Andolana originals

ರಿಪೇರಿಯಾಗದ ಆಟೋ; ಬೀದಿಗೆ ಬೀಳುತ್ತಿದೆ ಕಸ

ಕೆಟ್ಟು ೨-೩ ತಿಂಗಳಾದರೂ ದುರಸ್ತಿ ಭಾಗ್ಯವಿಲ್ಲ; ಬೇಗ ರಿಪೇರಿ ಮಾಡಿಸಲು ನಾಗರಿಕರ ಆಗ್ರಹ 

ಚಾಮರಾಜನಗರ: ನಗರದಲ್ಲಿ ನೈರ್ಮಲ್ಯ ಕಾಪಾಡಲು ನಗರಸಭೆಯು ಆಟೋಗಳ ಮೂಲಕ ಬಡಾವಣೆಗಳ ಮನೆ ಮನೆಗಳಿಂದ ಕಸ ಸಂಗ್ರಹ ಮಾಡುತ್ತಿದೆ. ಆದರೆ, ಇತ್ತೀಚೆಗೆ ಸರಿಯಾಗಿ ನಿರ್ವಹಣೆ ಮಾಡದೆ ಕಸ ಸಂಗ್ರಹ ಆಟೋಗಳು ಪದೇ ಪದೆ ರಿಪೇರಿಗೆ ಬರುತ್ತಿವೆ.

ಕೆಲವು ಬಡಾವಣೆಗಳಿಗೆ ಕಸ ಸಂಗ್ರಹಕ್ಕಾಗಿ ಬರುತ್ತಿದ್ದ ಆಟೋಗಳು ಕೆಟ್ಟು ಹೋಗಿ ಗ್ಯಾರೇಜ್ ಸೇರಿ ೨-೩ ತಿಂಗಳಾದರೂ ರಿಪೇರಿ ಆಗಿಲ್ಲ. ಆದ್ದರಿಂದ ಬಡಾವಣೆಗಳ ಜನರು ಕಸವನ್ನು ಪ್ಲಾಸ್ಟಿಕ್ ಕವರ್ ಹಾಗೂ ಚೀಲಕ್ಕೆ ಕಟ್ಟಿ ರಸ್ತೆ ಬದಿಗಳಿಗೆ, ಖಾಲಿ ನಿವೇಶನಗಳಿಗೆ ಬಿಸಾಡುತ್ತಿದ್ದಾರೆ.

ನಗರದ ೧೦ನೇ ವಾರ್ಡ್‌ನಲ್ಲಿ ಕಸ ಸಂಗ್ರಹ ಮಾಡುತ್ತಿದ್ದ ವಾಹನ ಕೆಟ್ಟು ೨ ತಿಂಗಳಾಗಿದೆ. ರಿಪೇರಿಗೆಂದು ಗ್ಯಾರೇಜ್‌ಗೆ ಬಿಟ್ಟಿದ್ದರೂ ಇನ್ನು ದುರಸ್ತಿಯಾಗಿಲ್ಲ. ಈ ಆಟೋದ ಬಾಡಿ ಹಾಳಾಗಿದ್ದು ಬದಲಾಯಿಸುವ ಕೆಲಸ ಗ್ಯಾರೇಜ್‌ನಲ್ಲಿ ನಿಧಾನ ಗತಿಯಲ್ಲಿ ಸಾಗಿದೆ.

ನಗರದ ಗ್ಯಾರೇಜ್‌ನಲ್ಲಿ ನಗರಸಭೆಯ ೨ ಆಟೋಗಳು ರಿಪೇರಿಗೆಂದು ನಿಂತಿವೆ. ಇವೆರಡಕ್ಕೂ ಬಾಡಿ ಬದಲಾಯಿಸಬೇಕಿದೆ. ಗ್ಯಾರೇಜ್‌ನವರು ಇಲ್ಲಿಯ ತನಕ ೪ ಆಟೋಗಳನ್ನು ರಿಪೇರಿ ಮಾಡಿ ನಗರಸಭೆಗೆ ಕಳುಹಿಸಿದ್ದಾರೆ.

೨ ಆಟೋಗಳ ರಿಪೇರಿ ಶುಲ್ಕ ಮತ್ತು ಬಿಡಿಭಾಗಗಳ ಹಣವನ್ನು ನಗರಸಭೆಯು ಪಾವತಿ ಮಾಡುವುದು ವಿಳಂಬವಾಗಿದೆ. ಆದ್ದರಿಂದ ಈ ಆಟೋಗಳಿಗೆ ಬಾಡಿ ಕಟ್ಟಿ ನಗರಸಭೆಗೆ ಹಸ್ತಾಂತರಿಸುವ ಕೆಲಸ ಮಂದಗತಿಯಲ್ಲಿ ಸಾಗಿದೆ.

ಕೆಟ್ಟುಹೋದ ಕಸದ ಆಟೋವನ್ನು ರಿಪೇರಿ ಮಾಡಿಸಲು ಕನಿಷ್ಠ ಒಂದು ವಾರ ಸಾಕು. ೨-೩ ತಿಂಗಳು ಬೇಕೇನು ಎಂಬುದು ಸಾರ್ವಜನಿಕರ ಪ್ರಶ್ನೆ. ನಗರಸಭೆಯ ಅಧಿಕಾರಿಗಳು ಕಾಳಜಿ ವಹಿಸಿದರೆ ರಿಪೇರಿ ಮಾಡಿಸುವುದು ಕಷ್ಟದ ಕೆಲಸವಲ್ಲ ಎಂದು ನಾಗರಿಕರು ಹೇಳುತ್ತಿದ್ದಾರೆ.

ಕಸ ಸಾಗಣೆ ಆಟೋಗಳನ್ನು ಶುಚಿಯಾಗಿ ಇಟ್ಟುಕೊಳ್ಳದೆ ಹಾಗೂ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಪದೇ ಪದೆ ರಿಪೇರಿಗೆ ಬರುತ್ತಿವೆ. ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಸ ಹಾಕಿ ಬಂದ ನಂತರ ಶುಚಿಗೊಳಿಸುತ್ತಿಲ್ಲ. ಆದ್ದರಿಂದ ಗಲೀಜಾಗಿ ಕೆಟ್ಟು ಹೋಗುತ್ತಿವೆ ಎಂದು ನಗರಸಭೆಯ ಸಿಬ್ಬಂದಿಯೇ ಹೇಳುತ್ತಿದ್ದಾರೆ.

ಸಾಂಕ್ರಾಮಿಕ ರೋಗ ಭೀತಿ: 

ಕಸದ ಆಟೋ ಬಡಾವಣೆಗೆ ಬಾರದೆ ನಾಗರಿಕರು ಕಸವನ್ನು ಬೀದಿಗೆ ಬಿಸಾಡುತ್ತಿದ್ದಾರೆ. ಈ ಕಸ ಕೊಳೆತು ಅನೈರ್ಮಲ್ಯ ವಾತಾವರಣ ನಿರ್ಮಾಣವಾಗುತ್ತಿದೆ. ಹಸುಗಳು, ಹಂದಿಗಳು, ನಾಯಿಗಳು ಕಸದ ಚೀಲವನ್ನು ರಸ್ತೆಗೆ ಎಳೆದು ತಂದು ಹಾಕುತ್ತಿವೆ. ಇದರಿಂದ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗದ ಭೀತಿ ಶುರುವಾಗಿದೆ.

” ಕೆಟ್ಟು ಹೋಗಿರುವ ೨ ಆಟೋಗಳನ್ನು ಗ್ಯಾರೇಜ್‌ಗೆ ಬಿಡಲಾಗಿದೆ. ಸಣ್ಣ ಪುಟ್ಟ ರಿಪೇರಿ ಕೆಲಸ ಮುಗಿದಿದೆ. ಇನ್ನು ೩-೪ ದಿನಗಳಲ್ಲಿ ಬಾಡಿಗಳನ್ನು ಅಳವಡಿಸಿ ಕಸ ಸಂಗ್ರಹಕ್ಕೆ ಕಳುಹಿಸಲಾಗುವುದು.”

 – ಮಂಜುನಾಥ್, ಹಿರಿಯ ಆರೋಗ್ಯ ನಿರೀಕ್ಷಕರು, ನಗರಸಭೆ

 

 

ಆಂದೋಲನ ಡೆಸ್ಕ್

Recent Posts

ಫೆ.28ರಂದು ಸೇವಾಲಾಲ್ ಜಯಂತಿ ಕಾರ್ಯಕ್ರಮ: ಬಂಜಾರ ಸೇವಾ ಸಂಘದ ಗೌರವಾಧ್ಯಕ್ಷ ಶಾಂತರಾಜು

ಹನೂರು: ಲಂಬಾಣಿ ಸಮುದಾಯವೂ ಬಡತನ ರೇಖೆಗಿಂತ ಕೆಳಗಿರುವ ಸಣ್ಣ ಸಮುದಾಯವಾಗಿದ್ದು ಸಮಾಜದ ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಹನೂರು ಪಟ್ಟಣದಲ್ಲಿ…

3 mins ago

ಜಿಬಿಎಗೆ ಪಕ್ಷದ ಅಧ್ಯಕ್ಷರನ್ನು ನೇಮಕ ಮಾಡಿದ ಜೆಡಿಎಸ್‌

ಬೆಂಗಳೂರು: ಜೆಡಿಎಸ್‌ ಪಕ್ಷ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಚುನಾವಣೆಗೆ ತಯಾರಿ ನಡೆಸುತ್ತಿದ್ದು, ಜಿಬಿಎಗೆ ಪಕ್ಷದ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ…

1 hour ago

ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಶೂನ್ಯ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ

ಗುಂಡ್ಲುಪೇಟೆ: ಪಂಚ ಗ್ಯಾರಂಟಿಗಳ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಸಂಪೂರ್ಣವಾಗಿ ಕುಸಿದಿದೆ. ಈ ನಡುವೆ ಗ್ಯಾರಂಟಿಗಳಿಂದ ಸರ್ಕಾರಕ್ಕೆ…

2 hours ago

ಸ್ಪೀಕರ್‌ ಆಫ್‌ ದಿ ನೆಸ್ಸೆಟ್‌ ಪದಕ ಪಡೆದ ಮೊದಲ ಜಾಗತಿಕ ನಾಯಕ ಪ್ರಧಾನಿ ನರೇಂದ್ರ ಮೋದಿ

ಇಸ್ರೇಲ್:‌ ಭಾರತ ಮತ್ತು ಇಸ್ರೇಲ್‌ ನಡುವಿನ ಕಾರ್ಯತಂತ್ರದ ಸಂಬಂಧಗಳನ್ನು ಬಲಪಡಿಸುವಲ್ಲಿ ಅಸಾಧಾರಣ ಕೊಡುಗೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ…

2 hours ago

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿಜಯ್‌ ದೇವರಕೊಂಡ-ರಶ್ಮಿಕಾ ಮಂದಣ್ಣ

ಉದಯಪುರ: ಉದಯಪುರದ ಅರಮನೆಯಲ್ಲಿ ವಿಜಯ್‌ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಬೆಳಿಗ್ಗೆ…

2 hours ago

ಮೈಸೂರು ರೇಷ್ಮೆಗೆ ದೊಡ್ಡ ಇತಿಹಾಸವಿದೆ: ಬಡಗಲಪುರ ನಾಗೇಂದ್ರ

ಮೈಸೂರು: ಪಟ್ಟಣದ ಸಿಲ್ಕ್ ಫಿಲೇಚರ್ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ…

3 hours ago