5.6 ಎಕರೆ ಪ್ರದೇಶದಲ್ಲಿ ಯುಜಿಡಿ ಸಂಸ್ಕರಣಾ ಘಟಕ ಕಾಮಗಾರಿ ಆರಂಭ: ಡಿಸೆಂಬ್ ವೇಳೆಗೆ ಪೂರ್ಣಗೊಳ್ಳುವ ನೀರಿಕ್ಷೆ
-ನವೀನ್ ಡಿಸೋಜ
ಮಡಿಕೇರಿ: ಜಾಗದ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ ಮಡಿಕೇರಿ ಯುಜಿಡಿ ಕಾಮಗಾರಿಗೆ ಮತ್ತೆ ಕಾಯಕಲ್ಪ ದೊರೆತಿದ್ದು, ನಗರದ ಹೊರವಲಯದಲ್ಲಿ ಯುಜಿಡಿ ಸಂಸ್ಕರಣಾ ಘಟಕ ಕಾಮಗಾರಿ ಆರಂಭವಾಗಿದೆ.
ಯುಜಿಡಿ ಕಾಮಗಾರಿ ಸಂಬಂಧ ಜಾಗದ ವಿವಾದ ಪರಿಹಾರವಾಗಿದೆ. ಉದ್ದೇಶಿತ ಸ್ಥಳದ ಪಕ್ಕದಲ್ಲಿ ಹೆಚ್ಚುವರಿಯಾಗಿ 3.94 ಎಕರೆ ಸ್ಥಳವನ್ನು
ಒದಗಿಸಲಾಗಿದ್ದು, ಒಟ್ಟು 5.6 ಎಕರೆ ಸ್ಥಳದಲ್ಲಿ ಟ್ರೀಟ್‌ಮೆಂಟ್ ಪ್ಲಾಂಟ್ ಕಾಮಗಾರಿ ನಡೆಯುತ್ತಿದೆ. 2024 ಆಗಸ್ಟ್ ತಿಂಗಳಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಹೆಚ್ಚುವರಿ ಜಾಗವನ್ನು ಮಂಜೂರು ಮಾಡಲಾಗಿದೆ. ಡಿಸೆಂಬರ್ ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಬಳಿಕ ಕೆಲಸ ಆರಂಭಿಸಲಾಗಿದೆ. ಸದ್ಯ ಸಂಸ್ಕರಣಾ ಘಟಕದ ಅಡಿಪಾಯ ಕೆಲಸ ಮಾಡಲಾಗುತ್ತಿದೆ.
2012ರಲ್ಲಿ ಮಡಿಕೇರಿ ನಗರದಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಸರ್ಕಾರದಿಂದ 49.56 ಕೋಟಿ. ರೂ ಮಂಜೂರಾಗಿತ್ತು. ಅದರಂತೆ ಒಟ್ಟು 109 ಕಿ.ಮೀ. ಪೈಪ್‌ಲೈನ್ ಸಂಪರ್ಕ ಕಲ್ಪಿಸಿ ನಗರದ ಎಲ್ಲ ತ್ಯಾಜ್ಯದ ನೀರನ್ನು ಒಂದೆಡೆಗೆ ಸೇರಿಸಿ ಅಲ್ಲಿ ಶುದ್ಧೀಕರಣ ಘಟಕ ಸ್ಥಾಪಿಸುವ ಯೋಜನೆಗೆ ಅನುಮೋದನೆ
ಸಿಕ್ಕಿತ್ತು. ಆದರೆ ಗುಡ್ಡಗಾಡು ಪ್ರದೇಶವಾದ ಮಡಿಕೇರಿಯಲ್ಲಿ ಒಂದೇ ಶುದ್ಧೀಕರಣ ಘಟಕಕ್ಕೆ ಎಲ್ಲ ಭಾಗಗಳಿಂದ ಸಂಪರ್ಕ ಕಲ್ಪಿಸುವುದು ಸಾಧ್ಯವಿಲ್ಲ. ಹೀಗಾಗಿ 9 ಕಡೆಗಳಲ್ಲಿ ಸೆಪ್ಟಿಕ್ ಟ್ಯಾಂಕ್ ನಿರ್ಮಾಣ ಮತ್ತು ಒಂದು ಕಡೆ ಮಲೀನ ನೀರಿನ ಶುದ್ಧೀಕರಣ ಘಟಕ ಸ್ಥಾಪಿಸುವುದು ಕರ್ನಾಟಕ ನಗರ ನೀರು
ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಸದ್ಯದ ಯೋಜನೆಯಾಗಿದೆ.
2012ರಲ್ಲಿ ಅನುದಾನ ಬಿಡುಗಡೆಯಾದರೂ ಜಾಗದ ಸಮಸ್ಯೆಯಿಂದ ಕಾಮಗಾರಿ ಆರಂಭವಾಗಲು 5 ವರ್ಷಗಳಾಯಿತು. ಕೊನೆಗೆ ಪ್ಲಾಂಟ್ ಸ್ಥಾಪನೆಗೆ ಜಾಗ ಗುರುತಿಸಿದ ಮೇಲೆ 2017ರಲ್ಲಿ ನೆಟ್‌ವರ್ಕ್(ಪೈಪ್‌ಲೈನ್ ಸಂಪರ್ಕ) ಕಾಮಗಾರಿ ಆರಂಭಿಸಲಾಯಿತು. ಪರಿಷ್ಕೃತ ಯೋಜನೆ ಪ್ರಕಾರ ನಗರದಲ್ಲಿ 85
ಕಿ.ಮೀ. ಪೈಪ್ ಲೈನ್ ಜೋಡಣೆ ಮಾಡಬೇಕಿದೆ. ಇದರಲ್ಲಿ ಈಗಾಗಲೇ 69 ಕಿ.ಮೀ ನಷ್ಟು ಕೆಲಸ ಮುಗಿದಿದೆ. ೩,೪೦೦ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ ಮುಗಿದಿದ್ದು, ಇನ್ನು 16 ಕಿ.ಮೀ. ನೆಟ್‌ವರ್ಕ್ ಕೆಲಸ, ಯುಜಿಡಿ ಸಂಸ್ಕರಣಾ ಘಟಕ ಆಗಬೇಕಿದೆ.
ಯೋಜನೆ 2012ರಲ್ಲಿ ಶುರುವಾದರೂ ಸಂಸ್ಕರಣಾ ಘಟಕಕ್ಕೆ ಜಾಗದ ಸಮಸ್ಯೆ ಉಂಟಾಗಿ ಕಾಮಗಾರಿ ವಿಳಂಬವಾಗಿತ್ತು. ಕೊನೆಗೆ 2017ರಲ್ಲಿ ಕೆ.ನಿಡುಗಣೆ ಗ್ರಾಪಂ ವ್ಯಾಪ್ತಿಯ ಗಾಲ್ಛ್ ಮೈದಾನದ ಬಳಿ 1.66 ಎಕರೆ ಜಾಗವನ್ನು ಮಂಜೂರು ಮಾಡಲಾಯಿತು. ಆದರೆ, ಅಲ್ಲಿ ರಸ್ತೆ ವಿವಾದ ಮತ್ತು ಹೆಚ್ಚುವರಿ ಜಾಗದ ಅಗತ್ಯತೆಯಿಂದ ಪೈಪ್ ಲೈನ್ ಕೆಲಸ ಮುಗಿದಿದ್ದರೂ ಪ್ಲಾಂಟ್ ನಿರ್ಮಾಣವಾಗದೇ ಇಡೀ ಯೋಜನೆ ಹಳ್ಳ ಹಿಡಿದಿತ್ತು.
ಟ್ರೀಟ್‌ಮೆಂಟ್ ಪ್ಲಾಂಟ್‌ನಲ್ಲಿ ಏನೆಲ್ಲಾ ಇರಲಿದೆ?
ಪ್ರೀ ಟ್ರೀಟ್‌ಮೆಂಟ್ ಯೂನಿಟ್, ಟ್ಯೂಬ್ ಸೆಟ್ಲರ್ ಜೋನ್, ಟರ್ಬೋಲೆಂಟ್ ಜೋನ್, ಇಕ್ಯೂಲೇಷನ್ ಜೋನ್, 2 ಬಯೋ ರಿಯಾಕ್ಟರ್, ಕಲೆಕ್ಷನ್ ಟ್ಯಾಂಕ್ ಟ್ರೀಚ್‌ಮೆಂಟ್ ಪ್ಲಾಟ್‌ನಲ್ಲಿ ಇರಲಿದೆ. ಸದ್ಯ ಕಾಮಗಾರಿಗಳು ಚುರುಕುಗೊಂಡಿದ್ದು, ಶೀಘ್ರದಲ್ಲೇ ಪೂರ್ಣಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.
2024ರ ಆಗಸ್ಟ್ ತಿಂಗಳಲ್ಲಿ ನಮಗೆ ಸಂಸ್ಕರಣಾ ಘಟಕ ಸ್ಥಾಪನೆಗೆ ಹೆಚ್ಚುವರಿ ಜಾಗ ಒದಗಿಸಲಾಯಿತು. ಅದರಂತೆ ಪ್ಲಾಂಟ್ ನಿರ್ಮಾಣ ಕಾರ್ಯ ಆರಂಭವಾಗಿದ್ದು, ಗುತ್ತಿಗೆದಾರರು ಮುಂದಿನ ಡಿಸೆಂಬರ್ ವೇಳೆಗೆ ಕಾಮಗಾರಿ ಮುಕ್ತಾಯಗೊಳಿಸಬೇಕಿದೆ. ಪ್ಲಾಂಟ್ ನಿರ್ಮಾಣದ ಬಳಿಕ ಮನೆಗಳಿಂದ ಈಗಾಗಲೇ ಹಾಕಲಾಗಿರುವ ಪೈಪ್‌ಲೈನ್ ಮೂಲಕ ಪ್ಲಾಂಟ್‌ಗೆ ಯುಜಿಡಿ ಲೈನ್ ಸಂಪರ್ಕಿಸಲಾಗುವುದು.
-ಪ್ರಸನ್ನ, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ.
ಶಾಲಾ ಮಕ್ಕಳು ಭಾರವಾದ ಪುಸ್ತಕಗಳ ಬ್ಯಾಗ್ ಹೊರಲಾರದೆ ತ್ರಾಸದಿಂದಲೇ ಹೊತ್ತುಕೊಂಡು ನಡೆಯುವ ದೃಶ್ಯ ಈಗ ಎಲ್ಲೆಡೆ ಕಂಡುಬರುತ್ತದೆ. ಬ್ಯಾಗ್‌ನಲ್ಲಿ ಪಠ್ಯ…
ಸರ್ಕಾರ ಅಧಿಸೂಚನೆ ಹೊರಡಿಸುವುದು ಯಾವಾಗ? ಉದ್ಯೋಗ ನೇಮಕಾತಿ ಯಾವಾಗ? ಇದು ಸಾವಿರಾರು ಉದ್ಯೋಗ ಆಕಾಂಕ್ಷಿಗಳ ಪ್ರಶ್ನೆ. ಇದು ಕಳೆದ ಹಲವು…
ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ನೌಕರಿ ಪಡೆಯಲು ಇದ್ದ ವಯೋಮಿತಿಯನ್ನು ಐದು ವರ್ಷ ಹೆಚ್ಚಳ ಮಾಡಿ…
ಕಾಂಗೀರ ಬೋಪಣ್ಣ ಕೊಡಗು-ಕೇರಳದ ಜನರು ಒಟ್ಟಾಗಿ ಆಚರಿಸುವ ವಿಭಿನ್ನ ಆಚರಣೆ; ವಿಶಿಷ್ಟ ಹಬ್ಬಕ್ಕೆ ಅಗತ್ಯ ಸಿದ್ಧತೆ ವಿರಾಜಪೇಟೆ: ಕೇರಳ ಹಾಗೂ…
ಮಹೇಂದ್ರ ಹಸಗೂಲಿ ಪಾದಚಾರಿಗಳು ಓಡಾಡದಂತೆ ವಿರೂಪ; ಒತ್ತುವರಿ ತೆರವಿಗೆ ಸಾರ್ವಜನಿಕರ ಆಗ್ರಹ ಗುಂಡ್ಲುಪೇಟೆ: ಪಟ್ಟಣದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ ಫುಟ್‌ಪಾತ್‌ಗಳನ್ನು…
‘ವಿದ್ಯಾವಿಕಾಸ’ ಯೋಜನೆಯಡಿ ಅಗತ್ಯವಿದ್ದರೆ ಚಪ್ಪಲಿ ನೀಡಲು ಸಿದ್ಧತೆ ಮೈಸೂರು: ‘ವಿದ್ಯಾವಿಕಾಸ’ ಯೋಜನೆಯಡಿ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ೧ನೇ ತರಗತಿಯಿಂದ ೧೦ನೇ…