ಮೈಸೂರು: ಚಾಮುಂಡಿವಿಹಾರ ಒಳಾಂಗಣ ಕ್ರೀಡಾಂಗಣದ ಚಾವಣಿಗೆ ಪಾರದರ್ಶಕ ಫೈಬರ್ ಶೀಟ್‌ಗಳನ್ನು ಅಳವಡಿಸಿ ಗ್ಲಾಸ್‌ಹೌಸ್ ಮಾದರಿಯ ಟ್ರಾನ್ಸ್‌ಪರೆಂಟ್ ಒಳಾಂಗಣ ಕ್ರೀಡಾಂಗಣವನ್ನಾಗಿ ಪರಿವರ್ತಿಸಲಾಗುತ್ತಿದೆ.
ಹೀಗಾಗಿ ಈ ಬಾರಿಯ ದಸರಾ ಮಹೋತ್ಸವದಲ್ಲಿ ಒಳಾಂಗಣ ಕ್ರೀಡೆಗಳು ವಿದ್ಯುತ್ ಬೆಳಕಿನ ಬದಲಿಗೆ ಸೂರ್ಯನ ಬೆಳಕಿನಲ್ಲಿಯೇ ನಡೆಯಲಿವೆ. ನಜರ್‌ಬಾದ್‌ನಲ್ಲಿರುವ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದ ಚಾವಣಿ ಕಬ್ಬಿಣದ ತಗಡುಗಳಿಂದ ಮಾಡಿದ ಜಿಂಕ್ ಶೀಟ್‌ಗಳಿಂದ ಆವೃತವಾಗಿತ್ತು. ಮೋಡ ಮುಸುಕಿದಾಗ ಮತ್ತು ಮಳೆ ಬಂದಾಗ ಸ್ವಲ್ಪ ಏರುಪೇರಾಗುತ್ತಿತ್ತು. ಹೀಗಾಗಿ ಈ ಒಳಾಂಗಣ ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಆಯೋಜಿಸಬೇಕಾದರೆ ದಿನದ ೨೪ ಗಂಟೆಗಳೂ ವಿದ್ಯುತ್ ದೀಪ ಬಳಕೆ ಮಾಡಲಾಗುತ್ತಿತ್ತು.
ಇದೀಗ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ೫ ಕೋಟಿ ರೂ. ವೆಚ್ಚದಲ್ಲಿ ಪಾರದರ್ಶಕ ಫೈಬರ್ ಶೀಟ್ ಗಳನ್ನು ಚಾವಣಿಗೆ ಅಳವಡಿಸುತ್ತಿದೆ. ಈಗಾಗಲೇ ಶೇ. ೯೫ರಷ್ಟು ಕೆಲಸ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸಗಳು ಮುಗಿದ ಕೂಡಲೇ ಕ್ರೀಡಾಪಟುಗಳ ಬಳಕೆಗೆ ಸಜ್ಜಾಗಲಿದೆ. ಒಟ್ಟಾರೆ ದಸರೆಯಲ್ಲಿ ಒಳಾಂಗಣ ಕ್ರೀಡಾಕೂಟವನ್ನು ಸೂರ್ಯನ ಬೆಳಕಿನಲ್ಲಿಯೇ ಆಯೋಜಿಸಲಾಗುತ್ತದೆ. ಇದರಿಂದ ಹಗಲಿನ ವೇಳೆ ವಿದ್ಯುತ್ ಬಳಕೆಗೆ ತಗಲುತ್ತಿದ್ದ ವೆಚ್ಚ ಮತ್ತಷ್ಟು ಕಡಿತಗೊಳ್ಳಲಿದೆ.
ಜರ್ಮನಿ ಮೂಲದ ಶೀಟ್: ಅಂತರ ರಾಷ್ಟ್ರೀಯ ಗುಣಮಟ್ಟದ ಟೆನ್‌ಸೈಲ್ ಮೆಮ್ರನ್ ಎಂಬ ಪಾರದರ್ಶಕ -ಬರ್ ಶೀಟ್‌ಗಳನ್ನು ಜರ್ಮನಿಯಿಂದ ಆಮದು ಮಾಡಿಕೊಳ್ಳಲಾ ಗಿದೆ. ಇದರ ಮೂಲಕ ಶೇ. ೫೦ರಷ್ಟು ಸೂರ್ಯನ ಬೆಳಕು ಹಾದು ಹೋಗುತ್ತದೆ. ಅಲ್ಲದೆ, ಈ ಅತ್ಯಾಧುನಿಕ ಶೀಟ್‌ಗಳ ಬಳಕೆಯಿಂದ ಮಳೆ ಬಂದಾಗ ಶಬ್ದ ಉಂಟಾಗುವುದಿಲ್ಲ.
ಯಾವ್ಯಾವ ಕ್ರೀಡೆಗಳಿಗೆ ಬಳಕೆ?: ಈ ಕ್ರೀಡಾಂಗಣದಲ್ಲಿ ವಾಲಿಬಾಲ್, ಬಾಸ್ಕೆಟ್ ಬಾಲ್, ಕರಾಟೆ, ಭಾರ ಎತ್ತುವ ಸ್ಪರ್ಧೆ, ದೇಹ ದಾರ್ಢ್ಯ ಸ್ಪರ್ಧೆ, ಚದುರಂಗ, ಜಿಮ್ನಾಸ್ಟಿಕ್ ಕ್ರೀಡೆಗಳನ್ನು ಆಯೋಜಿಸಲಾಗುತ್ತದೆ. ಅಲ್ಲದೆ, ಕೆಲವೊಮ್ಮೆ ಕ್ರೀಡೆಗೆ ಸಂಬಂಽಸಿದ ಕಾರ್ಯ ಕ್ರಮಗಳನ್ನು ಆಯೋಜಿಸಲಾಗುತ್ತದೆ. ವಿದ್ಯುತ್ ಕಡಿತಗೊಂಡ ಸಂದರ್ಭದಲ್ಲಿ ವಿದ್ಯುತ್ ದೀಪದ ಬಳಕೆಗಾಗಿ ಡೀಸೆಲ್ ಇಂಧನ ದಿಂದ ಜನರೇಟರ್ ವಿದ್ಯುತ್ ಉಪಯೋಗಿಸಲಾಗುತ್ತದೆ. ಇದಕ್ಕೆ ಗಂಟೆಗೆ ೫೦ ಲೀ. ಡೀಸೆಲ್ ಬೇಕಾಗುತ್ತದೆ. ಪಾರದರ್ಶಕ ಶೀಟ್‌ಗಳ ಬಳಕೆ ಯಿಂದ ಹಗಲಿನ ವೇಳೆ ಈ ವೆಚ್ಚ ತಗ್ಗಲಿದೆ.
ಲೀಕೇಜ್‌ಗೆ ಕಡಿವಾಣ: ಒಳಾಂಗಣ ಕ್ರೀಡಾಂಗಣಕ್ಕೆ ಲಕ್ಷಾಂತರ ರೂ. ವ್ಯಯಿಸಿ ಮರದ ನೆಲಹಾಸು ಅಳವಡಿಸಲಾಗಿದೆ. ಹಾಲಿ ಜಿಂಕ್ ಶೀಟ್‌ಗಳಿಂದ ಮಳೆ ನೀರು ಸೋರಿಕೆಯಾಗಿ ಮರದ ಮೇಲೆ ಬೀಳುತ್ತಿತ್ತು. ಇದರಿಂದ ನೆಲಕ್ಕೆ ಅಳವಡಿಸಿರುವ ಮರದ ಹಲಗೆಗಳು ಎದ್ದು ಹೋಗುವ ಸಾಧ್ಯತೆ ಇತ್ತು. ಆದರೆ, ಸದ್ಯ ಅಳವಡಿಸುತ್ತಿರುವ ಶೀಟ್‌ಗಳಿಂದ ಲೀಕೇಜ್ ಸಮಸ್ಯೆ ಇರುವುದಿಲ್ಲ ಎಂದು ಹೇಳಲಾಗಿದೆ.
ಬೆಂಗಳೂರಿನ ಕೋರಮಂಗಲದಲ್ಲಿರುವ ಕ್ರೀಡಾಂಗಣವನ್ನು ಹೊರತುಪಡಿಸಿದರೆ ಈ ಮಾದರಿಯ ಅತ್ಯಾಧುನಿಕ ಫೈಬರ್ ಶೀಟ್ ಅಳವಡಿಸುತ್ತಿರುವ ರಾಜ್ಯದ ೨ನೇ ಕ್ರೀಡಾಂಗಣ ಇದಾಗಿದೆ. ದಸರಾ ಮಹೋತ್ಸವದಲ್ಲಿ ಇದನ್ನು ಬಳಕೆಗೆ ಮುಕ್ತಗೊಳಿಸಲಾಗುವುದು – ಭಾಸ್ಕರ್ ನಾಯಕ್, ಸಹಾಯಕ ನಿರ್ದೇಶಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…
ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…
ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…
ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…
ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…