Andolana originals

ಯುಜಿಡಿ ಕಾಮಗಾರಿ ಜಾಗದ ಸಮಸ್ಯೆ ಇತ್ಯರ್ಥ

5.6 ಎಕರೆ ಪ್ರದೇಶದಲ್ಲಿ ಯುಜಿಡಿ ಸಂಸ್ಕರಣಾ ಘಟಕ ಕಾಮಗಾರಿ ಆರಂಭ: ಡಿಸೆಂಬ್‌ ವೇಳೆಗೆ ಪೂರ್ಣಗೊಳ್ಳುವ ನೀರಿಕ್ಷೆ

-ನವೀನ್ ಡಿಸೋಜ

ಮಡಿಕೇರಿ: ಜಾಗದ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ ಮಡಿಕೇರಿ ಯುಜಿಡಿ ಕಾಮಗಾರಿಗೆ ಮತ್ತೆ ಕಾಯಕಲ್ಪ ದೊರೆತಿದ್ದು, ನಗರದ ಹೊರವಲಯದಲ್ಲಿ ಯುಜಿಡಿ ಸಂಸ್ಕರಣಾ ಘಟಕ ಕಾಮಗಾರಿ ಆರಂಭವಾಗಿದೆ.

ಯುಜಿಡಿ ಕಾಮಗಾರಿ ಸಂಬಂಧ ಜಾಗದ ವಿವಾದ ಪರಿಹಾರವಾಗಿದೆ. ಉದ್ದೇಶಿತ ಸ್ಥಳದ ಪಕ್ಕದಲ್ಲಿ ಹೆಚ್ಚುವರಿಯಾಗಿ 3.94 ಎಕರೆ ಸ್ಥಳವನ್ನು
ಒದಗಿಸಲಾಗಿದ್ದು, ಒಟ್ಟು 5.6 ಎಕರೆ ಸ್ಥಳದಲ್ಲಿ ಟ್ರೀಟ್‌ಮೆಂಟ್ ಪ್ಲಾಂಟ್ ಕಾಮಗಾರಿ ನಡೆಯುತ್ತಿದೆ. 2024 ಆಗಸ್ಟ್ ತಿಂಗಳಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಹೆಚ್ಚುವರಿ ಜಾಗವನ್ನು ಮಂಜೂರು ಮಾಡಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಬಳಿಕ ಕೆಲಸ ಆರಂಭಿಸಲಾಗಿದೆ. ಸದ್ಯ ಸಂಸ್ಕರಣಾ ಘಟಕದ ಅಡಿಪಾಯ ಕೆಲಸ ಮಾಡಲಾಗುತ್ತಿದೆ.

2012ರಲ್ಲಿ ಮಡಿಕೇರಿ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸರ್ಕಾರದಿಂದ 49.56 ಕೋಟಿ. ರೂ ಮಂಜೂರಾಗಿತ್ತು. ಅದರಂತೆ ಒಟ್ಟು 109 ಕಿ.ಮೀ. ಪೈಪ್‌ಲೈನ್ ಸಂಪರ್ಕ ಕಲ್ಪಿಸಿ ನಗರದ ಎಲ್ಲ ತ್ಯಾಜ್ಯದ ನೀರನ್ನು ಒಂದೆಡೆಗೆ ಸೇರಿಸಿ ಅಲ್ಲಿ ಶುದ್ಧೀಕರಣ ಘಟಕ ಸ್ಥಾಪಿಸುವ ಯೋಜನೆಗೆ ಅನುಮೋದನೆ
ಸಿಕ್ಕಿತ್ತು. ಆದರೆ ಗುಡ್ಡಗಾಡು ಪ್ರದೇಶವಾದ ಮಡಿಕೇರಿಯಲ್ಲಿ ಒಂದೇ ಶುದ್ಧೀಕರಣ ಘಟಕಕ್ಕೆ ಎಲ್ಲ ಭಾಗಗಳಿಂದ ಸಂಪರ್ಕ ಕಲ್ಪಿಸುವುದು ಸಾಧ್ಯವಿಲ್ಲ. ಹೀಗಾಗಿ 9 ಕಡೆಗಳಲ್ಲಿ ಸೆಪ್ಟಿಕ್  ಟ್ಯಾಂಕ್ ನಿರ್ಮಾಣ ಮತ್ತು ಒಂದು ಕಡೆ ಮಲೀನ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸುವುದು ಕರ್ನಾಟಕ ನಗರ ನೀರು
ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸದ್ಯದ ಯೋಜನೆಯಾಗಿದೆ.

2012ರಲ್ಲಿ ಅನುದಾನ ಬಿಡುಗಡೆಯಾದರೂ ಜಾಗದ ಸಮಸ್ಯೆಯಿಂದ ಕಾಮಗಾರಿ ಆರಂಭವಾಗಲು 5  ವರ್ಷಗಳಾಯಿತು. ಕೊನೆಗೆ ಪ್ಲಾಂಟ್  ಸ್ಥಾಪನೆಗೆ ಜಾಗ ಗುರುತಿಸಿದ ಮೇಲೆ 2017ರಲ್ಲಿ ನೆಟ್‌ವರ್ಕ್(ಪೈಪ್‌ಲೈನ್  ಸಂಪರ್ಕ) ಕಾಮಗಾರಿ ಆರಂಭಿಸಲಾಯಿತು. ಪರಿಷ್ಕೃತ ಯೋಜನೆ ಪ್ರಕಾರ ನಗರದಲ್ಲಿ 85
ಕಿ.ಮೀ. ಪೈಪ್ ಲೈನ್ ಜೋಡಣೆ ಮಾಡಬೇಕಿದೆ. ಇದರಲ್ಲಿ ಈಗಾಗಲೇ 69 ಕಿ.ಮೀ ನಷ್ಟು ಕೆಲಸ ಮುಗಿದಿದೆ. ೩,೪೦೦ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ ಮುಗಿದಿದ್ದು, ಇನ್ನು 16 ಕಿ.ಮೀ. ನೆಟ್‌ವರ್ಕ್ ಕೆಲಸ, ಯುಜಿಡಿ ಸಂಸ್ಕರಣಾ ಘಟಕ ಆಗಬೇಕಿದೆ.

ಯೋಜನೆ 2012ರಲ್ಲಿ ಶುರುವಾದರೂ ಸಂಸ್ಕರಣಾ ಘಟಕಕ್ಕೆ ಜಾಗದ ಸಮಸ್ಯೆ ಉಂಟಾಗಿ ಕಾಮಗಾರಿ ವಿಳಂಬವಾಗಿತ್ತು. ಕೊನೆಗೆ 2017ರಲ್ಲಿ ಕೆ.ನಿಡುಗಣೆ ಗ್ರಾಪಂ ವ್ಯಾಪ್ತಿಯ ಗಾಲ್ಛ್ ಮೈದಾನದ ಬಳಿ 1.66 ಎಕರೆ ಜಾಗವನ್ನು ಮಂಜೂರು ಮಾಡಲಾಯಿತು. ಆದರೆ, ಅಲ್ಲಿ ರಸ್ತೆ ವಿವಾದ ಮತ್ತು ಹೆಚ್ಚುವರಿ ಜಾಗದ ಅಗತ್ಯತೆಯಿಂದ ಪೈಪ್ ಲೈನ್ ಕೆಲಸ ಮುಗಿದಿದ್ದರೂ ಪ್ಲಾಂಟ್ ನಿರ್ಮಾಣವಾಗದೇ ಇಡೀ ಯೋಜನೆ ಹಳ್ಳ ಹಿಡಿದಿತ್ತು.

ಟ್ರೀಟ್‌ಮೆಂಟ್‌ ಪ್ಲಾಂಟ್‌ನಲ್ಲಿ ಏನೆಲ್ಲಾ ಇರಲಿದೆ?

ಪ್ರೀ ಟ್ರೀಟ್‌ಮೆಂಟ್‌ ಯೂನಿಟ್‌, ಟ್ಯೂಬ್‌ ಸೆಟ್ಲರ್‌ ಜೋನ್‌, ಟರ್ಬೋಲೆಂಟ್‌ ಜೋನ್‌, ಇಕ್ಯೂಲೇಷನ್‌ ಜೋನ್‌, 2 ಬಯೋ ರಿಯಾಕ್ಟರ್‌, ಕಲೆಕ್ಷನ್‌ ಟ್ಯಾಂಕ್‌ ಟ್ರೀಚ್‌ಮೆಂಟ್‌ ಪ್ಲಾಟ್‌ನಲ್ಲಿ ಇರಲಿದೆ. ಸದ್ಯ ಕಾಮಗಾರಿಗಳು ಚುರುಕುಗೊಂಡಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.

2024ರ ಆಗಸ್ಟ್ ತಿಂಗಳಲ್ಲಿ ನಮಗೆ ಸಂಸ್ಕರಣಾ ಘಟಕ ಸ್ಥಾಪನೆಗೆ ಹೆಚ್ಚುವರಿ ಜಾಗ ಒದಗಿಸಲಾಯಿತು. ಅದರಂತೆ ಪ್ಲಾಂಟ್ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಗುತ್ತಿಗೆದಾರರು ಮುಂದಿನ ಡಿಸೆಂಬರ್ ವೇಳೆಗೆ ಕಾಮಗಾರಿ ಮುಕ್ತಾಯಗೊಳಿಸಬೇಕಿದೆ. ಪ್ಲಾಂಟ್  ನಿರ್ಮಾಣದ ಬಳಿಕ ಮನೆಗಳಿಂದ ಈಗಾಗಲೇ ಹಾಕಲಾಗಿರುವ ಪೈಪ್‌ಲೈನ್ ಮೂಲಕ ಪ್ಲಾಂಟ್‌ಗೆ ಯುಜಿಡಿ ಲೈನ್ ಸಂಪರ್ಕಿಸಲಾಗುವುದು.

-ಪ್ರಸನ್ನ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ.

 

ಆಂದೋಲನ ಡೆಸ್ಕ್

Recent Posts

ಯುಪಿಯಲ್ಲಿ ತಯಾರಾಗುತ್ತಿರುವ ಬ್ರಹ್ಮೋಸ್‌ ಕ್ಷಿಪಣಿಗಳು ಪಾಕ್‌ ನಿದ್ದೆಗೆಡಿಸಿವೆ: ಅಮಿತ್‌ ಶಾ

ಲಕ್ನೋ: ಉತ್ತರ ಪ್ರದೇಶದಲ್ಲಿ ರಕ್ಷಣಾ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ದೊರೆಯುತ್ತಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.…

16 hours ago

ಪ್ರಜಾಪ್ರಭುತ್ವ ರಕ್ಷಿಸಲು ಗಾಂಧಿ ಜಯಂತಿಯಂದು ಪ್ರತಿಜ್ಞೆ ಮಾಡೋಣ: ಅಭಿಜಿತ್‌ ದೀಪ್ಕೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಕಾಕ್ರೋಚ್ ಜನತಾ ಪಾರ್ಟಿ, ಅಂದರೆ ಸಿಜೆಪಿ ಆಗ್ರಹಿಸಿದೆ. ಸಿಜೆಪಿ…

17 hours ago

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಮಳೆ

ಕೊಡಗು: ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 20.89 ಮಿ.ಮೀ. ಮಳೆಯಾಗಿದೆ. ಕಳೆದ…

17 hours ago

ಜನರೊಂದಿಗೆ ಬೆರೆಯುವುದು ಅದ್ಭುತ ಅನುಭವ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಸೇವಾ ಸಂಕಲ್ಪ ಅಭಿಯಾನದಡಿ ವಾರಣಾಸಿಯಿಂದ ಗುಜರಾತ್‌ನ ವಡನಗರಕ್ಕೆ ತೆರಳುತ್ತಿರುವ ಯುವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದರು. ವಿಡಿಯೋ…

17 hours ago

2028ಕ್ಕೂ ಡಿಕೆಶಿ ಸಿಎಂ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ: ಸತೀಶ್ ಜಾರಕಿಹೊಳಿ

ಮೈಸೂರು: 2028ರಲ್ಲೂ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಲಿ. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಸತೀಶ್…

20 hours ago

ಓದುಗರ ಪತ್ರ: ವಿದ್ಯುತ್ ಕಡಿತ ಮುಂಚಿತವಾಗಿ ಪ್ರಕಟಿಸಿ

ಮಳೆ ಸರಿಯಾಗಿ ಆಗದೆ ಜಲವಿದ್ಯುತ್ ಉತ್ಪಾದನೆ ಕಡಿಮೆಯಾಗಿ ವಿದ್ಯುತ್ ಅಭಾವ ಎದುರಾಗಿರುವುದು ನಿಜ. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ…

1 day ago