Andolana originals

ದಮ್ಮನಕಟ್ಟೆ ಸಫಾರಿ ಸವಿಯಲು ಪ್ರವಾಸಿಗರು ಕಾತರ…

ಮಂಜು ಕೋಟೆ

ಆದೇಶ ಬಂದ ತಕ್ಷಣ ಸಫಾರಿ ಪುನರ್ ಆರಂಭಿಸಲಾಗುವುದು: ಅರಣ್ಯಾಧಿಕಾರಿ

ಎಚ್.ಡಿ.ಕೋಟೆ: ರಾಜ್ಯ ಸರ್ಕಾರವು ಸಫಾರಿ ಆರಂಭಕ್ಕೆ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ತಾಲ್ಲೂಕಿನ ನಾಗರಹೊಳೆ ಅಭಯಾರಣ್ಯದ ದಮ್ಮನಕಟ್ಟೆ ಸಫಾರಿ ಪುನರಾರಂಭಗೊಳ್ಳುವ ನಿರೀಕ್ಷೆಯಿಂದ ಪ್ರವಾಸಿಗರು, ರೆಸಾರ್ಟ್‌ಗಳ ಮಾಲೀಕರು, ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಸಂತಸಗೊಂಡಿದ್ದಾರೆ.

ತಾಲ್ಲೂಕಿನ ದಮ್ಮನಕಟ್ಟೆ ಸಫಾರಿ ಕೇಂದ್ರವು ರಾಜ್ಯ, ದೇಶ, ವಿದೇಶದಲ್ಲೂ ಹೆಸರು ಗಳಿಸಿದೆ. ಜೊತೆಗೆ ಪ್ರತಿ ವರ್ಷ ಸರ್ಕಾರದ ಬೊಕ್ಕಸಕ್ಕೆ ೬ ಕೋಟಿ ರೂ. ಸಂಗ್ರಹವಾಗುತ್ತದೆ. ಸರ್ಕಾರ ಸಹಭಾಗಿತ್ವದ ಕಾರಪುರ ಜೆಎಲ್‌ಆರ್‌ನಿಂದ ರೆಸಾರ್ಟ್ ಗಳಲ್ಲಿರುವ ಪ್ರವಾಸಿಗರನ್ನು ಸಫಾರಿ ಮಾಡಿಸಲು ೧೮ ವಾಹನಗಳು ಮತ್ತು ದಮ್ಮನಕಟ್ಟೆ ಸಫಾರಿ ಕೇಂದ್ರದಿಂದ ನಾಲ್ಕು ವಾಹನಗಳ ಮೂಲಕ ಬೆಳಿಗ್ಗೆ ಮತ್ತು ಸಂಜೆ, ನಾಗರಹೊಳೆ ಅಭಯಾರಣ್ಯದಲ್ಲಿ ಸಫಾರಿ ಮಾಡಿಸಲು ೨೭೫ ಪ್ರವಾಸಿಗರು ಪ್ರತಿನಿತ್ಯ ಪಾಲ್ಗೊಳ್ಳುತ್ತಿದ್ದರು.

ಇತ್ತೀಚಿನ ದಿನಗಳಲ್ಲಿ ಈ ಭಾಗದ ಅರಣ್ಯದಲ್ಲಿ ಕರಿಚಿರತೆ, ಹುಲಿ, ಆನೆ ಜಿಂಕೆ, ಕಡವೆ, ಕರಡಿ, ಚಿರತೆಗಳು ಪ್ರವಾಸಿಗರಿಗೆ ಕಾಣಿಸಿಕೊಳ್ಳುತ್ತಿದ್ದರಿಂದ ಇಲ್ಲಿನ ಸಫಾರಿಗೆ ಪ್ರವಾಸಿಗರು ಮುಗಿ ಬೀಳುತ್ತಿದ್ದರು.

ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಸರಗೂರು ತಾಲ್ಲೂಕಿನ ಕಾಡಂಚಿನ ಗ್ರಾಮಗಳ ಜಮೀನುಗಳಿಗೆ ಕಾಡಿನಿಂದ ಬಂದ ಹುಲಿಗಳು ಲಗ್ಗೆ ಇಟ್ಟು ರೈತರ ಮೇಲೆ ದಾಳಿ ನಡೆಸಿ ಮೂವರನ್ನು ಬಲಿ ತೆಗೆದುಕೊಂಡಿದ್ದವು.. ಇದಾದ ನಂತರ ಅರಣ್ಯ ಸಚಿವರಾದ ಈಶ್ವರ ಖಂಡ್ರೆ, ಶಾಸಕ ಅನಿಲ್ ಚಿಕ್ಕಮಾದು ಹಾಗೂ ಉನ್ನತ ಮಟ್ಟದ ಅರಣ್ಯ ಅಧಿಕಾರಿಗಳು ಸಭೆ ನಡೆಸಿ ಕಳೆದ ನವೆಂಬರ್ ತಿಂಗಳಿನಲ್ಲಿ ದಮ್ಮನಕಟ್ಟೆ ಮತ್ತಿತರ ಕಡೆಯ ಸಫಾರಿ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ತೀರ್ಮಾನಿಸಲಾಗಿತ್ತು.

ಸಫಾರಿ ಸ್ಥಗಿತದಿಂದ ಈ ಭಾಗದ ರೆಸಾರ್ಟ್ಗಳಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತೊಂದರೆ ಅನುಭವಿಸುವಂತಾಗಿತ್ತು. ರೆಸಾಟ್ ಗಳಿಗೆ ಹಾಲು, ಮೊಸರು, ದಿನಸಿ ಪದಾರ್ಥಗಳನ್ನು ಸರಬರಾಜು ಮಾಡುತ್ತಿದ್ದ ರೈತರು ಮತ್ತು ವ್ಯಾಪಾರಸ್ಥರಿಗೆ, ವಾಹನ ಚಾಲಕರಿಗೆ ಜೀವನ ನಡೆಸಲು ಕಷ್ಟವಾಗಿತ್ತು. ಒಂದೆಡೆ ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಕೆಲ ರೈತರು, ಪ್ರವಾಸಿಗರು ಸಫಾರಿಯನ್ನು ಮುಂದುವರಿಸಬೇಕೆಂದು ಪ್ರತಿಭಟನೆ, ಹೋರಾಟಗಳನ್ನು ನಡೆಸುತ್ತಾ ಸರ್ಕಾರಕ್ಕೆ ಒತ್ತಾಯ ಮಾಡಿದ್ದರು. ಮತ್ತೊಂದೆಡೆ ಕೆಲ ರೈತ ಸಂಘಟನೆಯವರು ಸಂಪೂರ್ಣವಾಗಿ ಸಫಾರಿ ಬಂದ್ ಮಾಡಬೇಕು. ಪ್ರಾಣಿಗಳ ಹಾವಳಿಯಿಂದ ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಈ ಎಲ್ಲವನ್ನೂ ಪರಿಶೀಲಿಸಿ ವರದಿ ಆಧಾರದ ಮೇಲೆ ಶೇ.೫೦ರಷ್ಟು ಸಫಾರಿಯನ್ನು ಪ್ರಾರಂಭಿಸುತ್ತಿರುವುದರಿಂದ ದಮ್ಮನಕಟ್ಟೆಯಲ್ಲಿ ನಾಲ್ಕು ವಾಹನಗಳು, ೫೦ ಕಾರಪುರ, ಜೆಎಲ್‌ಆರ್‌ನಿಂದ ೧೮ ವಾಹನಗಳ ಮೂಲಕ ೧೪೦ ಪ್ರವಾಸಿಗರಿಗೆ ಪ್ರತಿನಿತ್ಯ ಸಫಾರಿ ನಡೆಸಲು ಅವಕಾಶ ಮಾಡಿಕೊಟ್ಟಿದೆ. ಹಲವು ತಿಂಗಳಿನಿಂದ ಸಫಾರಿ ಸ್ಥಗಿತದಿಂದ ಕಂಗಾಲಾಗಿದ್ದ ಪ್ರವಾಸಿಗರು ಸಫಾರಿ ಸವಿಯಲು ಕಾತುರದಲ್ಲಿದ್ದಾರೆ.

” ಎಚ್.ಡಿ.ಕೋಟೆ ತಾಲ್ಲೂಕು ಮತ್ತು ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಸರಿ ಇದೆ. ಸಫಾರಿ ಪುನರಾರಂಭದಿಂದ ಅನುಕೂಲವಾಗಲಿದೆ. ಮುಖ್ಯಮಂತ್ರಿ, ಅರಣ್ಯ ಸಚಿವರು, ಶಾಸಕರಿಗೆ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ.”

 -ಸಂದೇಶ್ ನಾಗರಾಜು, ಉದ್ಯಮಿ

” ಮಾಧ್ಯಮಗಳಿಂದ ಸಫಾರಿ ಪುನರಾರಂಭದ ವಿಚಾರ ತಿಳಿದಿದ್ದು, ಸರ್ಕಾರದಿಂದ ಅಧಿಕೃತ ಆದೇಶ ನಮಗೆ ಬಂದಿಲ್ಲ. ಬಂದ ತಕ್ಷಣ ನಿಯಮಾನುಸಾರವಾಗಿ, ಕಾನೂನು ಬದ್ಧವಾಗಿ ಸಫಾರಿಯನ್ನು ಪುನರ್ ಆರಂಭಿಸಲಾಗುವುದು. ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.”

-ಸಿದ್ದರಾಜು, ಅರಣ್ಯ ಅಧಿಕಾರಿ, ದಮ್ಮನಕಟ್ಟೆ

 

 

ಆಂದೋಲನ ಡೆಸ್ಕ್

Recent Posts

ಅಮೃತ್ ೨.೦ ಯೋಜನೆ ಕಾಮಗಾರಿ ಚುರುಕು

ಎಸ್.ಎ. ಹುಸೇನ್ ಶೀಘ್ರದಲ್ಲೇ ಹೊಸ ಪೈಪ್‌ಲೈನ್ ಮೂಲಕ ನೀರು ಸರಬರಾಜು ೪೭.೪೧ ಕೋಟಿ ರೂ. ವೆಚ್ಚದ ೨ ಹಂತಗಳ ಕಾಮಗಾರಿ…

6 mins ago

ಸಫಾರಿಗೆ ರಹದಾರಿ; ವಾದ-ಪ್ರತಿರೋಧ

ಸಫಾರಿ ಪುನಾರಂಭಕ್ಕೆ ಸರ್ಕಾರದ ಆದೇಶ ಹೊರ ಬಿದ್ದ ಬಳಿಕ ರೈತ ಸಂಘಟನೆಗಳ ಆಕ್ರೋಶ ಭುಗಿಲೆದಿದ್ದೆ. ಅಧಿಕಾರಿಗಳು, ಸರ್ಕಾರದ ವಿರುದ್ಧ ರೈತ…

11 mins ago

ಟಿ20 ವಿಶ್ವಕಪ್‌ : ಇಟಲಿ ವಿರುದ್ಧ ವೆಸ್ಟ್‌ ಇಂಡೀಸ್‌ಗೆ ಸುಲಭ ಜಯ

ಕೋಲ್ಕತ್ತ : ನಾಯಕ ಶಾಯ್ ಹೋಪ್ ಅವರ ಸತತ ಎರಡನೇ ಅರ್ಧ ಶತಕ ಮತ್ತು ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಪ್ರದರ್ಶನದಿಂದ…

10 hours ago

ಟಿ20 ವಿಶ್ವಕಪ್ | ಭರ್ಜರಿ ಜಯ ; ಶ್ರೀಲಂಕಾ ಸೋಲಿಸಿ ಸೂಪರ್ 8ಗೆ ಲಗ್ಗೆ ಇಟ್ಟ ಜಿಂಬಾಬ್ವೆ

ಕೊಲಂಬೊ : ಐಸಿಸಿ ಟಿ20 ವಿಶ್ವಕಪ್ 2026ರಲ್ಲಿ ಜಿಂಬಾಬ್ವೆ ತಂಡ ಮತ್ತೊಮ್ಮೆ ದೊಡ್ಡ ಅಚ್ಚರಿ ಮೂಡಿಸಿದೆ. ಆತಿಥೇಯ ಶ್ರೀಲಂಕಾವನ್ನು ಆರ್.…

10 hours ago

ದ್ವಿತೀಯ ಪಿಯುಸಿ | ಮೈಸೂರು ಟಾಪ್‌ 10ರೊಳಗೆ ಸ್ಥಾನ ಪಡೆಯಲು ಶ್ರಮಿಸಿ

ಮೈಸೂರು : ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲಿ ಕಳೆದ ವರ್ಷದ ಸ್ಥಾನವನ್ನು ಉಳಿಸಿಕೊಳ್ಳುವ ಜತೆಗೆ 10ನೇ ಸ್ಥಾನದೊಳಗೆ ಬರಲು ಶ್ರಮಿಸಬೇಕು.…

11 hours ago

ಎಐ ಭಾರತದ ಭವಿಷ್ಯ ; ನಿಯಂತ್ರಣ ನಮ್ಮ ಕೈಯಲ್ಲಿರಲಿ : ಪ್ರಧಾನಿ ಮೋದಿ

ಹೊಸದಿಲ್ಲಿ : ಮಾನವರು ಕೇವಲ ಡೇಟಾ ಪಾಯಿಂಟ್ ಅಥವಾ ಕಚ್ಚಾ ವಸ್ತುವಾಗದಂತೆ ನೋಡಿಕೊಳ್ಳಲು, ಎಐಯನ್ನು ಜನತಂತ್ರೀಕರಿಸಬೇಕು. ಇದು ವಿಶೇಷವಾಗಿ ಗ್ಲೋಬಲ್…

11 hours ago