲಿ ಹಲಸೂರು ಗ್ರಾಮದ ಬಳಿ ಕೆರೆಗೆ ಅಣೆಕಟ್ಟೆ ನಿರ್ಮಿಸಲಾಗಿದೆ. ಬಲದಂಡೆ ನಾಲೆ ಹುಲ್ಲಹಳ್ಳಿವರೆಗೆ ೩೮ ಕಿ.ಮೀ. ದೂರವಿದೆ. ೧೫೦ ಕ್ಯೂಸೆಕ್ಸ್ ನೀರು ಬಳಕೆಯಾಗಲಿದೆ. ಅದೇ ರೀತಿ ಎಡದಂಡೆ ನಾಲೆ ನಂಜನಗೂಡು ತಾಲ್ಲೂಕಿನ ಹರದನಹಳ್ಳಿವರೆಗೆ ೩೩ ಕಿ.ಮೀ. ದೂರವಿದ್ದು, ೭೦ ಕ್ಯೂಸೆಕ್ಸ್ ನೀರು ಇರಲಿದೆ. ಒಟ್ಟು ೧೦ ಕೆರೆಗಳಿಗೆ ನೀರು ಬಳಕೆಯಾಗಲಿದೆ.
ನುಗು ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಳದಿಂದ ರೈತರಲ್ಲಿ ಸಂತಸ ಮೂಡಿದೆ ಎಂದು ರೈತ ಮುಖಂಡ ಮುಳ್ಳೂರು ರವಿಕುಮಾರ್ ತಿಳಿಸಿದ್ದಾರೆ.
ಚಾಮರಾಜನಗರ : ಆರು ತಿಂಗಳ ಹೆಣ್ಣು ಮಗುವನ್ನು ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ನಡೆದಿದ್ದು, ಈ ಸಂಬಂಧ ಪೋಷಕರು ಸೇರಿದಂತೆ…
ಹನೂರು : ಜಮೀನಿನಲ್ಲಿ ಹುರುಳಿ ಫಸಲನ್ನು ಹಸು ಮೇಯ್ದಿದ್ದದನ್ನು ಪ್ರಶ್ನೆಸಿದ್ದಕ್ಕೆ ವೃದ್ಧೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ…
ಹಾಸನ : ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸಿದ್ಧತೆ ನಡೆಸುವ ಸಂದೇಶವನ್ನು ರಾಜ್ಯದ ಜನರಿಗೆ ತಲುಪಿಸುವ ಗುರಿಯೊಂದಿಗೆ ನಗರದಲ್ಲಿ ಆಯೋಜಿಸಿದ್ದ…
ಮಳವಳ್ಳಿ : ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಹತ್ತುಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಹೊಸಹಳ್ಳಿ…
ನಂಜನಗೂಡು : ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿನ ಅನಧಿಕೃತ ಅಂಗಡಿಗಳನ್ನು ಇಂದು(ಜ.24) ಮತ್ತೋಮ್ಮೆ ತೆರವು ಗೊಳಿಸಲಾಯಿತು. ದೇವಾಲಯದ ನೂತನ ಕಾರ್ಯನಿರ್ವಾಹಕ ಅಧಿಕಾರ…
ಮುಂಬೈ : ಸೌದಿ ಅರೇಬಿಯಾದಿಂದ ಅಂತರರಾಷ್ಟ್ರೀಯ ಕೊರಿಯರ್ ಟರ್ಮಿನಲ್‌ನಲ್ಲಿ ಸಾಗಿಸುತ್ತಿದ್ದ ಗ್ರೈಂಡರ್‌ನಲ್ಲಿ ಬಚ್ಚಿಟ್ಟಿದ್ದ 2.89 ಕೋಟಿ ರೂ.ಮೌಲ್ಯದ ಚಿನ್ನವನ್ನು ಕಂದಾಯ…